ಪ್ರಚಲಿತ

ಪ್ರಧಾನಿ ಮೋದಿ ನಾಯಕತ್ವದ ಬಗ್ಗೆ ಬ್ರಿಟಿಷ್ ಮಾಧ್ಯಮ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತವನ್ನು ಅಭಿವೃದ್ಧಿ ಮಾಡುವ ಉದ್ದೇಶದಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದರೆ, ಪ್ರಧಾನಿ ಮೋದಿ ಅವರನ್ನು ವಿರೋಧಿಸುವ ವಿರೋಧ ಪಕ್ಷಗಳು ಭಾರತವನ್ನು ಹೇಗೆ ತಮ್ಮ ವಶಕ್ಕೆ ಪಡೆಯುವುದು, ಹೇಗೆ ಕೊಳ್ಳೆ ಹೊಡೆಯುವುದು ಎಂಬುದರ ಬಗೆಯೇ ಯೋಚನೆ ಮಾಡುತ್ತಿರುತ್ತಾರೆ. ಈ ದೇಶದಲ್ಲಿ ಹೇಗೆ ಮತ್ತೆ ಭ್ರಷ್ಟಾಚಾರ ಮಾಡುವುದು ಎನ್ನುವ ಲೆಕ್ಕಾಚಾರದಲ್ಲೇ ವಿಪಕ್ಷಗಳು, ವಿರೋಧಿಗಳು ಉಸಿರಾಡುತ್ತಿರುತ್ತಾರೆ ಎನ್ನುವುದು ಸತ್ಯ ಸಂಗತಿ.

ಪ್ರಧಾನಿ ಮೋದಿ ಅವರ ಪ್ರಖ್ಯಾತಿಯನ್ನು ವಿಪಕ್ಷಗಳು, ವಿರೋಧಿಗಳು ಎಷ್ಟೇ ಕೆಳಗಿಳಿಸಲು ನೋಡಲಿ, ಅದಕ್ಕಿಂತ ಹತ್ತು ಪಟ್ಟು ಮೇಲೇರಿ ಜನರಿಗೆ ಮತ್ತೆ ಆಪ್ತವಾಗುವ ನಡೆ ನುಡಿ ಮೋದಿ ಅವರದ್ದು. ಅಂತಹ ವರ್ಚಸ್ಸನ್ನು ಹೊಂದಿರುವ ನಾಯಕನ ಬಗ್ಗೆ ಇದೀಗ ಬ್ರಿಟಿಷ್ ಮಾಧ್ಯಮಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿವೆ.

ಪ್ರಧಾನಿ ಮೋದಿ ನಾಯಕತ್ವದಲ್ಲಿ ಮೂಡಿ ಬಂದ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಬ್ರಿಟಿಷ್ ಮಾಧ್ಯಮಗಳು ಪ್ರಶಂಸಿಸಿವೆ. ರಾಜಕೀಯ ಸ್ಥಿರತೆಯಿಂದಾಗಿ, ಕಾನೂನು ಸುಧಾರಣೆಗೆ ಸಂಬಂಧಿಸಿದ ಹಾಗೆ, ಮೂಲಭೂತ ಕಲ್ಯಾಣ ಯೋಜನೆಗಳ ಸುಧಾರಣೆಗಳಲ್ಲಿ, ಭಾರತದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ಆಡಳಿತ ಯಶಸ್ಸು ಕಂಡಿದೆ ಎಂದು ಬ್ರಿಟಿಷ್ ಮಾಧ್ಯಮಗಳು ತಲೆದೂಗಿವೆ. ಬ್ರಿಟನ್ನಿನ ‘ದಿ ಟೆಲಿಗ್ರಾಫ್’ ಪತ್ರಿಕೆಯು ಪ್ರಧಾನಿ ಮೋದಿ ಅವರ ಕಾರ್ಯ ವೈಖರಿಗೆ ಮನಸೋತು, ಅವರ ಆಡಳಿತದಲ್ಲಿ ಭಾರತದಲ್ಲಿ ಆದ ಮಹತ್ವದ ಬೆಳವಣಿಗೆಗಳ ಬಗ್ಗೆ ಪ್ರಕಟಿಸಿದೆ.

ಹಲವು ಸವಾಲುಗಳ ನಡುವೆಯೂ ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಮಹತ್ವದ ಗುರಿಗಳನ್ನು ಭಾರತ ದಾಖಲಿಸಿದೆ. ಹಾಗೆಯೇ ಹಲವು ಮಹತ್ವದ ಗುರಿಗಳನ್ನು ಹಾಕಿಕೊಳ್ಳಲಾಗಿದ್ದು, ಅವುಗಳನ್ನು ಸಾಧಿಸುವ ನಿಟ್ಟಿನಲ್ಲಿಯೂ ಹೆಜ್ಜೆಗಳನ್ನು ಇರಿಸಿದೆ ಎಂದು ಬ್ರಿಟಿಷ್ ಮಾಧ್ಯಮ ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಭಾರತದಲ್ಲಿ ಆಗುತ್ತಿರುವ ಮಹತ್ವದ ಬೆಳವಣಿಗೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದೆ. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವದ ಹಲವು ರಾಷ್ಟ್ರಗಳು ರೆಡ್ ಕಾರ್ಪೆಟ್ ಸ್ವಾಗತವನ್ನು ಬಯಸುತ್ತಿವೆ. ಮುಂದಿನ ಐದು ವರ್ಷಗಳಲ್ಲಿ ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಉಳಿಯಲಿದೆ ಎನ್ನುವ ಐಎಂಎಫ್‌ನ ವರದಿಯನ್ನು ಸಹ ಬ್ರಿಟಿಷ್ ಮಾಧ್ಯಮಗಳು ಉಲ್ಲೇಖಿಸಿವೆ.

ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತವು ವಿಶ್ವದ ಮೂರನೇ ಅತ್ಯಂತ ದೊಡ್ಡ ಆರ್ಥಿಕತೆಯಾಗಿ ಬೆಳೆಯಲಿದೆ. ಹಾಗೆಯೇ ಮುಂದಿನ ಏಳು ವರ್ಷಗಳಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತವು ಅತಿ ದೊಡ್ಡ ದುಡಿಯುವ ಜನಸಂಖ್ಯೆಯಾಗಿ ಮಾರ್ಪಡಲಿದೆ. ಆ ಮೂಲಕವೂ ಭಾರತ‌ ಮಹತ್ತರವಾದ ಸಾಧನೆ ಮಾಡಲಿದೆ. ಬೆಳೆಯುತ್ತಿರುವ ಶಕ್ತಿಗಳ ಜೊತೆಗೆ ಸಂಬಂಧ ಹೊಂದುತ್ತಿರುವ ಭಾರತ, ಆ ಮೂಲಕ ತನ್ನ ಆರ್ಥಿಕ ಪ್ರಗತಿಯನ್ನು ಸಹ ಮಾಡಿಕೊಳ್ಳುತ್ತಿರುವುದು ಸಂತಸದ ವಿಷಯ.

ಈ ಹಿಂದೆ ಪ್ರಪಂಚದ ಹಲವು ರಾಷ್ಟ್ರಗಳ ಎದುರು ಕೈ ಕಟ್ಟಿ ನಿಲ್ಲುವ ಹಾಗಿದ್ದ ಭಾರತ, ನರೇಂದ್ರ ಮೋದಿ ಅವರು ಪ್ರಧಾನಿಗಳಾಗಿ ಭಾರತದ ಆಡಳಿತ ವಹಿಸಿಕೊಂಡ ಬಳಿಕ ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಇಂದು ಪ್ರಪಂಚವೇ ಭಾರತದ ಗೆಳೆತನವನ್ನು ಬಯಸಿ ಬರುತ್ತಿರುವುದು, ವಿದೇಶಿ ಉದ್ಯಮಗಳು ಭಾರತದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿರುವುದು ಭಾರತ ಬದಲಾಗುತ್ತಿದೆ. ಪ್ರಪಂಚದಲ್ಲಿ ಭಾರತದ ವರ್ಚಸ್ಸು ಬದಲಾಗುತ್ತಿದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಈ ಎಲ್ಲಾ ಸಕಾರಾತ್ಮಕ ಬದಲಾವಣೆಗಳ ಹಿಂದಿನ ವ್ಯಕ್ತಿ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

Tags

Related Articles

Close