ಪ್ರಚಲಿತ

ಬ್ರೇಕಿಂಗ್! ನಲಪಾಡ್‌ಗೆ ಕೊನೆಗೂ ಸಿಗಲಿಲ್ಲ ಜೈಲಿನಿಂದ ಮುಕ್ತಿ.! ಮತ್ತೆ ಜೈಲು ಸೇರಿದ ಶಾಂತಿನಗರದ ಗೂಂಡ..!

ಕಳೆದ ಕೆಲ ತಿಂಗಳುಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್ ಅವರ ಮಗ ಮಹಮ್ಮದ್ ನಲಪಾಡ್‌ಗೆ ಪದೇ ಪದೇ ಕಂಟಕ ಎದುರಾಗುತ್ತಲೇ ಇದೆ. ವಿದ್ವತ್ ಎಂಬ ಅಮಾಯಕನ ಮೇಲೆ ಕುಡಿದ ಮತ್ತಿನಲ್ಲಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ ನಲಪಾಡ್ ನನ್ನು ಪೊಲೀಸರು ಬಂಧಿಸಿದ್ದರು. ಆದರೆ ಈ ಹಿಂದಿನ ಕಾಂಗ್ರೆಸ್ ಆಡಳಿತವಿದ್ದ ಕಾರಣ ಅಪ್ಪನ ಅಧಿಕಾರ ಬಳಸಿಕೊಂಡು ತಪ್ಪಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಇದ್ದ ನಲಪಾಡ್‌ಗೆ ಕೋರ್ಟ್ ಯಾವುದೇ ಕಾರಣಕ್ಕೂ ಜಾಮೀನು ನೀಡುವುದಿಲ್ಲ ಎಂದು ಮತ್ತೆ ಆದೇಶಿಸಿದೆ.!

ಕಳೆದ ನಾಲ್ಕು ತಿಂಗಳುಗಳಿಂದ ಜೈಲಿನಲ್ಲೇ ಇರುವ ನಲಪಾಡ್ ಜಾಮೀನಿಗಾಗಿ ಪ್ರಯತ್ನಿಸುತ್ತಲೇ ಇದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಯಾಕೆಂದರೆ ಹಲ್ಲೆಗೊಳಗಾದ ವಿದ್ವತ್ ಕೂಡಾ ಬಹಳ ಧೃಡವಾಗಿ ನಲಪಾಡ್ ವಿರುದ್ಧ ಕೋರ್ಟ್ ನಲ್ಲಿ ಹೋರಾಡುತ್ತಿದ್ದು, ಪ್ರತೀ ಬಾರಿಯೂ ನಲಪಾಡ್ ಗೆ ಕೋರ್ಟ್ ನಲ್ಲಿ ಹಿನ್ನಡೆಯಾಗುತ್ತಲೇ ಇದೆ. ಇಂದು ಮತ್ತೆ ಕೋರ್ಟ್ ಗೆ ಆಗಮಿಸಿದ ನಲಪಾಡ್ ಮತ್ತೆ ಕಂಗಾಲಾಗಿದ್ದಾರೆ..!

ನಲಪಾಡ್ ಜಾಮೀನು ಅರ್ಜಿ ತಿರಸ್ಕಾರ..!

ನಲಪಾಡ್ ಪರ ವಕೀಲರು ಅನೇಕ ಬಾರಿ ಜಾಮೀನಿಗಾಗಿ ಕೋರ್ಟ್ ಮೆಟ್ಟಿಲೇರುತ್ತಲೇ ಇದ್ದರೂ ಯಾವುದೇ ಫಲ ನೀಡುತ್ತಿಲ್ಲ. ನಲಪಾಡ್ ನ ತಂದೆ ಕಾಂಗ್ರೆಸ್ ಶಾಸಕನಾಗಿರುವುದರಿಂದ ಬಹಳ ಸುಲಭವಾಗಿ ಅಧಿಕಾರ ಬಳಸಿಕೊಂಡು ಈ ಶಿಕ್ಷೆಯಿಂದ ಪಾರಾಗಬಹುದು ಎಂದು ಆಲೋಚಿಸಿದ್ದ ನಲಪಾಡ್‌ಗೆ ಇದೀಗ ಮತ್ತೆ ಜೈಲು ಶಿಕ್ಷೆಯೇ ಎದುರಾಗಿದೆ. ನಲಪಾಡ್ ಗೆ ಜಾಮೀನು ನೀಡಿದ್ದೇ ಆದಲ್ಲಿ ಸಾಕ್ಷ್ಯ ನಾಶ ಮಾಡುವ ಸಾಧ್ಯತೆಯಿದ್ದು, ಕೋರ್ಟ್ ಇಂದು ಕೂಡಾ ಜಾಮೀನು ಅರ್ಜಿ ನಿರಾಕರಿಸಿದೆ. ಮೊದಲೇ ನಲಪಾಡ್ ತಂದೆ ಕಾಂಗ್ರೆಸ್ ಶಾಸಕ, ಮತ್ತು ಭಾರೀ ಹಣ ಉಳ್ಳವರು ಆದ್ದರಿಂದ ಈಗ ಜಾಮೀನು ನೀಡಿದರೆ ಹೊರಗೆ ಬಂದ ನಲಪಾಡ್ ತನ್ನ ವಿರುದ್ಧ ಇರುವ ಸಾಕ್ಷ್ಯಗಳನ್ನು ನಾಶಪಡಿಸಬಹುದು ಎಂಬ ಕಾರಣಕ್ಕೆ ಕೋರ್ಟ್ ನಿರಾಕರಿಸಿದೆ‌. ಆದ್ದರಿಂದ ಇಂದು ಖಂಡಿತವಾಗಿ ಜಾಮೀನು ಸಿಗಬಹುದು ಎಂದು ಖುಷಿಯಿಂದಲೇ ಕೋರ್ಟ್ ಗೆ ಆಗಮಿಸಿದ ನಲಪಾಡ್ ಇದೀಗ ಮತ್ತೆ ತಲೆತಗ್ಗಿಸಿಕೊಂಡು ಹೊರ ನಡೆದಿದ್ದಾರೆ..!

Image result for nalapad

ಖಾಯಂ ಜೈಲು ಶಿಕ್ಷೆ ಅನುಭವಿಸುತ್ತಾರಾ ನಲಪಾಡ್..?

ಮಹಮ್ಮದ್ ನಲಪಾಡ್ ಕಳೆದ ಫೆಬ್ರವರಿ ೨೧ರಿಂದ ಪರಪ್ಪನ ಅಗ್ರಹಾರದಲ್ಲೇ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಪದೇ ಪದೇ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ ಪ್ರತೀ ಭಾರಿಯೂ ಹಿನ್ನಡೆ ಅನುಭವಿಸುವ ನಲಪಾಡ್ ಗೆ ಇಂದೂ ಕೂಡ ೬೩ನೇ ಸೆಷನ್ಸ್ ಕೋರ್ಟ್ ನಲಪಾಡ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ನಲಪಾಡ್ ಆರೋಪ ಪಟ್ಟಿ ಸಲ್ಲಿಸಿದರೂ ಕೂಡ ಕೋರ್ಟ್ ಮಣಿಯಲಿಲ್ಲ. ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದರಿಂದ ಕೊಲೆ ಯತ್ನ ಆರೋಪ ದಾಖಲಾಗಿದೆ. ಇಂದು ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಧೀಶ ಪರಮೇಶ್ವರ್ ಅವರು ನಲಪಾಡ್‌ಗೆ ಸದ್ಯ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಆದೇಶಿಸಿದ್ದಾರೆ. ಆದ್ದರಿಂದ ಸತತ ಪ್ರಯತ್ನಿಸುತ್ತಿರುವ ನಲಪಾಡ್‌ಗೆ ಮತ್ತೆ ನಿರಾಸೆಯಾಗಿದೆ.!

ಕಾಂಗ್ರೆಸ್ ಆಡಳಿತದಲ್ಲಿ ಏನು ಬೇಕಾದರೂ ಮಾಡಬಹುದು ಎಂದು ಆಲೋಚಿಸಿದ್ದ ನಲಪಾಡ್‌ಗೆ ಕೋರ್ಟ್ ಚಳಿ ಬಿಡಿಸಿದೆ ಎಂದರೆ ತಪ್ಪಾಗದು. ಯಾಕೆಂದರೆ ಅಪ್ಪನ ಅಧಿಕಾರ ಬಳಸಿಕೊಂಡು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಎಂಬಂತಿದ್ದ ನಲಪಾಡ್‌ಗೆ ಕೊನೆಗೂ ಜೈಲು ಶಿಕ್ಷೆಯೇ ಖಾಯಂ ಆಗಿದೆ..!

–ಅರ್ಜುನ್

Tags

Related Articles

Close