ಪ್ರಚಲಿತ

ಸ್ವಾಮೀಜಿಗಳಿಗೆ ಡಿಕೆಶಿಯಿಂದ ಎಚ್ಚರಿಕೆ.! ಹಿಂದೂ ವಿರೋಧಿ ನೀತಿಗೆ ಮತ್ತೆ ಮಣೆ ಹಾಕಿದ ಮೈತ್ರಿ ಸರಕಾರ.!

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಹಿರಂಗವಾಗಿಯೇ ಹಿಂದೂಗಳ ವಿರುದ್ಧ ಮತ್ತು ಹಿಂದೂ ಧರ್ಮದ ವಿರುದ್ಧ ತೊಡೆತಟ್ಟಿದ್ದರಿಂದಲೇ ರಾಜ್ಯದಲ್ಲಿ ಹಿಂದೂಗಳು ಭಯದ ವಾತಾವರಣದಲ್ಲಿ ಜೀವಿಸುವಂತಾಗಿತ್ತು. ಪದೇ ಪದೇ ಹಿಂದೂ ಧರ್ಮದ ಬಗ್ಗೆ ಅವಮಾನ ಮಾಡುತ್ತಿದ್ದ ಸಿದ್ದರಾಮಯ್ಯ, ಮಠ ಮಂದಿರ ದೇವಾಲಯಗಳ ವಿಚಾರದಲ್ಲೂ ಉಡಾಫೆಯ ಹೇಳಿಕೆ ನೀಡುತ್ತಿದ್ದರು. ಹಿಂದೂ ಸ್ವಾಮೀಜಿಗಳ ಬಗ್ಗೆಯೂ ಕೀಳಾಗಿ ಮಾತನಾಡುತ್ತಿದ್ದ ಸಿದ್ದರಾಮಯ್ಯನವರು ತಾನು ಹಿಂದೂ ವಿರೋಧಿ ಎಂಬುವುದನ್ನು ಸ್ಪಷ್ಟಪಡಿಸಿದ್ದರು. ಇದೀಗ ಸಿದ್ದರಾಮಯ್ಯನವರ ನೀತಿಯನ್ನೇ ಮುಂದುವರಿಸಲು ಮೈತ್ರಿ ಸರಕಾರ ಕೂಡ ಚಿಂತನೆ ನಡೆಸುತ್ತಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ. ಯಾಕೆಂದರೆ ಇದೀಗ ಕಾಂಗ್ರೆಸ್ ಮುಖಂಡ, ಮೈತ್ರಿ ಸರಕಾರದ ಪ್ರಮುಖ ರುವಾರಿ ಡಿಕೆ ಶಿವಕುಮಾರ್ ಅವರು ಸ್ವಾಮೀಜಿಗಳಿಗೆ ಟಾಂಗ್ ನೀಡಿದ್ದಾರೆ. ರಾಜ್ಯದಲ್ಲಿ ಯಾರೂ ಕೂಡ ಈ ಕಾಂಗ್ರೆಸ್‌ನ್ನು ಪ್ರಶ್ನಿಸುವ ಅಧಿಕಾರ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಕಾಂಗ್ರೆಸ್ ನಾಯಕರು.!

ಸರಕಾರದ ಬಗ್ಗೆ ಸ್ವಾಮಿಜಿಗಳು ಮಾತನಾಡುವ ಅವಶ್ಯಕತೆ ಇಲ್ಲ.!

ಮೈತ್ರಿ ಸರಕಾರದ ಬಗ್ಗೆ ನಿನ್ನೆಯಷ್ಟೇ ಆಕ್ರೋಶ ವ್ಯಕ್ತಪಡಿಸಿದ್ದ ನಿರಂಜನಾನಂದಪುರಿ ಶ್ರೀಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿಕೊಂಡಿರುವ ಮೈತ್ರಿಯ ಬಗ್ಗೆ ವಾಗ್ದಾಳಿ ನಡೆಸಿದ್ದರು. ಕೇವಲ ಅಧಿಕಾರದ ಆಸೆಗಾಗಿ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಆದರೆ ರಾಜ್ಯದ ಬಗ್ಗೆ ಒಂಚೂರು ಕಾಳಜಿಯಿಲ್ಲ, ಕೇವಲ ಮಂತ್ರಿ ಸ್ಥಾನಕ್ಕಾಗಿ ಕಿತ್ತಾಡಿಕೊಳ್ಳುತ್ತಿರುವ ರಾಜಕಾರಣಿಗಳಿಂದ ನಮ್ಮ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ಎನ್ನುವ ಮೂಲಕ ಮೈತ್ರಿ ಸರಕಾರದ ಬಗ್ಗೆ ಅಸಮಧಾನ ಹೊರಹಾಕಿದ್ದರು.

ಶ್ರೀಗಳು ಮಾತ್ರವಲ್ಲದೆ ರಾಜ್ಯದ ಜನರ ಅಭಿಪ್ರಾಯವೂ ಇದೇ ಆಗಿರುವುದರಿಂದ ಈಗಾಗಲೇ ಅನೇಕ ಮಂದಿ ಈ ರೀತಿ ಮೈತ್ರಿ ಸರಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ನಿರಂಜನಾನಂದಪುರಿ ಶ್ರೀಗಳ ಮಾತಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಸ್ವಾಮೀಜಿಗಳು ನಮ್ಮ ಸರಕಾರದ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ನಮ್ಮ ಸರಕಾರ ರಾಜ್ಯದ ಎಲ್ಲಾ ಜನರನ್ನೂ ಒಂದೇ ದೃಷ್ಟಿಯಿಂದ ನೋಡುತ್ತಿದೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲರನ್ನೂ ಅಭಿವೃದ್ದಿ ಮಾಡುವುದೇ ನಮ್ಮ ಗುರಿ ಎಂದಿದ್ದರು. ಆದರೆ ಡಿಕೆಶಿ ನೀಡಿದ ಈ ಹೇಳಿಕೆಗೆ ಇದೀಗ ಸ್ವಾಮೀಜಿಗಳು ವಿರೋಧಿಸಿದ್ದಾರೆ. ಯಾಕೆಂದರೆ ಸಿದ್ದರಾಮಯ್ಯನವರ ಹಳೇ ನೀತಿಯನ್ನು ಇದೀಗ ಮೈತ್ರಿ ಸರಕಾರ ಕೂಡ ಮುಂದುವರಿಸಿದ್ದು, ಮತ್ತೆ ರಾಜ್ಯದಲ್ಲಿ ಹಿಂದೂ ವಿರೋಧಿ ನೀತಿ ಜಾರಿಗೊಳ್ಳುತ್ತದೆ ಎಂಬ ಮುನ್ಸೂಚನೆ ದೊರಕಿದೆ.!

ಕಾಗಿನೆಲೆ ಶ್ರೀಗಳು ಮೈತ್ರಿ ಸರಕಾರದಲ್ಲಿ ಕುರುಬರಿಗೆ ಸೂಕ್ತ ಸ್ಥಾನಮಾನ ನೀಡದೆ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸರಕಾರ ಕೇವಲ ಕುರುಬ ಸಮುದಾಯವನ್ನು ರಾಜಕೀಯಕ್ಕೆ ಬಳಸಿಕೊಂಡಿದೆ. ಆದರೆ ಇದು ಅನ್ಯಾಯದ ವಿಚಾರ, ಅನ್ಯಾಯದ ವಿರುದ್ಧ ಧ್ವನಿಎತ್ತಲು ಪ್ರತಿಯೊಬ್ಬರಿಗೂ ಅಧಿಕಾರ ಇದೆ ಎಂದು ಹೇಳಿಕೊಂಡಿದ್ದಾರೆ.!

–ಅರ್ಜುನ್

Tags

Related Articles

Close