ಪ್ರಚಲಿತ

ಬ್ರೇಕಿಂಗ್! ಪ್ರಕಾಶ್ ರೈ – ಜಿಗ್ನೇಶ್ ಮೇವಾನಿ ಬಂಧನಕ್ಕೆ ಕ್ಷಣಗಣನೆ.! ಚುನಾವಣಾ ಹೊಸ್ತಿಲಲ್ಲೇ ಕಾಂಗ್ರೆಸ್ ಗೆ ಬಿಗ್ ಶಾಕ್..!

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಭಾರೀ ಜಿದ್ದಾಜಿದ್ದಿಗೆ ಬಿದ್ದಿರುವ ರಾಜಕೀಯ ಪಕ್ಷಗಳು ತಮ್ಮ ಪ್ರಚಾರಕ್ಕಾಗಿ ಭಾರೀ ಸ್ಟಾರ್ ಪ್ರಚಾರಕರನ್ನೇ ಬಳಸಿಕೊಳ್ಳುತ್ತಿದೆ. ಅದೇ ರೀತಿ ಕಾಂಗ್ರೆಸ್ ಕೂಡಾ ತಮ್ಮ ಪ್ರಚಾರಕ್ಕಾಗಿ ಜಿಗ್ನೇಶ್ ಮೇವಾನಿ ಹಾಗೂ ನಟ ಪ್ರಕಾಶ್ ರಾಜ್ ಅವರನ್ನು ಬಳಸಿಕೊಳ್ಳುತ್ತಿದ್ದು, ಇದೀಗ ಕಾಂಗ್ರೆಸ್ ಗೆ ಭಾರೀ ಕಂಟಕವೊಂದು ಎದುರಾಗಿದೆ. ರಾಜ್ಯ ರಾಜಕಾರಣದಲ್ಲಿ ಯಾವುದೇ ಅಧಿಕಾರ ಇಲ್ಲದ ಪ್ರಕಾಶ್ ರಾಜ್ ಹಾಗೂ ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಪರ ಪ್ರಚಾರಕ್ಕೆ ಬಂದಿದ್ದು, ಪ್ರಚಾರದ ವೇಳೆ ನಡೆದ ಘಟನೆಗೆ ಈ ಇಬ್ಬರ ವಿರುದ್ಧವೂ ಎಫ್‌ಐ‌ಆರ್ ದಾಖಲಾಗಿದೆ..!

ಅನುಮತಿ ಪಡೆಯದೆ ಕಾರ್ಯಕ್ರಮ..!

ಪಕ್ಷದ ಪರವಾಗಿ ಯಾವುದೇ ಕಾರ್ಯಕ್ರಮ, ಸಮಾವೇಶ ಅಥವಾ ಸಭೆ ನಡೆಸಬೇಕಾದರೆ ಅನುಮತಿ ಪಡೆಯಲೇಬೇಕು. ಅದರಲ್ಲೂ ಇದೀಗ ಚುನಾವಣೆಯ ಸಮಯ, ಯಾವುದೇ ಒಂದು ಸಣ್ಣ ಕಾರ್ಯಕ್ರಮ ನಡೆಸಬೇಕಾದರೂ ಅನುಮತಿ ಕಡ್ಡಾಯವಾಗಿದೆ. ಆದರೆ ಜಿಗ್ನೇಶ್ ಮೇವಾನಿ ಮತ್ತು ಪ್ರಕಾಶ್ ರಾಜ್ ನಡೆಸಿದ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಲಿಲ್ಲ. ಆದ್ದರಿಂದ ಈ ಇಬ್ಬರ ವಿರುದ್ಧವೂ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.‌

ಪ್ರಕಾಶ್ ರಾಜ್ ಮತ್ತು ಜಿಗ್ನೇಶ್ ಮೇವಾನಿ ಅವರ ನೇತ್ರತ್ವದಲ್ಲಿ ಚಿಕ್ಕಮಗಳೂರಿನಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಹೋರಾಟ ಗೀತೆ ಎಂಬ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಅನುಮತಿಯನ್ನೂ ಕೇಳಿದ್ದರು.ಆದರೆ ಈ ಸಂದರ್ಭದಲ್ಲಿ ಜಿಲ್ಲಾಡಳಿತ ಕುವೆಂಪು ಕಲಾಮಂದಿರದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಅನುಮತಿ ನೀಡದೆ ನಿರಾಕರಣೆ ಮಾಡಿತ್ತು. ಆದರೂ ಜಿಲ್ಲಾಡಳಿತದ ಆದೇಶಕ್ಕೆ ಕ್ಯಾರೇ ಅನ್ನದ ಪ್ರಕಾಶ್ ರಾಜ್ ಮತ್ತು ಜಿಗ್ನೇಶ್ ಮೇವಾನಿ ಅನುಮತಿ ಪಡೆಯದೆ ಚಿಕ್ಕಮಗಳೂರು ನಗರದ ಅಂಡೇ ಛತ್ರದ ಬಳಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಅನುಮತಿ ನಿರಾಕರಣೆಯ ನಡುವೆಯೂ ಕಾರ್ಯಕ್ರಮ ಆಯೋಜಿಸಿರುವ ಪ್ರಕಾಶ್ ರಾಜ್ ಮತ್ತು ಜಿಗ್ನೇಶ್ ಮೇವಾನಿ ಸೇರಿದಂತೆ ಒಟ್ಟು ೧೫ಕ್ಕೂ ಅಧಿಕ ಮಂದಿಯ ಮೇಲೆ ದೂರು ದಾಖಲಾಗಿದೆ.

ಸ್ವತಃ ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರ ವಿರುದ್ಧವೂ ಐಪಿಸಿ ೧೪೩,೧೪೭,೩೪೧,೧೮೮,೧೪೯(೩೭,೧೦೯) ಸೆಕ್ಷನ್ ಅಡಿಯಲ್ಲಿ ಎಫ್‌ಐ‌ಆರ್ ದಾಖಲಿಸಿದ್ದಾರೆ.

ಪ್ರಕಾಶ್ ರಾಜ್ ಮತ್ತು ಜಿಗ್ನೇಶ್ ಮೇವಾನಿ ಒಂದಿಲ್ಲೊಂದು ವಿಚಾರವಾಗಿ ಪ್ರಧಾನಿ ಮೋದಿಯವರ ವಿರುದ್ಧ ಹೇಳಿಕೆ ನೀಡುತ್ತಲೇ ಇರುವುದರಿಂದ ರಾಜ್ಯ ಸರಕಾರ ಇವರಿಬ್ಬರನ್ನು ತಮ್ಮ ಪ್ರಚಾರಕ್ಕೂ ಬಳಸಿಕೊಂಡು ರಾಜ್ಯದಲ್ಲಿ ಮತ್ತಷ್ಟು ಗಲಭೆ ಸೃಷ್ಟಿಸಲು ಕುಮ್ಮಕ್ಕು ನೀಡುತ್ತಿದೆ. ಅದಕ್ಕಾಗಿಯೇ ಅನುಮತಿ ಪಡೆಯದ ವಿಚಾರವಾಗಿ ಸ್ವತಃ ಪೊಲೀಸರೇ ಎಫ್‌ಐ‌ಆರ್ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಂಡಿದ್ದೇ ಆದಲ್ಲಿ ಚುನಾವಣಾ ಹೊಸ್ತಿಲಲ್ಲೇ ಇವರಿಬ್ಬರೂ ಜೈಲು ಪಾಲಾಗುವುದು ಖಂಡಿತ..!

–ಸಾರ್ಥಕ್

Tags

Related Articles

Close