ಪ್ರಚಲಿತ

Breaking News : ಭಾರತೀಯ ಸೇನೆಯಿಂದ ಆಪರೇಷನ್ ಅರ್ಜುನ್! ಪಾಕ್ ಸೇನಾಧಿಕಾರಿಗಳ ಮನೆ ಉಡೀಸ್!

ಭಾರತದ ಗಡಿ ನುಸುಳಲು ಪ್ರಯತ್ನಪಟ್ಟರೆ ಮತ್ತೆ ಸರ್ಜಿಕಲ್ ಸ್ಟ್ರೈಕ್ ಮಾಡೋಕೆ ನಾವು ಹಿಜರಿಯಲ್ಲ ಅಂತ ಮೊನ್ನೆ ತಾನೆ ಸೇನಾ ಜನರಲ್ ಬಿಪಿನ್ ರಾವತ್ ಪಾಕಿಸ್ತಾನಿ ಉಗ್ರರಿಗೆ ಹಾಗು ಪಾಕಿಸ್ತಾನ ಸೇನೆಗೆ ಅನ್ನೋ ಎಚ್ಚರಿಕೆಯನ್ನ ನೀಡಿದ್ದರು.

ಆದರೂ ಗಡಿಯಲ್ಲಿ ಪಾಕಿಸ್ತಾನದಿಂದ ಅಪ್ರಚೋದಿತ ದಾಳಿ ಮುಂದುವರೆದೇ ಇತ್ತು.

ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಈಗ ಪಾಕಿಸ್ತಾನದ ವಿರುದ್ಧ ತನ್ನ ಕಾರ್ಯಾಚರಣೆ ಮಾಡಲು ಮುಂದಾಗಿಬಿಟ್ಟಿದೆ.

ಗಡಿ ಭದ್ರತಾ ಪಡೆ ನಡೆಸುತ್ತಿರುವ ‘ಆಪರೇಶನ್ ಅರ್ಜುನ್‌’ ಕಾರ್ಯಾಚರಣೆಯಲ್ಲಿ ಗಡಿಯ ಹತ್ತಿರ ನೆಲೆಸಿರುವ ಪಾಕಿಸ್ತಾನದ ಹಾಲಿ ಮತ್ತು ಮಾಜಿ ಸೇನಾಧಿಕಾರಿಗಳ ತೋಟಗಳ & ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ.

ಕಳೆದ ತಿಂಗಳು ಗಡಿಯುದ್ದಕ್ಕೂ ಭಾರತೀಯ ನಾಗರಿಕರು ಮತ್ತು ಯೋಧರ ಮೇಲೆ ಗುರಿ ಮಾಡಿ ಪಾಕ್‌ ನಡೆಸಿದ ದಾಳಿಗೆ ಪ್ರತೀಕಾರವಾಗಿ ಬಿಎಸ್ಸೆಫ್‌ ‘ಆಪರೇಶನ್ ಅರ್ಜುನ್‌’ ನಡೆಸುತ್ತಿದೆ.

BSF ಪ್ರಹಾರಕ್ಕೆ ಕಂಗೆಟ್ಟಿರುವ ಪಾಕಿಸ್ತಾನ ಕಳೆದ ಮೂರು ದಿನಗಳಿಂದ ಕದನ ವಿರಾಮಕ್ಕೆ ಗೋಗರೆಯುತ್ತಿದೆ.

ಪಾಕ್‌ ಸೇನೆ, ISI ಮತ್ತು ಪಾಕ್‌ ರೇಂಜರ್ಸ್‌ನ ನಿವೃತ್ತ ಅಧಿಕಾರಿಗಳ ತೋಟಗಳನ್ನ, ಮನೆಗಳನ್ನು ಗುರಿಯಾಗಿಸಿ ಬಿಎಸ್ಸೆಫ್‌ ಈ ದಾಳಿ ನಡೆಸುತ್ತಿದೆ. ಈ ಅಧಿಕಾರಿಗಳು ಭಾರತದ ಗಡಿ ನುಸುಳಲು ಉಗ್ರರಿಗೆ ಎಲ್ಲ ನೆರವು ನೀಡುತ್ತಿರೋ ಕಾರಣ ಬಿಎಸ್ಸೆಫ್ ಅವರನ್ನ ಟಾರ್ಗೆಟ್‌ ಮಾಡಿದೆ ಅನ್ನೋದು ಸೈನ್ಯದ
ಮೂಲಗಳು ಹೇಳುತ್ತಿವೆ.

BSF ದಾಳಿಯಿಂದ ಕಂಗೆಟ್ಟಿರುವ ಪಾಕ್‌ ರೇಂಜರ್ಸ್‌ನ ಪಂಜಾಬ್‌ ಡಿಜಿ ಮೇಜರ್‌ ಜನರಲ್‌ ಅಸ್ಗರ್‌ ನವೀದ್‌ ಹಯಾತ್‌ ಖಾನ್‌ BSF
ಡೈರೆಕ್ಟರ್ ಕೆ.ಕೆ.ಶರ್ಮಾ ಕಳೆದ ವಾರ ಎರಡು ಬಾರಿ ಕರೆ ಮಾಡಿ ದಾಳಿ ನಿಲ್ಲಿಸುವಂತೆ ಕೋರಿದ್ದನಂತೆ.

ಪಾಕಿಸ್ತಾನದ ಅಪ್ರಚೋದಿತ ದಾಳಿಗಳ ವಿರುದ್ಧ ಶರ್ಮಾ ಪಾಕಿಸ್ತಾನವನ್ನ ತೀವ್ರವಾಗಿ ತರಾಟಗೆ ತಗೊಂಡಿದ್ದರಂತೆ, ಈಗ ಪಾಕಿಸ್ತಾನದ ಮೇಲೆ ದಾಳಿ ನಿಲ್ಲುವ ಸೂಚನೆ ಕಾಣುತ್ತಿಲ್ಲ.

‘ಆಪರೇಶನ್‌ ಅರ್ಜುನ್‌’ ಭಾಗವಾಗಿ ಸಣ್ಣ, ಮಧ್ಯಮ ಮತ್ತು ಬೃಹತ್‌ ಶಸ್ತ್ರಾಸ್ತ್ರಗಳನ್ನು ಬಳಸಲಾಗುತ್ತಿದೆ. ಇದರಿಂದ ಪಾಕ್‌ ಕಡೆಯಲ್ಲಿ ಭಾರಿ ನಷ್ಟ ಸಂಭವಿಸಿದ್ದು, 7 ಮಂದಿ ಪಾಕ್‌ ರೇಂಜರ್‌ಗಳು ಹಾಗೂ 11 ನಾಗರಿಕರು ಮೃತಪಟ್ಟಿದ್ದಾರೆ.

ದೀರ್ಘ ವ್ಯಾಪ್ತಿಯ 81 ಎಂ.ಎಂ ಹಲವು ಗಡಿ ಹೊರಠಾಣೆಗಳು ಮತ್ತು ಪಾಕ್‌ ಸೇನೆ ಮತ್ತು ರೇಂಜರ್‌ಗಳ ಬಂಕರ್‌ಗಳನ್ನು ಪುಡಿಗುಟ್ಟಲಾಗಿದೆ.

ಕಳೆದ ವರ್ಷ ‘ಆಪರೇಶನ್‌ ರುಸ್ತುಂ’ ಕಾರ್ಯಾಚರಣೆ ನಡೆಸಲಾಗಿತ್ತು. ಕಳೆದ ವರ್ಷದ ಸೆಪ್ಟೆಂಬರ್‌ 19 ರಂದು ಸರ್ಜಿಕಲ್‌ ದಾಳಿ ನಡೆಸಿದಾಗಲೂ ಪಾಕ್‌ ರೇಂಜರ್‌ಗಳು ಕದನ ವಿರಾಮದ ‘ಬಿಳಿ ಬಾವುಟ’ ಪ್ರದರ್ಶಿಸಿದ್ದರು.

ಮೊನ್ನೆ ವಿಶ್ವಸಂಸ್ಥೆಯಲ್ಲಿ ಮಾನ ಹರಾಜು ಹಾಕಿಕೊಂಡು ಬಂದಿದ್ದ ಪಾಕಿಸ್ತಾನಕ್ಕೆ ಈಗ ಭಾರತೀಯ ಸೇನೆಯ ಈ ದಾಳಿ ನಿದ್ದೆಗೆಡುವಂತೆ ಮಾಡಿದ್ದಂತೂ ಸುಳ್ಳಲ್ಲ.

ಸುಷ್ಮಾ ಸ್ವರಾಜ್ ಪಾಕಿಸ್ತಾನದ ವಿರುದ್ಧ ಮಾಡಿದ ಅದ್ಭುತ ಭಾಷಣಕ್ಕೆ ನಮ್ಮದೇ ದೇಶದ ಪ್ರೆಸ್ಟಿಟ್ಯೂಟ್’ಗಳು “ನಿಮ್ಮದು ಬರೀ ಮಾತಾಯ್ತು, ಪಾಕಿಸ್ತಾನದ ವಿರುದ್ಧ ಅಲ್ಲಿ ಹೋಗಿ ಗೋಗರೆಯುವದರಿಂದ ಏನು ಪ್ರಯೋಜನ?” ಅನ್ನೋ ಪ್ರಶ್ನೆಗಳನ್ನ ಕೇವಲ ಮೋದಿಜೀಯನ್ನ ವಿರೋಧಿಸಲು ಎತ್ತಿದ್ದರು.

ಬಹುಶಃ ಈಗ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ನಡೆಸುತ್ತಿರುವ ದಾಳಿ ಪಾಕಿಸ್ತಾನಕ್ಕಿಂತಲೂ ಹೆಚ್ಚಿಗೆ ನಮ್ಮ ದೇಶದ ಬುದ್ಧಿಜೀವಿಗಳಿಗೆ ನೋವುಂಟು ಮಾಡಿದಂತೆ ಕಾಣಿಸುತ್ತಿದೆ.

ಭಾರತ ಬರೀ ಮಾತಾಡಲ್ಲ, ಸಮಯ ಬಂದಾಗ ನಮ್ಮ ಶಕ್ತಿಯೂ ತೋರಿಸುತ್ತೇವೆ ಅನ್ನೋದು ಭಾರತೀಯ ಸೇನೆ ಇಡೀ ಜಗತ್ತಿಗೆ ತೋರಿಸುತ್ತಿದೆ.

ಪಾಕಿಸ್ತಾನ ಇಡೀ ಜಗತ್ತಿನೆದರು expose ಆಗಿದೆ, ಇನ್ನು ಆ ದೇಶವನ್ನ ತುಂಡು ತುಂಡು ಮಾಡುವ ಸಮಯ ಕೂಡಿಬಂದಿದೆ, ಅದನ್ನ ನಮ್ಮ ಸೇನೆ ಸಮರ್ಥವಾಗೇ ಮಾಡುತ್ತಿದೆ.

-Vinod Hindu Nationalist

Tags

Related Articles

Close