ಅಧಿಕಾರಕ್ಕಾಗಿ ಹೇಸಿಗೆ ತಿನ್ನಲೂ ತಯಾರಿರುವ ಈ ನಾಯಕರಿಗೆ ಯಾರಾದರೇನು, ಎಲ್ಲಿಯಾದರೇನು ಯಾವ ಕೀಳು ಮಟ್ಟಕ್ಕೂ ಇಳಿದು ಅಧಿಕಾರ ನಡೆಸಲು ತಯಾರಾಗಿದ್ದಾರೆ. ಅಷ್ಟಕ್ಕೂ ಚುನಾವಣೆಯ ಮೊದಲು ನರಿಗಳಂತೆ ಕಿತ್ತಾಟ ನಡೆಸಿಕೊಂಡಿದ್ದ ಕಾಂಗ್ರೆಸ್-ಜೆಡಿಎಸ್ ಕೇವಲ ಅಧಿಕಾರ ಹಿಡಿಯಬೇಕೆಂಬ ಸಲುವಾಗಿ ಚುನಾವಣೆಯ ನಂತರದಲ್ಲಿ ಮೈತ್ರಿ ಮಾಡಿಕೊಂಡು ಇದೀಗ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಿ ರಾಜ್ಯದಲ್ಲಿ ಆಡಳಿತ ನಡೆಸಲು ತಯಾರಾಗಿದೆ. ಆದರೆ ಈ ಮೈತ್ರಿ ಕೇವಲ ಅಧಿಕಾರಕ್ಕಾಗಿ ಮಾತ್ರ ಎಂಬೂದು ಪದೇ ಪದೇ ಸಾಬೀತಾಗುತ್ತಲೇ ಇದೆ.ಅದೇ ರೀತಿ ಇದೀಗ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಹೇಳಿಕೊಂಡಿರುವ ಪ್ರಕಾರ ರಾಜ್ಯದ ಜನರಿಗಿಂತ ನನಗೆ ಕಾಂಗ್ರೆಸ್ ಮುಖ್ಯ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಧಿಕಾರದ ಆಸೆಗಾಗಿಯೇ ಇರುವ ಇಂತವರಿಂದ ಇಂತಹ ಮಾತುಗಳನ್ನೇ ಕೇಳಬೇಕೇ ಹೊರತು ಅಭಿವೃದ್ಧಿ ಎಂಬುದು ಕನಸಾಗಿಯೇ ಉಳಿಯುವುದು ಖಚಿತ..!
ಕಾಂಗ್ರೆಸ್‌ನ ಮುಲಾಜಿನಲ್ಲಿರುವ ನನಗೆ ರಾಜ್ಯದ ಜನರು ಮುಖ್ಯವಲ್ಲ..!
ಹೌದು, ಇದು ಸ್ವತಃ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹೇಳಿದ ಅಮೃತ ವಚನ. ಚುನಾವಣೆಗೂ ಮೊದಲು ಬದ್ಧ ವೈರಿಗಳು, ಚುನಾವಣೆಯ ನಂತರ ಒಡಹುಟ್ಟಿದವರ ರೀತಿ ಫೋಸು, ಇದೀಗ ಅವೆಲ್ಲವನ್ನೂ ಮೀರಿ ಒಂದು ಹೆಜ್ಜೆ ಮುಂದೆ ಹೋದ ಕುಮಾರಸ್ವಾಮಿ ಅವರು ನಾನು ಮೈತ್ರಿ ಮಾಡಿಕೊಂಡಿರುವುದು ಕಾಂಗ್ರೆಸ್ ಜೊತೆ , ಆದ್ದರಿಂದ ಕಾಂಗ್ರೆಸ್‌ನ ಒಪ್ಪಿಗೆಯಿಲ್ಲದೆ ನಾನು ಯಾವ ನಿರ್ಧಾರವನ್ನೂ ಕೈಗೊಳ್ಳುವಂತಿಲ್ಲ, ಅದೇ ರೀತಿ ನಾನು ಕಾಂಗ್ರೆಸ್‌ನ ಮುಲಾಜಿನಲ್ಲಿ ಇದ್ದೇನೆ ಹೊರತು ಈ ರಾಜ್ಯದ ೬ ಕೋಟಿ ಕನ್ನಡಿಗರ ಮುಲಾಜಿನಲ್ಲಿಲ್ಲ ಎಂದು ಕಡ್ಡಿ ಮುರಿದ ರೀತಿಯಲ್ಲಿ ಹೇಳಿಕೊಂಡಿದ್ದಾರೆ.
ಕುಮಾರಸ್ವಾಮಿ ಅವರನ್ನು ಯಡಿಯೂರಪ್ಪನವರು ವಚನ ಭ್ರಷ್ಟ ಎಂದು ಕರೆದಿರುವುದು ಇದೀಗ ಕುಮಾರಸ್ವಾಮಿ ಅವರ ಈ ಹೇಳಿಕೆಯಿಂದ ಮತ್ತೆ ಸಾಬೀತಾಗಿದೆ. ಕುಮಾರಸ್ವಾಮಿ ಅವರು ಈವರೆಗೂ ಹೇಳಿದ ರೀತಿಯಲ್ಲಿ ನಡೆದುಕೊಂಡ ಉದಾಹರಣೆಯೇ ಇಲ್ಲ. ಯಾಕೆಂದರೆ ಕೇವಲ ಅಧಿಕಾರದ ಆಸೆಗಾಗಿಯೇ ಇರುವ ಕುಮಾರಸ್ವಾಮಿ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಿರುವುದೇ ರಾಜ್ಯದ ಜನರ ದೌರ್ಭಾಗ್ಯ..!
ಬಹುಮತ ನೀಡದ ಜನರಿಗಿಂತ ಕಾಂಗ್ರೆಸ್ಸೇ ಮುಖ್ಯ..!?
ಜೆಡಿಎಸ್ ಪಕ್ಷವನ್ನು ಜನರು ಈ ಬಾರಿಯ ಚುನಾವಣೆಯಲ್ಲಿ ಮೂಲೆಗುಂಪು ಮಾಡಿದ್ದಾರೆ. ಆದರೂ ಕಾಂಗ್ರೆಸ್ ಜೊತೆ ಸೇರಿಕೊಂಡು ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ಅವರು ಈ ಮೊದಲೇ ಹೇಳಿದಂತೆ ಜನರು ನಮ್ಮ ಪಕ್ಷಕ್ಕೆ ಬಹುಮತ ನೀಡಲಿಲ್ಲ, ಆದ್ದರಿಂದ ರೈತರ ಸಾಲ ಮನ್ನಾ ಮಾಡುವುದು ಕಷ್ಟ ಎಂದಿದ್ದರು. ಇದೀಗ ಮತ್ತೆ ತಮ್ಮ ಇಬ್ಬಗೆ ನೀತಿಯನ್ನು ಪ್ರದರ್ಶಿಸಿದ್ದು ಬಹುಮತ ನೀಡದ ಜನರಿಗಿಂತ ನಮ್ಮ ಕೈ ಹಿಡಿದು ನನ್ನನ್ನು ಮುಖ್ಯಮಂತ್ರಿಯಾಗಿ ಮಾಡಿದ ಕಾಂಗ್ರೆಸ್ಸೇ ನನಗೆ ಮುಖ್ಯ ಎನ್ನುವ ಮೂಲಕ ಅಹಂಕಾರದ ಹೇಳಿಕೆ ನೀಡಿದ್ದಾರೆ..!
ರಾಜ್ಯದ ಜನರ ಏಳಿಗೆಗಾಗಿ ಇರಬೇಕಾಗಿದ್ದ ಒಬ್ಬ ಮುಖ್ಯಮಂತ್ರಿ ಕೇವಲ ಅಧಿಕಾರದ ಮದದಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಹೊರತು ಮತ್ಯಾವುದೂ ಅಲ್ಲ. ಆದ್ದರಿಂದ ಕುಮಾರಸ್ವಾಮಿ ಅವರು ವಚನಭ್ರಷ್ಟ ಎಂಬುದನ್ನು ಮತ್ತೆ ರಾಜ್ಯದ ಮುಂದೆ ಪ್ರದರ್ಶಿಸಿದ್ದಾರೆ..!
–ಅರ್ಜುನ್