ಪ್ರಚಲಿತ

ಭಾರತದ ಭವಿಷ್ಯ ನಿರ್ಮಾಣದಲ್ಲಿ ಕರ್ನಾಟಕವೂ ತೊಡಗಿಸಿಕೊಂಡಿದೆ: ಪ್ರಧಾನಿ ಮೋದಿ

ಕರ್ನಾಟಕದ ಬಿಜೆಪಿ ಕಾರ್ಯಕರ್ತರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವರ್ಚುವಲ್ ಆಗಿ ಸಂವಾದ ನಡೆಸಿದ್ದಾರೆ.

ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು, ಬಿಜೆಪಿ ಗೆಲುವಿಗಾಗಿ ಶ್ರಮಿಸಲು ಅವರು ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಕರ್ನಾಟಕದ ಸಮಗ್ರ ಪರಂಪರೆಯ ಪ್ರತೀಕಗಳಾಗಿ ಮತ್ತು ರಾಷ್ಟ್ರ ಭಕ್ತಿಯಿಂದ ಪ್ರೇರೇಪಿತರಾಗಿ ಬಿಜೆಪಿ ಕಾರ್ಯಕರ್ತರು ಗೌರವ ಸಂಪಾದಿಸಿದ್ದಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತರ ಹೊಣೆಗಾರಿಕೆಯೂ ದುಪ್ಪಟ್ಟಾಗಿದೆ. ಪ್ರತಿ ಬೂತ್‌ನಲ್ಲಿ ನಡೆದ ಬಿಜೆಪಿಯನ್ನು ಗೆ ಸಲ್ಲಿಸುವ ಪ್ರಯತ್ನಗಳು ಪಕ್ಷವನ್ನು ದಾಖಲೆಯ ಸ್ಥಾನಗಳಿಂದ ಗೆಲ್ಲಿಸಿಕೊಡಲಿದೆ. ಬೂತ್‌ಗಳನ್ನು ಗೆಲ್ಲುವುದರಿಂದಲೇ ಚುನಾವಣೆಯಲ್ಲಿ ಗೆಲ್ಲುವುದು ಸಾಧ್ಯ ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಕ್ಷದ ಓರ್ವ ಕಾರ್ಯಕರ್ತನಾಗಿ ನಾನು ಸಹ ಇನ್ನೆರಡು ದಿನಗಳಲ್ಲಿ ಕಾರ್ಯಕರ್ತರ ನಡುವೆ ಬರಲಿದ್ದೇನೆ. ಕರ್ನಾಟಕದ ಜನರನ್ನು ಭೇಟಿಯಾಗಿ ಅವರಿಂದ ಆಶೀರ್ವಾದ ಪಡೆಯಲಿದ್ದೇನೆ. ಕಳೆದ ಕೆಲ ದಿನಗಳ ಕರ್ನಾಟಕ ಭೇಟಿಯಲ್ಲಿಯೂ ನನಗೆ ಅಲ್ಲಿನ ಜನರಿಂದ ಆಶೀರ್ವಾದ ದೊರೆತಿದೆ. ಬಿಜೆಪಿಯ ಸಣ್ಣ ಮಟ್ಟದ ಕಾರ್ಯಕರ್ತರ ಮೇಲೆಯೂ ರಾಜ್ಯದ ಜನತೆ ಪ್ರೀತಿ ತೋರುತ್ತಿದ್ದು, ಇದು ಜನರು ಬಿಜೆಪಿ ಮೇಲಿಟ್ಟಿರುವ ವಿಶ್ವಾಸಕ್ಕೆ ಉದಾಹರಣೆ ಎಂದು ಮೋದಿ ಹರ್ಷಿಸಿದ್ದಾರೆ.

ಕೊರೋನಾ ಬಳಿಕ ಜಗತ್ತಿನ ಆರ್ಥಿಕತೆ ಕುಸಿದು ಹೋಗಿದ್ದರೂ, ನಮ್ಮ ಆರ್ಥಿಕತೆಯನ್ನು ಬಲಿಷ್ಠಗೊಳಿಸಲಾಗಿದೆ. ಭಾರತ ಬಡತನದ ವಿರುದ್ಧವೂ ಹೋರಾಟ ನಡೆಸುತ್ತಿದೆ. ಕೃಷಿಕರಿಗೆ ಕಿಸಾನ್ ‌ಸಮ್ಮಾನ್ ನಿಧಿ ಮೂಲಕ ಲಕ್ಷಾಂತರ ಕೋಟಿ ರೂ. ಗಳನ್ನು ಒದಗಿಸಲಾಗಿದೆ. ಸರ್ಕಾರದ ಯೋಜನೆಗಳು ಜನರನ್ನು ತಲುಪುವಂತೆ ಮಾಡುವಲ್ಲಿ ಬಿಜೆಪಿ ಮತ್ತು ಇತರ ಪಕ್ಷಗಳಿಗೆ ಅಜಗಜಾಂತರ ವ್ಯತ್ಯಾಸ ಇರುವುದಾಗಿ ಅವರು ತಿಳಿಸಿದ್ದಾರೆ.

ಭಾರತದ ಭವಿತವ್ಯವನ್ನು ಉತ್ತಮಗೊಳಿಸುವ ಸಲುವಾಗಿ ಕರ್ನಾಟಕವ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

Tags

Related Articles

Close