ಪ್ರಚಲಿತ

ಬ್ರೇಕಿಂಗ್! ಕಾಂಗ್ರೆಸ್ ಮೈತ್ರಿ ನಮಗೆ ಅಗತ್ಯವಿಲ್ಲ ಎಂದ ದೇವೇಗೌಡರು..! ಉಲ್ಟಾ ಹೊಡೆಯುತ್ತಾ ಕಾಂಗ್ರೆಸ್ ಪ್ಲಾನ್..?

ಚುನಾವಣೆಗೂ ಮೊದಲು ಕಚ್ಚಾಡಿಕೊಂಡಿದ್ದ ಜೆಡಿಎಸ್‌-ಕಾಂಗ್ರೆಸ್ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿದ್ದು, ಅಧಿಕಾರ ಹಿಡಿಯಲೇಬೇಕು ಎಂಬ ಆಸೆಯಿಂದ ಮೈತ್ರಿ ಮಾಡಿಕೊಂಡು ಈಗಾಗಲೇ ಸರಕಾರ ರಚಿಸಿದ ಈ ಎರಡೂ ಪಕ್ಷಗಳ ಮಧ್ಯೆ ಭಿನ್ನಾಭಿಪ್ರಾಯ ಮೂಡುತ್ತಲೇ ಇದ್ದು, ಎರಡೂ ಪಕ್ಷದ ಮುಖಂಡರು ದಿನಕ್ಕೊಂದು ಗೊಂದಲದ ಹೇಳಿಕೆಗಳನ್ನು ನೀಡಿ ಮೈತ್ರಿ ಮುರಿದುಹಾಕುವ ಮುನ್ಸೂಚನೆ ನೀಡಿದ್ದಾರೆ. ಯಾಕೆಂದರೆ ನಿನ್ನೆಯಷ್ಟೇ ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಸಿದ್ದರಾಮಯ್ಯನವರು ಈ ಹಿಂದೆ ಜೆಡಿಎಸ್‌ ಮತ್ತು ದೇವೇಗೌಡರ ಬಗ್ಗೆ ಆಡಿದ ಮಾತುಗಳಿಗೆ ಅಸಮಧಾನ ವ್ಯಕ್ತಪಡಿಸಿದ್ದು ಮೈತ್ರಿ ಹೇಗೆ ಮುಂದುವರಿಸುತ್ತಾರೆ ಎಂದು ಕಾದು ನೋಡಬೇಕು ಎಂದಿದ್ದರು.!

ವಿಧಾನಸೌಧದಲ್ಲಷ್ಟೇ ಮೈತ್ರಿ, ಚುನಾವಣೆಯಲ್ಲಿ ಅಲ್ಲ..!

ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಲಾಗುತ್ತದೆ ಎಂದು ಆಮಿಷವೊಡ್ಡಿ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಹೆಚ್ಚಿನ ಸ್ಥಾನ ನಮಗೇ ನೀಡಬೇಕೆಂದು ಒತ್ತಡ ಹೇರುತ್ತಲೇ ಇದೆ. ಇತ್ತ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿರುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಸಮಧಾನವಿದ್ದರೆ,ಇತ್ತ ಕಾಂಗ್ರೆಸ್ ಜೊತೆ ಕೈಜೋಡಿಸಿಕೊಂಡಿರುವುದು ಜೆಡಿಎಸ್‌ ವರಿಷ್ಠ ದೇವೇಗೌಡರಿಗೂ ಅಸಮಧಾನವಿದೆ. ಮೈತ್ರಿಯ ಬಗ್ಗೆ ಏನೂ ಮಾತನಾಡದ ದೇವೇಗೌಡರು ಇದೀಗ ತಮ್ಮ ಅಸಮಧಾನ ಹೊರ ಹಾಕಿದ್ದಾರೆ.

Image result for kumaraswamy with congress leaders

ಬಾಕಿ ಉಳಿದಿರುವ ರಾಜರಾಜೇಶ್ವರಿ ನಗರ ಮತ್ತು ಜಯನಗರದ ಚುನಾವಣೆಯಲ್ಲಿ ಇದೀಗ ಆರ್ ಆರ್ ನಗರದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು , ಬಿಜೆಪಿ , ಕಾಂಗ್ರೆಸ್ ಮತ್ತು ಜೆಡಿಎಸ್‌ ಈ ಮೂರೂ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು ಮತ್ತೆ ಚುನಾವಣೆಯ ಬಿಸಿ ಏರಿದೆ. ವಿಧಾನಸಭಾ ಚುನಾವಣೆಯ ನಂತರದಲ್ಲಿ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಈ ಎರಡೂ ಕ್ಷೇತ್ರಗಳಲ್ಲೂ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಇದೀಗ ಈ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಕಣಕ್ಕಿಳಿದಿದ್ದು ಕೇವಲ ಸರಕಾರ ರಚನೆಗಷ್ಟೇ ಮೈತ್ರಿ ಎಂಬೂದನ್ನು ದೇವೇಗೌಡರೇ ಒಪ್ಪಿಕೊಂಡಿದ್ದಾರೆ..!

ನಮ್ಮ ಗೆಲುವೇ ನಮ್ಮ ಗುರಿ – ಕಾಂಗ್ರೆಸ್ ಜೊತೆ ನಾವು ಕೈಜೋಡಿಸಲ್ಲ..!

ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಅಧಿಕಾರಕ್ಕೆ ಏರಲು ಸಿದ್ಧತೆ ನಡೆಸುತ್ತಿದ್ದಂತೆ ಕಂಗಾಲಾದ ಕಾಂಗ್ರೆಸ್ ಮತ್ತು ಜೆಡಿಎಸ್‌ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಮೈತ್ರಿಯ ಬಗ್ಗೆ ಸ್ವತಃ ಎರಡೂ ಪಕ್ಷಗಳ ಮುಖಂಡರಲ್ಲೂ ಅಸಮಧಾನವಿದ್ದು ನೇರವಾಗಿ ಹೇಳಿಕೊಂಡಿಲ್ಲ,ಆದರೆ ಇದೀಗ ಚುನಾವಣೆಯ ವಿಚಾರಕ್ಕೆ ಬಂದಾಗ ಸ್ವತಃ ಜೆಡಿಎಸ್‌ ವರಿಷ್ಠ ದೇವೇಗೌಡರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ನಾವು ಬೆರೆಯುವುದಿಲ್ಲ , ನಮಗೆ ನಮ್ಮ ಪಕ್ಷದ ಗೆಲುವಷ್ಟೇ ಮುಖ್ಯ ಎಂದು ಹೇಳುವ ಮೂಲಕ ಕಾಂಗ್ರೆಸ್ ಜೊತೆ ಕುಮಾರಸ್ವಾಮಿ ಅವರು ಮಾಡಿಕೊಂಡಿರುವ ಮೈತ್ರಿಯ ಬಗ್ಗೆ ಅಸಮಧಾನ ಹೊರ ಹಾಕಿದ್ದಾರೆ..!

ಮೈತ್ರಿ ಮಾಡಿಕೊಂಡ ದಿನದಿಂದಲೇ ಪಕ್ಷದ ಮುಖಂಡರ ಒಳಗೊಳಗೆ ವೈಮನಸ್ಸು ಕಂಡುಬರುತ್ತಲೇ ಇದ್ದಿದ್ದು, ಇದೀಗ ಸ್ವತಃ ದೇವೇಗೌಡರು ಹೇಳಿದ ಮಾತಿನಿಂದಾಗಿ ಮೈತ್ರಿಗೆ ಕುತ್ತು ಬೀಳುವ ಮತ್ತಷ್ಟು ಅನುಮಾನ ಹೆಚ್ಚಾಗಿದೆ..!

–ಅರ್ಜುನ್

Tags

Related Articles

Close