ಪ್ರಚಲಿತ

ಬ್ರೇಕಿಂಗ್: ಬಿಜೆಪಿಗೆ ಥಾಂಕ್ಯೂ ಎಂದ ಪರಮೇಶ್ವರ್.! ಕಾರಣ ನೀಡಿದ ಬಿಎಸ್‍ವೈ..!

ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಡೊಂಬರಾಟಗಳು ಮುಗಿಯುವ ಹಂತಕ್ಕೆ ಬಂದಿದೆ. ಇಂದು ನೂತನ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿಯವರ ಮೈತ್ರಿ ಸರ್ಕಾರಕ್ಕೆ ಬಹುಮತ ಸಾಭೀತುಪಡಿಸುವ ದಿನವಾಗಿದ್ದರಿಂದ ಸದನದಲ್ಲಿ ಭಾರೀ ಕುತೂಹಲವೇ ಏರ್ಪಟ್ಟಿದೆ. ಈ ಮಧ್ಯೆ ಸ್ಪೀಕರ್ ಸ್ಥಾನವನ್ನು ಕಾಂಗ್ರೆಸ್ ಭರ್ತಿ ಮಾಡಿಕೊಂಡಿದೆ.

ನಾಮಪತ್ರ ಸಲ್ಲಿಸಿ ವಾಪಾಸ್ ಪಡೆದ ಬಿಜೆಪಿ..!

ವಿಧಾನ ಸಭಾ ಸ್ಪೀಕರ್ ಸ್ಥಾನಕ್ಕೆ ನಿನ್ನೆ ಭಾರತೀಯ ಜನತಾ ಪಕ್ಷದಿಂದ ಶಾಸಕ ಸುರೇಶ್ ಕುಮಾರ್ ಅವರು ನಾಮಪತ್ರ ಸಲ್ಲಿಸಿದ್ದರು. ನಂತರ ಕಾಂಗ್ರೆಸ್‍ನಿಂದ ಶಾಸಕ ರಮೇಶ್ ಕುಮಾರ್ ಅವರು ನಾಮಪತ್ರ ಸಲ್ಲಿಸಿದ್ದು ವಿಧಾನ ಸಭೆಯಲ್ಲಿ ಚುನಾವಣೆ ನಡೆಯುವ ಲಕ್ಷಣಗಳು ಗೋಚರಿಸಿತ್ತು. ಈ ಮಧ್ಯೆ ನೂತನ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಸುದ್ದಿಗೋಷ್ಟಿ ನಡೆಸಿ ನಾಮಪತ್ರವನ್ನು ಭಾರತೀಯ ಜನತಾ ಪಕ್ಷ ವಾಪಾಸು ಪಡೆಯಬೇಕೆಂದು ವಿನಂತಿಸಿಕೊಂಡಿದ್ದರು. ಇಂದು ಕೊನೇ ಹಂತದಲ್ಲಿರುವಾಗಲೇ ಭಾರತೀಯ ಜನತಾ ಪಕ್ಷದ ಸ್ಪೀಕರ್ ಅಭ್ಯರ್ಥಿ ಸುರೇಶ್ ಕುಮಾರ್ ನಾಮಪತ್ರವನ್ನು ವಾಪಾಸು ಪಡೆದುಕೊಂಡಿದ್ದಾರೆ.

ಥಾಂಕ್ಯೂ ಬಿಜೆಪಿ-ಪರಂ..!

“ನಾನು ಭಾರತೀಯ ಜನತಾ ಪಕ್ಷವನ್ನು ವಿನಂತಿಸಿಕೊಂಡು ಕೇಳಿದ್ದೆ. ದಯವಿಟ್ಟು ನಾಮಪತ್ರ ಸಲ್ಲಿಸಬೇಡಿ. ಸ್ಪೀಕರ್ ಚುನಾವಣೆಯನ್ನು ಅವಿರೋಧವಾಗಿಯೇ ಆಯ್ಕೆ ಮಾಡಿಕೊಳ್ಳೋಣ ಎಂದು ವಿನಂತಿಸಿದ್ದೆ. ನನ್ನ ಮನವಿಯನ್ನು ಸ್ವೀಕರಿಸಿದ್ದಕ್ಕೆ ಭಾರತೀಯ ಜನತಾ ಪಕ್ಷಕ್ಕೆ ಧನ್ಯವಾದಗಳು” ಎಂದು ಹೇಳಿದ್ದಾರೆ.

Image result for g parameshwar with bsy

ಸದನದಲ್ಲಿ ಬಿಎಸ್‍ವೈ ಮಾತು…

ವಿರೋಧ ಪಕ್ಷದ ನಾಯಕನಾಗಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ನೂತನ ಸ್ಪೀಕರ್ ರಮೇಶ್ ಕುಮಾರ್‍ಗೆ ಅಭಿನಂದನೆ ಸಲ್ಲಿಸಿದರು. ನಂತರ ಮಾತನಾಡಿದ ಬಿಎಸ್ ಯಡಿಯೂರಪ್ಪನವರು “ನಾವು ರಮೇಶ್ ಕುಮಾರ್ ಅವರ ಮೇಲೆ ಗೌರವವನ್ನು ಹೊಂದಿದ್ದೇವೆ. ಈ ಕಾರಣಕ್ಕಾಗಿ ನಾವು ನಾಮಪತ್ರವನ್ನು ವಾಪಾಸು ಪಡೆದಿದ್ದೇವೆ. ಸದನದಲ್ಲಿ ಆಡಳಿತ ಪಕ್ಷದಷ್ಟೇ ವಿರೋಧ ಪಕ್ಷಕ್ಕೂ ಚರ್ಚೆ ಮಾಡಲು ಸಮಾನ ಅವಕಾಶ ಇರಬೇಕು ಎಂದು ನಾವು ನಾಮಪತ್ರ ವಾಪಾಸು ಪಡೆದಿದ್ದೇವೆ” ಎಂದು ಸ್ಪಷ್ಟನೆ ನೀಡಿದರು

ನಂತರ ಭಾರತೀಯ ಜನತಾ ಪಕ್ಷದ ಶಾಸಕ ಗೋವಿಂದ ಕಾರಜೋಳ, ಕಾಂಗ್ರೆಸ್‍ನ ಡಿಕೆ ಶಿವಕುಮಾರ್ ಸಹಿತ ಅನೇಕ ಮಂದಿ ನೂತನ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಅಭಿನಂದನಾ ಭಾಷಣವನ್ನು ಸಲ್ಲಿಸಿದರು.

ಹಸಿರು ಶಾಲು ಹೊದ್ದ ಬಿಎಸ್‍ವೈ..!

ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಹಸಿರು ಶಾಲು ಹೊದ್ದುಕೊಂಡು ಬಂದಿದ್ದ ವಿರೋಧ ಪಕ್ಷದ ನಾಯಕ ಯಡಿಯೂರಪ್ಪನವರು ಇಂದು ಕೂಡಾ ಹಸಿರು ಶಾಲನ್ನೇ ಹೊದ್ದುಕೊಂಢು ಆಗಮಿಸಿದ್ದಾರೆ. ಇಂದು ಆರಂಭವಾದ ಮೊದಲ ಸದಸನಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹಸಿರು ಶಾಲನ್ನು ಹೊದ್ದುಕೊಂಡು ಬಂದೇ ವಿಧಾನ ಸಭೆ ಪ್ರವೇಶಿಸಿದರು. ಈ ಮೂಲಕ ತಾನು ರೈತರ ಪರವಾಗಿ ಕೆಲಸ ಮಾಡುತ್ತೇನೆ ಎಂಬ ಸಂದೇಶ ರವಾಣಿಸಿದರು.

Image result for bsy in green shall

ಇಂದು ಮೊದಲ ಪ್ರವೇಶದಲ್ಲೇ ಅನೇಕ ಚರ್ಚೆಗಳು ನಡೆಯುವ ಸಾಧ್ಯತೆಗಳೂ ಇದ್ದು ಸಾಲಮನ್ನಾ ಮಾಡುವಂತೆ ಸರ್ಕಾರವನ್ನು ಭಾರತೀಯ ಜನತಾ ಪಕ್ಷ ಒತ್ತಾಯಿಸಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಇಂದಿನ ಸದನ ಪರಿಪೂರ್ಣವಾಗಿ ನಡೆಯುವ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿದ್ದು, ಮುಂದೇನು ನಡೆಯುತ್ತೆ ಎಂಬುವುದನ್ನು ಕಾದುನೋಡಬೇಕಾಗದೆ.

-ಏಕಲವ್ಯ

Tags

Related Articles

Close