ಪ್ರಚಲಿತ

ಸಾಲಮನ್ನಾಕ್ಕಾಗಿ ಸರ್ಕಾರವನ್ನೇ ಮಾರಲೆತ್ನಿಸಿದ ಕುಮಾರಸ್ವಾಮಿ!! ಕೈಲಾಗದ ಸಿಎಂ ಮಾಡಿದ ಕೆಲಸವೇನು ಗೊತ್ತಾ?!

ಕುಮಾರ ಸ್ವಾಮಿ ರಾಜ್ಯದ ಮುಖ್ಯಮಂತ್ರಿ ಸ್ಥಾನ ಗದ್ದುಗೆಗೆ ಏರಿದರು ಸಹ ತಾನು ರೈತರಿಗೆ ಕೊಟ್ಟ ಆಶ್ವಾಸನೆಯನ್ನು ಪೂರೈಸಲು ಸಾಧ್ಯವಾಗುವುದೋ ಅಥವಾ ಇಲ್ಲವೋ ಎನ್ನುವ ಮನಸ್ಥಿತಿಯಲ್ಲಿದ್ದಾರೆ!! ಬಿಎಸ್ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುತ್ತೇನೆ ಎಂದಿದ್ದರು ಆದರೆ 104 ಸ್ಥಾನ ಗೆದ್ದರೂ  ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಾಗದೆ ದುರಾದೃಷ್ಟಾವಶಾತ್ ಭಾರತೀಯ ಜನತಾಪಕ್ಷದಿಂದ ಅಧಿಕಾರ ತಪ್ಪಿಹೋಗುವಂತಾಯಿತು!! ಜೆಡಿಎಸ್ ಕಾಂಗ್ರೆಸ್ ಒಟ್ಟಾಗಿ ಕುಮಾರ ಸ್ವಾಮಿ ಅಧಿಕಾರವಹಿಸಿದರೂ ರೈತರ ಸಾಲಮನ್ನಾಕ್ಕೆ ಮಾತ್ರ ಮೀನಾಮೇಶ ಎಣಿಸುತ್ತಿದ್ದಾರೆ!!

ಸಾಲ ಮನ್ನಾ ಎಂಬುವುದು ಸುಲಭದ ವಿಚಾರ ಅಲ್ಲ. ರಾಜ್ಯದ  ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಅಂದ್ರೆ ಹೇಗೆ ಮಾಡೋದು? ನನಗೆ ರಾಜ್ಯದ ಜನತೆ ಅಧಿಕಾರ ಕೊಟ್ಟಿಲ್ಲ. ನನಗೆ ಕಾಂಗ್ರೆಸ್ ಅಧ್ಯಕ್ಷ ಅಧಿಕಾರ ಕೊಟ್ಟಿದ್ದಾರೆ. ಹೀಗಾಗಿ ಅವರನ್ನು ಕೇಳಿ ಸಾಲಮನ್ನಾ ಮಾಡಬೇಕಷ್ಟೆ. ಈ ಬಗ್ಗೆ ಇನ್ನು 15 ದಿನದೊಳಗೆ ನಿರ್ಧಾರ ಕೈಗೊಳ್ಳುತ್ತೇವೆ. ಎಲ್ಲಾ ಸಾಲವನ್ನು ಒಂದೇ ಬಾರಿ ಮನ್ನಾ ಮಾಡಲು ಸಾಧ್ಯವಿಲ್ಲ. ಕಂತುಗಳಂತೆ ಮನ್ನಾ ಮಾಡಬೇಕಾಗಿದೆ. ಎಲ್ಲಾ ರೈತರು ಕೃಷಿಗೇ ಸಾಲ ಪಡೆದಿದ್ದಾರೆ ಎಂದು ಹೇಗೆ ನಂಬಬೇಕು” ಎಂದು ರೈತರ ಮೇಲೆ ಗೂಬೆ ಕೂರಿಸುವುದರೊಂದಿಗೆ ತಾನು ಮತ್ತೆ ಕಾಂಗ್ರೆಸ್‍ನ ಅಡಿಯಾಳು ಎಂಬ ಪದಕ್ಕೆ ಪುಷ್ಟಿ ನೀಡಿದ್ದರು!! ಇದೀಗ ಮತ್ತೆ ಮುಖ್ಯಮಂತ್ರಿ ಕುಮಾರು ಸ್ವಾಮಿ ಸರ್ಕಾರಕ್ಕೆ ಸಂಬಂಧಿಸಿದ ಸ್ವತ್ತುಗಳನ್ನು ಮಾರಾಟ ಮಾಡುವ ಚಿಂತನೆಯಲ್ಲಿದ್ದು ಮತ್ತೊಂದು ಎಡವಟ್ಟಿಗೆ ಕೈಹಾಕಿದಂತಿದೆ!!

Image result for kumaraswamy

 

ಸಾಲಮನ್ನಾಕ್ಕಾಗಿ ಸರ್ಕಾರದ ವಶದಲ್ಲಿರುವ ಸ್ವತ್ತು ಮಾರಾಟ?!!

ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವ ಆಶ್ವಾಸನೆ  ನೀಡಿರುವ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಇದೀಗ ಹಣ ಹೊಂದಿಸಲು ತೀವ್ರ ಕಸರತ್ತು ಆರಂಭಿಸಿದ್ದು ಯಾವುದೇ ತಕರಾರು ಇಲ್ಲದೆ ಸರ್ಕಾರದ ವಶದಲ್ಲಿರುವ ಸ್ವತ್ತನ್ನು ಮಾರಾಟ ಮಾಡುವ ಚಿಂತನೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ!! ರೈತರ ಸಾಲಮನ್ನಾ ಮಾಡಲು 53 ಸಾವಿರ ಕೋಟಿ ರೂಗಳಷ್ಟು ಅಗತ್ಯ ಇದೆ ಆದರೆ ಅಷ್ಟೊಂದು ಹಣ ಸರ್ಕಾರದ ಖಜಾನೆಯಲ್ಲಿ ಇಲ್ಲವಾದ್ದರಿಂದ ಸಾಲ ಮನ್ನಾ ಮಾಡಲು ಹಣ ಹೊಂದಿಸುವುದು ಮಖ್ಯಮಂತ್ರಿಗೆ ತಲೆಬಿಸಿಯಾಗಿದೆ!! ಈ ನಿಟ್ಟಿನಲ್ಲಿ ಯಾವ ಮೂಲಗಳಿಂದ ಹಣ ಸಂಗ್ರಹ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಎಂದು ಮೂಲಗಳು ಹೇಳಿವೆ!!

ಯಾವುದೇ ತಕರಾರು  ಇಲ್ಲದ ಸ್ಥಳೀಯ ಸಂಸ್ಥೆ ಬಿಡಿಎ ಸೇರಿದಂತೆ ಇತರೆ ಸಂಸ್ಥೆಗಳು ಸ್ವಾಧೀನದಲ್ಲಿರುವ ಸರ್ಕಾರಿ ಜಮೀನುಗಳನ್ನು ಮಾರಾಟ ಮಾಡಿ ಹಣ ಸಂಗ್ರಹಿಸುವ ಯೋಚನೆ ಮಾಡಲಾಗಿದ್ದು ಈ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬುವುದರ ಬಗ್ಗೆ ಚಿಂತನೆ ನಡೆಸಲಾಗಿದೆ!! ಅನಗತ್ಯ ದುಂದುವೆಚ್ಚದ ಸೋರಿಕೆಗೆ ಕಡಿವಾಣ ಹಾಕುವ ಮೂಲಕ ಸಂಪನ್ಮೂಲ ಕ್ರೋಢೀಕರಿಸುವ ಉದ್ಧೇಶವನ್ನು ಕುಮಾರಸ್ವಾಮಿ ಹೊಂದಿದ್ದು  ಸರ್ಕಾರದ ಸ್ವತ್ತನ್ನು ಮಾರಾಟ ಮಾಡಿ ಹಣ ಒದಗಿಸುವ ಆಲೋಚನೆಯನ್ನು ಮಾಡಿದ್ದಾರೆ!! ಇದರಿಂದಲೂ ಕೋಟ್ಯಾಂತರ ರೂ. ಸಂಗ್ರಹವಾಗಬಹುದು ಎಂಬ ನಿರೀಕ್ಷೆಯಲ್ಲಿರು ಮುಖ್ಯಮಂತ್ರಿ ಇದೀಗ ಸರ್ಕಾರದ ಸ್ವತ್ತನ್ನೇ ಮಾರಾಟ ಮಾಡುತ್ತಾರೆ ಎಂದರೆ ನಂಬಲು ಸಾಧ್ಯವೇ?! ಈ ಮೊದಲು ಸಿದ್ದರಾಮಯ್ಯ ಸರಕಾರದ ಅವಧಿಯಲ್ಲೂ ಸಾಲಮನ್ನಾದ ಆಶ್ವಾಸನೆ ನೀಡಿ ನಿರಾಶೆ ಮೂಡಿಸಿದ್ದು ನಮಗೆ ತಿಳಿದೇ ಇದೆ!! ಇದೀಗ ಕುಮಾರ ಸ್ವಾಮಿ ಆಳ್ವಿಕೆಯಲ್ಲೂ ಸಾಲಮನ್ನಾ ವಿಚಾರದಲ್ಲಿ ಬಿಗ್ ಡ್ರಾಮಾನೇ ನಡೆಯುವ ಸಾಧ್ಯತೆ ಇದೆ!!

ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದ ಯಡಿಯೂರಪ್ಪ!!

ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ  ಈಗ ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲವನ್ನು ಮತ್ತು ನಗರ ಪ್ರದೇಶದ ರೈತರನ್ನು ಹೊರಗಿಡುವ ಮೂಲಕ ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ!! ನಿನ್ನೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಎಸ್ ಯಡಿಯೂರಪ್ಪನವರು ಈಗಾಗಲೇ ಹಿಂದಿನ ಸರಕಾರ ಸಣ್ಣ ಅತೀಸಣ್ಣ ರೈತರ ಸಹಕಾರಿ ಬ್ಯಾಂಕುಗಳ ಬೆಲೆ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ!! ಅಷ್ಟೇ ಅಲ್ಲ  ಈ ಯೋಜನೆಯಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳ ರೈತರ ಸಾಲಮನ್ನಾ ಬಗ್ಗೆ ಚರ್ಚಿಸಲು ತಜ್ಞರ ಸಮಿತಿ ರಚನೆ ಪ್ರತೀ ಜಿಲ್ಲೆಜಿಲ್ಲೆಯಲ್ಲಿ ನೀಡುವ ಅಧಿಕಾರಿ ನೇಮಕ ಮಾಡುವುದಾಗಿ ಹೇಳುವ ಮೂಲಕ ರಾಜ್ಯದ ಜನ ಮತ್ತು ರೈತರ ದಾರಿ ತಪ್ಪಿಸಲಾಗಿದೆ. ಒಂದು ರೀತಿಯಲ್ಲಿ ಸಮ್ಮಿಶ್ರ ಸರಕಾರ ರಾಜಕೀಯ ದೊಂಬರಾಟ ಮಾಡುತ್ತಿದೆ ಎಂದು ಟೀಕಿಸಿದ್ದಾರೆ!!

Image result for yeddyurappa

ಜೆಡಿಎಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ 53 ಸಾವಿರ ಕೋಟಿ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‍ಗಳ ಸಾಲ ಮನ್ನಾ ಮಾಡುವ ಭರವಸೆ ನೀಡಿ 37 ಸ್ಥನ ಗೆದ್ದಿದೆ!! ಸಾಲಮನ್ನಾ ಮಾಡದ ಕಾರಣ ಕರ್ನಾಟಕ ಬಂದ್ ನಡೆಸಿದ ಫಲವಾಗಿ ಮುಖ್ಯಮಂತ್ರಿಗಳು ರೈತರ ಸಭೆ ಕರೆದು ಕಣ್ಣೊರೆಸುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು!! ತಾವು ಸಭೆಗೆ ಹಾಜರಾಗದ ಬಗ್ಗೆ ಕುಮಾರಸ್ವಾಮಿ ಅವರು ಪ್ರಶ್ನಿಸುವ ನೈತಿಕತೆ ಹೊಂದಿಲ್ಲ ಖಾರವಾಗಿ ಪ್ರತಿಕ್ರಿಯಿಸಿದರು!! 2009ರ ಎಪ್ರಿಲ್ 1 ರಿಂದ 2017 ರ ಡಿಸೆಂಬರ್ 31ರವರೆಗಿನ ಸಣ್ಣ ಅತಿಸಣ್ಣ ರೈತರ  ಸಹಕಾರಿ ಸಂಘದ ಬೆಳೆ ಸಾಲ ಮನ್ನಾ ಮಾಡಲಾಗಿದೆ ಎಂದರೆ ಅದರ ಒಟ್ಟು ಮೊತ್ತ ಎಷ್ಟು? ಸಾಲ ಮಾಡಿರುವ ಮಧ್ಯಮ ವರ್ಗದ ರೈತರ ಗತಿ ಏನು ಎಂದು ಬಿಎಸ್‍ವೈ ಪ್ರಶ್ನಿಸಿದ್ದಾರೆ!!

ಒಟ್ಟಾರೆಯಾಗಿ ಹೇಳುವುದಾದರೆ ಈ ಮೊದಲು ಕೂಡಾ ಕಾಂಗ್ರೆಸ್‍ನ ಐದು ವರ್ಷದ ಆಳ್ವಿಕೆಯಲ್ಲಿ ಕೂಡಾ ನಡೆದದ್ದು ಇಷ್ಟೇ!! ಸಾಲಮನ್ನಾ ಅಂತಾ ಭರವಸೆ ನೀಡಿ ರೈತರಿಗೆ ಕೊಟ್ಟಿದ್ದು ಬರೀ ಆಶ್ವಾಸನೆ ಮಾತ್ರ!! ಚುನಾವಣೆಯ ಸಮಯದಲ್ಲಿ ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಬೊಬ್ಬೆ ಹಾಕಿದವರು ಅದೇ ಗೆದ್ದ ನಂತರ ರೈತರ ಸಾಲಮನ್ನಾ ಮಾಡುವುದಕ್ಕೆ ಮೀನಾಮೇಶಾ ಎಣಿಸುವುದು ಯಾತಕ್ಕಾಗಿ?! ಕೇವಲ ಗೆಲ್ಲುವುದಕ್ಕಾಗಿ ಆಶ್ವಾಸನೆ ಕೊಟ್ಟರೆ ಸಾಲದು…. ಮತ್ತೆ ಮತ್ತೆ ಸಾಲಮನ್ನಾ ಮಾಡುವುದಕ್ಕೆ ಮೀನಾಮೇಶ ಎಣಿಸಿದರೆ ನಿಮ್ಮಂತಹ ಸರಕಾರಕ್ಕೆ ಅದಷ್ಟು ಬೇಗ ಜನರೇ ಪಾಠ ಕಲಿಸುತ್ತಾರೆ ಬಿಡಿ!!

ಕೃಪೆ: ಕನ್ನಡ ಪ್ರಭ

ಪವಿತ್ರ

Tags

Related Articles

Close