ಪ್ರಚಲಿತ

ಮಿತ್ರ ರಾಷ್ಟ್ರಗಳೆದುರು ಕೆನಡಾ ಮುಖಭಂಗ ಅನುಭವಿಸಿದ್ದೇಕೆ ಗೊತ್ತಾ?

ಭಾರತದ ಜೊತೆಗೆ ಕಾಲು ಕರೆದುಕೊಂಡು ವಿವಾದ ಎಬ್ಬಿಸಲು ಯತ್ನಿಸಿದ ಕೆನಡಾಗೆ ಮುಖಭಂಗವಾಗಿದೆ. ಈ ಸಂಬಂಧ ಭಾರತವನ್ನು ಖಂಡಿಸಲು ಕೆನಡಾ ಯುನೈಟೆಡ್‌ ಸ್ಟೇಟ್‌ ಗೆ ಮನವಿ ಮಾಡಿದ್ದು, ಈ ಮನವಿಯನ್ನು ಅಮೆರಿಕಾ ತಿರಸ್ಕರಿಸುವ ಮೂಲಕ ಕೆನಡಾ‌ಗೆ ಮುಖಭಂಗವಾಗುವಂತೆ ಮಾಡಿದೆ.

ಭಾರತ ವಿರೋಧಿ ಖಲೀಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಎಂಬಾತನನ್ನು ಕೆಲ ಸಮಯದ ಹಿಂದೆ ಕೆನಡಾದಲ್ಲಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯಲ್ಲಿ ಭಾರತದ ಕೈವಾರ ಇದೆ ಎಂದು ಕೆನಡಾ ಆರೋಪಿಸಿತ್ತು. ಈ ಸಂಬಂಧ ಕೆನಡಾದ ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸಲಿವೆ ಎಂದೂ ಕೆನಡಾ ಹೇಳಿತ್ತು. ಆದರೆ ಈ ಆರೋಪವನ್ನು ಭಾರತ ಅಲ್ಲಗಳೆದಿತ್ತು. ಮಾತ್ರವಲ್ಲದೆ ಕೆನಡಾದ ರಾಯಭಾರಿಯನ್ನು ಸಹ ಭಾರತ ಬಿಟ್ಟು ಐದು ದಿನಗಳೊಳಗಾಗಿ ತೆರಳುವುದಕ್ಕೂ ಸೂಚನೆ ನೀಡಿತ್ತು.

ಇನ್ನು ಖಲೀಸ್ತಾನಿ ಉಗ್ರನ ಸಾವಿನಲ್ಲಿ ಭಾರತೀಯ ಏಜೆಂಟರುಗಳ ಪಾತ್ರವನ್ನು ವಿವರಿಸುವ ಕೆನಡಾದ ತನಿಖಾ ಸಂಶೋಧನೆಗಳನ್ನು ತನ್ನ ಮಿತ್ರ ರಾಷ್ಟ್ರಗಳು ಬೆಂಬಲಿಸುವಂತೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಬಯಸಿದ್ದು, ಆದರೆ ಮೈತ್ರಿ ರಾಷ್ಟ್ರದ ನಾಯಕರು ಈ ಮನವಿಯನ್ನು ತಿರಸ್ಕರಿಸುವ‌ ಮೂಲಕ ಕೆನಡಾದ ಉದ್ಧಟತನಕ್ಕೆ ತಕ್ಕ ಶಾಸ್ತಿ ಮಾಡಿವೆ.

ಹರ್ದೀಪ್ ಸಿಂಗ್ ನಿಜ್ಜರ್ ಕೊಲೆಯಲ್ಲಿ ಭಾರತೀಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನುವ ಘನತರ ಆರೋಪವನ್ನು ಕೆನಡಾ ಮಾಡಿತ್ತು. ಈ ಆರೋಪಕ್ಕೂ ಮೊದಲು, ಅಮೆರಿಕಾ ಸೇರಿದಂತೆ‌ ಇನ್ನಿತರ ಮಿತ್ರ ರಾಷ್ಟ್ರಗಳಿಗೆ ಈ ಹತ್ಯೆಯನ್ನು ಸಾರ್ವಜನಿಕವಾಗಿ ಖಂಡಿಸುವಂತೆ ಮಾಡಲು ಕೆನಡಾ ಪ್ರಯತ್ನ ನಡೆಸಿತ್ತು. ಆದರೆ ಕೆನಡಾದ ಈ ಕುತಂತ್ರಕ್ಕೆ ಸೊಪ್ಪು ಹಾಕದ ಅದರ ಮಿತ್ರ ರಾಷ್ಟ್ರಗಳು, ಆ ಮೂಲಕ ಕೆನಡಾದ ನಾಚಿಕೆ ಪಡುವಂತೆ ಮಾಡಿವೆ. ಭಾರತವನ್ನು ಸಾರ್ವಜನಿಕವಾಗಿ ಟೀಕೆ ಮಾಡುವ ವಿಷಯಕ್ಕೆ ಕೈಜೋಡಿಸಲು‌ ಕೆನಡಾದ ಮಿತ್ರ ರಾಷ್ಟ್ರಗಳು ನಿರಾಕರಿಸಿದ್ದು, ಆ ಮೂಲಕ ಟ್ರುಡೋ ಅವಮಾನಕ್ಕೆ ತುತ್ತಾಗುವಂತೆ ಮಾಡಿವೆ.

ಒಟ್ಟಿನಲ್ಲಿ ಭಾರತವನ್ನು ಪ್ರಪಂಚವೇ ಒಪ್ಪಿ, ಗೌರವಿಸಿ ನಡೆಯುವ ಸಮಯದಲ್ಲಿ, ಕೆನಡಾ ಎಡವಟ್ಟು ಮಾಡಿಕೊಳ್ಳುವ ಮೂಲಕ ವಿಶ್ವದ ಇತರ ರಾಷ್ಟ್ರಗಳ ಮುಂದೆ ಸಣ್ಣತನ ಪ್ರದರ್ಶನ ಮಾಡಿದೆ. ಆದರೆ ಭಾರತವನ್ನು ಅಮೆರಿಕಾ ಸೇರಿದಂತೆ ಇಡೀ ವಿಶ್ವವೇ ಒಪ್ಪಿಕೊಂಡಿದ್ದು, ಕೆನಡಾದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿವೆ.

Tags

Related Articles

Close