ದೇಶಪ್ರಚಲಿತ

ಬ್ರೇಕ್ ಅಪ್ ಆಯ್ತು ಹಾರ್ದಿಕ್ – ರಾಹುಲ್ ಲವ್.!! ಬಹಿರಂಗವಾಗಿ ಕಾಂಗ್ರೆಸ್ ವಿರುದ್ಧ ಯುದ್ಧ ಸಾರಿದ ಪಟಿದಾರ್ ನಾಯಕ.!

ರಾಜಕೀಯ ಲಾಭಕ್ಕಾಗಿ ಯಾವ ರೀತಿಯ ನಾಟಕವಾಡಲೂ ಸಿದ್ದರಿರುವ ಕಾಂಗ್ರೆಸ್ ನಾಯಕರಿಗೆ ತಮ್ಮ ಸಿದ್ಧಾಂತವನ್ನು ಪ್ರತಿಪಾದಿಸುವ ಯಾವುದೇ ವ್ಯಕ್ತಿಗೂ ತಮ್ಮ ಪಕ್ಷದಲ್ಲಿ ಮಣೆ ಹಾಕಿ ಕೂರಿಸುತ್ತದೆ. ಇದೇ ರೀತಿ ದೇಶದ್ರೋಹಿಗಳಿಗೂ ತಮ್ಮ ಪಕ್ಷದ ಬಾಗಿಲನ್ನೂ ಸದಾ ತೆರೆದಿರುವ ಕಾಂಗ್ರೆಸ್ ಭಾರತವನ್ನು ನಾಶ ಮಾಡಲು ಯಾವ ಮಟ್ಟಕ್ಕೂ ಇಳಿಯಲು ತಯಾರಿದೆ..!

ಯಾಕೆಂದರೆ ಭಾರತದಲ್ಲಿ ಇದ್ದು , ಭಾರತದ ಅನ್ನ ತಿಂದು , ಭಾರತವನ್ನೇ ತೆಗಳುವವರ ಸಂಖ್ಯೆ ಭಾರತದಲ್ಲಿ ಬೇಕಾದಷ್ಟಿದೆ. ಅದೇ ರೀತಿ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕೆಂದು ಹೇಳುವವರ ಸಾಲಿನಲ್ಲಿ ಬರುವವರೇ ಗುಜರಾತ್ ನ ಹಾರ್ದಿಕ್ ಪಟೇಲ್.

ಹಾರ್ದಿಕ್ ಪಟೇಲ್ ಗುಜರಾತ್ ನಲ್ಲಿ ಪಟೇಲ್ ಸಮುದಾಯದ ಪರ ಹೋರಾಟದ ಕಿಚ್ಚು ಹಚ್ಚಿ ತನ್ನ ರಾಜಕೀಯ ಬೆಳವಣಿಗೆಗೆ ಹೆಜ್ಜೆ ಹಾಕಿದವರು. ಗುಜರಾತ್ ನಲ್ಲಿ ಅತೀ ಹೆಚ್ಚಿರುವ ಸಮುದಾಯ ಎಂದರೆ ಅದು ಪಟೇಲ್ ಸಮುದಾಯ. ಇದೇ ಕಾರಣಕ್ಕಾಗಿ ಹಾರ್ದಿಕ್  ಪಟೇಲ್ ಈ ಸಮುದಾಯವನ್ನು ಮೋದಿ ಸರಕಾರದ ವಿರುದ್ಧ ಸಿಡಿದೇಳುವಂತೆ ಮಾಡಿದ್ದರು. ನರೇಂದ್ರ ಮೋದಿ ಸರಕಾರ ಇಡೀ ದೇಶವನ್ನು ಒಗ್ಗೂಡಿಸಿ ಪ್ರಗತಿಯತ್ತ ಕೊಂಡೊಯ್ಯುತ್ತಿದ್ದರೆ, ಇತ್ತ ಹಾರ್ದಿಕ್ ಪಟೇಲ್ ನಂತಹ ದೇಶದ್ರೋಹಿಗಳು ಭಾರತೀಯರ ಮನಸ್ಸಿನಲ್ಲಿ ವಿಷಬೀಜ ಬಿತ್ತಿ ದೇಶವನ್ನೇ ಇಬ್ಭಾಗ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್ ಜೊತೆ ಸ್ನೇಹ ಬೆಳೆಸಿದ ಹಾರ್ದಿಕ್..!

ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಕೂಡಾ ಇದೇ ರೀತಿ ಭಾರತವನ್ನು ವಿಭಜಿಸುವ ಪ್ರಯತ್ನ ನಡೆಸಿತ್ತು. ಆದರೆ ಭಾರತೀಯರ ದೇಶಪ್ರೇಮದ ಮುಂದೆ ಯಾವ ತಂತ್ರವೂ ಫಲಿಸಲಿಲ್ಲ. ನಂತರದಲ್ಲಿ ತಮ್ಮ ಸಿದ್ಧಾಂತದಂತೆ ಯಾರು ನಡೆದುಕೊಳ್ಳುತ್ತಿದ್ದಾರೋ ಅವರ ಜೊತೆ ಕೈ ಜೋಡಿಸಿಕೊಂಡು ಮತ್ತಷ್ಟು ಕಿಚ್ಚು ಹಚ್ಚಲು ಪ್ರಯತ್ನಿಸುತ್ತಲೇ ಇದೆ.

ಇದೇ ರೀತಿಯಲ್ಲಿ ಗುಜರಾತ್ ನಲ್ಲಿ ಹಾರ್ದಿಕ್ ಪಟೇಲ್ ಪಟೇಲ್ ಸಮುದಾಯವನ್ನು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಪ್ರಯತ್ನಿಸುತ್ತಿದ್ದರೆ, ಇತ್ತ ಕಾಂಗ್ರೆಸ್ ಹಾರ್ದಿಕ್ ಪಟೇಲ್ ನ ಬೆಂಬಲಕ್ಕೆ ನಿಂತಿತ್ತು. ಕಾಶ್ಮೀರಕ್ಕೆ ಭಾರತದದಿಂದ ಮುಕ್ತಿ ಕೊಡಬೇಕು, ಕಾಶ್ಮೀರಿಗರಿಗೆ ಶಾಂತಿಯಿಂದ ಬದುಕಬೇಕಾದರೆ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಬಿಡಬೇಕು ಎಂದು ಹೇಳಿಕೆ ನೀಡಿದ್ದ ಹಾರ್ದಿಕ್ ಪಟೇಲ್ ದೇಶಸದ್ರೋಹಿಗಳಿಗೆ ಬೆಂಬಲ ನೀಡತೊಡಗಿದ್ದರು.

ಹೋರಾಟದ ನಾಟಕವಾಡಿ ತನ್ನ ರಾಜಕೀಯ ಪ್ರವೇಶಕ್ಕೆ ಮುನ್ನುಡಿ ಬರೆದಿದ್ದ ಹಾರ್ಧಿಕ್, ಕ್ರಮೇಣ ತಾನು ಬಂದಿದ್ದ ಹಾದಿಯನ್ನು ಮರೆತು ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.

ರಾಹುಲ್ ನನ್ನ ನಾಯಕನಲ್ಲ..!

ಗುಜರಾತ್ ನಲ್ಲಿ ಮೋದಿ ವಿರುದ್ಧ ಜನರನ್ನು ಪ್ರತಿಭಟಿಸುಂತೆ ಮಾಡಿದ್ದ ಹಾರ್ದಿಕ್ ಪಟೇಲ್ ನ ಕೈಜೋಡಿಸಿ ತಮ್ಮ ರಾಜಕೀಯ ಲಾಭ ಗಳಿಸುವ ಹುನ್ನಾರ ಹೂಡಿದ್ದರು ರಾಹುಲ್ ಗಾಂಧಿ. ಆದರೆ ಇದೀಗ ಸ್ವತಃ ಹಾರ್ಧಿಕ್ ಪಟೇಲ್ , ಎಪಿಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನನ್ನ ನಾಯಕನೆಂದು ಪರಿಗಣಿಸಬೇಡಿ ಎಂದು ನೇರವಾಗಿ ಹೇಳಿಕೆ ನೀಡಿದ್ದಾರೆ.
ಮುಂಬಯಿ ಯಲ್ಲಿ ಮಾತನಾಡಿದ ಹಾರ್ದಿಕ್ ಪಟೇಲ್, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ‌.

ರಾಹುಲ್ ಗಾಂಧಿಯನ್ನು ವೈಯಕ್ತಿಕವಾಗಿ ನಾನು ಮೆಚ್ಚುತ್ತೇನೆ, ಆದರೆ ಯಾವುದೇ ಕಾರಣಕ್ಕೂ ರಾಹುಲ್ ಗಾಂಧಿ ನನ್ನ ನಾಯಕರಲ್ಲ ಎನ್ನುವ ಮೂಲಕ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ. ಈಗಾಗಲೇ ಪ್ರಿಯಾಂಕ ಗಾಂಧಿ ನನ್ನನ್ನು ರಾಜಕೀಯಕ್ಕೆ ಬರಲೇಬೇಕೆಂದು ಒತ್ತಾಯಿಸಿದ್ದಾರೆ. ಆದರೆ ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುದ್ದಾರೆ. ಕಾಂಗ್ರೆಸ್ ಕೇವಲ ತಮ್ಮ ರಾಜಕೀಯ ಬೆಳವಣಿಗೆಯನ್ನು ಮಾತ್ರ ನಿರೀಕ್ಷಿಸುತ್ತಿದೆ, ಸಹಾಯ ಮಾಡಿದ ಕೈಗಳನ್ನು ದೂರ ಸರಿಸುತ್ತಿದೆ ಎಂದ ಹಾರ್ಧಿಕ್ ಪಟೇಲ್ ನೇರವಾಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ‌‌.

ಗುಜರಾತ್ ನಲ್ಲಿ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಮೋದಿ ಸರಕಾರ ಮತ್ತೆ ಗೆಲುವು ಸಾಧಿಸಿತ್ತು. ಈ ಮೂಲಕ ಗುಜರಾತ್ ನ ಪಟೇಲ್ ಸಮುದಾಯವನ್ನು ಬಳಸಿ ರಾಜಕೀಯ ಲಾಭ ಗಳಿಸಲು ಪ್ರಯತ್ನಿಸಿದ ಹಾರ್ದಿಕ್ ಪಟೇಲ್ ಮತ್ತು ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿತ್ತು. ಇದರಿಂದಾಗಿಯೇ ಇದೀಗ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಿದ ಹಾರ್ದಿಕ್ ಪಟೇಲ್ ರಾಹುಲ್ ನನ್ನ ನಾಯಕನಲ್ಲ ಎಂದು ಖಾರವಾಗಿಯೇ ಹೇಳಿಕೊಂಡಿದ್ದಾರೆ.!

source:
http://www.kannadaprabha.com/nation/dont-consider-rahul-gandhi-my-leader-hardik-patel-/310874.html
–ಅರ್ಜುನ್

 

Tags

Related Articles

Close