ಪ್ರಚಲಿತ

ಬ್ರೇಕಿಂಗ್! ಸರಕಾರ ರಚಿಸಲು ಬಿಜೆಪಿ ಮಾಸ್ಟರ್ ಪ್ಲಾನ್..! ರಾಜ್ಯ ಬಿಜೆಪಿ ನಾಯಕರ ಬಾಯಿ ಮುಚ್ಚಿಸಿದ್ದೇಕೆ ಹೈಕಮಾಂಡ್..?!

ರಾಜ್ಯ ವಿಧಾನಸಭಾ ಚುನಾವಣೆ ಈಗಾಗಲೇ ಮುಗಿದಿದ್ದು , ಭರ್ಜರಿಯಾಗಿ ಮತದಾನವೂ ನಡೆದಿದೆ. ಇತಿಹಾಸದಲ್ಲೇ ಅತೀ ಹೆಚ್ಚಿನ ಮತದಾನ ಈ ಬಾರಿ ನಡೆದಿದ್ದು, ಇನ್ನು ಫಲಿತಾಂಶಕ್ಕಾಗಿ ಇಡೀ ರಾಜ್ಯವೇ ಕುತೂಹಲದಿಂದ ಕಾಯುವಂತಾಗಿದೆ. ಮೇ ೧೫ ಅಂದರೆ ನಾಳೆ ಚುನಾವಣಾ ಫಲಿತಾಂಶ ಹೊರಬೀಳಲಿದ್ದು ರಾಜಕೀಯ ನಾಯಕರ ಎದೆ ಬಡಿತ ಹೆಚ್ಚಾಗಿರುವುದು ಖಂಡಿತ. ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲದ ಹೋರಾಟ ನಡೆಸುತ್ತಿದೆ ಆದರೂ ಸಮೀಕ್ಷೆಗಳ ಪ್ರಕಾರ ಬಿಜೆಪಿಯೇ ಮೇಲುಗೈ ಸಾಧಿಸಿದೆ. ಆದ್ದರಿಂದ ಮುಂದಿನ ಸರಕಾರ ಅವರಿಗೆ ರಚನೆ ಮಾಡುವ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ.

ಬಿಜೆಪಿ ,ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳ ಮುಖಂಡರು ತಮ್ಮದೇ ಸರಕಾರ ರಚನೆ ಮಾಡಲು ತಂತ್ರ ರೂಪಿಸುತ್ತಿದ್ದರೆ, ಇತ್ತ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಭಾರೀ ಸಂದೇಶವೊಂದನ್ನು ರವಾನಿಸಿದ್ದು, ಇದೀಗ ಭಾರೀ ಕುತೂಹಲ ಉಂಟುಮಾಡಿದೆ.

ಸರಕಾರ ನಮ್ಮದೇ ಚಿಂತೆಬೇಡ..!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಾಡಿರುವ ತಂತ್ರದ ಪ್ರಕಾರ ಬಿಜೆಪಿ ಮಿಷನ್ ೧೫೦ ಎಂಬುದು ಗುರಿಯಾಗಿತ್ತು. ಆದೇ ರೀತಿ ಕರ್ನಾಟಕದಲ್ಲಿ ಬಿಜೆಪಿಯ ಕೆಲಸಗಳೂ ನಡೆಯುತ್ತಿದ್ದವು. ಆದರೆ ಕಾಂಗ್ರೆಸ್ ಕೂಡಾ ಕರ್ನಾಟಕದಲ್ಲಿ ಬಲಿಷ್ಟವಾಗಿದ್ದರಿಂದ ೧೫೦ ಸೀಟ್ ಗೆಲ್ಲುವುದು ಸ್ವಲ್ಪ ಮಟ್ಟಿಗೆ ಕಷ್ಟವಾಗಿತ್ತು. ಆದ್ದರಿಂದಲೇ ಅಮಿತ್ ಷಾ ನಾನಾ ರೀತಿಯ ತಂತ್ರ ರೂಪಿಸಿ , ಬಿಜೆಪಿಯ ಸ್ಟಾರ್ ಪ್ರಚಾರಕರನ್ನೇ ಕರ್ನಾಟಕದಲ್ಲಿ ಬಳಸಿಕೊಂಡಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಬೃಹತ್ ಸಮಾವೇಶ ನಡೆಸಿದ ದಿನದಿಂದಲೇ ಎಲ್ಲಾ ಸಮೀಕ್ಷೆಗಳು ಉಲ್ಟಾ ಹೊಡೆದಿದ್ದವು. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂಬ ವರದಿಯೂ ಬಂದಿತ್ತು. ಆದರೆ ಇದೀಗ ಚುನಾವಣೆ ಮುಗಿದಿದ್ದು ಇನ್ನೇನು ಫಲಿತಾಂಶ ಮಾತ್ರ ಹೊರಬೀಳಲಿದೆ. ಇದರ ಮಧ್ಯೆ ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಚರ್ಚೆಗಳಾಗುತ್ತಿದ್ದರೆ , ಇತ್ತ ಬಿಜೆಪಿ ಹೈಕಮಾಂಡ್ ಈ ಬಾರಿ ಸರಕಾರ ನಮ್ಮದೇ ಯಾರೂ ಚಿಂತಿಸಿಕೊಳ್ಳಬೇಡಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಿದೆ.

Related image

ಮೈತ್ರಿಯ ಬಗ್ಗೆಯೂ ಪ್ರಸ್ತಾಪಿಸಿದ ಕೇಂದ್ರ..!

ರಾಜ್ಯದಲ್ಲಿ ಅತಂತ್ರ ಫಲಿತಾಂಶ ಹೊರ ಬಿದ್ದರೆ ಜೆಡಿಎಸ್ ಕಿಂಗ್ ಮೇಕರ್ ಆಗುವುದು ಖಚಿತ. ಜೆಡಿಎಸ್ ಸರಕಾರ ರಚನೆ ಮಾಡುವಷ್ಟರ ಮಟ್ಟಿಗೆ ಸೀಟ್ ಪಡೆಯುವುದಿಲ್ಲ ಆದರೂ ಅತಂತ್ರ ಫಲಿತಾಂಶ ಬಂದರೆ ಜೆಡಿಎಸ್ ಗೆ ಲಾಭವಾಗಲಿದೆ. ಆದರೆ ಬಿಜೆಪಿ ಸಮೀಕ್ಷೆಯ ಪ್ರಕಾರ ಭಾರತೀಯ ಜನತಾ ಪಕ್ಷ ಬಹುಮತದಿಂದ ಗೆದ್ದು ಸರಕಾರ ರಚನೆ ಮಾಡಲಿದೆ. ಒಂದು ವೇಳೆ ಮೈತ್ರಿಯ ಅಗತ್ಯ ಎದುರಾದರೆ ಬಿಜೆಪಿ ಹೈಕಮಾಂಡ್ ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ , ರಾಜ್ಯ ನಾಯಕರು ಈ ಬಗ್ಗೆ ಯಾವುದೇ ಹೇಳಿಕೆ ಅಥವಾ ಚರ್ಚೆ ನಡೆಸಬೇಕಾದ ಅಗತ್ಯವಿಲ್ಲ ಎಂದು ಬಿ‌.ಎಸ್.ಯಡಿಯೂರಪ್ಪ ಅವರಿಗೂ ಸೇರಿಸಿ ರಾಜ್ಯ ನಾಯಕರಿಗೆ ಸಂದೇಶ ರವಾನಿಸಲಾಗಿದೆ. ಆದ್ದರಿಂದ ಇದೀಗ ರಾಜ್ಯ ಬಿಜೆಪಿಯಲ್ಲಿ ಹೊಸ ಹುರುಪು ಮೂಡಿದ್ದು, ನಾಳಿನ ಫಲಿತಾಂಶಕ್ಕಾಗಿ ಕಾಯಬೇಕಾಗಿದೆ..!

ಬಿಜೆಪಿ ಚಾಣಾಕ್ಯ ಅಮಿತ್ ಷಾ ಅವರ ತಂತ್ರಗಾರಿಕೆ ಈ ಹಿಂದೆ ನಡೆದ ಎಲ್ಲಾ ರಾಜ್ಯಗಳ ಚುನಾವಣೆಯಲ್ಲಿ ಫಲಿಸಿದ್ದು, ಕರ್ನಾಟಕದಲ್ಲೂ ಇದೇ ರೀತಿಯ ತಂತ್ರ ರೂಪಿಸಿರುವುದರಿಂದ ಭಾರತೀಯ ಜನತಾ ಪಕ್ಷ ಸರಕಾರ ರಚನೆ ಮಾಡುವುದು ಬಹುತೇಕ ಖಚಿತವಾಗಿದೆ..!!

–ಅರ್ಜುನ್

Tags

Related Articles

Close