ಪ್ರಚಲಿತ

ಎಎಪಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗುಡುಗು

ಅಕ್ರಮ ಮದ್ಯ ನೀತಿ ಹಗರಣದಲ್ಲಿ ಜೈಲು ಪಾಲಾಗಿದ್ದ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೆಲ ದಿನಗಳ ಹಿಂದಷ್ಟೇ ಪರಪ್ಪನ ಅಗ್ರಹಾರದಿಂದ ಬೇಲ್ ಮೇಲೆ ಹೊರ ಬಂದಿದ್ದಾರೆ. ಇದೀಗ ಅಕ್ರಮ ವಿದೇಶಿ ದೇಣಿಗೆ ಪಡೆದ ಭ್ರಷ್ಟಾಚಾರದ ಆರೋಪ ಆಪ್ ಮೇಲೆ ಬಂದಿದ್ದು, ಆಪ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ವಾಗ್ದಾಳಿ ನಡೆಸಿದ್ದಾರೆ.

ಎಫ್‌ಸಿಆರ್‌ಎ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ, ವಿದೇಶಿ ದೇಣಿಗೆ ಪಡೆದ ಆಪ್ ದೇಶ ವಿರೋಧಿ ಶಕ್ತಿಗಳ ಜೊತೆಗೆ ನಿಕಟ ಸಂಪರ್ಕ ಹೊಂದಿರುವುದಾಗಿ ಅವರು ಆರೋಪಿಸಿರುವುದಾಗಿದೆ.

ಭ್ರಷ್ಟಚಾರದ ವಿರುದ್ಧ ಎಂದು ಬೊಗಳೆ ಬಿಟ್ಟು ಅರವಿಂದ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ ಕಟ್ಟಿದ್ದರು. ಜೊತೆಗೆ ನಮ್ಮದು ಭ್ರಷ್ಟಾಚಾರವನ್ನು ತೊಡೆದು ಹಾಕುವ ಪಕ್ಷ ಎಂದುಕೊಂಡೇ ಭ್ರಷ್ಟರೇ ಕಟ್ಟಿ ಕೊಂಡ ಇಂಡಿ ಒಕ್ಕೂಟದ ಸದಸ್ಯ ಸ್ಥಾನವನ್ನೂ ಆಪ್ ಪಡೆದುಕೊಂಡಿತ್ತು. ಇದೀಗ ವಿದೇಶದಿಂದ ಅಕ್ರಮ ಹಣ ಪಡೆದ ಆರೋಪವನ್ನು ಸಹ ಆಪ್ ಎದುರಿಸುತ್ತಿದೆ.

ಆಪ್ ಪಕ್ಷ ಪಂಜಾಬ್ ಚುನಾವಣೆಯ ಸಂದರ್ಭದಲ್ಲಿ ಸಹ ಭಯೋತ್ಪಾದಕ ಶಕ್ತಿಗಳಿಂದ ಹಣ ಪಡೆದಿತ್ತು. ಈ ಸಂಬಂಧ ಅರವಿಂದ ಕೇಜ್ರಿವಾಲ್ ಈ ವರೆಗೂ ಯಾವುದೇ ಉತ್ತರ ನೀಡಿಲ್ಲ. ಎಎಪಿ ದೇಶ ವಿರೋಧಿ ಶಕ್ತಿಗಳ ಜೊತೆಗೆ ನಿಕಟವಾದ ಸಂಪರ್ಕ ಇಟ್ಟುಕೊಂಡಿರುವುದಾಗಿಯೂ ಅವರು ಆರೋಪಿಸಿದ್ದಾರೆ.

ದೇಶದಲ್ಲಿ ವಿನಾಶ ಉಂಟು ಮಾಡಲು ಮತ್ತು ಅಭಿವೃದ್ಧಿಯ ವಿರೋಧಿ ಕೆಲಸಗಳನ್ನು ಮಾಡಲು, ಅಭಿವೃದ್ಧಿ ಪಥದಿಂದ ದೇಶವನ್ನು ಹಿನ್ನಡೆ ಸಾಧಿಸುವ ಹಾಗೆ ಮಾಡಲು ಎಎಪಿ ಬಯಸುತ್ತಿದೆ. ದೇಶ ವಿರೋಧಿ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಎಂದು ನಡ್ಡಾ ತಿಳಿಸಿದ್ದಾರೆ.

ಹಾಗೆಯೇ, ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ, ಪ್ರಜಾಸತ್ತಾತ್ಮಕ ಮೈತ್ರಿಕೂಟ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಜೂನ್ ನಾಲ್ಕರಂದು ಎಲ್ಲವೂ ಸ್ಪಷ್ಟವಾಗಲಿದೆ. ಏಕಪಕ್ಷೀಯ ಫಲಿತಾಂಶ ಇದ್ದು, ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಪರವಾಗಿ ನಾನೂರಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tags

Related Articles

Close