ರಾಜ್ಯ

ಬೆಳ್ಳಂ ಬೆಳಗ್ಗೆ ಭಾರತ್ ಬಂದ್ ವಿಫಲ! ಮೋದಿ ವಿರೋಧಿಗಳು ಕರೆ ಕೊಟ್ಟ ಬಂದ್‌ಗೆ ಯಾವುದೇ ಬೆಂಬಲ ನೀಡದ ಸಾರ್ವಜನಿಕರು!

ಪ್ರಧಾನಿ ಮೋದಿ ಕಾರ್ಮಿಕರಿಗೆ ವಿರುದ್ಧವಾದ ನೀತಿ ಜಾರಿಗೊಳಿಸಿದ್ದಾರೆ, ಕಾರ್ಮಿಕರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ಕೇಂದ್ರ ಸರಕಾರ ಒದಗಿಸುತ್ತಿಲ್ಲ, ಕನಿಷ್ಠ ವೇತನ ನೀಡುವಲ್ಲಿ ಮೋದಿ ಸರಕಾರ ವಿಫಲವಾಗಿದೆ ಎಂದು ಹೇಳಿಕೊಂಡು ಇಂದು ಮತ್ತು ನಾಳೆ ಭಾರತ್ ಬಂದ್‌ಗೆ ಕರೆ ಕೊಟ್ಟಿರುವ ಕಾರ್ಮಿಕ ಸಂಘಟನೆಗಳು ಮತ್ತು ಕಮ್ಯುನಿಸ್ಟ್ , ಕಾಂಗ್ರೆಸ್ ಸೇರಿದಂತೆ ಅನೇಕ ಮೋದಿ ವಿರೋಧಿ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸುವ ಎಚ್ಚರಿಕೆ ನೀಡಿದೆ. ಆದರೆ ಇಂದು ಬೆಳಿಗ್ಗೆಯಿಂದಲೇ ಬೆಂಗಳೂರು ಸೇರಿದಂತೆ ಕರಾವಳಿಯಲ್ಲೂ ಯಾವುದೇ ರೀತಿಯ ಬೆಂಬಲ ವ್ಯಕ್ತವಾಗದೆ, ಜನ ಜೀವನ‌‌ ಎಂದಿನಂತೆ ಸರಾಗವಾಗಿ ನಡೆಯುತ್ತಿದೆ. ಬಿಎಂಟಿಸಿ ಬಸ್ಸುಗಳು ಕೂಡ ಮುಂಜಾನೆಯೇ ರಸ್ತೆಗೆ ಇಳಿದಿದ್ದು, ಆಟೋ ರಿಕ್ಷಾಗಳು ಕೂಡ ಬಂದ್‌ಗೆ ವಿರೋಧ ವ್ಯಕ್ತಪಡಿಸಿವೆ. ಬಂದ್ ನಡೆಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದಿರುವ ಮಂಗಳೂರು ಖಾಸಗಿ ಬಸ್ ಮಾಲಕರ ಸಂಘದ ಮುಖ್ಯಸ್ಥರು, ನಮ್ಮ ಬಸ್ಸುಗಳು ಎಂದಿನಂತೆ ಓಡಾಡುತ್ತವೆ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಮೋದಿ ವಿರೋಧಿಗಳು ಕರೆ ನೀಡಿದ ಭಾರತ್ ಬಂದ್ ಆರಂಭದಲ್ಲೇ ಸಂಪೂರ್ಣ ವಿಫಲ ಎಂದು ಹೇಳಲಾಗುತ್ತಿದೆ.!

ಸಾರ್ವಜನಿಕರಿಂದಲೇ ಭಾರತ್ ಬಂದ್‌ಗೆ ವಿರೋಧ!

ಪದೇ ಪದೇ ಕೇಂದ್ರ ಸರಕಾರದ ವಿರುದ್ಧ ಭಾರತ್ ಬಂದ್ ಮಾಡುವ ವಿಪಕ್ಷಗಳಿಗೆ ಇಂದು ಸ್ವತಃ ಸಾರ್ವಜನಿಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ದೂರದ ಊರುಗಳಿಂದ ಬರುವ ಜನರು ಬಸ್ಸುಗಳು ಇಲ್ಲದೆ ಅಲ್ಲಲ್ಲಿ ಪರದಾಡುವಾಗ ಯಾರು ಸಹಾಯ ಮಾಡುತ್ತಾರೆ ಎಂದು ವಿರೋಧ ವ್ಯಕ್ತಪಡಿಸಿದ ಸಾರ್ವಜನಿಕರು ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದ್ದಾರೆ. ಉಡುಪಿಯಲ್ಲಿ ಬಸ್ ಚಾಲಕರ ಮತ್ತು ಬಂದ್‌ಗೆ ಕರೆ ನೀಡಿದ ಕೆಲ ಸಂಘಟನೆಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ನಾವು ಬಸ್ ಎಂದಿನಂತೆ ಓಡಾಟ ನಡೆಸುತ್ತೇವೆ ಎಂದು ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ, ಬಂದರು ಪ್ರದೇಶಗಳಲ್ಲಿ ಮೀನುಗಾರರು ಕೂಡ ಎಂದಿನಂತೆ ತಮ್ಮ ಮೀನುಗಾರಿಕೆಯನ್ನು ಆರಂಭಿಸಿದ್ದು, ನಾವು ಯಾವುದೇ ಕಾರಣಕ್ಕೂ ಬಂದ್ ನಡೆಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಖಾಸಗಿ ಬಸ್ಸುಗಳು ಕೂಡ ಬೆಳಿಗ್ಗೆಯಿಂದಲೇ ಸಂಚಾರ‌ ಆರಂಭಿಸಿದ್ದು, ಶಾಲಾ ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿದೆ. ಹೋಟೆಲ್ ಗಳು ಕೂಡ ತೆರೆದಿದ್ದು, ಯಾವುದೇ ರೀತಿಯ ಬಂದ್ ನಡೆಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ ಮತ್ತು ಪೆಟ್ರೋಲ್ ಬಂಕ್‌ಗಳು ಕೂಡ ತೆರೆಯಲ್ಪಟ್ಟಿದ್ದು ವಾಹನ‌ ಸವಾರರು ಯಾವುದೇ ತೊಂದರೆ ಅನುಭವಿಸುವ ಅವಶ್ಯಕತೆ ಇಲ್ಲ.‌ ಆದ್ದರಿಂದ ಮೋದಿ ವಿರೋಧಿಗಳು ಕರೆ ನೀಡಿದ ಭಾರತ್ ಬಂದ್ ಆರಂಭದಲ್ಲೇ ಸಂಪೂರ್ಣ ವಿಫಲವಾಗಿದ್ದು, ಸಾರ್ವಜನಿಕರೇ ಬಂದ್‌ಗೆ ಕರೆ ನೀಡಿದ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.!

–ಅರ್ಜುನ್

Tags

Related Articles

FOR DAILY ALERTS
Close