ಪ್ರಚಲಿತ

ಜಗತ್ತನ್ನೇ ಬೆಚ್ಚಿಬೀಳಿಸುತ್ತೆ ಭಾರತದ ಈ ಸೇನಾ ಪಡೆ..! ಎನ್‌ಎಸ್‌ಜಿ ಬ್ಲಾಕ್‌ಕ್ಯಾಟ್‌ಗಳ ಭೇಟೆಗೆ ತತ್ತರಿಸಿದ ಪಾಕ್ ಉಗ್ರರು..!

ಭಾರತ ತಾನಾಗಿ ಯಾವುದೇ ದೇಶಕ್ಕೆ ದಾಳಿ ನಡೆಸಿದ ಉದಾಹರಣೆಯೇ ಇಲ್ಲ.‌ ಆದರೆ ತನಗೆ ತೊಂದರೆಯಾಗುತ್ತಿದೆ ಎಂದು ಗೊತ್ತಾದಾಗ ಸುಮ್ಮನೆ ಕೂತ ಉದಾಹರಣೆಯೂ ಇಲ್ಲ. ಯಾಕೆಂದರೆ ಭಾರತೀಯ ಸೈನಿಕರ ಒಂದೊಂದು ತುಕಡಿಯೂ ಎಷ್ಟೊಂದು ಬಲಿಷ್ಟವಾಗಿದೆ ಎಂದರೆ ಇಡೀ ಜಗತ್ತೇ ಭಾರತೀಯ ಸೇನೆಯನ್ನು ಕಂಡು ಒಂದು ಹೆಜ್ಜೆ ಹಿಂದಕ್ಕೆ ಇಡುವುದು ಗ್ಯಾರಂಟಿ. ಇದು ಕೇವಲ ಬಾಯಿ ಮಾತಿಗೆ ಹೇಳುತ್ತಿಲ್ಲ, ಬದಲಾಗಿ ಅನೇಕ ಬಾರಿ ಭಾರತೀಯ ಸೈನಿಕರ ಆರ್ಭಟ ಯಾವ ರೀತಿ ಇರುತ್ತದೆ ಎಂಬುದು ಜಗತ್ತು ಕಂಡಿದೆ. ಅದೇ ಕಾರಣಕ್ಕಾಗಿ ವಿಶ್ವದಲ್ಲಿ ಬಲಿಷ್ಠ ಸೇನಾ ಪಟ್ಟಿಯಲ್ಲಿ ಭಾರತ ದಿನ ಕಳೆದಂತೆ ಮುನ್ನುಗ್ಗುತ್ತಿರುವುದು. ಭಾರತೀಯ ಸೈನಿಕರ ಬಗ್ಗೆ ಹೇಳುವುದಾದರೆ ಸಾಕಷ್ಟು ವಿಚಾರಗಳಿವೆ , ಆದರೆ ನಾವಿಲ್ಲಿ ಹೇಳಲು ಹೊರಟಿರುವುದು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ ಭಾರತದ ಟಾಪ್ ಸೈನಿಕರನ್ನು ಒಳಗೊಂಡ ಎನ್‌ಎಸ್‌ಜಿ ಕಮಾಂಡೋಗಳ ಬಗ್ಗೆ. ‌ಎನ್‌ಎಸ್‌ಜಿ ಹೆಸರು ಕೇಳುತ್ತಿದ್ದಂತೆ ಮೈಯ ರೋಮ‌ ಸೆಟೆದು ನಿಲ್ಲುತ್ತದೆ. ಹೆಸರಿಗೆ ಇಂತಹ ತಾಕತ್ತಿದೆ ಎಂದರೆ ಇನ್ನು ಇವರ ಭೇಟೆ ಯಾವ ರೀತಿ ಇರಬಹುದು ಎಂದು ಆಲೋಚಿಸಬಹುದು. ಯಾಕೆಂದರೆ ಎನ್‌ಎಸ್‌ಜಿ ಬ್ಲಾಕ್‌ಕ್ಯಾಟ್‌ಗಳು ಸಾಧಾರಣ ಆಪರೇಷನ್‌ಗೆ ಇಳಿಯುವುದಿಲ್ಲ.‌ ಆದರೆ ಒಂದು ಭೇಟೆಗೆ ಸಜ್ಜಾದರೆಂದರೆ ಅಲ್ಲಿ ವಿರೋಧಿಗಳ ನಿರ್ನಾಮ ಖಂಡಿತ. ಅದೆಷ್ಟೇ ವಿರೋಧಿಗಳು ಒಟ್ಟಾದರೂ ಕ್ಷಣ ಮಾತ್ರದಲ್ಲಿ ಇಡೀ ಪ್ರದೇಶವನ್ನೇ ತಮ್ಮ ಕೈವಶಮಾಡಿಕೊಂಡು ತಾವು ಇಳಿದ ಆಪರೇಷನ್‌ನ್ನು ಪೂರ್ಣಗೊಳಿಸುತ್ತದೆ. ಇಂತಹ ಒಂದು ಸೇನಾ ಪಡೆ ನಮ್ಮಲ್ಲಿದೆ ಎಂಬುದೇ ಭಾರತೀಯರಾದ ನಮಗೆಲ್ಲರಿಗೂ ಹೆಮ್ಮೆಯ ವಿಚಾರ.!

ಭಾರತೀಯ ಸೇನಾ ಪಡೆಯಲ್ಲಿ ನಾನಾ ರೀತಿಯ ವಿಧಗಳಿವೆ. ‌ಒಂದೊಂದು ಸೇನಾ ಪಡೆಯು ಎಷ್ಟೊಂದು ಬಲಿಷ್ಟವಾಗಿರುತ್ತದೆ ಎಂದರೆ, ವಿರೋಧಿಗಳು ದಾಳಿ ಮಾಡಲು ತಂತ್ರ ರೂಪಿಸುತ್ತಲೇ ಅದನ್ನು ಹೊಸಿಕಿ ಹಾಕುವ ಸಾಮಾರ್ಥ್ಯ ನಮ್ಮ ಸೈನಿಕರಲ್ಲಿದೆ. ಯಾಕೆಂದರೆ ಸೇನಾ ತರಬೇತಿ ಪಡೆಯುವಾಗಲೇ ನಮ್ಮ ಸೈನಿಕರು ಎಲ್ಲಾ ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದಲೇ ಬಲಿಷ್ಟ ಸೇನೆಯನ್ನು ಭಾರತ ಹೊಂದಿದೆ ಎಂದರೆ ತಪ್ಪಾಗದು. ಎಲ್ಲಾ ರಾಷ್ಟ್ರಗಳು ತಮ್ಮ ಸೈನಿಕರಿಗೆ ಗೌರವ ನೀಡುತ್ತದೆಯಾದರೂ, ಭಾರತದಲ್ಲಿ ಯೋಧರಿಗೆ ವಿಶೇಷ ಸ್ಥಾನಮಾನ ನೀಡಿ ಗೌರವಿಸಲಾಗುತ್ತದೆ. ‌ಅದೇ ರೀತಿ ನಮ್ಮ ಸೈನಿಕರೂ ಕೂಡ ತಮ್ಮ ಜೀವ ಒತ್ತೆಯಿಟ್ಟು ಗಡಿಯಲ್ಲಿ ದೇಶರಕ್ಷಣೆಯಲ್ಲಿ ನಿರತರಾಗಿದ್ದಾರೆ.!

ಭಾರತೀಯ ಸೇನಾ ಪಡೆಯ ಅತ್ಯಂತ ಬಲಿಷ್ಟ ಪಡೆ ಎಂದರೆ ಅದು ಎನ್‌ಎಸ್‌ಜಿ ಕಮಾಂಡೋಗಳು. ಬ್ಲಾಕ್ ಕ್ಯಾಟ್ ಎಂದೇ ಖ್ಯಾತವಾಗಿರುವ ಈ ಕಮಾಂಡೋಗಳು ಎಂಟ್ರಿ ಕೊಡುತ್ತವೆ ಎಂದರೆ ಸಾಕು ವಿರೋಧಿಗಳು ನಡುಗುತ್ತಾರೆ.‌ಯಾಕೆಂದರೆ ಯಾವ ಅಪಾಯವನ್ನೂ ನಿಭಾಯಿಸುವ ಸಾಮರ್ಥ್ಯ ಹೊಂದಿರುವ ಈ ಕಮಾಂಡೋಗಳು ಸದ್ಯ ಭಾರತದ ಕಲಶವಾಗಿರುವ ಜಮ್ಮು ಕಾಶ್ಮೀರಕ್ಕೆ ಕಾಲಿಟ್ಟಿದೆ. ಪದೇ ಪದೇ ಹೊತ್ತಿ ಉರಿಯುತ್ತಿರುವ ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕಾದರೆ ಅಟ್ಟಹಾಸ ಮೆರೆಯುತ್ತಿರುವ ಉಗ್ರರನ್ನು ಮಟ್ಟಹಾಕಲೇಬೇಕು.‌ಈವರೆಗೆ ಯೋಧರು ಕಾಶ್ಮೀರದ ಕಣಿವೆಯಲ್ಲಿ ಹೋರಾಟ ನಡೆಸಿದ್ದು, ಜಮ್ಮು ಕಾಶ್ಮೀರದ ಸರಕಾರದ ಮೃದು ಧೋರಣೆಯಿಂದಾಗಿ ಉಗ್ರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಆದರೆ ಇದೀಗ ರಾಜ್ಯಪಾಲರ ಆಳ್ವಿಕೆ ಆರಂಭವಾಗಿದ್ದು, ಕಾಶ್ಮೀರದ ಪ್ರತ್ಯೇಕವಾದಿಗಳ ಮತ್ತು ಉಗ್ರರ ಸೊಕ್ಕು ಮುರಿಯಲು ಬಿಎಸ್‌ಎಫ್ ಕಮಾಂಡೋಗಳು ಲಗ್ಗೆ ಇಟ್ಟಿದ್ದಾರೆ.!

ಕೆಲವೇ ಗಂಟೆಗಳ ಆಪರೇಷನ್‌ನಲ್ಲಿ ನಡೆಸುತ್ತಾರೆ ಉಗ್ರರ ಮಾರಣಹೋಮ..!

ಎನ್‌ಎಸ್‌ಜಿ ಕಮಾಂಡೋಗಳು ಅಂದರೆ ಭಾರತದ ಅತೀ ಬಲಿಷ್ಠ ಸೇನಾ ಪಡೆ. ಅದ್ಯಾವ ರೀತಿಯಲ್ಲಿ ಇವರಿಗೆ ತರಬೇತಿ ನೀಡಲಾಗುತ್ತದೆ ಎಂದರೆ ತರಬೇತಿಯನ್ನು ಪೂರ್ಣಗೊಳಿಸುವ ವೇಳೆಗೆ ಪ್ರತಿಯೊಬ್ಬ ಯೋಧನೂ ಸಿಂಹದಂತೆ ಭೇಟೆಗೆ ಸಜ್ಜಾಗುತ್ತಾರೆ. ಯಾಕೆಂದರೆ ಇವರಿಗೆ ನೀಡುವ ತರಬೇತಿ ಮತ್ಯಾವುದೇ ಸೈನಿಕರಿಗೆ ನೀಡುವುದಿಲ್ಲ. ಅಂತಹ ಕಠಿಣ ತರಬೇತಿಯನ್ನು ಪಡೆದ ಈ ಕಮಾಂಡೋಗಳು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ಸಾಮಾರ್ಥ್ಯ ಹೊಂದಿರುತ್ತಾರೆ. ಎನ್‌ಎಸ್‌ಜಿ ಕಮಾಂಡೋಗಳು ಇತರ ಸೈನಿಕರಂತೆ ವರ್ಷವಿಡೀ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವುದಿಲ್ಲ.‌ ಅಪಾಯದ ಗುಣಮಟ್ಟ ಹೆಚ್ಚಾಗುತ್ತಿದೆ ಎಂದು ಅರಿವಾದ ಕೂಡಲೇ ವಿರೋಧಿಗಳ ವಿರುದ್ಧ ಆಪರೇಷನ್‌ಗೆ ಇಳಿಯುವ ಕಮಾಂಡೋಗಳು, ಎಂತಹ ಶಸ್ತ್ರಧಾರಿ ಉಗ್ರರನ್ನೂ ಕ್ಷಣ ಮಾತ್ರದಲ್ಲಿ ಹೊಡೆದುರುಳಿಸುತ್ತಾರೆ. ಅದಕ್ಕಾಗಿಯೇ ಎನ್‌ಎಸ್‌ಜಿ ಕಮಾಂಡೋಗಳು ವರ್ಷವಿಡೀ ತರಬೇತಿ ಪಡೆಯುತ್ತಾರೆ ಎಂಬುದು ವಿಶೇಷವಾಗಿ ಗಮನಿಸಬೇಕಾದ ಅಂಶ.

ಎನ್‌ಎಸ್‌ಜಿ ಕಮಾಂಡೋಗಳು ನಡೆಸುವ ಕಾರ್ಯಾಚರಣೆಯಲ್ಲಿ ಯಾವೊಬ್ಬ ವಿರೋಧಿಯೂ ಜೀವ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಯಾಕೆಂದರೆ ಭಾರತದಲ್ಲಿ ಎನ್‌ಎಸ್‌ಜಿ ಪಡೆಯೇ ಸೇನಾ ಪಡೆಯಲ್ಲಿ ಅತೀ ಹೆಚ್ಚು ಬಲಿಷ್ಠವಾದ ಸೇನಾಪಡೆ.‌ ಈ ಕಮಾಂಡೋಗಳು ಒಬ್ಬೊಬ್ಬರು ಕೂಡ ಒಂದು ಸೇನಾ ತುಕಡಿಗೆ ಸಮನಾಗಿರುತ್ತಾರೆ ಎಂದರೆ ಇವರ ಸಾಮಾರ್ಥ್ಯ ನಮಗೆ ಅರಿವಾಗುತ್ತದೆ.!

ಮುಂಬೈ ದಾಳಿಯಲ್ಲೂ ಸಾಹಸ ಮೆರೆದಿದ್ದ ಎನ್‌ಎಸ್‌ಜಿ ಬ್ಲಾಕ್ ಕ್ಯಾಟ್..!

ನವೆಂಬರ್ ೨೬ ೨೦೦೮ ಭಾರತದ ಪಾಲಿಗೆ ಎಂದೂ ಮರೆಯಲಾಗದ ದಿನ.‌ ಯಾಕೆಂದರೆ ಯಾರೂ ಊಹಿಸದ ರೀತಿಯಲ್ಲಿ ಉಗ್ರರ ತಂಡವೊಂದು ಮುಂಬಯಿಯ ತಾಜ್ ಹೋಟೆಲ್‌ಗೆ ನುಗ್ಗಿ ದಾಳಿ ನಡೆಸಿತ್ತು.‌ ಭಾರತ ಮಾತ್ರವಲ್ಲದೆ ವಿದೇಶಿಗರನ್ನೂ ಗುಂಡಿಕ್ಕಿ ಕೊಂದ ಉಗ್ರರು ಸಣ್ಣ ಮಕ್ಕಳನ್ನೂ ಬಿಡದೆ ರಕ್ತದ ರುಚಿ ನೋಡಿದ್ದರು. ಇಡೀ ದೇಶವೇ ಈ ಒಂದು ದಾಳಿಯ ವಿಚಾರ ಕೇಳಿ ಬೆಚ್ಚಿಬಿದ್ದಿತ್ತು. ಪೊಲೀಸರು ಸೈನಿಕರೆಲ್ಲಾ ಸೇರಿ ಹೊಟೇಲ್ ಒಳಗಿದ್ದ ಉಗ್ರರ ದಮನಕ್ಕೆ ಹೊಟೇಲ್‌ನ್ನು ಸುತ್ತುವರಿದಿದ್ದರು.‌ಬಿಎಸ್ಎಫ್ ಯೋಧರ ತಂಡವು ಹೊಟೇಲ್‌ನಲ್ಲಿದ್ದ ಉಗ್ರರನ್ನು ಸೆದೆಬಡಿಯಲು ಸಜ್ಜಾಗಿದ್ದರೆ ಉಗ್ರರ ಬಳಿ ಆಧುನಿಕ ಶಸ್ತ್ರಾಸ್ತ್ರ ಇರುವ ಬಗ್ಗೆ ಮಾಹಿತಿ ಲಭಿಸಿತ್ತು.‌ಆದ್ದರಿಂದಲೇ ಫೀಲ್ಡ್‌ಗೆ ಎಂಟ್ರಿ ಕೊಟ್ಟ ಭಯೋತ್ಪಾದಕರ ಪಾಲಿಗೆ ಡೆಡ್ಲಿ ಟೀಂ ಎಂದೇ ಹೆಸರಾದ ಎನ್‌ಎಸ್‌ಜಿ ಕಮಾಂಡೋಗಳು, ತಮ್ಮದೇ ಶೈಲಿಯಲ್ಲಿ ಹೊಟೇಲ್‌ನ ಸುತ್ತ ಸುತ್ತುವರಿದಿದ್ದರು.‌ ಹೆಲಿಕಾಪ್ಟರ್ ಮೂಲಕ ಹೊಟೇಲ್‌ಗೆ ಲಗ್ಗೆ ಇಟ್ಟ ಕಮಾಂಡೋಗಳು ನೋಡ ನೋಡುತ್ತಿದ್ದಂತೆ ಹೋಟೆಲ್ ನಲ್ಲಿ ಅಡಗಿದ್ದ ಉಗ್ರರನ್ನು ಹೊಡೆದುರುಳಿಸಿ , ಒಬ್ಬನನ್ನು ಜೀವಂತವಾಗಿ ಸೆರೆಹಿಡಿದಿದ್ದರು.‌ ಇದು ಎನ್‌ಎಸ್‌ಜಿ ಕಮಾಂಡೋಗಳ ಸಾಹಸ ಪ್ರದರ್ಶನಕ್ಕೆ ಒಂದು ಅವಕಾಶ ಮಾಡಿಕೊಟ್ಟಿತಲ್ಲದೆ, ಇಡೀ ಜಗತ್ತಿಗೆ ಭಾರತದ ಸೇನಾ ಸಾಮಾರ್ಥ್ಯದ ಅರಿವು ಮೂಡಿಸಿತ್ತು.!

ಕಾಶ್ಮೀರದಲ್ಲೂ ಘರ್ಜಿಸುತ್ತಿದೆ ಬ್ಲಾಕ್‌ಕ್ಯಾಟ್ ಪಡೆ..!

ಪಾಕಿಸ್ತಾನದ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಯಾವುದೇ ಸರಕಾರ ಬಂದರೂ ಪ್ರತ್ಯೇಕವಾದಿಗಳ ಮತ್ತು ಉಗ್ರರ ದುಶ್ಕೃತ್ಯ ತಡೆಯಲು ಸಾಧ್ಯವಾಗಿರಲಿಲ್ಲ. ‌ಮೋದಿ ಸರಕಾರದಲ್ಲಿ ಕಠಿಣ ಕ್ರಮ ಕೈಗೊಂಡರೂ ಕೂಡ ಜಮ್ಮು ಕಾಶ್ಮೀರದ ಪಿಡಿಪಿಯ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಉಗ್ರರ ವಿರುದ್ಧದ ಮೃದು ಧೋರಣೆಯಿಂದಾಗಿ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಆದರೆ ಇದೀಗ ಮೋದಿ ಸರಕಾರ ಜಮ್ಮು ಕಾಶ್ಮೀರದ ಸರಕಾರದ ಜೊತೆ ಮಾಡಿಕೊಂಡ ಮೈತ್ರಿಗೆ ಗುಡ್ ಬೈ ಹೇಳಿದ್ದು, ಕಾಶ್ಮೀರದಲ್ಲಿ ಶಾಂತಿ ನೆಲೆಸುವ ಸಲುವಾಗಿ ದಿಟ್ಟ ನಿರ್ಧಾರ ಕೈಗೊಂಡಿದೆ. ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಇದೀಗ ಹೆಚ್ಚಿನ ಬಲ ಬಂದಿದ್ದು, ಕೇಂದ್ರ ಸರಕಾರ ಸೈನಿಕರಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ರಾಜ್ಯಪಾಲರ ಆಳ್ವಿಕೆ ಜಾರಿಯಾಗಿರುವುದರಿಂದ ಯಾವುದೇ ರಾಜಕೀಯ ಪಕ್ಷಗಳು ಹಸ್ತಕ್ಷೇಪ ಮಾಡುವಂತಿಲ್ಲ. ಆದ್ದರಿಂದಲೇ ಇದೀಗ ಕಣಿವೆ ರಾಜ್ಯಕ್ಕೆ ಎನ್‌ಎಸ್‌ಜಿ ಕಮಾಂಡೋಗಳು ತೆರಳಿದ್ದು, ಇನ್ನು ಮುಂದೆ ಭಾರತೀಯ ಸೇನೆಯ ಅಸಲಿ ಆಟ ಶುರುವಾಗಲಿದೆ. ಈಗಾಗಲೇ ೧೦ಕ್ಕೂ ಹೆಚ್ಚು ಪಾಕ್ ಉಗ್ರರನ್ನು ನೆಲಕ್ಕುರುಳಿಸಿದ ಭಾರತೀಯ ಸೇನೆ, ಇನ್ನು ಮುಂದೆ ಹೆಚ್ಚಿನ ಕಾರ್ಯಾಚರಣೆ ನಡೆಸಲು ಸಜ್ಜಾಗಿದೆ. ಯಾಕೆಂದರೆ ಎನ್‌ಎಸ್‌ಜಿ ಕಮಾಂಡೋಗಳು ಕೂಡ ಕಾಶ್ಮೀರದಲ್ಲಿ ಕಾರ್ಯಾಚರಣೆಗೆ ಇಳಿದಿದ್ದು ಯಾವುದೇ ಕಾರಣಕ್ಕೂ ಉಗ್ರರು ಮತ್ತು ಪ್ರತ್ಯೇಕವಾದಿಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.!

ಇತ್ತ ಪಾಕಿಸ್ತಾನ ಉಗ್ರರನ್ನು ಬಳಸಿಕೊಂಡು ಭಾರತದಲ್ಲಿ ದುಶ್ಕೃತ್ಯ ನಡೆಸಲು ಪ್ರಯತ್ನಿಸುತ್ತಿದ್ದರೆ, ಭಾರತ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಎನ್‌ಎಸ್‌ಜಿ ಸೇನಾ ಪಡೆಯನ್ನು ಕಾಶ್ಮೀರಕ್ಕೆ ಕರೆಸಿಕೊಂಡಿದೆ.‌ ಈಗಾಗಲೇ ಉಗ್ರರು ಅಡಗಿರುವ ಮನೆಯನ್ನು ಉಡಾಯಿಸಿರುವ ಭಾರತೀಯ ಸೇನೆ, ಮೂಲೆ ಮೂಲೆಗಳಲ್ಲಿ ಹುಡುಕಿ ಹುಡುಕಿ ಕೊಲ್ಲುತ್ತಿದ್ದಾರೆ. ಎನ್‌ಎಸ್‌ಜಿ ಕಮಾಂಡೋಗಳು ಕಾರ್ಯಾಚರಣೆಗೆ ಇಳಿಯುತ್ತವೆ ಎಂದರೆ ಸಾಕು ಉಗ್ರರೂ ಕೂಡ ಬೆವರುತ್ತಾರೆ. ಅಂತಹ ಸೇನಾ ಸಾಮಾರ್ಥ್ಯ ಹೊಂದಿರುವ ನಮ್ಮ ದೇಶ ಇದೀಗ ಉಗ್ರರ ಅಟ್ಟಹಾಸಕ್ಕೆ ತತ್ತರಿಸಿರುವ ಭೂಲೋಕ ಸ್ವರ್ಗವೆನಿಸಿಕೊಂಡಿರುವ ಜಮ್ಮು ಕಾಶ್ಮೀರವನ್ನು ಮತ್ತೆ ಶಾಂತಿಯ ಬೀಡನ್ನಾಗಿ ಪರಿವರ್ತಿಸಲು ಸಜ್ಜಾಗಿದೆ. ಆದ್ದರಿಂದಲೇ ಎನ್‌ಎಸ್‌ಜಿ ಕಮಾಂಡೋಗಳು ಕಾರ್ಯಾಚರಣೆಗೆ ಇಳಿದರೆ ಇಡೀ ಜಗತ್ತು ಕಣ್ಣು ಮಿಟುಕಾಯಿಸದೆ ಕಾದು ಕುಳಿತು ನೋಡುತ್ತದೆ..!

— ಸಾರ್ಥಕ್ ಶೆಟ್ಟಿ

Tags

Related Articles

Close