ಪ್ರಚಲಿತ

ಶಿವಮೊಗ್ಗಕ್ಕೆ ಲಗ್ಗೆ ಇಟ್ಟ ಚಾಣಕ್ಯ! ಮೈತ್ರಿ ಕೂಟದ ನಾಯಕರನ್ನು ಮಣಿಸಲು ರಾಜ್ಯಕ್ಕೆ ಎಂಟ್ರಿ ಕೊಟ್ಟ ಅಮಿತ್ ಷಾ! ಶಿವಮೊಗ್ಗದಲ್ಲಿ ಕೇಸರಿ ಕಲರವ!

ರ್ನಾಟಕದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಯಾವ ರೀತಿ ದೇಶಾದ್ಯಂತ ಸುದ್ದಿ ಮಾಡುತ್ತಿದೆ ಎಂದರೆ ಈಗಾಗಲೇ ಮೊದಲ ಹಂತದ ಚುನಾವಣೆ ನಡೆದಿದ್ದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ಮೊದಲ ಹಂತದ ಚುನಾವಣೆಯಲ್ಲಿ ಈ ಹಿಂದಿಗಿಂತ ಹೆಚ್ಚು ಮತದಾನ ನಡೆದಿದ್ದು ಇದೀಗ ಎರಡನೇ ಹಂತದ ಚುನಾವಣೆಗೆ ರಾಜ್ಯದ ಕೆಲವು ಜಿಲ್ಲೆಗಳು ಸಜ್ಜಾಗಿದೆ. ಕರ್ನಾಟಕದಲ್ಲಿ ಮೈತ್ರಿ ಸರಕಾರವನ್ನು ಯಾವುದೇ ಕಾರಣಕ್ಕೂ ಮುಂದುವರಿಯುವುದಿಲ್ಲ ಎಂದು ಬಿಜೆಪಿ ನಾಯಕರು ಪದೇ ಪದೇ ಹೇಳಿಕೊಳ್ಳುತ್ತಿದ್ದು ಚುನಾವಣೆ ಮುಗಿದ ನಂತರ ಮೈತ್ರಿ ಸರಕಾರ ಕೂಡ ಅಂತ್ಯ ಕಾಣಲಿದೆ ಎಂದು ಹೇಳಲಾಗುತ್ತಿದೆ. ಇತ್ತ ಎರಡನೇ ಹಂತದ ಚುನಾವಣೆಗೆ ಪ್ರಚಾರದ ನಿಮಿತ್ತ ರಾಜ್ಯಕ್ಕೆ ಲಗ್ಗೆ ಇಟ್ಟ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಶಿವಮೊಗ್ಗದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಪರವಾಗಿ ಮತಭೇಟೆ ನಡೆಸಿದ್ದಾರೆ.!

ಯಾವುದೇ ಕಾರಣಕ್ಕೂ ಮೈತ್ರಿ ನಾಯಕರು ಈ ಬಾರಿ ಗೆಲುವು ಸಾಧಿಸಬಾರದು ಎಂಬ ನಿಟ್ಟಿನಲ್ಲಿ ಅಖಾಡಕ್ಕಿಳಿದ ಬಿಜೆಪಿ ರಾಷ್ಟ್ರೀಯ ನಾಯಕರು, ಒಬ್ಬೊಬ್ಬರಾಗಿ ರಾಜ್ಯಕ್ಕೆ ಆಗಮಿಸಿ ಇಲ್ಲಿನ ಬಿಜೆಪಿ ಅಭ್ಯರ್ಥಿಯ ಪರ ಮತಪ್ರಚಾರ ನಡೆಸುತ್ತಿದ್ದಾರೆ. ಇತ್ತ ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಸಚಿವ ಸಂಪುಟದ ನಾಯಕರೆಲ್ಲರೂ ಶಿವಮೊಗ್ಗದಲ್ಲಿ ಬೀಡುಬಿಟ್ಟಿದ್ದು, ಯಡಿಯೂರಪ್ಪನವರ ಮಗ ರಾಘವೇಂದ್ರ ಅವರನ್ನು ಹೇಗಾದರೂ ಸೋಲಿಸಬೇಕು ಎಂಬ ಉದ್ದೇಶದಿಂದ ಭರ್ಜರಿ ಪಿತೂರಿ ನಡೆಸುತ್ತಿದ್ದಾರೆ. ಕೇಂದ್ರ ಸರಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಾ ಪ್ರಚಾರ ಮಾಡುವ ಮೈತ್ರಿ ನಾಯಕರು, ತಮ್ಮ ಸರಕಾರ ಏನು ಸಾಧನೆ ಮಾಡಿದೆ ಎಂಬುದನ್ನು ಎಲ್ಲೂ ಹೇಳುತ್ತಿಲ್ಲ. ಮೊದಲ ಹಂತದ ಚುನಾವಣೆಯವರೆಗೂ ರಾಜ್ಯದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಭಾರೀ ಸದ್ದು ಮಾಡಿದ್ದು, ಇದೀಗ ಎರಡನೇ ಹಂತಕ್ಕೆ ಶಿವಮೊಗ್ಗ ಸದ್ದು ಮಾಡುತ್ತಿದೆ.!

ಶಿವಮೊಗ್ಗದಲ್ಲಿ ಕೇಸರಿ ಪಾಳಯದ ಶಕ್ತಿ ಪ್ರದರ್ಶನ!

ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂಬ ಉದ್ದೇಶದಿಂದ ಬಿಜೆಪಿ ರಾಷ್ಟ್ರೀಯ ನಾಯಕರ ದಂಡೇ ಕರ್ನಾಟಕದತ್ತ ಲಗ್ಗೆ ಇಟ್ಟಿದೆ. ಕುಮಾರಸ್ವಾಮಿ ನೇತೃತ್ವದ ಮೈತ್ರು ಸರಕಾರಕ್ಕೆ ಅಂತ್ಯ ಕಾಣಿಸಲು ಸಜ್ಜಾದ ಕೇಸರಿ ಪಡೆ ಇಂದು ಶಿವಮೊಗ್ಗದಲ್ಲಿ ಬೃಹತ್ ರೋಡ್ ಶೋ ನಡೆಸಿ ಸಂಚಲನ ಮೂಡಿಸಿದೆ. ಶಿವಮೊಗ್ಗದಲ್ಲಿ ಅಬ್ಬರಿಸಿದ ಅಮಿತ್ ಷಾ, ಕರ್ನಾಟಕಕ್ಕೆ ಕೇಂದ್ರ ಸರಕಾರ ನೀಡುತ್ತಿರುವ ಯೋಜನೆ ಮತ್ತು ಅನುದಾನಗಳನ್ನು ಇಲ್ಲಿನ ಸರಕಾರ ಜನರಿಗೆ ತಲುಪಿಸುತ್ತಿಲ್ಲ, ಮತ್ತು ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡುತ್ತಲೇ ಕಾಲ ಕಳೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಶಿವಮೊಗ್ಗದಲ್ಲಿ ಇಂದು ನಡೆದ ರೋಡ್ ಶೋ’ದಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದು ರಸ್ತೆಯುದ್ದಕ್ಕೂ ಕೇಸರಿ ಪತಾಕೆಗಳು ರಾರಾಜಿಸುತ್ತಿದ್ದವು. ಅದೇ ರೀತಿ ಈಗಾಗಲೇ ನಡೆದ ಕೆಲವು ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ೨೮ರ ಪೈಕಿ ೨೩ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಹೇಳಲಾಗಿದೆ.!

-ಅರ್ಜುನ್

Tags

Related Articles

FOR DAILY ALERTS
Close