ಪ್ರಚಲಿತ

ಬ್ರೇಕಿಂಗ್.!ಶಬರಿಮಲೆಗೆ ಪ್ರತ್ಯೇಕ ಕಾನೂನು ರೂಪಿಸಿ-ಸುಪ್ರೀಂ ಕೋರ್ಟ್ ಸೂಚನೆ.! ಭಕ್ತರ ಭಾವನೆಗೆ ಬೆಲೆ ಕೊಡುತ್ತಾ ಕೇರಳ ಸರ್ಕಾರ.?

ಕೇರಳದ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿಷಿದ್ಧದ ವಿಚಾರವಾಗಿ ನಡೆಯುತ್ತಿದ್ದ ಸಂಘರ್ಷವು ಇದೀಗ ಮತ್ತೊಂದು ಹಂತವನ್ನು ತಲುಪಿದೆ. ಇತ್ತೀಚೆಗೆ ಈ ಬಗ್ಗೆ ತೀರ್ಪು ನೀಡಿದ್ದ ಪಂಚ ಸದಸ್ಯದ ಸುಪ್ರೀಂ ಕೋರ್ಟ್ ಸಮಾನವಾದ ತೀರ್ಪು ಬಾರದೆ ಇದ್ದ ಕಾರಣಕ್ಕೆ ಇದನ್ನು ಏಳು ಮಂದಿ ಸದಸ್ಯರುಳ್ಳ ವಿಸ್ಕøತ ಪೀಠಕ್ಕೆ ವರ್ಗಾಯಿಸಿ ಆದೇಶಿಸಿತ್ತು. ಆದರೆ ಇದೀಗ ಮತ್ತೊಂದು ಸೂಚನೆ ನೀಡುವ ಮೂಲಕ ಅಚ್ಚರಿಗೆ ಕಾರಣವಾಗಿದೆ.

ಶಬರಿಮಲೆಗೆ ಪ್ರತ್ಯೇಕ ಕಾನೂನು..!

ಶಬರಿಮಲೆ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸುವ ವಿಚಾರವಾಗಿ ವಿವಾದಗಳು ಭುಗಿಲೇಳುತ್ತಿದ್ದು ನಾಸ್ತಿಕ ಮಹಿಳೆಯರು ದೇವಾಲಯದ ಪಾವಿತ್ರತೆಯನ್ನು ಹಾಳು ಮಾಡಲು ಷಡ್ಯಂತ್ರ ರೂಪಿಸುತ್ತಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಎದುರಾಗಿತ್ತು. ಕೇರಳ ಮಾತ್ರವಲ್ಲದೆ ವಿಶ್ವದಾದ್ಯಂತ “ಸೇವ್ ಶಬರಿಮಲಾ” ಎಂಬ ಹೋರಾಟ ಆರಂಭವಾಗಿತ್ತು. ಈ ಎಲ್ಲಾ ವಿವಾದಗಳನ್ನು ಮನಗಂಡ ಸುಪ್ರೀಂ ಕೋರ್ಟ್ ಶಬರಿಮಲೆ ದೇವಾಲಯಕ್ಕೆ ಪ್ರತ್ಯೇಕ ಕಾನೂನು ರಚಿಸಲು ಸೂಚನೆ ನೀಡಿದೆ.

ಈ ಬಗ್ಗೆ ಕೇರಳ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ ಸುಪ್ರೀಂ ಕೋರ್ಟ್ “ಶಬರಿಮಲೆ ದೇವಾಲಯಕ್ಕೆ ಪ್ರತ್ಯೇಕ ಕಾನೂನು ಮತ್ತು ಪ್ರತ್ಯೇಕ ನಿಯಮಾವಳಿಗಳನ್ನು ರೂಪಿಸಿ, ಈ ಬಗ್ಗೆ 4 ವಾರಗಳ ಒಳಗಾಗಿ ಸಮಿತಿ ರಚಿಸಿ ನಿರ್ಧಾರವನ್ನು ಪ್ರಕಟಿಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಿ” ಎಂದು ಸೂಚನೆ ನೀಡಿದೆ. ಈ ಮೂಲಕ ಕೋಟ್ಯಾಂತರ ಭಕ್ತರ ಭಾವನೆಗಳಿಗೆ ಕೋರ್ಟ್ ತಕ್ಕ ಮಟ್ಟಿನ ಸಮಾಧಾನವನ್ನು ನೀಡಿದೆ.

ಭಾವನೆಗೆ ಸ್ಪಂಧಿಸುತ್ತಾ ಕೇರಳ ಸರ್ಕಾರ.?

ಕಟ್ಟರ್ ನಾಸ್ತಿಕ ಭಾವನೆಗಳನ್ನು ಹೊಂದಿರುವ ಕೇರಳದ ಎಲ್.ಡಿ.ಎಫ್.(ಕಮ್ಯುನಿಸ್ಟ್) ಸರ್ಕಾರ ಈ ಹಿಂದೆ ಮಹಿಳೆಯರ ಪ್ರವೇಶಕ್ಕೆ ಭದ್ರತೆ ನೀಡಿ ಭಕ್ತರು ಆಕ್ರೋಶಗೊಳ್ಳುವಂತೆ ಮಾಡಿತ್ತು.ಮಹಿಳೆಯರು ಶಬರಿಮಲೆ ಪ್ರವೇಶಿಸುವುದಕ್ಕೆ ನಾವು ಭದ್ರತೆ ನೀಡುತ್ತೇವೆ ಎಂದು ಹೇಳಿತ್ತು. ಹೀಗಾಗಿ ಕೇರಳಕ್ಕೆ ಸರ್ಕಾರಕ್ಕೆ ಸುಪ್ರೀಂ ಪ್ರತ್ಯೇಕ ಕಾನೂನು ರಚಿಸಲು ಸೂಚನೆ ನೀಡಿರುವುದರಿಂದ ಕೇರಳದ ಕಮ್ಯುನಿಸ್ಟ್ ಸರ್ಕಾರ ಮತ್ತೆ ಯಾವ ಕ್ಯಾತೆ ತೆಗೆಯುತ್ತೆ ಅನ್ನೋದನ್ನು ಕಾದುನೋಡಬೇಕಾಗಿದೆ.

-ಏಕಲವ್ಯ

Tags

Related Articles

FOR DAILY ALERTS
Close