ದೇಶಪ್ರಚಲಿತ

ಎಲ್ಲಾ ವಿರೋಧಿಗಳ ಮೇಲೆ ಒಂದೇ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಮೋದಿ! ಬಜೆಟ್ ಮಂಡನೆ ಮೂಲಕ ವಿಪಕ್ಷಗಳನ್ನು ಬಾಯಿ ಮುಚ್ಚಿಸಿದ್ದು ಹೇಗೆ ಗೊತ್ತಾ?

ಅಬ್ಬಬ್ಬಾ ಇಡೀ ದೇಶವೇ ಈ ಬಾರಿ ಮೋದಿ ಪರವಾಗಿ ನಿಲ್ಲುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಮೋದಿ ಹೋದಲ್ಲೆಲ್ಲಾ ಒಂದು ರೀತಿಯ ಹವಾ ಇದ್ದೇ ಇರುತ್ತದೆ ಎಂಬುದು ಜಗತ್ತು ಒಪ್ಪಿಕೊಂಡಾಗಿದೆ. ಎಷ್ಟರ ಮಟ್ಟಿಗೆ ಎಂದರೆ ಸಂಸತ್ತಿನಲ್ಲಿ ಬಿಜೆಪಿಯವರು ಎದ್ದು ನಿಂತು ಮಾತನಾಡಿದರೆ ಸಾಕು ಗಲಾಟೆ ಗದ್ದಲ ಮಾಡುವ ಕಾಂಗ್ರೆಸಿಗರು ಕೂಡ ಇಂದು ತೆಪ್ಪಗೆ ಕೂರುವಂತಾಗಿದೆ. ಇಂದು ಮೋದಿ ಸರಕಾರ ಮಂಡಿಸಿದ ಬಜೆಟ್ ಯಾವ ರೀತಿ ಇತ್ತು ಎಂದರೆ ಬಜೆಟ್ ಮಂಡನೆ ಮುಗಿಯುವ ವೇಳೆಗೆ ಎದುರಿನಲ್ಲಿದ್ದ ಕಾಂಗ್ರೆಸಿಗರ ಮುಖ ಹೇಗಾಗಿತ್ತು ಎಂದರೆ, ಇನ್ನೇನು ಬಾಕಿ ಉಳಿದಿಲ್ಲ, ಎಲ್ಲಾ ಮುಗಿದೇ ಹೋಯಿತು ಎನ್ನುವ ರೀತಿಯಲ್ಲಿ ರಾಹುಲ್, ಖರ್ಗೆ ಸೇರಿದಂತೆ ಎಲ್ಲಾ ನಾಯಕರು ತಲೆಗೆ ಕೈಹೊತ್ತು ಕೂತಿದ್ದರು. ಬಜೆಟ್ ಮಂಡನೆ ಮುಗಿದ ತಕ್ಷಣ ಬಿಜೆಪಿಯ ವಿರುದ್ಧ ಮತ್ತು ಮೋದಿ ವಿರುದ್ಧ ಟೀಕೆ ಮಾಡಬಹುದು ಎಂದು ಲೆಕ್ಕಾಚಾರ ಹಾಕಿಕೊಂಡು ಕೂತಿದ್ದ ಕಾಂಗ್ರೆಸ್‌ ಮೇಲೆ ಮೋದಿ ಸರ್ಜಿಕಲ್ ಸ್ಟ್ರೈಕ್ ನಡೆಸಿಯೇ ಬಿಟ್ಟಿದ್ದಾರೆ.!

ಮೋದಿ ಸರಕಾರದ ಈ ಅವಧಿಯ ಕೊನೆಯ ಬಜೆಟ್ ಮಂಡನೆ ಮಾಡಿದ ಪಿಯೂಷ್ ಗೋಯಲ್, ಇಡೀ ದೇಶದ ಜನರನ್ನು ಗಮನದಲ್ಲಿಟ್ಟುಕೊಂಡು ಒಂದೊಂದೇ ಘೋಷಣೆ ಹೊರಡಿಸಿದ್ದಾರೆ. ಮೋದಿ ಸರಕಾರದ ೫ ವರ್ಷದ ಸಾಧನೆಗಳನ್ನು ಜನರ ಮುಂದಿಟ್ಟ ಗೋಯಲ್, ಯಾವ ವಿಪಕ್ಷಗಳ ಮಾತಿಗೂ ಕ್ಯಾರೇ ಅನ್ನದೆ ಬಜೆಟ್ ಮಂಡನೆ ಮಾಡಿದರು. ತೆರಿಗೆ ವಿನಾಯಿತಿ ಬಗ್ಗೆ ಯಾವುದೇ ಘೋಷಣೆ ಮಾಡಿರದ ಮೋದಿ ಸರಕಾರದ ವಿರುದ್ಧ ಸಂಸತ್ತಿನಲ್ಲಿ ಗದ್ದಲ ಸೃಷ್ಟಿಸಿದ ವಿಪಕ್ಷಗಳ ಆಟ ಕೇವಲ ೫ ನಿಮಿಷಕ್ಕೆ ಮಾತ್ರ ಸೀಮಿತವಾಗಿತ್ತು. ಯಾಕೆಂದರೆ ಐತಿಹಾಸಿಕ ನಿರ್ಣಯ ತೆಗೆದುಕೊಂಡ ಮೋದಿ ಸರಕಾರದ ಬಜೆಟ್ ನೋಡುತ್ತಿದ್ದಂತೆ ಕಾಂಗ್ರೆಸ್ ಕಕ್ಕಾಬಿಕ್ಕಿಯಾಗಿದೆ.!

ಇತಿಹಾಸದಲ್ಲೇ ಮೊದಲ ಬಾರಿಗೆ ರಕ್ಷಣಾ ಕ್ಷೇತ್ರಕ್ಕೆ 3 ಲಕ್ಷ ಕೋಟಿ!

ಇಂತಹ ನಿರ್ಧಾರ ತೆಗೆದುಕೊಳ್ಳುವ ತಾಕತ್ತು ಇರೋದು ಮೋದಿಗೆ ಮಾತ್ರ ಎಂಬುದು ನಾವು ಅರಿತುಕೊಳ್ಳಬೇಕಾದ ಸತ್ಯ. ಯಾಕೆಂದರೆ ದೇಶದ ಹಿತದೃಷ್ಟಿಯಿಂದ ಒಂದೊಂದು ನಿರ್ಧಾರ ತೆಗೆದುಕೊಳ್ಳುತ್ತಿರುವ ಮೋದಿ  ಸರಕಾರ ಇಂದು ಐತಿಹಾಸಿಕ ಬಜೆಟ್ ಮಂಡನೆ ಮಾಡುವ ಮೂಲಕ ಎಲ್ಲಾ ವಿರೋಧಿಗಳಿಗೂ ಕಪಾಳಮೋಕ್ಷ ಮಾಡಿದ್ದಾರೆ. ಯಾಕೆಂದರೆ ಇತಿಹಾಸದಲ್ಲೇ ಅತೀ ಹೆಚ್ಚು ಅನುದಾನ ಬಿಡುಗಡೆ ಮಾಡಿದ ಮೋದಿ ಸರಕಾರ, ಬರೋಬ್ಬರಿ 3 ಲಕ್ಷ ಕೋಟಿ ರಕ್ಷಣಾ ಇಲಾಖೆಗೆ ಮೀಸಲಿಟ್ಟಿದೆ. ಇಂದು ನಡೆದ ಬಜೆಟ್ ನಲ್ಲಿ ಈ ಒಂದು ಮಹತ್ತರವಾದ ನಿರ್ಧಾರ ಕೈಗೊಂಡು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ಬಲಿದಾನವನ್ನು ನೆನೆದುಕೊಂಡರು. ಯೋಧರು ನಮ್ಮ ದೇಶದ ಹೆಮ್ಮೆ , ಅಂತಹ ಸೈನಿಕರಿಗೆ ಅವಮಾನ ಮಾಡುವ ಯಾರೇ ಆಗಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ ಪಿಯೂಷ್ ಗೋಯಲ್, ರಕ್ಷಣಾ ಇಲಾಖೆಗೆ ೩ ಲಕ್ಷ ಕೋಟಿ ಮೀಸಲಿಟ್ಟಿದೆ.!

ಅದೇ ರೀತಿ ತೆರಿಗೆ ವಿನಾಯಿತಿ ವಿಚಾರದಲ್ಲೂ ಸ್ವಾತಂತ್ರ್ಯ ನಂತರದಲ್ಲಿ ಐತಿಹಾಸಿಕ ನಿರ್ಧಾರ ಕೈಗೊಂಡ ಮೋದಿ ಸರಕಾರ, ೫ ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇದೊಂದು ಐತಿಹಾಸಿಕ ನಡೆ ಎಂದು ಬಣ್ಣಿಸಿರುವ ಜನರು, ದೇಶದ ಜನರ ನಿರೀಕ್ಷೆಯಂತೆ ಬಜೆಟ್ ಮಂಡನೆ ಮಾಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ‌. ಇತ್ತ ರೈತರಿಗೂ ಭರ್ಜರಿ ಗಿಫ್ಟ್ ನೀಡಿದ ಈ ಬಾರಿಯ ಬಜೆಟ್, ೫ ಎಕರೆಗಿಂತ ಕಡಿಮೆ ಭೂಮಿಯುಳ್ಳ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ೬೦೦೦ ಹಣ ಪಾವತಿ ಮಾಡಲಿದೆ. ಇದು ಸಣ್ಣ ರೈತರಿಗೆ ವರದಾನವಾಗಲಿದ್ದು, ಮಧ್ಯಮ ವರ್ಗದ ಜನರು ಕೂಡ ಒಪ್ಪಿಕೊಳ್ಳುವಂತಹ ಬಜೆಟ್ ಈ ಬಾರಿ ಮಂಡಿಸಲಾಗಿದೆ. ಅದೇ ರೀತಿ ಗೋರಕ್ಷಣೆಯ ವಿಚಾರದಲ್ಲೂ ಮಹತ್ತರವಾದ ನಿರ್ಧಾರ ಕೈಗೊಂಡ ಮೋದಿ, ದೇಶಾದ್ಯಂತ ಕಾಮಧೇನು ಎಂಬ ಹೊಸ ಆಯೋಗ ರಚನೆ ಮಾಡಿ ಗೋಸಂರಕ್ಷಣೆಗೆ ಮುಂದಾಗಿದೆ.!

ವಿಪಕ್ಷಗಳು ಯಾವ ಅಂಶವನ್ನು ಎತ್ತಿ ಹಿಡಿದರೂ ಮೋದಿ ಸರಕಾರವನ್ನು ಮಣಿಸಲು ಸಾಧ್ಯವಾಗದೆ ಕೈಕಟ್ಟಿ ಕುಳಿತಿರುವ ಕಾಂಗ್ರೆಸಿಗರ ನಿರಾಸದಾಯಕ ಮುಖ ಇಂದು ಸಂಸತ್ತಿನಲ್ಲಿ ನೋಡಲು ಸುಂದರವಾಗಿತ್ತು. ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿಯವರು ಏನೇ ಮಾಡಿದರೂ ವಿರೋಧಿಸುವ ವಿಪಕ್ಷಗಳ ಬಾಯಿಗೆ ಇಂದು ಮೋದಿ ನೇರವಾಗಿ ಬೀಗ ಹಾಕಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾಚಣೆ ಕೂಡ ನಡೆಯಲಿದ್ದು, ಕಾಂಗ್ರೆಸ್ ರೂಪಿಸಿದ್ದ ತಂತ್ರ ವ್ಯರ್ಥವಾಗಿದೆ.!

ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
Close