ದೇಶಪ್ರಚಲಿತ

ಮುಸ್ಲಿಂ ಪ್ರಾಬಲ್ಯ ಕ್ಷೇತ್ರದಲ್ಲೂ ಕೇಸರಿ ಪತಾಕೆ ಹಾರಿಸಿದ ಬಿಜೆಪಿ! ಫಲಿಸಿತು ಮೋದಿ-ಶಾ ತಂತ್ರ!

ಗುಜರಾತಿನ ವಿಧಾನಸಭಾ ಚುನಾವಣಾ ಫಲಿತಾಂಶ ಬಹುತೇಕ ಎಲ್ಲಾ ರಾಜ್ಯಕ್ಕೂ ಒಂದು ಸಂದೇಶ ರವಾನಿಸಿದೆ. ಎಲ್ಲಾ ಊಹೆಯೂ ಕೂಡ ಸುಳ್ಳಾಗಿದ್ದು, ಚುನಾವಣೋತ್ತರ ಸಮೀಕ್ಷೆಗಳು ಕೂಡ ವಿಫಲವಾಗಿದೆ.

ಚುನಾವಣೆ ನಡೆದ ನಂತರದ ಎಲ್ಲಾ ಸಮೀಕ್ಷೆಗಳು ಕೂಡ ಗುಜರಾತಿನಲ್ಲಿ ಬಿಜೆಪಿ 125-130 ರ ಆಸುಪಾಸು ಇರಲಿದೆ ಎಂದು ಹೇಳಿಕೊಂಡಿದ್ದವು, ಆದರೆ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿದೆ. ಮತದಾರನ ಆಯ್ಕೆ ಬಹು ಅಪರೂಪ ಎಂಬಂತೆ ಐತಿಹಾಸಿಕ ಫಲಿತಾಂಶವೊಂದು ಹೊರ ಬಿದ್ದಿದೆ. ಇತ್ತ ಗುಜರಾತಿನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಬಿಜೆಪಿಯ ನಡೆ ಎಲ್ಲರ ಹುಬ್ಬೇರಿಸುವಂತಿದೆ. ಕಾರಣ…

ಗುಜರಾತಿನಲ್ಲಿ ಈ‌ ಬಾರಿ ಮೋದಿ-ಶಾ ಹಾಗೂ ನಡ್ಡಾ ಅವರ ತಂತ್ರಗಾರಿಕೆ ಯಶಸ್ಸು ಕಂಡಿದ್ದು, 35 ಕ್ಷೇತ್ರಗಳಲ್ಲಿ ಬಿಜೆಪಿ ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ಹೊಸ ಅಭ್ಯರ್ಥಿಗಳನ್ನು ಬಿಜೆಪಿ ಅಖಾಡಕ್ಕೆ ಇಳಿಸಿತ್ತು.‌ಮಾತ್ರವಲ್ಲದೆ ಸಚಿವ ಸಂಪುಟದಲ್ಲಿದ್ದ 5 ಸಚಿವರಿಗೆ ಕೋಕ್ ನೀಡಿದ ಬಿಜೆಪಿ ಹೈಕಮಾಂಡ್, ಆ ಕ್ಷೇತ್ರದಲ್ಲೂ ಹೊಸ ಮುಖಗಳಿಗೆ ಮಣೆ ಹಾಕಿತ್ತು. ಆಶ್ಚರ್ಯವೆಂಬಂತೆ ಈ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಇವಿಷ್ಟು ಒಂದೆಡೆಯಾದರೆ ಇತ್ತ ಮುಸ್ಲಿಂ ಜನಸಂಖ್ಯೆ ಹೆಚ್ವಿರುವ ಕ್ಷೇತ್ರದಲ್ಲೂ ಕೂಡ ಬಿಜೆಪಿ ಗೆಲುವಿನ ಪತಾಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದು, ಆಶ್ಚರ್ಯವೆಂಬಂತೆ ಈ ಬಾರಿ ಮುಸ್ಲಿಂ ಪ್ರಾಬಲ್ಯ ಇರುವ ಕ್ಷೇತ್ರದಲ್ಲೂ ಕೂಡ ಮುಸ್ಲಿಂ ಅಭ್ಯರ್ಥಿಗಳಿಗೆ ಅವಕಾಶ ನೀಡದ ಬಿಜೆಪಿ, ಹಿಂದೂಗಳನ್ನೇ ಕಣಕ್ಕಿಳಿಸಿ ಕೇಸರಿ ಪತಾಕೆ ಹಾರಿಸಿದೆ.

ಎಲ್ಲಿ ಯಾವ ರೀತಿಯ ಆಟ ಆಡಬೇಕೆಂಬ ಸ್ಪಷ್ಟ ಚಿತ್ರಣ ಇರುವ ಬಿಜೆಪಿ ಹೈಕಮಾಂಡ್ ಈ ಬಾರಿ ಗುಜರಾತಿನಲ್ಲಿ ಅನುಸರಿಸಿದ ಮಾರ್ಗ ಮಾತ್ರ ಎಲ್ಲರನ್ನೂ ಚಕಿತಗೊಳಿಸಿದ್ದು, ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಗಳು ಕೂಡ ಇದೇ ರೀತಿ ನಡೆಯಲಿದೆ ಎಂಬ ಸಂದೇಶವೊಂದು ರವಾನೆಯಾಗಿದೆ.

ಒಟ್ಟಾರೆಯಾಗಿ ಬಿಜೆಪಿ ತನ್ನ ಮೂಲ ಉದ್ದೇಶ ಏನಿದೆಯೋ ಅದನ್ನು ಸಾಧಿಸುತ್ತಿದೆ ಎಂಬುಂದು ಗುಜರಾತ್ ಚುನಾವಣೆ ಹಾಗೂ ಚುನಾವಣೆಯ ಫಲಿತಾಂಶದಿಂದ ಸ್ಪಷ್ಟವಾಗಿದೆ.!

Tags

Related Articles

Close