ಪ್ರಚಲಿತ

ಬ್ರೇಕಿಂಗ್! ರೈತರಿಗೆ ಶಾಕ್ ನೀಡಿದ ಹೆಚ್‍ಡಿಕೆ.! ಸಾಲಮನ್ನಾಕ್ಕೆ ಎಳ್ಳು ನೀರು ಬಿಟ್ಟ ಕುಮಾರ ಸ್ವಾಮಿ..!  

ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೋದಲ್ಲಿ ಬಂದಲ್ಲೆಲ್ಲಾ ಗಂಟಾಘೋಷವಾಗಿ ಹೇಳಿ ಅದೇಗೋ ಭಾರತೀಯ ಜನತಾ ಪಕ್ಷವನ್ನು ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವನ್ನಾಗಿ ಮಾಡಿದರು. ಆದರೆ ರಾಜಕೀಯದಲ್ಲಿ ಈ ಹಿಂದೆ ಕಚ್ಚಾಡಿಕೊಳ್ಳುತ್ತಿದ್ದ ಕಾಂಗ್ರೆಸ್ ಹಾಗೂ ಜನತಾ ದಳದ ನಾಯಕರು ಭಾರತೀಯ ಜನತಾ ಪಕ್ಷವನ್ನು ಮಣಿಸೋಕ್ಕೋಸ್ಕರ ಒಂದಾಗಿ ಇದೀಗ ರಾಜ್ಯವನ್ನಾಳಲು ಮುಂದಾಗಿದ್ದಾರೆ.

ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಸಮಯದಲ್ಲಿ ರೈತರ ಒಂದು ಲಕ್ಷದವರೆಗಿನ ಸಾಲ ಮನ್ನಾವನ್ನು ಘೋಷಿಸಿದ್ದರು. ರಾಜ್ಯದ ರೈತರು ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ತೆಗೆದುಕೊಂಡಿರುವ ಒಂದು ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಚುನಾವಣಾ ಪೂರ್ವದಲ್ಲಿ ಹೇಳಿದಂತೆ 24 ಗಂಟೆಯ ಒಳಗಾಗಿ ರೈತರ ಸಾಲವನ್ನು ಮನ್ನಾ ಮಾಡಿದ್ದರು. 

Image result for kumaraswamy with siddaramaiah

ಆದರೆ ನಂತರ ಬದಲಾದ ರಾಜಕೀಯ ಸ್ಥಿತಿಗತಿಯಲ್ಲಿ ಯಡಿಯೂರಪ್ಪನವರು ಅಧಿಕಾರದಿಂದ ಕೆಳಗಿಳಿದಿದ್ದರು. ಕುತಂತ್ರದ ರಾಜಕೀಯದ ಮೂಲಕ ಕಾಂಗ್ರೆಸ್ ಹಾಗೂ ಜನತಾ ದಳ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಹಾತೊರೆಯುತ್ತಿದ್ದಾರೆ. ಆದರೆ ಈ ಮಧ್ಯೆಯೇ ನಿಯೋಜಿತ ಮುಖ್ಯಮಂತ್ರಿ ಕುಮಾರ ಸ್ವಾಮಿ ರೈತರಿಗೆ ಶಾಕಿಂಗ್ ನ್ಯೂಸ್‍ನ್ನೇ ನೀಡಿದ್ದಾರೆ.

ಸಾಲಮನ್ನಾಕ್ಕೆ ಎಳ್ಳು ನೀರು..?

“ನಾನು ಮುಖ್ಯಮಂತ್ರಿ ಆದರೆ ರೈತರ ಸಂಪೂರ್ಣ ಸಾಲವನ್ನೂ ಮನ್ನಾ ಮಾಡುತ್ತೇನೆ” ಎಂದು ನಿಯೋಜಿತ ಮುಖ್ಯಮಂತ್ರಿ ಹೆಚ್‍ಡಿ ಕುಮಾರ ಸ್ವಾಮಿ ಹೇಳಿದ್ದರು. ಆದರೆ ಇದೀಗ ಅಧಿಕಾರಕ್ಕೆ ಹತ್ತಿರ ಇರುವಾಗಲೇ ತಾನು ಹೇಳಿದ್ದ ಮಾತಿನಿಂದ ಹಿಂದೆ ಸರಿದಿದ್ದಾರೆ.! ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಕುಮಾರ ಸ್ವಾಮಿಯವರು ಧರ್ಮಸ್ಥಳದಲ್ಲಿ ಈ ವಿಚಾರವನ್ನು ಮಾಧ್ಯಮದ ಮುಂದಿಟ್ಟರು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನಕ್ಕೂ ಮುನ್ನ ಟೆಂಪಲ್ ರನ್ ಶುರುವಿಟ್ಟುಕೊಂಡಿರುವ ಕುಮಾರ ಸ್ವಾಮಿ ಧರ್ಮಸ್ಥಳಕ್ಕೂ ಭೇಟಿ ನೀಡಿ ಶ್ರೀ ಮಂಜುನಾಥನ ದರ್ಶನ ಪಡೆದಿದ್ದರು. ಈ ವೇಳೆ ಮಾಧ್ಯಮದವರ ಪ್ರಶ್ನೆಗಳಿಗೆ ಈ ರೀತಿಯಾಗಿ ಉತ್ತರ ನೀಡಿದ್ದಾರೆ. “ನಾನು ಸ್ವಶಕ್ತಿಯಿಂದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೆ ರೈತರರ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಹೇಳಿದ್ದೇನೆ. ಮೈತ್ರಿ ಸರ್ಕಾರವಾದ ಕಾರಣ ಕೆಲವೊಂದು ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಆದರೆ ರೈತರಿಗೆ ಬೇಕಾಗುವ ಎಲ್ಲಾ ಸಹಕಾರವನ್ನೂ ನೀಡಲು ನಾನು ಸಿದ್ದನಿದ್ದೇನೆ” ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದರು.

ಡಿಕೆಶಿಯಿಂದಲೂ ದಂಧ್ವ ಹೇಳಿಕೆ..!

ಕುಮಾರ ಸ್ವಾಮಿ ಇಂತಹಾ ಹೇಳಿಕೆಯನ್ನು ನೀಡುವುದಕ್ಕೂ ಮುನ್ನವೇ ಮಾಜಿ ಇಂಧನ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಸಾಲ ಮನ್ನಾದ ವಿಚಾರವಾಗಿ ದಂಧ್ವ ಹೇಳಿಕೆಯನ್ನು ನೀಡಿದ್ದರು. ಅದು ಸಾಧ್ಯವಾಗದ ಮಾತುಗಳು. ಸಾಲ ಮನ್ನಾ ಮಾಡಲು ಬೊಕ್ಕಸದಲ್ಲಿ ಹಣದ ಕೊರತೆ ಇದೆ. ಮೈತ್ರಿ ಸರ್ಕಾರವಾದ ಕಾರಣ ಅದರ ಚೌಕಟ್ಟಿನೊಳಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಡಿಕೆಶಿ ಹೇಳಿದ್ದರು.

ಯಾಕೆ ಸಾಧ್ಯವಿಲ್ಲ..?

ಕಾಂಗ್ರೆಸ್ ಹಾಗೂ ಜನತಾದಳದ ಮೈತ್ರಿ ಸರ್ಕಾರ ಸಾಲಮನ್ನಾ ವಿಚಾರವಾಗಿ ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನುವುದಕ್ಕೂ ಕೆಲ ಕಾರಣಗಳಿವೆ. ಈ ಹಿಂದೆ ಅಂದರೆ ಚುನಾವಣಾ ಪೂರ್ವದ ಪ್ರಣಾಳಿಕೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದರು. ಜನತಾ ದಳವೂ ಸಾಲಮನ್ನಾ ಭರವಸೆಯನ್ನು ನೀಡಿತ್ತು. ಆದರೆ ಕಾಂಗ್ರೆಸ್ ಮಾತ್ರ ಯಾವುದೇ ಭರವಸೆಯನ್ನೂ ನೀಡಿರಲಿಲ್ಲ. ಯಾಕೆಂದರೆ ಆ ಪಕ್ಷಕ್ಕೆ ಸರ್ಕಾರದ ಬೊಕ್ಕಸದಲ್ಲಿ ನಯಾ ಪೈಸೆಯೂ ಹಣವಿಲ್ಲ ಎಂಬುವುದು ಕಾಂಗ್ರೆಸ್‍ಗೆ ಮಾತ್ರ ಗೊತ್ತಿದೆ.

ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಮಾಡಿದೆರೆ ಬರೋಬ್ಬರಿ 56000 ಕೋಟಿಯನ್ನು ಸರ್ಕಾರ ಭರಿಸಬೇಕಾಗುತ್ತದೆ. ಇದು ರಾಜ್ಯ ಸರ್ಕಾರದ ಬಜೆಟ್‍ನ ಅರ್ಧದಷ್ಟಿದೆ. ಆದರೆ ಇಷ್ಟೊಂದು ಹಣವನ್ನು ನೀಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವೇ..? ಈಗಾಗಲೆ ಕೆಪಿಸಿಟಿಎಲ್ ಗೆ 16000 ಕೋಟಿ ಸಾಲವನ್ನು ಕಳೆದ ಕಾಂಗ್ರೆಸ್ ಸರ್ಕಾರ ಬಾಕಿ ಇಟ್ಟಿದೆ. ಮಾತ್ರವಲ್ಲದೆ ವೇತನಾ ಆಯೋಗದ 10000 ಕೋಟಿಯನ್ನು ಬಾಕಿ ಇಟ್ಟಿದೆ. ಇದಿಷ್ಟೇ ಅಲ್ಲದೆ ಅನೇಕ ಇಲಾಖೆಗಳ ಹಾಗೂ ಸಂಸ್ಥೆಗಳಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಸಾಲ ಇನ್ನೂ ಬಾಕಿ ಇದೆ. ಈ ಸಾಲಗಳನ್ನೆಲ್ಲಾ ಮುಂದಿನ ಸರ್ಕಾರದ ಮುಖ್ಯಮಂತ್ರಿಗಳು ಭರಿಸಬೇಕಾಗುತ್ತದೆ.

ಭಾರತೀಯ ಜನತಾ ಪಕ್ಷವನ್ನು ಕೆಳಗಿಳಿಸಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡ ಕಾರಣ ಕೇಂದ್ರ ಸರ್ಕಾರದಿಂದ ಹೆಚ್ಚಿನ ಲಾಭವನ್ನು ಈ ಮೈತ್ರಿ ಸರ್ಕಾರ ಇಟ್ಟುಕೊಂಡಿರುವುದಿಲ್ಲ. ಹೀಗಾದರೆ ಸಾಲ ಮನ್ನಾ ಕನಸಿನ ಕೂಸಾಗಿಯೇ ಉಳಿದಿರುತ್ತದೆ ಹೊರತು ಯಾವುದೇ ಭರವಸೆಯೂ ಈಡೇರುವುದಿಲ್ಲ ಎಂಬುವುದು ಸ್ಪಷ್ಟ.

ಒಟ್ಟಾರೆ ಅಧಿಕಾರಕ್ಕೆ ಬರೋದಕ್ಕು ಮುನ್ನ ಹಾಗೂ ಅಧಿಕಾರಕ್ಕೆ ಬಂದ ನಂತರ ತಮ್ಮ ವರಸೆ ಬದಲಾಗುತ್ತದೆ ಎಂಬುವುದನ್ನು ನಿಯೋಜಿತ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ. ಈ ಮೂಲಕ ರಾಜ್ಯದ ರೈತರಿಗೆ ಭಾರತೀಯ ಜನತಾ ಪಕ್ಷದಿಂದ ಸಿಕ್ಕಂತಹ ಸಂತೋಷವನ್ನು ಕಿತ್ತುಕೊಂಡಿದ್ದಾರೆ.

-ಸುನಿಲ್ ಪಣಪಿಲ

Tags

Related Articles

Close