ಪ್ರಚಲಿತ

ಅಯೋಧ್ಯೆಯಲ್ಲೇ ರಾಮಮಂದಿರ ನಿರ್ಮಾಣ ಖಚಿತ! “ಸಂಕಲ್ಪ ಪತ್ರ” ದ ಮೂಲಕ ಪ್ರಣಾಳಿಕೆ ರಿಲೀಸ್ ಮಾಡಿದ ಬಿಜೆಪಿ!

ಡೆತಡೆ ಯಾವುದೇ ಇರಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಖಚಿತ ಎಂದು ಇಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಇಂದು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ, ೨೦೧೪ರಲ್ಲಿ ನಮ್ಮ ಪಕ್ಷ ರಾಮಮಂದಿರ ನಿರ್ಮಾಣ ಮಾಡುವ ಭರವಸೆ ನೀಡಿತ್ತು, ಅಯೋಧ್ಯೆಯ ವಿಚಾರ ಕೋರ್ಟ್ ನಲ್ಲಿ ಇರುವುದರಿಂದ ಮುಂದುವರಿಯಲು ಸಾಧ್ಯವಾಗಿರಲಿಲ್ಲ, ಆದರೆ ಮುಂದಿನ ದಿನಗಳಲ್ಲಿ ಇನ್ನು ಸುಮ್ಮನೆ ಕೂರುವ ಮಾತೇ ಇಲ್ಲ ಎಂದು ಹೇಳಿರುವ ಬಿಜೆಪಿ,ಈ ಬಾರಿ ರಾಮಮಂದಿರ ನಿರ್ಮಾಣ ಖಚಿತ ಎಂದು ಹೇಳಿಕೊಂಡಿದೆ. ಅಷ್ಟೇ ಅಲ್ಲದೆ ಕಾಶ್ಮೀರಿ ಪಂಡಿತರಿಗೆ ವಿಶೇಷ ಸವಲತ್ತು ಒದಗಿಸುವ ಭರವಸೆ ನೀಡಿದ ಬಿಜೆಪಿ, ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಗಳಿಗೂ ನೆಲೆ ಕಲ್ಪಿಸುವುದಾಗಿ ಹೇಳಿಕೊಂಡಿದೆ. ರಾಮಮಂದಿರ ನಿರ್ಮಾಣ ಮಾಡುವುದು ನಮ್ಮ ಭರವಸೆ ಮಾತ್ರವಲ್ಲ, ಅದು ನಮ್ಮ ಕರ್ತವ್ಯ ಎಂದು ಹೇಳಿಕೊಂಡ ಬಿಜೆಪಿ, ೨೦೧೪ರಲ್ಲಿ ನಾವು ನೀಡಿದ ಭರವಸೆಗಳು ಈಡೇರಿಸಿದ್ದೇವೆ ಮತ್ತು ಇನ್ನೂ ಅನೇಕ ಭರವಸೆಗಳು ಇದೆ ಎಂದು ಹೇಳಿದೆ.!

ಅಷ್ಟೇ ಅಲ್ಲದೆ ಈ ಬಾರಿಯ ಪ್ರಣಾಳಿಕೆ ಕೇವಲ ಬಿಜೆಪಿ ನೀಡುತ್ತಿಲ್ಲ, ಇದಕ್ಕೆಂದೇ ಒಂದು ತಂಡ ರಚನೆ ಮಾಡಲಾಗಿತ್ತು ಮತ್ತು ದೇಶದ ೬ ಕೋಟಿ ಜನರ ಅಭಿಪ್ರಾಯ ಸಂಗ್ರಹಿಸಿ ನಾವು ಪ್ರಣಾಳಿಕೆ ತಯಾರಿ ಮಾಡಿದ್ದೇವೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ. ರಾಷ್ಟ್ರೀಯತೆ, ಅಭಿವೃದ್ಧಿಯ ವಿಚಾರವಾಗಿ ನಾವು ಯಾವತ್ತೂ ಬದ್ಧರಾಗಿದ್ದೇವೆ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿಕೊಂಡಿದ್ದಾರೆ. ಚುನಾವಣಾ ಪ್ರಣಾಳಿಕೆ ಬಿಡುಗಡೆ ನಂತರದಲ್ಲಿ ಮಾತನಾಡಿದ ಮೋದಿ, ನಮ್ಮ ಆಡಳಿತ ಕೇವಲ ನಮಗೆ ಮಾತ್ರ ತೃಪ್ತಿ ತಂದಿಲ್ಲ, ದೇಶದ ಜನರಿಗೂ ತೃಪ್ತಿ ತಂದಿದೆ ಎಂಬುದನ್ನು ನಾವು ಅರಿತಿದ್ದೇವೆ. ಇದಕ್ಕೆ ಅನುಗುಣವಾಗಿ ಪ್ರಣಾಳಿಕೆ ತಯಾರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ನಮ್ಮ ದೇಶದಲ್ಲಿ ಅವಕಾಶ ವಂಚಿತರು ಅನೇಕರಿದ್ದಾರೆ, ಇಂತಹ ಜನರನ್ನು, ಮಹಿಳೆಯರನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ತಯಾರಿಸಲಾಗಿದೆ ಎಂದು ಹೇಳಿದ್ದಾರೆ.!

೬೦ ವರ್ಷದ ಆಡಳಿತ v/s ೫ ವರ್ಷದ ಆಡಳಿತ!

ಸ್ವತಃ ದೇಶದ ಜನರೇ ನೋಡುವಂತೆ ವಿಪಕ್ಷಗಳು ತಮ್ಮ ೬೦ ವರ್ಷದ ಆಡಳಿತ ಮತ್ತು ನಮ್ಮ ಸರಕಾರದ ೫ ವರ್ಷದ ಆಡಳಿತವನ್ನು ತುಲನೆ ಮಾಡಿ ನೋಡುತ್ತಿದ್ದಾರೆ, ನೀವೇ ಗಮನಿಸಿ ಯಾರ ಆಡಳಿತ ಉತ್ತಮವಾಗಿದೆ ಮತ್ತು ಯಾರ ಆಡಳಿತದಲ್ಲಿ ಜನಪರ ಕೆಲಸಗಳು, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಎಂದು ಮೋದಿ ಹೇಳಿಕೊಂಡಿದ್ದಾರೆ. ದೆಹಲಿಯಲ್ಲಿ ಎಸಿ ರೂಂ‌ನಲ್ಲಿ ಕೂತು ಬಡತನ ನಿರ್ಮೂಲನೆ ಮಾಡುವ ಭರವಸೆ ನೀಡುವ ಜನರಿಂದ ಬಡತನ ನಿರ್ಮೂಲನೆ ಸಾಧ್ಯವಿಲ್ಲ, ಬಡತನ ನಿರ್ಮೂಲನೆಗೆ ನಮ್ಮ ಸರಕಾರ ಯಾವ ಯೋಜನೆ ಜಾರಿಗೊಳಿಸಿದೆ ಎಂಬುದು ದೇಶದ ಜನರಿಗೆ ತಿಳಿದಿದೆ ಎಂದು ಹೇಳಿದ ಮೋದಿ, ಕಳೆದ ೫ ವರ್ಷದಲ್ಲಿ ದೇಶದಲ್ಲಿ ಸ್ವಚ್ಚತೆಯ ವಿಚಾರವಾಗಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿದೆ ಎಂದರೆ ಅದಕ್ಕೆ ಕಾರಣ ಯಾರು ಎಂಬುದನ್ನು ಅರಿತುಕೊಳ್ಳಿ ಎಂದು ಹೇಳಿಕೊಂಡಿದ್ದಾರೆ.!

ಅದೇ ರೀತಿ ಗಂಗಾ ನದಿ ಶುದ್ಧೀಕರಣದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಈಗಾಗಲೇ ಗಂಗಾ ನದಿ ಸ್ವಚ್ಛವಾಗಿದೆ ಮತ್ತು ೨೦೨೨ರ ವೇಳೆಗೆ ನಾವು ನೀಡಿದ ಪ್ರತಿಯೊಂದು ಭರವಸೆಗಳು ಕೂಡ ಈಡೇರುತ್ತದೆ ಎಂದು ಮತ್ತೊಮ್ಮೆ ಪ್ರಮಾಣ ಮಾಡಿದ್ದಾರೆ.!

  • ರೈತರಿಗೆ ಶೂನ್ಯ ಬಡ್ಡಿದರದಲ್ಲಿ 1 ಲಕ್ಷ ರೂ.ವರೆಗೆ ಸಾಲ
  • ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್ ಮತ್ತಿತರ ಹಿರಿಯ ನಾಯಕರು ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು.
  • ಪ್ರಮುಖವಾಗಿ ಮತ್ತೆ ರಾಮ ಮಂದಿರ ನಿರ್ಮಾಣದ ಭರವಸೆ ನೀಡಿರುವ ಬಿಜೆಪಿ, ಹಿಂದುತ್ವದ ತನ್ನ ಮೂಲ ಅಜೆಂಡಾವನ್ನು ಉಳಿಸಿಕೊಳ್ಳುವುದರ ಜೊತೆಗೆ ದೇಶದ ಜನತೆಗೆ ಹಲವು ಪ್ರಮುಖ ವಾಗ್ದಾನಗಳನ್ನು ನೀಡಿದೆ.
  • ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಪಿಂಚಣಿ, ರೈತರ ಆದಾಯ ದ್ವಿಗುಣಗೊಳಿಸಲು ಕ್ರಮ, ಭಯೋತ್ಪಾದನೆ ನಿರ್ಮೂಲನೆ ಸೇರಿದಂತೆ ಹಲವು ಪ್ರಮುಖ ವಾಗ್ದಾನಗಳನ್ನು ನೀಡಿದೆ.
  • ರಾಮ ಮಂದಿರ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧವಾಗಿದೆ ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಇದೇ ವೇಳೆ ಏಕರೂಪ ನಾಗರಿಕ ಸಂಹಿತೆ ಜಾರಿಯ ಕುರಿತೂ ಬಿಜೆಪಿ ವಾಗ್ದಾನ ನೀಡಿದೆ.
  • ಇದೇ ವೇಳೆ ಗ್ರಾಮೀಣ ಭಾರತಕ್ಕೂ ಸಾಕಷ್ಟು ಯೋಜನೆ ನೀಡಿರುವ ಬಿಜೆಪಿಯ ಪ್ರಣಾಳಿಕೆ, ಕ್ರೆಡಿಟ್ ಕಾರ್ಡ್ ಮೂಲಕ ಶೂನ್ಯ ಬಡ್ಡಿದರದಲ್ಲಿ ರೈತರಿಗೆ 1 ಲಕ್ಷ ರೂ.ವರೆಗೆ ಸಾಲ, ಗ್ರಾಮೀಣ ವಿಕಾಸಕ್ಕೆ 25 ಲಕ್ಷ ಕೋಟಿ ರೂ. ಮೀಸಲು ಹಾಗೂ ಎಲ್ಲಾ ರೈತರಿಗೂ ವಾರ್ಷಿಕ 6,000 ರೂ. ಸಹಾಯಧನದ ವಾಗ್ದಾನ ಮಾಡಿದೆ.
  • ಇನ್ನು ವ್ಯಾಪಾರಿಗಳ ಹಿತ ಕಾಯಲು ರಾಷ್ಟ್ರೀಯ ವ್ಯಾಪಾರ ಆಯೋಗದ ರಚನೆ, 60 ವರ್ಷ ದಾಟಿದ ಉದ್ದಿಮೆದಾರರಿಗೆ ಪಿಂಚಣಿ ಘೋಷಣೆ ಮಾಡಲಾಗಿದೆ.
  • ದೇಶದ ಆಭೀವೃದ್ಧಿ ಮತ್ತು ಭದ್ರತೆಗೆ ತನ್ನ ಪ್ರಣಾಳಿಕೆ ಮೂಲಕ ಬದ್ಧತೆ ವ್ಯಕ್ತಪಡಿಸಿರುವ ಬಿಜೆಪಿ, ಭಯೋತ್ಪಾದನೆಯ ನಿರ್ಮೂಲನೆಯ ವಾಗ್ದಾನ ನೀಡಿದೆ. ಯಾವುದೇ ಕಾರಣಕ್ಕೂ ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳದೆ, ದೇಶವನ್ನು ಆಂತರಿಕ ಮತ್ತು ಬಾಹ್ಯ ಬೆದರಿಕೆಗಳಿಂದ ರಕ್ಷಿಸುವ ಭರವಸೆ ನೀಡಲಾಗಿದೆ.
  • ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದ ರದ್ದತಿಯ ತನ್ನ ನೀತಿಯನ್ನು ಪುನರುಚ್ಛಿಸಿರುವ ಬಿಜೆಪಿ, ಸದ್ಯಕ್ಕೆ ಸಂವಿಧಾನದ 35(A) ವಿಧಿಯನ್ನು ತುರ್ತಾಗಿ ರದ್ದುಗೊಳಿಸುವ ಭರವಸೆ ನೀಡಿದೆ.

-ಅರ್ಜುನ್

Tags

Related Articles

FOR DAILY ALERTS
Close