ಪ್ರಚಲಿತ

ಅಚ್ಚರಿ! ಮೈತ್ರಿ ಸರಕಾರದ ಜೊತೆ ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿ.! ರಾಜ್ಯದ ಹಿತಕ್ಕಾಗಿ ಒಂದಾಗುತ್ತಾರಾ ಮೂರು ಪಕ್ಷದ ಮುಖಂಡರು..?

ವಿಧಾನಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ತಪ್ಪಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸರಕಾರ ರಚನೆ ಮಾಡಿಕೊಂಡಿತ್ತು. ಆದ್ದರಿಂದ ಬಿಜೆಪಿಯನ್ನು ತಮ್ಮ ವೈರಿ ಪಕ್ಷ ಎಂದು ಹೇಳಿಕೊಂಡಿದ್ದ ಮೈತ್ರಿ ಸರಕಾರ , ಎಲ್ಲಾ ರೀತಿಯಲ್ಲೂ ಬಿಜೆಪಿಯನ್ನು ಮತ್ತು ಬಿಜೆಪಿಯ ನಾಯಕರನ್ನು ದೂರುತ್ತಲೇ ಬಂದಿತ್ತು. ಇತ್ತ ಬಿಜೆಪಿ ಕೂಡ ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿಕೊಂಡಿರುವ ಮೈತ್ರಿಯ ಬಗ್ಗೆ ವಿರೋಧ ವ್ಯಕ್ತಪಡಿಸಿ, ಆಕ್ರೋಶ ಹೊರ ಹಾಕಿತ್ತು.

ಮುಂದಿನ ಲೋಕಸಭಾ ಚುನಾವಣೆಯಲ್ಲೂ ಈ ಎರಡೂ ಪಕ್ಷಗಳು ಒಟ್ಟಾಗಿ ಬಿಜೆಪಿಯನ್ನು ಎದುರಿಸಲು ಈಗಿಂದಲೇ ತಯಾರಿ ಕೂಡ ನಡೆಸಿತ್ತು. ಆದರೆ ಇದೀಗ ರಾಜ್ಯ ರಾಜಕಾರಣದಲ್ಲಿ ಯಾರೂ ಊಹಿಸದ ಬೆಳವಣಿಗೆ ಕಂಡುಬಂದಿದೆ. ಬದ್ಧ ವೈರಿಗಳಂತಿದ್ದ ಮೈತ್ರಿ ಸರಕಾರ ಮತ್ತು ಬಿಜೆಪಿ ಇದೀಗ ರಾಜ್ಯದ ಹಿತದೃಷ್ಟಿಯಿಂದ ಒಗ್ಗಟ್ಟು ಪ್ರದರ್ಶಿಸಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರಕಾರದ ನಿರ್ಧಾರಕ್ಕೆ ಭಾರತೀಯ ಜನತಾ ಪಕ್ಷದ ಮುಖಂಡರೂ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಎಲ್ಲಾ ಪಕ್ಷಗಳು ಸೇರಿ ಒಕ್ಕೊರಲಿನಿಂದ ಜೈ ಅಂದಿದೆ.!

ನ್ಯಾಯಾಲಯದಲ್ಲಿ ಮೂಲದಾವೆ ಹಾಕಲು ನಿರ್ಧಾರ..!

ರಾಜ್ಯ ಸರಕಾರದ ನೇತೃತ್ವದಲ್ಲಿ ಇಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ರಾಜ್ಯ ಸರಕಾರ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮೂಲದಾವೆ ಹಾಕಲು ನಿರ್ಧಾರ ಮಾಡಿತ್ತು. ಇದಕ್ಕಾಗಿ ಸರ್ವ ಪಕ್ಷಗಳ ಅಭಿಪ್ರಾಯ ಕೂಡ ಪಡೆದಿತ್ತು. ಈ ಸಂದರ್ಭದಲ್ಲಿ ರಾಜ್ಯ ಸರಕಾರದ ತೀರ್ಮಾನಕ್ಕೆ ಜೈ ಎಂದಿರುವ ಬಿಜೆಪಿ, ತಾನೂ ಕೂಡ ಸರಕಾರದ ನಿರ್ಧಾರಕ್ಕೆ ಬೆಂಬಲ ನೀಡಿದೆ. ಸಂಸತ್ತಿನ ಒಳಗೆ ಮತ್ತು ಹೊರಗೆ ಎರಡೂ ಕಡೆಗಳಲ್ಲಿ ಕೈಗೊಂಡಿರುವ ತೀರ್ಮಾನದ ಬಗ್ಗೆ ಪ್ರಸ್ತಾಪ ಮಾಡಲು ನಿರ್ಧರಿಸಿದ್ದು, ಎಲ್ಲಾ ಪಕ್ಷಗಳು ಕಾವೇರಿ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಿವೆ. ಈ ಮೂಲಕ ರಾಜಕೀಯವನ್ನು ರಾಜಕೀಯಕ್ಕೆ ಮಾತ್ರ ಸೀಮಿತಗೊಳಿಸಿ ರಾಜ್ಯದ ವಿಚಾರಕ್ಕೆ ಬಂದಾಗ ಹಿತದೃಷ್ಟಿಯಿಂದ ಒಟ್ಟಾಗಿ ಕೈಜೋಡಿಸಿಕೊಂಡಿದ್ದಾರೆ.!

ಕಾವೇರಿ ನದಿ ನೀರಿನ ಹಂಚಿಕೆ ವಿಚಾರವಾಗಿ ಈಗಾಗಲೇ ಅನೇಕ ಪ್ರತಿಭಟನೆ ಹೋರಾಟಗಳು ನಡೆದಿದ್ದು, ಇನ್ನೂ ಅಂತಿಮ ತೀರ್ಮಾನ ಬಂದಿಲ್ಲ. ಅದಕ್ಕಾಗಿಯೇ ರಾಜ್ಯ ಸರಕಾರ ಈ ರೀತಿ ನೇರವಾಗಿ ನ್ಯಾಯಾಲಯದಲ್ಲಿ ಮೂಲದಾವೆ ದಾಖಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ. ನ್ಯಾಯಾಲಯದ ಮುಖಾಂತರ ಹೋರಾಟ ನಡೆಸಿದರೆ ಕಾನೂನು ಪ್ರಕಾರವಾಗಿ ಎಲ್ಲಾ ವಿಚಾರಣೆಗಳು ನಡೆಯುತ್ತದೆ. ಆದ್ದರಿಂದ ರಾಜ್ಯಕ್ಕೆ ಹಿತವಾಗಬಹುದು ಎಂಬ ನಿಟ್ಟಿನಲ್ಲಿ ಮೂರೂ ಪಕ್ಷಗಳು ಈ ರೀತಿ ನಿರ್ಧಾರ ಮಾಡಿರುವುದು ರಾಜ್ಯದ ಜನತೆಗೂ ಸಂತಸ ತಂದಿದೆ.

ಯಾಕೆಂದರೆ ಮೈತ್ರಿ ಸರಕಾರದಲ್ಲಿ ಬಿಜೆಪಿ ಮಾತ್ರ ವಿರೋಧ ಪಕ್ಷವಾಗಿದ್ದು, ಸರಕಾರದ ನಿರ್ಧಾರಕ್ಕೆ ಅಡ್ಡಿಪಡಿಸಬಹುದು ಎಂದು ಊಹಿಸಲಾಗಿತ್ತು.ಆದರೆ ಬಿಜೆಪಿ ಕೈಗೊಂಡಿರುವ ಈ ನಿರ್ಧಾರ ಎಲ್ಲರ ಹುಬ್ಬೇರುವಂತೆ ಮಾಡಿದೆ. ಆದ್ದರಿಂದ ರಾಜ್ಯದ ಹಿತದೃಷ್ಟಿಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಬಿಜೆಪಿ ಮುಖಂಡರು ಈ ರೀತಿ ರಾಜ್ಯ ಸರಕಾರದ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ..!

–ಅರ್ಜುನ್

Tags

Related Articles

Close