ಪ್ರಚಲಿತ

ಭಾರತಕ್ಕೆ ಬಿಜೆಪಿಯೇ ಬೆಸ್ಟ್

ಮುಂದಿನ ಲೋಕ ಸಭಾ ಚುನಾವಣೆಗೂ ಮುನ್ನ ದೇಶದ ೯ ಸ್ಥಳಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷ ಗಳಾದ ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಈ ವರ್ಷ ಬಹಳ ಮುಖ್ಯವಾಗಿದ್ದು, ಈ ಸಂಬಂಧ ಯಾವ ಪಕ್ಷಕ್ಕೆ ಅನುಕೂಲ ಹೆಚ್ಚು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಇಂಡಿಯಾ ಟುಡೇ ಮತ್ತು ಸಿ ವೋಟರ್ ಸಮೀಕ್ಷೆ ನಡೆಸಿವೆ.

ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಬಿ ಬಿಸಿ ಕೊಂಡಿ ಇರುವ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ ದೇಶ ಸುತ್ತಿದ್ದರೂ, ಇದು ಕಾಂಗ್ರೆಸ್ ಪಕ್ಷಕ್ಕೆ ಗೆಲುವು ತಂದು ಕೊಡಲು ಸಾಧ್ಯವಿಲ್ಲ. ಶೇ. ೨೯ ರಷ್ಟು ಮಂದಿ ಈ ಯಾತ್ರೆಯನ್ನು ದೊಡ್ಡ ಸಮೂಹ ಸಂಪರ್ಕ ಚಳುವಳಿ ಎಂದು ಭಾವಿಸಿದರೆ, ಶೇ.೧೩ ರಷ್ಟು ಜನರು ಇದು ರಾಹುಲ್ ಗಾಂಧಿಯನ್ನು ಮರು ಬ್ರಾಂಡ್ ಮಾಡುವುದಕ್ಕೆ ನಡೆಸಿದ ಯಾತ್ರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ೯% ಜನರು ಈ ಯಾತ್ರೆಯಿಂದ ಯಾವುದೇ ಬದಲಾವಣೆ ನಡೆಯುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಈ ಸಮೀಕ್ಷೆಯಲ್ಲಿ ವ್ಯಕ್ತಪಡಿಸಿದ್ದಾರೆ.

ಈ ದೇಶಕ್ಕೆ ಮುಂದಿನ ಪ್ರಧಾನಿ ಯಾರು? ಎಂಬ ಪ್ರಶ್ನೆಯನ್ನು ಸಹ ಈ ಸಮೀಕ್ಷೆಯಲ್ಲಿ ಕೇಳಲಾಗಿದ್ದು, ಶೇ. ೫೨ ಮಂದಿ ಮುಂದಿನ ಬಾರಿಯೂ ಪ್ರಧಾನಿ ಮೋದಿ ಅವರೇ ಈ ದೇಶದ ಪ್ರಧಾನಿಯಾಗಲಿದ್ದಾರೆ ಎಂಬ ಅಭಿಪ್ರಾಯ ತಿಳಿಸಿದ್ದು, ೨೪% ಜನರು ರಾಹುಲ್ ಗಾಂಧಿ ಪ್ರಧಾನಿ ಆಗುವ ಸಾಧ್ಯತೆ ಇರುವುದಾಗಿ ಹೇಳಿದ್ದಾರೆ.

ಹಾಗೆಯೇ, ಪ್ರಧಾನಿ ಮೋದಿ ಅವರ ಉತ್ತರಾಧಿಕಾರಿ ತಯಾರಾಗುವ ಸಾಧ್ಯತೆ ಇದೆ ಎನ್ನುವ ಪ್ರಶ್ನೆಗೆ, ಬಿಜೆಪಿ ಚಾಣಕ್ಯ ಅಮಿತ್ ಶಾ ಅವರಿಗೆ ೨೬%, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಪರ ೨೫% ಮತ್ತು ನಿತಿನ್ ಗಡ್ಕರಿ ಪರ ೧೬% ಈ ಸಮೀಕ್ಷೆಯಲ್ಲಿ ಮತಗಳು ಬಿದ್ದಿವೆ.

ಇನ್ನು ಈ ವರೆಗೆ ಈ ದೇಶವನ್ನು ಮುನ್ನಡೆಸಿದ ಪ್ರಧಾನಿಗಳಲ್ಲಿ ಯಾರು ಬೆಸ್ಟ್ ಎನ್ನುವ ಪ್ರಶ್ನೆ ಕೇಳಲಾಗಿದ್ದು, ಇದಕ್ಕೆ ೪೭% ಜನರು ಪ್ರಧಾನಿ ಮೋದಿ ಪರ, ೧೬% ಜನರು ಅಜಾತ ಶತ್ರು, ಮಾಜಿ ಪ್ರಧಾನಿ ದಿ. ಎ.ಬಿ. ವಾಜಪೇಯಿ ಅವರ ಪರ ೧೬% ಜನರು ಮತ ನೀಡಿದ್ದಾರೆ.

ಹಾಗೆಯೇ ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರದ ಗದ್ದುಗೆ ಏರುತ್ತದೆ ಎಂಬ ಪ್ರಶ್ನೆಗೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದೆ. ೫೪೩ ಸ್ಥಾನಗಳಲ್ಲಿ ಎನ್‌ಡಿ‌ಎ ಗೆ ೨೯೮ ಸ್ಥಾನಗಳು ದೊರೆಯಬಹುದು. ಕಾಂಗ್ರೆಸ್ ೧೫೩ ಸ್ಥಾನಗಳನ್ನು ತನ್ನದಾಗಿಸಿಕೊಳ್ಳಬಹುದು ಎಂದು ಈ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಒಟ್ಟಿನಲ್ಲಿ ಈ ದೇಶದ ಅಭಿವೃದ್ಧಿಯ ದೃಷ್ಟಿಯಿಂದ, ಆಡಳಿತದ ಚುಕ್ಕಾಣಿ ಹಿಡಿಯಲು ಬಿಜೆಪಿಯೇ ಬೆಸ್ಟ್ ಎನ್ನುವ ಅಭಿಪ್ರಾಯ ಹೆಚ್ಚಿನ ಜನರದ್ದಾಗಿದ್ದು, ಈ ಬಾರಿಯೂ ಕಾಂಗ್ರೆಸ್ ಪಕ್ಷ ಮಕಾಡೆ ಮಲಗಲಿವೆ ಎನ್ನುವುದನ್ನು ಈ ಸಮೀಕ್ಷೆ‌ಗಳು ತಿಳಿಸಿವೆ.

Tags

Related Articles

Close