ಪ್ರಚಲಿತ

ಚುನಾವಣೆಯ ಸಮಯದಲ್ಲಿ ಪೂಜೆ ಪುರಸ್ಕಾರ: ಇಲ್ಲದಿದ್ರೆ ಹಿಂದೂಗಳ ಅವಹೇಳನವೇ ವ್ಯಾಪಾರ

ಚುನಾವಣೆಗೂ ಮೊದಲು ದೇವರು, ದೈವಗಳು, ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ಕೊಡುತ್ತಿದ್ದವರು, ಚುನಾವಣೆಯ ಸಮಯದಲ್ಲಿ ಮಾತ್ರ ದೇವರ, ದೈವಗಳ‌ ಮೊರೆ ಹೋಗುವುದು, ಬ್ರಾಹ್ಮಣರನ್ನೇ ಕರೆಸಿ ದೇವತಾ ಕಾರ್ಯಗಳನ್ನು ನಡೆಸುವುದು ಎಲ್ಲಾ ಚುನಾವಣೆಗಳ ಸಂದರ್ಭದಲ್ಲಿಯೂ ಕಂಡು ಬರುವ ನಗ್ನ ಸತ್ಯ.

ಅಲ್ಪಸಂಖ್ಯಾತರ ಮೇಲೆ ಬಿಜೆಪಿ ದೌರ್ಜನ್ಯ ನಡೆಸುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ನಾವು ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಹಾಗೆ ಸಹಾಯ ಮಾಡುತ್ತೇವೆ, ಇಂತಹ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದೆಲ್ಲಾ ಪುಂಕಾನುಪುಂಕವಾಗಿ ಪುಂಗಿ, ಅವರ ಓಟು ಪಡೆಯಲು ಬಣ್ಣದಾಟ ಆಡುವ ಕೆಲ ರಾಜಕೀಯ ಪುಡಾರಿಗಳು, ಚುನಾವಣೆ ಬಂದಾಗ ಮಾತ್ರ ಹಿಂದೂ ಧರ್ಮ, ಹಿಂದೂ ಆಚರಣೆಗಳು, ದೇವರುಗಳ ಮೊರೆ ಹೋಗುವುದು ಹಾಸ್ಯಾಸ್ಪದ ಎನಿಸುತ್ತದೆ.

ಅಂದ ಹಾಗೆ ಮುಸ್ಲಿಂ ‌ರನ್ನು ಓಲೈಸಿ, ಓಟು ಪಡೆಯುವವರಲ್ಲಿ ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಅವರದ್ದೂ ಎತ್ತಿದ ಕೈ. ಅಂತಹ ಕುಮಾರಣ್ಣ ಎಲೆಕ್ಷನ್ ಹಿನ್ನೆಲೆಯಲ್ಲಿ ಬಿಡಿ ಬಳಿಯ ತಮ್ಮ ಫಾರ್ಮ್ ಹೌಸಿನಲ್ಲಿ ಬ್ರಾಹ್ಮಣರಿಂದಲೇ ಪೂಜೆ ಮಾಡಿಸಿದ್ದಾರೆ. ಎಚ್.ಡಿ. ಕೆ. ರಾಜಕೀಯ ಭವಿಷ್ಯ, ಮಾಜಿ ಪ್ರಧಾನಿ ದೇ ವೇ ಗೌಡರ ಆರೋಗ್ಯ ವೃದ್ಧಿಗೆ ದೇವರ ಮೊರೆ ಹೋಗಿದ್ದಾರೆ. ಒಂಬತ್ತು ದಿನಗಳ ಕಾಲ ಕುಮಾರಣ್ಣ ಈ ಪೂಜೆ ನಡೆಸಲಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಸನ್ನಿಹಿತವಾಗಿರುವಾಗಲೇ ಕುಮಾರಣ್ಣ ಮತ್ತು ಕುಟುಂಬದವರಿಗೆ ದೇವರ ನೆನಪಾಗಿದ್ದು, ಹಿಂದೂ ಧರ್ಮದ ಪ್ರಕಾರ ಪೂಜೆ ಮಾಡಿಸಿದ್ದಾರೆ.

ಒಟ್ಟಿನಲ್ಲಿ ಚುನಾವಣೆಗೂ ಮೊದಲು ಹಿಂದೂ ಧರ್ಮವನ್ನೇ ಅವಹೇಳನ ಮಾಡುವವರು, ಚುನಾವಣೆಗಾಗಿ, ಗೆಲುವಿಗಾಗಿ ಹಿಂದೂ ಆಚರಣೆಗಳತ್ತ ಮೊರೆ ಹೋಗಿರುವುದು ಹಾಸ್ಯಾಸ್ಪದವಾದರೂ ಸತ್ಯ. ಕುಮಾರಸ್ವಾಮಿ ಅವರಿಗೆ ಇನ್ನಾದರೂ ಜ್ಞಾನೋದಯವಾಗಲಿ ಎನ್ನುವುದೇ ನಮ್ಮ ಆಶಯ.

Tags

Related Articles

Close