ಪ್ರಚಲಿತ

ದೇಶದಲ್ಲಿ ಭಯೋತ್ಪಾದನೆಯ ಪ್ರಮಾಣ ಇಳಿಕೆ: ಪ್ರಲ್ಹಾದ ಜೋಶಿ

ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದ ಆಡಳಿತ ವಹಿಸಿಕೊಂಡ ಬಳಿಕ ದೇಶದ ವಿರುದ್ಧ ಕೆಲಸಗಳನ್ನು ಮಾಡುವವರು ಬಾಲ್‌ ಮುದುರಿ ಕೂರುವಂತಾಗಿದೆ. ಭಖೋತ್ಪಾದಕರ ವಿರುದ್ಧ ಸಹ ಪ್ರಧಾನಿ ಮೋದಿ ಸರ್ಕಾರ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡಿದ್ದು, ಇದು ಭಯೋತ್ಪಾದಕರಲ್ಲಿ ಕೊಂಚ ಭಯದ ವಾತಾವರಣ ನಿರ್ಮಾಣ ಮಾಡಿದೆ ಎಂದರೆ ಅತಿಶಯವಲ್ಲ.

ಪ್ರಧಾನಿ ಮೋದಿ ಅವರ ಸರ್ಕಾರದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡಿದ್ದು, ಪ್ರಧಾನಿ ಮೋದಿ ಸರ್ಕಾರ ದೇಶದಲ್ಲಿ ಆಡಳಿತ ವಹಿಸಿಕೊಂಡಾಗಿನಿಂದ 75%ಗಳಷ್ಟು ಭಯೋತ್ಪಾದನೆ ಕಡಿಮೆಯಾಗಿದೆ. ಜೀರೋ ಭಯೋತ್ಪಾದನೆಯ ಸಂಕಲ್ಪವನ್ನು ಪ್ರಧಾನಿ ಮೋದಿ ಸರ್ಕಾರ ಇರಿಸಿಕೊಂಡಿದೆ ಎಂದು ಹೇಳಿದ್ದಾರೆ.

2014ರ ಮೊದಲು ದೇಶದ ಹಲವು ಕಡೆಗಳಲ್ಲಿ ಭಯೋತ್ಪಾದಕರ ಬಾಂಬ್ ಸ್ಪೋಟ ನಡೆಯುತ್ತಿತ್ತು. ಆದರೆ ಅಂತಹ ಪರಿಸ್ಥಿತಿ ಈಗಿಲ್ಲ. ಈಗ ದೇಶ ಹೆಚ್ಚು ಸುರಕ್ಷಿತವಾಗಿದ್ದು, ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ಅವರು ನುಡಿದಿದ್ದಾರೆ. ಸಮೃದ್ಧಿಯ ಕಡೆಗೆ ದೇಶ ಪ್ರಯಾಣಿಸುತ್ತಿದೆ ಎಂದು ಅವರು ನುಡಿದಿದ್ದಾರೆ.

ಇದೇ ಸಂದರ್ಭದಲ್ಲಿ ಬಿಜೆಪಿ ದೇಶವನ್ನು ಒಡೆದಿದೆ ಎನ್ನುವ ವೀರಪ್ಪ ಮೊಯ್ಲಿ ಅವರ ಆರೋಪಕ್ಕೂ ತಿರುಗೇಟು ನೀಡಿದ ಜೋಶಿ, ಅವರಿಗೆ ಇತಿಹಾಸದ ಅರಿವಿಲ್ಲ. ಜೊತೆಗೆ ಸೋಲಿನ ಹತಾಶೆಯಲ್ಲಿಯೂ ಅವರು ಇಂತಹ ಹೇಳಿಕೆ ನೀಡಿರಬಹುದು ಎಂದು ಅವರು ವ್ಯಂಗ್ಯವಾಡಿದ್ದಾರೆ. ಮೊಯ್ಲಿ ಅವರು ನಾಲ್ಕು ರಾಜ್ಯಗಳಲ್ಲಿ ಪರಾಜಯಗೊಂಡಿದ್ದಾರೆ. ಅವರ ಹೇಳಿಕೆ ಅಪ್ರಬುದ್ಧವಾದದ್ದು ‌ಎಂದು ಅವರು ತಿಳಿಸಿದ್ದಾರೆ. ಪುಸ್ತಕ ಬರೆಯುವ ಮೊಯ್ಲಿ ಅವರು ಮತ್ತಷ್ಟು ಓದಿಕೊಂಡಲ್ಲಿ ಉತ್ತಮ. ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ‌ನವರೇ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಿಜೆಪಿ ಇರಲಿಲ್ಲ ಎಂದು ಆ ಪಕ್ಷದವರೇ ಹೇಳುತ್ತಾರೆ. ಆದರೆ ದೇಶ‌ ಒಡೆದದ್ದು ಬಿಜೆಪಿ ಎನ್ನುತ್ತಾರೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹಿಂದೂ ಮಹಾಸಭಾ ಇರಲಿಲ್ಲ.ಈಗ ಈ ಮಹಾಸಭಾ ದೇಶವನ್ನು ಒಡೆದದ್ದೆಂದು ಹೇಳುತ್ತಾರೆ. ನಿಜಾರ್ಥದಲ್ಲಿ ಪ್ರತ್ಯೇಕ ರಾಷ್ಟ್ರ ಮಾಡುವುದಾದರೆ ಈ ದೇಶದಿಂದ ಆ ದೇಶಕ್ಕೆ ಮತ್ತು ಆ ದೇಶದಿಂದ ಈ ದೇಶಕ್ಕೆ ಜನ ಬರಬೇಕು ಬಂದಿದ್ದು ಹೊತ್ತಿಗೆ ಎಂಬುದನ್ನು ಹೇಳಿದ್ದು ಹಿಂದೂ ಮಹಾಸಭಾ. ಆದರೆ ವಿಭಜನೆಯ ವಿಚಾರವನ್ನು ಮಹಾಸಭಾ ಮಾತನಾಡಿಲ್ಲ. ಮೊಯ್ಲಿ ಅವರ ಚಿಂತನೆ ಸರಿಯಲ್ಲ.

ಹಾಗೆಯೇ ಕತಾರ್‌ನ ರಾಮ ಮಂದಿರದ ಬಗೆಗೂ ಮಾತನಾಡಿರುವ ಅವರು, ಇದು ಭಾರತ ಮತ್ತು ಕತಾರ್ ನಡುವಿನ ಸಂಬಂಧದ ಪ್ರತೀಕ. ಇದು ಭಾರತ ಮತ್ತು ಇಲ್ಲಿನ ಸಂಸ್ಕೃತಿಯ ಮಹತ್ವವನ್ನು ಜಗತ್ತಿಗೆ ಸಾರುತ್ತಿದೆ. ಭಾರತದ ಪ್ರಧಾನಿ ನಮೋ ಅವರ ಮಾತಿಗೆ ಒಪ್ಪಿ ಅಲ್ಲಿನ ರಾಜ ಮಂದಿರ ನಿರ್ಮಾಣಕ್ಕೆ ಅವಕಾಶ ಮತ್ತು ಜಾಗವನ್ನು ನೀಡಿದ್ದಾರೆ. ಆ ಮೂಲಕ ಶ್ರೀರಾಮನ ಆರಾಧನೆಗೆ ಅಲ್ಲಿಯೂ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Tags

Related Articles

Close