ಪ್ರಚಲಿತ

ಕುಮಾರ ಸ್ವಾಮಿ ಸರ್ಕಾರಕ್ಕೆ ಶಾಕ್ ನೀಡಿದ ಮೋದಿ ಸರ್ಕಾರ..! ಬಿಸಿ ತುಪ್ಪವಾಗಿ ಪರಿಣಮಿಸಿದ ಕೇಂದ್ರದ ಆದೇಶ..!

ಧರ್ಮ ವಿರೋಧಿ ಹಾಗೂ ನಾಡ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸರ್ಕಾರ ಜನತೆಯ ಕೆಂಗಣ್ಣಿಗೆ ಬಿದ್ದು ಮಾನ ಮರ್ಯಾದೆಯನ್ನು ಕಳೆದುಕೊಂಡು ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಜಾತಿ ಜಾತಿಗಳ ಮಧ್ಯೆ ಬೆಂಕಿ ಇಟ್ಟು, ಧರ್ಮಗಳನ್ನು ಒಡೆದು ಹಾಕುವ ಮೂಲಕ ರಾಜ್ಯದಲ್ಲಿ ವಿಷಭೀಜ ಬಿತ್ತುತ್ತಿದ್ದ ಸಿದ್ದರಾಮಯ್ಯ ಸರ್ಕಾರ ನಾಡವಿರೋಧಿ ಚಟುವಟಿಕೆಗಳಲ್ಲೂ ಹಿಂದೆ ಬಿದ್ದಿಲ್ಲ. ಅರ್ಥವಿಲ್ಲದಿದ್ದರೂ ಪ್ರತ್ಯೇಕ ಧ್ವಜವನ್ನು ನಿರ್ಮಾಣ ಮಾಡಿ, ನಾಡವಿರೋಧಿ ಟಿಪ್ಪೂ ಜಯಂತಿಯನ್ನು ಆಚರಿಸಿ ಕೋಟ್ಯಾಂತರ ಕನ್ನಡಿಗರ ಕೆಂಗಣ್ಣಿಗೆ ಬಿದ್ದದ್ದು ಇದೀಗ ಇತಿಹಾಸ.

ಈ ಸರ್ಕಾವನ್ನು ಜನರು ಅಷ್ಟೇ ನಾಜೂಕಾಗಿ ಮಣ್ಣು ಮುಕ್ಕಿಸಿಬಿಡಲು ಯತ್ನಿಸಿದ್ರು. ಭಾರತೀಯ ಜನತಾ ಪಕ್ಷದ ಅಬ್ಬರಕ್ಕೆ ಕಾಂಗ್ರೆಸ್ ಹಾಗೂ ಜನತಾ ದಳ ಧೂಳೀಪಟವಾಗಿದ್ದವು. ಆದರೆ ಕಾಂಗ್ರೆಸ್ ಹಾಗೂ ಜನತಾ ದಳದ ಅಪವಿತ್ರ ಮೈತ್ರಿಯಿಂದಾಗಿ ಮತ್ತೆ ಅದೇ ತತ್ವ ಸಿದ್ಧಾಂತಗಳು ತಲೆ ಎತ್ತುವಂತಾಯ್ತು. ಈ ಬಾರಿ ಮತ್ತೆ ಅದೇ ಧರ್ಮ ವಿರೋಧಿ ಹಾಗೂ ನಾಡವಿರೋಧಿ ಚಟುವಟಿಕೆಗಳ ಭಯ. ಆದರೆ ಈ ಸರ್ಕಾರವನ್ನು ನಡುಗಿಸಲು ಇದೀಗ ಪ್ರಧಾನಿ ಮೋದಿ ಸರ್ಕಾರದಿಂದ ಹೊಸ ಸುತ್ತೋಲೆಯೊಂದು ಬಂದಿದೆ.

ಪ್ರತ್ಯೇಕ ಧರ್ಮದ ಶಿಫಾರಸ್ಸು ಕಳಿಸಿ-ಕೇಂದ್ರ.!

ಈ ಹಿಂದಿನ ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರ ಲಿಂಗಾಯತ ಜಾತಿಯನ್ನು ಪ್ರತ್ಯೇಕ ಧರ್ಮವನ್ನಾಗಿ ಮಾಡಿದ ಶಿಫಾರಸ್ಸನ್ನು ಮತ್ತೊಮ್ಮೆ ಕಳಿಸಿ ಕೊಡಿ ಎಂದು ಕೇಂದ್ರ ಸರ್ಕಾರ ನೂತನ ಮುಖ್ಯಮಂತ್ರಿ ಕುಮಾರ ಸ್ವಾಮಿ ನೇತೃತ್ವದ ಕಾಂಗ್ರೆಸ್ ಜನತಾ ದಳ ಮೈತ್ರಿ ಸರ್ಕಾರಕ್ಕೆ ಆದೇಶಿಸಿದೆ. ಅಂದಿನ ಕಾಂಗ್ರೆಸ್ ಸರ್ಕಾರ ನಡೆಸಿದ್ದ ಒಡೆದು ಆಳುವ ನೀತಿಯನ್ನು ಅಂದು ಖಂಡಿಸಿದ್ದ ಜನತಾ ದಳದ ಕುಮಾರಸ್ವಾಮಿ ಇಂದು ಅದೇ ಪಕ್ಷದೊಂದಿಗೆ ಸೇರಿಕೊಂಡು ಸರ್ಕಾರ ನಡೆಸಿದೆ. ಅಧಿಕಾರದ ಗದ್ದುಗೆಯನ್ನು ಏರಿ ಕುಂತಿದೆ.

ಹಿಂದೂ ಧರ್ಮದಿಂದ ಲಿಂಗಾಯತ ಧರ್ಮದಿಂದ ಬೇರ್ಪಡಿಸಿ ಪಾಪದ ಕೆಲಸವನ್ನು ಮಾಡಿದ್ದ ಕಾಂಗ್ರೆಸ್ ಪಕ್ಷದ ಕೃತ್ಯವನ್ನು ಇದೀಗ ಜನತಾ ದಳದ ಕುಮಾರ ಸ್ವಾಮಿ ಯಾವ ರೀತಿಯಲ್ಲಿ ಅದನ್ನು ನಿರ್ವಹಿಸುತ್ತಾರೆಂದು ಕಾದುನೋಡಬೇಕಾಗಿದೆ. ಈಗಾಗಲೇ ಲಿಂಗಾಯತ ಧರ್ಮವನ್ನು ಪ್ರತ್ಯೇಕಗೊಳಿಸಿ ಆಡಳಿತವನ್ನೇ ಕಳೆದುಕೊಂಡ ಕಾಂಗ್ರೆಸ್ ಪಕ್ಷದ ಭೀತಿಯನ್ನು ಇದೀಗ ಜನತಾ ದಳವೂ ಎದುರಿಸುವ ಪ್ರಮೇಯವೂ ಎದುರಾಗಿದೆ. 

Image result for lingayat protest

ಒಂದು ವೇಳೆ ಕಾಂಗ್ರೆಸ್ ಜೊತೆಗೂಡಿ ಜನತಾ ದಳ ಮತ್ತೆ ಲಿಂಗಾಯತ ಧರ್ಮವನ್ನು ಪ್ರತ್ಯೇಕಗೊಳಿಸಲು ಮುಂದಾದರೆ ಜನರ ಶಾಪವನ್ನು ಎದುರಿಸಿ ಮತ್ತೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ, ಪ್ರತ್ಯೇಕ ಧರ್ಮದ ವಿಚಾರವನ್ನೇ ಬಿಟ್ಟು ಬಿಟ್ಟರೆ ಪ್ರತ್ಯೇಕ ಧರ್ಮ ಹೋರಾಟಗಾರರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ. ಈ ಸಂಕಷ್ಟದಲ್ಲಿ ಇದೀಗ ಕುಮಾರ ಸ್ವಾಮಿ ಸಿಲುಕಿಹಾಕಿಕೊಂಡಿದ್ದಾರೆ.

ಮತ್ತೊಂದು ಶಿಫಾರಸ್ಸನ್ನು ಕೇಳಿರುವ ಕೇಂದ್ರ ಸರ್ಕಾರ ಪ್ರತ್ಯೇಕ ನಾಡಧ್ವಜದ ವಿಚಾರವನ್ನೂ ಕಳಿಸಿಕೊಡಿ ಎಂದು ಆದೇಶಿಸಿದೆ. ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರ ಅವಧಿಯಲ್ಲಿ ಪ್ರತ್ಯೇಕ ನಾಡಧ್ವಜದ ಶಿಫಾರಸ್ಸನ್ನು ಕಳಿಸಿ ಈಗಾಗಲೇ ಕೈಸುಟ್ಟುಕೊಂಡಿರುವ ಸರ್ಕಾರಕ್ಕೆ ಕೇಂದ್ರ ಮತ್ತೊಂದು ಬಾರಿ ಈ ಶಿಫಾರಸ್ಸನ್ನು ಕಳಿಸಿಕೊಡಿ ಎಂದು ಹೇಳಿದೆ. ಒಂದೊಮ್ಮೆ ಕಳಿಸಿಕೊಡದಿದ್ದರೆ ಮತ್ತೆ ಪ್ರತಿಭಟನೆ ಎದುರಿಸಬೇಕಾದ ಅನಿವಾರ್ಯತೆಯೂ ಎದುರಾಗಿದೆ.

ಸದಾ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೆಗಳುವತ್ತಲೇ ಕಾಲ ಕಳೆಯುತ್ತಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿ ಸರ್ಕಾರಕ್ಕೆ ಇದೀಗ ಕೇಂದ್ರ ಸರ್ಕಾರ ಸರಿಯಾಗಿಯೇ ಆದೇಶ ನೀಡಿದ್ದು ಕುಮಾರ ಸ್ವಾಮಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದ್ದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close