ದೇಶ

ಎರಡು ದಿನದಲ್ಲಿ ಮೌಂಟ್ ಎವರೆಸ್ಟ್ ಅನ್ನು ನಾಲ್ಕು ಬಾರಿ ಹತ್ತಿ ಇಳಿದು ಬರೋಬ್ಬರಿ 700 ಕೆ.ಜಿ ಕಸ ಹೊತ್ತು ತಂದ BSF ಸೈನಿಕರಿಗೊಂದು ಸಲಾಂ!! ವಿಶ್ವ ಪರಿಸರ ದಿನವನ್ನು ಸಾರ್ಥಕವಾಗಿ ಆಚರಿಸಿದ ಯೋಧರು!!

ಭಾರತದ “ಫರ್ಸ್ಟ್ ಲೈನ್ ಆಫ್ ಡಿಫ಼ೆನ್ಸ್” ಎಂದರೆ BSF. ವರ್ಷಪೂರ್ತಿ ನಿದ್ದೆ-ನೀರು ಬಿಟ್ಟು ಗಡಿ ಕಾಯುವ BSF ಏನಾದರೂ ಇಲ್ಲದೆ ಹೋದರೆ ಬೇಲಿ ಇಲ್ಲದ ತೋಟಕ್ಕೆ ದನ ನುಗ್ಗಿದಂತೆ ಉಗ್ರರು ಭಾರತದೊಳಗೆ ನುಸುಳಿ ಭಾರತವನ್ನು ನಿರ್ನಾಮ ಮಾಡಿ ಬಿಡುವರು. ಜೀವದ ಹಂಗು ತೊರೆದು ಭಾರತವನ್ನು ಕಣ್ ರೆಪ್ಪೆಯಲ್ಲಿಟ್ಟು ಕಾಯುವ ಈ BSFಯೋಧರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಜೀವನದಲ್ಲಿ ಒಂದು ಬಾರಿ ಎವರೆಸ್ಟ್ ಅನ್ನು ಏರುವುದೇ ಕಷ್ಟ, ಅಂತಹದರಲ್ಲಿ ಎರಡು ದಿನದಲ್ಲಿ ಸತತ ನಾಲ್ಕು ಬಾರಿ ಹತ್ತಿ ಇಳಿದ BSF ಯೋಧರು ಹಿಂದೆ ಬರುವಾಗ ಬರಿಗೈಲಿ ಬರಲಿಲ್ಲ ಬದಲಾಗಿ ಬರೋಬ್ಬರಿ 700 ಕೆ.ಜಿ ಕಸ ಹೊತ್ತುಕೊಂಡು ಬಂದಿದ್ದಾರೆ. ನಮ್ಮ ಮನೆಯ ಹೊರಗೆ ಇರುವ ಕಸ ಸ್ವಚ್ಚ ಮಾಡಲು ನಮಗೆ ಬೆನ್ನು ಬಗ್ಗುವುದಿಲ್ಲ, ಹಾಗಿರುವಾಗ ನಮ್ಮ ಯೋಧರು ತಮ್ಮ ಕರ್ತವ್ಯದ ಜೊತೆಗೆ ಎವರೆಸ್ಟ್ ಹತ್ತಿ ಸ್ವಚ್ಚ ಭಾರತ ಅಭಿಯಾನವನ್ನೂ ಮಾಡುತ್ತಿದ್ದಾರೆ!!

ಸಹಾಯಕ ಕಮಾಂಡೆಂಟ್ ಲವರಾಜ್ ಸಿಂಗ್ ಧರ್ಮಶಕ್ತು ನೇತೃತ್ವದ ಬಿಎಸ್ಎಫ್ ತಂಡವು ವಿಶ್ವದ ಅತಿ ಎತ್ತರದ ಶಿಖರವನ್ನು ಏರಿದಷ್ಟಲ್ಲದೆ, 700 ಕೆ.ಜಿ. ಕಸವನ್ನು ತರುವ ಮೂಲಕ ದಾಖಲೆ ನಿರ್ಮಿಸಿದೆ. ಮೇ 20 ಮತ್ತು 21 ರಂದು15 ಸದಸ್ಯರ ತಂಡವು 7 ಶೆರ್ಪಾಗಳ ನೆರವಿನಿಂದ ಎರಡು ದಿನದಲ್ಲಿ ನಾಲ್ಕು ಬಾರಿ ಎವರೆಸ್ಟ್ ಅನ್ನು ಹತ್ತಿ ಇಳಿದು ಕಸವನ್ನು ಸಂಗ್ರಹಿಸಿ ಮತ್ತು ಅದನ್ನು ಮರಳಿ ತಂದಿರುತ್ತಾರೆ. ಎರಡು ಘಟಕಗಳಾಗಿ ವಿಭಜಿಸಲ್ಪಟ್ಟ ತಂಡವು, ದಕ್ಷಿಣದ ಭಾಗದಿಂದ ಶಿಖರವನ್ನು ಏರಿತು ಮತ್ತು ಹಿಂತಿರುಗುವಾಗ ಪ್ರತಿ ತಂಡವು 350 ಕೆ.ಜಿ. ಕಸವನ್ನು ಸಂಗ್ರಹಿಸಿ ಹೊತ್ತು ತಂದಿತು.

ಯೋಧರು ಹೊತ್ತು ತಂದ ಕಸದಲ್ಲಿ ಹರಿದ ಟೆಂಟ್ ಗಳು, ಸಿಲಿಂಡರ್ಗಳು ಮತ್ತು ಆಕ್ಸಿಜನ್ ಸಿಲಿಂಡರ್ ಗಳೂ ಇದ್ದವು. ಇದರಲ್ಲಿ ಕೆಲವು ಸಿಲಿಂಡರ್ 1972 ರಲ್ಲಿ ಉಪಯೋಗಿಸಲ್ಪಟ್ಟವುಗಳಾಗಿದ್ದವು! ಯೋಧರ ಈ ಪ್ರಯತ್ನವು ದಾಖಲೆ ನಿರ್ಮಿಸಿದೆ ಮತ್ತು ಎವರೆಸ್ಟ್ ನಲ್ಲಿ ಪರಿಸರದ ಅವನತಿಯಮೇಲ್ವಿಚಾರಣೆ ನಡೆಸುವ ‘ಸಾಗರ್ ಮಾತಾ’ ಎನ್ನುವ ಸಂಸ್ಥೆಯು ಯೋಧರಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದೆ. ಪ್ರಧಾನ ಮಂತ್ರಿ ಮೋದಿ ಅವರ ಸ್ವಚ್ಚ ಭಾರತ್ ಅಭಿಯಾನದ ಭಾಗವಾಗಿ ಈ ಕಾರ್ಯವನ್ನು ಯೋಧರು ಕೈಗೊಂಡಿದ್ದಾರೆ.

ಯೋಧರ ಈ ಕಾರ್ಯಕ್ಕೆ ಪ್ರಧಾನಮಂತ್ರಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕಮಾಂಡೆಂಟ್ ಲವರಾಜ್ ಅವರು ಸತತ ಏಳನೇ ಬಾರಿ ಎವೆರೆಸ್ಟ್ ಅನ್ನು ಏರಿರುತ್ತಾರೆ ಮಾತ್ರವಲ್ಲ ತಮ್ಮ ತಂಡವೂ ಎವೆರೆಸ್ಟ್ ಅನ್ನು ಏರುವಂತೆ ಅವರನ್ನು ಹುರಿದುಂಬಿಸಿದ್ದಾರೆ. ಇಂತಹ ಮಗನನ್ನು ಹಡೆದ ತಾಯಿಗೆ ನಾನು ವಂದನೆ ಸಲ್ಲಿಸುತ್ತೇನೆ. ಎವರೆಸ್ಟ್ ನ ಕಸವನ್ನು ಸ್ವಚ್ಛಗೊಳಿಸುವ ಬದ್ಧತೆ ಮತ್ತು ಅವರ ಈ ಸಾಧನೆಗಳು ಶ್ಲಾಘನೀಯವಾಗಿದೆ ಎಂದು ರಾಜನಾಥ ಸಿಂಗ್ ಲವರಾಜ್ ಅವರ ಸಾಧನೆಯನ್ನು ಹೊಗಳಿದ್ದಾರೆ.

ಯೋಧರ ದೇಶಪ್ರೇಮ ಮತ್ತು ಸಮಾಜದ ಪ್ರತಿ ಅವರ ಜವಾಬ್ದಾರಿಯುತ ನಡವಳಿಕೆಗಳಿಂದ ಜನ ಸಾಮನ್ಯರಾದ ನಾವು ಕಲಿಯುವುದು ಬಹಳಷ್ಟಿದೆ. ದೇಶವನ್ನು ಕಾಯುವ ಜೊತೆ ಜೊತೆಗೆ ಪರಿಸರ ಕಾಳಜಿಯೂ ಮೆರೆದಿರುವ ನಮ್ಮ BSF ಯೋಧರಿಗೊಂದು ಸಲಾಂ…ಜೈ ಜವಾನ್

-ಶಾರ್ವರಿ

Tags

Related Articles

Close