ಪ್ರಚಲಿತ

ಚುನಾವಣೆ ಹೊತ್ತಲ್ಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶಾಕ್! ತಮಿಳುನಾಡಿಗೆ ನೀರು ಬಿಡಲೇ ಬೇಕೆಂದ ಸುಪ್ರೀಂ ಕೋರ್ಟ್..!ಸರ್ಕಾರದ ನಿಲುವೇನು..?

ಕರ್ನಾಟಕದಲ್ಲಿ ವಿಧಾನ ಸಭೆ ಚುನಾವಣೆ ಹತ್ತಿರ ಬರುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದೆರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಕಂಟವೇ ಎದುರಾಗುತ್ತಿದೆ. ಕಾವೇರಿ ನದಿ ನೀರಿನ ವಿಚಾರವಾಗಿ ನಡೆಯುತ್ತಿದ್ದ ಯುದ್ಧಗಳು ಇದೀಗ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇನ್ನೇನು ಚುನಾವಣೆಗೆ 10 ದಿನಗಳು ಬಾಕಿ ಇರುವಾಗಲೇ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಬಿಗ್ ಶಾಕ್‍ನ್ನೇ ನೀಡಿದೆ. 

ನೀರು ಬಿಡಿ ಇಲ್ಲವೇ ಪರಿಣಾಮ ಎದುರಿಸಿ…!

ಕರ್ನಾಟಕ ರಾಜ್ಯ ಸರ್ಕಾರಕ್ಕೆ ಈ ಬಾರಿ ಸುಪ್ರೀಂ ಕೋರ್ಟ್ ಖಡಕ್ ಆದೇಶವನ್ನೇ ನೀಡಿದೆ. ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡಿ. ಇಲ್ಲವಾದಲ್ಲಿ ಕಠಿಣ ಕ್ರಮವನ್ನು ಎದುರಿಸಿ ಎಂದು ಖಡಕ್ ಆಗಿ ಹೇಳಿದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವಾಗಲೇ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ತಲೆನೋವು ಆರಂಭವಾಗಿದೆ. ತಮಿಳುನಾಡಿನ ತೀವ್ರ ವಾದಕ್ಕೆ ಸುಪ್ರಿಂ ಕೋರ್ಟ್ ಅಸ್ತು ಎಂದಿದೆ.

ಈ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದ ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ “ಈ ಕೂಡಲೇ ತಮಿಳು ನಾಡಿಗೆ 4 ಟಿಎಂಸಿ ನೀರು ಬಿಡಿ, ಇಲ್ಲಾಂದ್ರೆ ಪರಿಣಾಮ ಎದುರಿಸಿ” ಎಂದು ಖಡಕ್ ಆಗಿಯೇ ಎಚ್ಚರಿಕೆ ನೀಡಿದ್ದಾರೆ. “ಸುಪ್ರೀಂ ಕೋರ್ಟ್ ಆದೇಶವಿತ್ತು ಕೆಲ ತಿಂಗಳುಗಳೇ ಕಳೆದಿದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಅಸಡ್ಡೆಯನ್ನು ತೋರಿಸುತ್ತಿದೆ. ಏಪ್ರಿಲ್ ತಿಂಗಳ ನೀರನ್ನು ಇನ್ನೂ ಬಿಟ್ಟಿಲ್ಲ. ಇದೀಗ ಎರಡೂ ತಿಂಗಳ ನೀರನ್ನು ಒಮ್ಮೆಲೇ ಬಿಡಿ. ಒಂದೊಮ್ಮೆ ನಮ್ಮ ಆದೇಶವನ್ನು ಪಾಲಿಸಿಲ್ಲ ಎಂದಾದರೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ” ಎಂದು ಮುಖ್ಯ ನ್ಯಾಯಮೂರ್ತಿಗಳು ಖಡಕ್ ಆಗಿಯೇ ಹೇಳಿದ್ದಾರೆ.

ಇನ್ನು ಕಾವೇರಿ ನಿರ್ವಹಣಾ ಮಂಡಳಿ ವಿಚಾರವೂ ಸುಪ್ರೀಂ ಕೋರ್ಟ್‍ನಲ್ಲಿ ಧ್ವನಿಸಿತು. ಕಾವೇರಿ ನಿರ್ವಹಣಾ ಮಂಡಳಿಯ ಕುರಿತ ಸಮಿತಿ ಇನ್ನೂ ಯಾಕೆ ರಚನೆ ಆಗಿಲ್ಲ ಎಂದು ಕೇಂದ್ರ ಸರ್ಕಾವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ರಾಜ್ಯ ಸರ್ಕಾರಕ್ಕೆ ಛಾಟಿ ಬೀಸಿದ ಕೋರ್ಟ್ ಈ ಕೂಡಲೇ ಕಾವೇರಿ ಸ್ಕೀಂನ ಕರಡು ಪ್ರತಿಯನ್ನು ರಚಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ. 10 ದಿನದ ಒಳಗಾಗಿ ಕರಡು ಪ್ರತಿಯನ್ನು ಸಲ್ಲಿಸಬೇಕು. ಸಾಧಕ ಭಾಧಕಗಳ ಅಫಿಡವಿತ್‍ನ್ನು ಸಲ್ಲಿಸಿ ಎಂದು ಆದೇಶವಿತ್ತಿತು.

ತಮಿಳುನಾಡು ವಾದ…

ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದೆ. ಹೀಗಾಗಿ ಈಗ ಯಾವ ನಿರ್ಧಾರವನ್ನೂ ತಳೆಯಲು ಸಾಧ್ಯವಿಲ್ಲ ಎಂಬ ವಾದಕ್ಕೆ ಪ್ರತಿವಾದ ನಡೆಸಿದ ತಮಿಳುನಾಡು ಪರ ವಕೀಲ, “ಕರ್ನಾಟಕ ವಿಧಾನ ಸಭಾ ಚುನಾವಣೆಗೂ ನಮಗೂ ಸಂಬಂಧವೇ ಇಲ್ಲ. ನಮಗೆ ನೀರು ಬೇಕು ಅಷ್ಟೇ. ನಮ್ಮಲ್ಲಿ ಕುಡಿಯುವ ನೀರಿಗೆ ತಾತ್ವಾರ ಎದುರಾಗಿದೆ. ನಮ್ಮ ರಾಜ್ಯದ ಜನತೆಗೆ ನಾವು ಏನೂಂತ ಉತ್ತರಿಸಲಿ..? ನಮಗೆ ಯಥಾಶೀಘ್ರ ಕಾವೇರಿ ನೀರನ್ನು ಬಿಡಬೇಕು” ಎಂದು ಹೇಳಿದೆ.

ಆದರೆ ತಮಿಳುನಾಡಿನ ಈ ವಾದಕ್ಕೆ ಕರ್ನಾಟಕ ಪ್ರತಿವಾದವನ್ನು ಸಲ್ಲಿಸಿದೆಯಾದರೂ ಸುಪ್ರೀಂ ಕೋರ್ಟ್ ಅದಕ್ಕೆ ಮಹತ್ವ ನೀಡಿಲ್ಲ. ಏನು ಮಾಡುತ್ತೀರೋ ಗೊತ್ತಿಲ್ಲ, ಈ ಕೂಡಲೇ ಅಂದರೆ ಸೋಮವಾರದ ಒಳಗೆ ಕರ್ನಾಟಕದಿಂದ ತಮಿಳುನಾಡಿಗೆ 4 ಟಿಎಂಸಿ ನೀರು ಬಿಡಬೇಕು ಅಷ್ಟೆ. ಇಲ್ಲವಾದಲ್ಲಿ ಪರಿಣಾಮ ಎದುರಿಸಿ ಎಂದಿದೆ. ಮುಂದಿನ ವಿಚಾರಣೆಯನ್ನು ಮೇ 8ಕ್ಕೆ ಮುಂದೂಡಿದೆ.

ಸಿದ್ದರಾಮಯ್ಯಗೆ ಸಂಕಷ್ಟ..!

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇದು ಭಾರೀ ಸಂಕಷ್ಟವನ್ನೇ ತಂದಿಟ್ಟಿದೆ. ಚುನಾವಣಾ ಸಮಯದಲ್ಲಿ ಇಂತಹಾ ಆದೇಶವನ್ನು ಜೀರ್ಣಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದಿದ್ದರೆ ನ್ಯಾಯಾಂಗ ನಿಂದನೆಯನ್ನು ಎದುರಿಸಬೇಕಾಗುತ್ತದೆ. ಆದೇಶ ಪಾಲಿಸಿ ತಮಿಳುನಾಡಿಗೆ ನೀರು ಹರಿಸಿದರೆ ರಾಜ್ಯದ ಜನತೆಯ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದು ಭಾರೀ ಸಂಕಷ್ಟವನ್ನೇ ತಂದಿಟ್ಟಿದ್ದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close