ಪ್ರಚಲಿತ

ವಿಶ್ವವಿದ್ಯಾಲಯಗಳಿಗೆ ಚೈತನ್ಯ ತುಂಬಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ: ಪ್ರಲ್ಹಾದ ಜೋಶಿ

ಯಾವುದೇ ಒಂದು ದೇಶದ ಪ್ರಗತಿಯಾಗಬೇಕಾದರೂ ಆ ದೇಶದ ಶಿಕ್ಷಣ ವಲಯದ ಅಭಿವೃದ್ಧಿಯೂ ಮುಖ್ಯವಾಗುತ್ತದೆ. ಭಾರತಕ್ಕೆ ಸಂಬಂಧಿಸಿದ ಹಾಗೆಯೂ ದೇಶದ ಅಭಿವೃದ್ಧಿಯಲ್ಲಿ ಶೈಕ್ಷಣಿಕ ವಲಯ ಸಹ ಪ್ರಮುಖ ಪಾತ್ರ ವಹಿಸುತ್ತದೆ.

ಜನರು ಶಿಕ್ಷಣ ಪಡೆದಷ್ಟು, ಸುಶಿಕ್ಷಿತರಾದಷ್ಟು‌ ಅದರ ಸಂಪೂರ್ಣ ಲಾಭವನ್ನು ದೇಶ ಪಡೆಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ದೇಶದ ಅಭಿವೃದ್ಧಿ ಶೈಕ್ಷಣಿಕ ಸಾಧನೆಯ ಮೂಲಕವೂ ಗಣನೆಗೆ ಬರುತ್ತದೆ. ನಮ್ಮ ದೇಶದಲ್ಲಿಯೂ ‌ಪ್ರಸ್ತುತ‌ ದಿನಗಳಲ್ಲಿ ಜನರು ಶಿಕ್ಷಣದ ಮೌಲ್ಯ ಮನವರಿಕೆ ಮಾಡಿಕೊಳ್ಳುತ್ತಿದ್ದು, ಇದು ಶೈಕ್ಷಣಿಕ ಪ್ರಗತಿಯ ಜೊತೆಗೆ, ದೇಶದ ಅಭಿವೃದ್ಧಿಗೂ ಕಾರಣವಾಗುತ್ತದೆ ಎವ್ವುವುದರಲ್ಲಿ ಎರಡು ಮಾಡಿಲ್ಲ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಹ ಶೈಕ್ಷಣಿಕ‌ ವಲಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಶಿಕ್ಷಣ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಾಕಷ್ಟು ಬೊಂಬಲ‌ ನೀಡುತ್ತಲೇ ಬಂದಿದೆ. ದೇಶದ ಎಲ್ಲಾ ವರ್ಗದ ಜನರಿಗೂ ಶಿಕ್ಷಣ ಸುಲಭ ಸಾಧ್ಯವಾಗಿಸುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳಿಗೆ ಜೀವ ತಂದಿದೆ ಎನ್ನಬಹುದು. ಉನ್ನತ ಶಿಕ್ಷಣ ಸಾಮಾನ್ಯ ಜನರಿಗೂ ಕೈಗೆಟುಕುವ ಹಾಗೆ ಮಾಡುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಗಳನ್ನಿರಿಸಿದೆ.

ಪ್ರಸ್ತುತ ದೇಶದ ವಿವಿಧ ವಿಶ್ವವಿದ್ಯಾನಿಲಯ ಗಳಿಗೆ ಅಭಿವೃದ್ಧಿಗಾಗಿ ಸುಮಾರು 3600 ಕೋಟಿ ರೂ. ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮಾಹಿತಿ ನೀಡಿದ್ದಾರೆ.

ಕರ್ನಾಟಕ, ಜಮ್ಮು ಕಾಶ್ಮೀರಗಳನ್ನೊಳಗೊಂಡನಂತೆ ದೇಶದ ಅನೇಕ ವಿವಿಗಳಿಗೆ‌ ಸಂಬಂಧಪಟ್ಟ ಹಾಗೆ ಈ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದ ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಗೆ 100 ಕೋಟಿ ರೂ., ಗುಲ್ಬರ್ಗಾ ಮತ್ತು ಧಾರವಾಡ ವಿವಿಗಳಿಗೆ ತಲಾ 20 ಕೋಟಿ ರೂ. ಗಳ ಅನುದಾನ ದೊರೆಯಲಿದೆ.

ಸಾಕ್ಷರತೆಯಿಂದಲಷ್ಟೇ ಒಂದು ದೇಶದ ಅಭಿವೃದ್ಧಿ ಸಾಧ್ಯ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ಕಾರಣಕ್ಕೆ ಪ್ರಧಾನಿ ಮೋದಿ ಸರ್ಕಾರ ಈ ಅನುದಾನ ಬಿಡುಗಡೆ ಮಾಡಿದೆ. ವಿಶ್ವವಿದ್ಯಾಲಯಗಳಿಗೆ ಹೊಸ ಚೈತನ್ಯ ತುಂಬಲು ಕೇಂದ್ರ ಸರ್ಕಾರ ಈ ಅನುದಾನ ಬಿಡುಗಡೆ ಮಾಡಿದೆ ಎಂದು ಅವರು ಹೇಳಿದ್ದಾರೆ.

Tags

Related Articles

Close