ಪ್ರಚಲಿತ

ಬ್ರೇಕಿಂಗ್! ಪ್ರಕಾಶ್ ರೈಗೆ ಭಾರೀ ಮುಖಭಂಗ! ಜೀವ ಬೆದರಿಕೆ ಎಂದು ಸುಳ್ಳು ಹೇಳಿದ ಖಳನಟನ ನಿಜಮುಖ ಬಯಲು!

ಈ ಕಾಂಗ್ರೆಸ್ ಎನ್ನುವ ಖಳನಟ ಅದ್ಯಾವಾಗ ನಿಜ ಜೀವನದಲ್ಲಿಯೂ ಖಳನಂತೆ ನಟಿಸಲು ವರ್ತಿಸಿರೋ ಅಂದಿನಿಂದ ಒಂದಲ್ಲಾ ಒಂದು ಕಾರಣದಿಂದ ಹೋದಲ್ಲಿ ಬಂದಲ್ಲಿ ಮುಖಭಂಗವನ್ನು ಎದುರಿಸುತ್ತಲೇ ಇದ್ದಾರೆ. ಪ್ರಕಾಶ್ ರೈ ಬಂದರೆಂದರೆ ದೇಶಪ್ರೇಮಿಗಳ ಕಣ್ಣು ಒಮ್ಮೆ ಕೆಂಪಗಾಗಿ ಬಿಡುತ್ತದೆ. ಪಕ್ಕಾ ಎಡಪಂಥೀಯನಾಗಿರುವ ಪ್ರಕಾಶ ರೈ ನೀಡುವ ಹೇಳಿಕೆಗಳೇ ಈ ಎಲ್ಲಾ ಅವಾಂತರಕ್ಕೆ ಕಾರಣವಾಗಿರುತ್ತದೆ. ಈಗ ಮತ್ತೆ ಪ್ರಕಾಶ ರೈ ಭಾರೀ ಮುಜುಗರವನ್ನು ಅನುಭವಿಸಿದ್ದು ರಾಜ್ಯದೆಲ್ಲೆಡೆ ನಗೆಪಾಟೀಲಿಗೀಡಾಗಿದ್ದಾರೆ.

ಮಂಗಳೂರಿಗೆ ಆಗಮಿಸಿದ್ದ ರೈ…

ಕಳೆದ ಕೆಲ ಸಮಯಗಳಿಂದ ನಟ ಪ್ರಕಾಶ್ ರೈ ಮಂಗಳೂರಿಗೆ ಬಹಳ ಬಾರಿ ಭೇಟಿ ನೀಡುತ್ತಿರುತ್ತಾರೆ. ಹೀಗೆ ಬಂದ ಪ್ರಕಾಶ್ ರೈ ವಿವಾದಾತ್ಮಕ ಹೇಳಿಕೆಗಳನ್ನೇ ನೀಡಿ ವಾಪಾಸು ತೆರಳುತ್ತಾರೆ. ಇಂದು ಕೂಡಾ ಮಂಗಳೂರಿಗೆ ತೆರಳಿದ ಪ್ರಕಾಶ್ ರೈ ಮತ್ತೆ ಬಲಪಂಥೀಯ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇಂದು ಮಂಗಳೂರಿನಲ್ಲಿ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಪ್ರಕಾಶ್ ರೈ ಪಬ್ ದಾಳಿ ಮಾಡಿದ ಆರೋಪಿಗಳು ಖುಲಾಸೆಯಾಗಿರುವ ಬಗ್ಗೆ ಮಾತನಾಡಿದ್ದಾರೆ. “ಪಬ್ ದಾಳಿ ನಡೆಸಿದ ಆರೋಪಿಗಳು ಕೋರ್ಟ್‍ನಲ್ಲಿ ಆರೋಪ ಮುಕ್ತರಾಗಿ ಖುಲಾಸೆಯಾಗಿದ್ದಾರೆ. ಪಬ್‍ನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಲ್ಲೆ ಮಾಡಿರುವ ವೀಡಿಯೋ ಇಂದಿಗೂ ಇದೆ. ಆದರೂ ಆರೋಪಿಗಳು ಖುಲಾಸೆಯಾಗಿರುವ ಬಗ್ಗೆ ನನಗೆ ಬೇಸರ ತರಿಸಿದೆ. ಇಂತಹಾ ಸಂಘಟನೆಗಳನ್ನು ಕ್ಷಮಿಸಬಾರದು” ಎಂದು ಪ್ರಕಾಶ್ ರೈ ಪತ್ರಿಕಾ ಸಂವಾದದಲ್ಲಿ ಹೇಳಿಕೆ ನೀಡಿದ್ದರು.

ಇದು ಸಹಜವಾಗಿಯೇ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಈ ಬಗ್ಗೆ ಯಾವುದೇ ಪ್ರತಿಭಟನೆಯನ್ನು ನಡೆಸದೆ ಸಾಮಾಜಿಕ ಜಾಲತಾಣದಲ್ಲಿ ಉಗಿದು ಉಪ್ಪಿನ ಕಾಯಿ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಬೆದರಿಕೆ ಬಂದಿದೆ ಎಂದ ರೈ..!

ಪ್ರಕಾಶ್ ರೈ ಮೊದಲೇ ವಿವಾದಾತ್ಮಕ ವ್ಯಕ್ತಿ. ಪ್ರಚಾರಕ್ಕಾಗಿ ವಿವಾದವನ್ನು ಬೇಕಂತಲೇ ಮೈಮೇಲೆ ಎಳೆದುಕೊಂಡಿರುವ ಈ ವ್ಯಕ್ತಿ ಇಂದು ಮತ್ತೆ ಫೇಮಸ್ ಆಗಿ ಸುದ್ದಿಯಾಗಲು ಹೊರಟಿದ್ದಾರೆ. “ನನಗೆ ಆಗುಂತಕರಿಂದ ಜೀವ ಬೆದರಿಕೆ ಇದೆ. ನಾನು ವಿಮಾನ ನಿಲ್ದಾಣದಲ್ಲಿ ಇರುವಾಗ ಆಗುಂತಕರ ತಂಡವೊಂದು ಬಂದು ನನ್ನ ಕಾರು ಚಾಲಕನಲ್ಲಿ ಬೆದರಿಸಿದ್ದಾರೆ. ಎಲ್ಲಿ ನಿನ್ನ ಪ್ರಕಾಶ್ ರೈ, ಆತನನ್ನು ಸುಮ್ಮನೆ ಬಿಡೋದಿಲ್ಲ ಎಂದು ನನಗೆ ಜೀವ ಬೆದರಿಕೆ ಒಡ್ಡಿದ್ದಾರೆ” ಎಂದು ಮಾಧ್ಯಮಗಳಲ್ಲಿ ಪ್ರಕಾಶ್ ರೈ ಹೇಳಿಕೊಳ್ಳುತ್ತಾರೆ.

ಮುಖಭಂಗವನ್ನು ಅನುಭವಿಸಿದ ಖಳನಟ..!

ಪ್ರಕಾಶ್ ರೈ ಈ ರೀತಿಯ ಹೇಳಿಕೆಯನ್ನು ನೀಡುತ್ತಲೇ ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಕೈಗೊಳ್ಳುತ್ತಾರೆ. ಪ್ರಕರಣದ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹುಡುಕಾಟವನ್ನು ಆರಂಭಿಸುತ್ತಾರೆ. ಪ್ರಕಾಶ್ ರೈ ಸಹಿತ ಅನೇಕ ಕಾಂಗ್ರೆಸ್ ನಾಯಕರು ಬಲಪಂಥೀಯ ಹಿಂದೂ ಸಂಘಟನೆಗಳು ಹಾಗೂ ಭಾರತೀಯ ಜನತಾ ಪಕ್ಷದ ಯುವಕರ ಬಗ್ಗೆಯೇ ಸಂಶಯ ವ್ಯಕ್ತಪಡಿಸುತ್ತಾರೆ. ಈ ವಿಚಾರ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದಂತೆಯೇ ಸತ್ಯಾಂಶ ಹೊರ ಬೀಳುತ್ತದೆ.

ಈ ಬಗ್ಗೆ ಶೀಘ್ರ ತನಿಖೆ ನಡೆಸಿದ ಪೊಲೀಸರು ಸತ್ಯಾಂಶವನ್ನು ಬಯಲು ಮಾಡುತ್ತಾರೆ. ಪೊಲೀಸರು ನೀಡಿದ ಈ ಸತ್ಯಾಂಶ ಸ್ವತಃ ಪ್ರಕಾಶ್ ರೈಗೇ ಮುಜುಗರವನ್ನು ತಂದಿಟ್ಟಿದೆ. ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಟಿ.ಸುರೇಶ್, “ಪ್ರಕಾಶ್ ರೈ ಅವರ ಕಾರು ಚಾಲಕನಿಗೆ ಯಾರೂ ಬೆದರಿಕೆ ಹಾಕಿಲ್ಲ. ಹಾಗೂ ಅವರ ಕಾರು ಡ್ರೈವರ್‍ನ್ನು ಪ್ರಶ್ನಿಸಿದ್ದು ಸ್ವತಃ ಪೊಲೀಸ್ ಸಿಬ್ಬಂಧಿಯೇ ಆಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಕಾರು ನಿಂತಿತ್ತು. ಇದನ್ನು ನಮ್ಮ ಪೊಲೀಸ್ ಸಿಬ್ಬಂಧಿ ಪ್ರಶ್ನಿಸಿದ್ದರು. ಆದರೆ ಪ್ರಕಾಶ್ ರೈ ಅವರನ್ನೇ ಆಗಂತುಕರು ಎಂದು ತಿಳಿದು ಭಯಪಟ್ಟಿದ್ದಾರೆ. ಮಾತ್ರವಲ್ಲದೆ ಕಾರು ಚಾಲಕನನ್ನು ಪ್ರಶ್ನಿಸಿದ ಪೊಲೀಸ್ ಸಿಬ್ಬಂಧಿ ಯಾರ ಕಾರು ಎಂದು ಪ್ರಶ್ನಿಸಿದ್ದಾರೆ ಅಷ್ಟೇ. ಹೊರತಾಗಿ ಯಾವುದೇ ಧಮ್ಕಿಯನ್ನು ಹಾಕಿಲ್ಲ” ಎಂದು ಪತ್ರಿಕಾ ಗೋಷ್ಟಿಯಲ್ಲಿ ಹೇಳಿದ್ದಾರೆ.

ಪೊಲೀಸ್ ಅಧಿಕಾರಿಯ ಈ ಹೇಳಿಕೆಯಿಂದ ಪ್ರಕಾಶ್ ರೈಗೆ ಭಾರೀ ಮುಖಭಂಗವಾಗಿದೆ. ತಾನು ಫೇಮಸ್ ಆಗಲು ಹೊರಟಿದ್ದ ಪ್ರಕಾಶ್ ರೈ ಅದೇನೇನೋ ಆಗಿದೆ ಎಂದು ಕೇಸ್ ನೀಡಲು ಹೋಗಿದ್ದರು. ಆದರೆ ಅಲ್ಲಿ ಏನೂ ನಡೆದಿಲ್ಲ. ರೈ ಹೇಳಿದ್ದೆಲ್ಲಾ ಸುಳ್ಳು ಎನ್ನುವ ಮೂಲಕ ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.

ಒಟ್ಟಾರೆ ಪ್ರಕಾಶ್ ರೈ ಏನೋ ಆಗಲು ಹೋಗಿ ಅದೇನೋ ಮಡಿಕೊಂಡು ಪೇಚಿಗೆ ಸಿಲುಕಿದ್ದಾರೆ. ತನಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ ಎಂದು ಪ್ರಚಾರ ಗಿಟ್ಟಿಸಲು ಹೋದ ಪ್ರಕಾಶ್ ರೈಗೆ ಭಾರೀ ಮುಖಭಂಗವಾಗಿದ್ದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close