ಪ್ರಚಲಿತರಾಜ್ಯ

ಪ್ರಧಾನಿ ಮೋದಿಯನ್ನು ಅನುಮಾನಿಸುವ ಹಿಂದಿರುವ ನಿಮ್ಮ ಅಂಜೆಂಡಾವೇನು?! ಮೋದಿ ವಿರೋಧೀಗಳೇ ನಿಮಗಿದೋ ಪತ್ರ!!

ರಾಜಕೀಯ ಸ್ಥಿತಿಗತಿಗಳ ಬಗ್ಗೆ ಕೇವಲ ರಾಜಕೀಯ ವಿಶ್ಲೇಷಕರಿಂದ ಮಾತ್ರ ಉತ್ತಮವಾದ ಮಾಹಿತಿ ಸಿಗಲು ಸಾಧ್ಯ ಎಂದು ತಿಳಿದುಕೊಂಡಿದ್ದರೆ ಅದು ನಮ್ಮ ಮೂರ್ಖತನ!! ಯಾಕೆಂದರೆ ಸಾಫ್ಟ್ ವೇರ್ ಉದ್ಯೋಗಿಯೊಬ್ಬರು ದೇಶದಲ್ಲಿರುವ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಬರೆದಿರುವ ಬಹಿರಂಗ ಪತ್ರವು ನಮ್ಮಲ್ಲೆರ ಮುಖಕ್ಕೆ ಹೊಡೆಯುವಂತೆ ಮಾಡಿದೆ. ರಾಷ್ಟ್ರದ ಸನ್ನಿವೇಶವನ್ನು ಬದಲಿಸುವ ಅವಕಾಶಗಳು ಬಂದಾಗ ಇಡೀ ದೇಶವೇ ಪ್ರಮುಖ ತಪ್ಪನ್ನು ಮಾಡುತ್ತಿದೆ ಎನ್ನುವುದನ್ನು ಎತ್ತಿ ತೋರಿಸಿ ನಮ್ಮ ಕಣ್ಣು ತೆರೆಯುವಂತೆ ಮಾಡಿದ್ದಾರೆ.

“ಬದುಕಿದರೆ ಅದು ಭಾರತಕ್ಕಾಗಿ, ಸತ್ತರೆ ಅದು ಕೂಡಾ ಭಾರತಕ್ಕಾಗಿ. ಸತ್ತ ನಂತರವೂ ಗಂಗೆಯಲ್ಲಿ ತೇಲುತ್ತಿರುವ ನನ್ನ ಅಸ್ಥಿಗಳಿಗೆ ಯಾರಾದರು ಕಿವಿಗೊಟ್ಟು ಕೇಳಿದರೆ ಅಗಲೂ ಒಂದೇ ಶಬ್ದ ಕೇಳುವುದು ಅದು ಭಾರತ್ ಮಾತಾ ಕೀ ಜೈ” ಎಂದು ಹೇಳಿ. ದೇಶ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಆ ಸಂತನಂತಿರುವ ನಾಯಕನನ್ನು ಸೋಲಿಸಿ ದೇಶಕ್ಕೆ ಮೋಸ ಮಾಡಿದ್ದು ನೆನಪಿದೆಯಾ? ಓ ಭಾರತೀಯರೇ ಅಂದು ನಾವು ಮೋಸ ಮಾಡಿ ಬಿಟ್ಟೆವು ಎಂದು ನಿಮಗೆ ಅನಿಸಲೇ ಇಲ್ಲವೇ? ದೇಶವನ್ನು ಸದೃಢವಾಗಿಸಲು ಬಂದ ನಾಯಕನನ್ನು ಸೋಲಿಸಿ ನಾವು ಮೋಸ ಮಾಡಿದ್ದೇವಲ್ಲ ಅದು ನೆನಪಿದೆಯಾ?

ಎಂದು ಬರೆಯುವ ಮೂಲಕ ತನ್ನ ಬಹಿರಂಗ ಪತ್ರದಲ್ಲಿ ಈ ರೀತಿಯಾದ ಪೀಠಿಕೆಯನ್ನು ಹಾಕಿದ್ದಾರೆ ಆ ಸಾಫ್ಟ್ ವೇರ್ ಉದ್ಯೋಗಿ: ಮುಂದೆ,

ರಾಜಕಾರಣಿಗಳು ಜನರಿಗೆ ಮೋಸ ಮಾಡುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಈ ದೇಶದ ಜನರೇ ದೇಶಕ್ಕೆ ಮೋಸ ಮಾಡಿದ್ದಾರೆ ಎಂದರೆ ಆ ಮೋಸವಾದರೂ ಏನು ಗೊತ್ತಾ? ಆ ವ್ಯಕ್ತಿ ದೇಶದ ಸಂತನಂತಿದ್ದರು, ಆ ವ್ಯಕ್ತಿಗೆ ಭಾರತವನ್ನು ಕಟ್ಟುವ ಕನಸು ಬಿಟ್ಟು ಬೇರೇನೂ ಇರಲಿಲ್ಲ. ಆಸ್ತಿ ಮಾಡುವ ಹಂಬಲವೂ ಇರಲಿಲ್ಲ. ಯಾಕೆಂದರೆ ಅವರಿಗೆ ಹೆಂಡತಿ, ಮಕ್ಕಳು ಇರಲಿಲ್ಲ. ಭಾರತದ ಅತ್ಯಂತ ಪ್ರಾಮಾಣಿಕ, ಸಜ್ಜನ, ಕವಿ ಹೃದಯಿಯಾಗಿರುವ ಮಾಜಿ ಪ್ರಧಾನಿ “ಅಟಲ್ ಬಿಹಾರಿ ವಾಜಪೇಯಿ”ಯವರನ್ನು ನಾವೆಲ್ಲ ಸೇರಿ ಸೋಲಿಸಿ ದೇಶಕ್ಕೆ ಮೋಸ ಮಾಡಿದ್ದೇವಲ್ಲ ಅದು ನೆನಪಿದೆಯಾ?

ಈ ಹಿಂದೆ ಯಾವ ಪ್ರಧಾನಿಯೂ ಹೊಂದಿರದ ಪ್ರಬಲ ನಾಯಕತ್ವವನ್ನು ಹೊಂದಿದ್ದ ಭಾರತದ ಏಕೈಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನದಿಗಳ ಜೋಡಣೆಯ ಕನಸನ್ನು ಹೊತ್ತಿದ್ದಂತಹ ಮಹಾನ್ ನಾಯಕ. ಭಾರತದಲ್ಲಿ ಟೆಲಿಕಾಂ ಉದ್ಯಮದ ಬೆಳವಣಿಗೆಗೆ ಕಾರಣಕರ್ತರಾದರಲ್ಲದೇ, ಇವರ ಆಳ್ವಿಕೆಯಲ್ಲಿ ಭಾರತದ ಜಿಡಿಪಿಯು ಸ್ಥಿರವಾದ ಏರಿಕೆಯನ್ನೂ ಕಂಡಿತ್ತು!! ವಿಶ್ವದ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ನನ್ನ ದೇಶವೂ ಇರಬೇಕೆಂದು ಕನಸು ಕಂಡು ಫೆÇೀಕ್ರಾನಿನಲ್ಲಿ ಅಣ್ವಸ್ತ್ರದ ಯಶಸ್ವಿ ಉಡಾವಣೆ ನಡೆಸಿ ಭಾರತವನ್ನು ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿದ್ದ ಅಟಲ್ ಬಿಹಾರಿ ವಾಜಪೇಯಿಯವರನ್ನು ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಿ ದೇಶಕ್ಕೆ ಮೋಸ ಮಾಡಿದ್ದೇವೆ.

ನಾವೆಲ್ಲ ಅವರ ಮಹತ್ವಾಕಾಂಕ್ಷೆಯ ಗುರಿಯನ್ನು ತಲುಪಲು ಬೀಡಲೇ ಇಲ್ಲ. ತದನಂತರ ರಾಜವಂಶದ ಆಳ್ವಿಕೆಯು ಮತ್ತೆ ಅಧಿಕಾರಕ್ಕೆ ಬಂದತಲ್ಲದೇ ದೇಶವನ್ನು ಸ್ವಲ್ಪ ಸ್ವಲ್ಪವಾಗಿಯೇ ಆಕ್ರಮಣ ಮಾಡಿಕೊಂಡಿತು. ಆದರೆ ತದನಂತರ ಏನಾಯಿತು ಎಂದರೆ ದೇಶಕ್ಕೆ ಶಿಕ್ಷೆಯಾಯಿತೇ ಹೊರತು ವಾಜಪೇಯಿಯವರಿಗಲ್ಲ – ಹಾಗಾಗಿ ಅವರ ವೈಯಕ್ತಿಕ ಜೀವನವನ್ನು ಹೊರತುಪಡಿಸಿ ಈಗಲೂ ಅವರು ಶಾಂತಿಯುತವಾದ ಜೀವನವನ್ನು ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಪ್ರಾಮಾಣಿಕವಾಗಿ ಅಧಿಕಾರವನ್ನು ನಿರ್ವಹಿಸಿದ ಇವರ ನಂತರ ಈಡೀ ದೇಶವೇ 10ವರ್ಷಗಳ ಕಾಲ ಶಿಕ್ಷೆಯನ್ನು ಅನುಭವಿಸಿದೆ.

ಆದರೆ ಇದೀಗ ವಾಜಪೇಯಿಯವರಂತಹ ಪ್ರಾಮಾಣಿಕ ವ್ಯಕ್ತಿ, ದೇಶಭಕ್ತರಾಗಿರುವ ಪ್ರಧಾನಿಯವರು ನಮಗೆ ಸಿಕ್ಕಿದ್ದಾರೆ. ಇವರಿಗೂ ಮೋಸ ಮಾಡಿ ದೇಶಕ್ಕೆ ಮೋಸ ಮಾಡುವ ಪ್ಲ್ಯಾನ್ ಏನಾದರೂ ಇದೆಯಾ? ಈಗಾಗಲೇ ಅಟಲ್ ಬಿಹಾರಿ ವಾಜಪೇಯಿವರನ್ನು ಸೋಲಿಸಿ ದೇಶಕ್ಕೆ ಮೋಸ ಮಾಡಿದ್ದೇವೆ. ಈಗಲಾದರೂ ನಾವು ಎಚ್ಚೆತ್ತುಕೊಂಡು ದೇಶಕ್ಕೆ ಮೋಸ ಮಾಡುವುದನ್ನು ನಿಲ್ಲಿಸಬೇಕು. ಅವರ ಪ್ರಯತ್ನಕ್ಕೆ ನಾವು ಕೈ ಜೋಡಿಸಬೇಕಾದದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.

ಒಂದು ವೇಳೆ ಮೋದಿಯವರನ್ನು ಸೋಲಿಸಿದರೆ ದೇಶಕ್ಕೆ ಮೋಸ ಮಾಡಿದಂತಾಗುತ್ತದೆಯೇ ಹೊರತು ಮೋದಿಯವರಿಗೆ ಇದರಿಂದ ಯಾವುದೇ ನಷ್ಟವಿಲ್ಲ, ಲಾಭವೂ ಇಲ್ಲ. ಒಂದು ವೇಳೆ ಮೋದಿಯವರನ್ನು ಸೋಲಿಸಿದರೆ “ದೇಶವನ್ನ ಉಳಿಸೋಕೆ ನಾನು ನನ್ನ ಕೈಲಾದ ಪ್ರಯತ್ನ ಪಟ್ಟೆ ಆದರೆ ದೇಶದ ಜನತೆ ನನಗೆ ಬೆಂಬಲಿಸಲಿಲ್ಲ” ಅಂತ ಮೋದಿಜೀ ಕೊರಗುತ್ತ ತಮ್ಮ ಜೀವನ ಕಳೆದುಬಿಡ್ತಾರೆ. ಆದರೆ ಅದು ನಾವು ದೇಶಕ್ಕೆ ಮಾಡುವ ಮೋಸ ಎನ್ನುವುದನ್ನು ಮರೆಯಬೇಡಿ.

ಅಟಲ್ ಜೀ ಯವರಂತೆಯೇ ಮೋದಿಯವರಿಗೂ ಯಾವುದೇ ರೀತಿಯ ಆಸ್ತಿ ಅಂತಸ್ತಾಗಲಿ ಇಲ್ಲ!! ಮೋದಿಯವರು ಸಂತರಂತಿದ್ದು, ಅವರು ಯಾವತ್ತೂ ಅಧಿಕಾರವನ್ನು ದುರು ಪಯೋಗ ಪಡಿಸಿಕೊಂಡವರಲ್ಲ. ಇನ್ನು, ಮೋದಿಯವರ ತಾಯಿ ಆಟೋದಲ್ಲಿ ಓಡಾಡುತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ.

ಬ್ಯಾಂಕಿಗೆ ಹೋದರೆ ಸಾಲಿನಲ್ಲಿ ನಿಂತು ಜನಸಾಮಾನ್ಯರಂತೆ ಇರುತ್ತಾರೆ. ಇದರರ್ಥ ಮೋದಿಯವರು ಯಾವತ್ತೂ ತಮ್ಮ ಅಧಿಕಾರವನ್ನು ದುರೂಪಯೋಗ ಪಡಿಸಿಕೊಂಡಿಲ್ಲ. ಇನ್ನು ದೇಶದ ಪ್ರಧಾನಿಯ ಹಿರಿಯ ಅಣ್ಣ ಒಂದು ಚಿಕ್ಕ ಕಾರ್ಖಾನೆಯಲ್ಲಿ ಕೆಲಸ ಮಾಡಿ, ಈಗ ನಿವೃತ್ತಿ ಪಡೆದು ಅದರಿಂದ ಬಂದ ಪೆನ್ಶನ್ ಹಣದಿಂದ ಜೀವನ ಸಾಗಿಸುತ್ತಿದ್ದಾರೆ. ಪ್ರಧಾನಿ ಮೋದಿಯವರ ಮತ್ತೊಬ್ಬ ಅಣ್ಣ ಒಂದು ಪುಟ್ಟ ಅಂಗಡಿ ನಡೆಸಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.

ಪ್ರಧಾನಿ ಮೋದಿಯವರ ತಮ್ಮ ಸಾಮಾನ್ಯ ಗುಮಾಸ್ತರಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇನ್ನು, ಮೋದಿಯವರ ಸಹೋದರಿ ಒಂದು ಬಡಕುಟುಂಬದ ಸೊಸೆ ಅಷ್ಟೇ ಅಲ್ಲದೇ, ಒಂದು ಸಾಮಾನ್ಯ ಹುದ್ದೆಯಲ್ಲಿರುವಾತನ ಪತ್ನಿಯೂ ಹೌದು…. ಮೋದಿಯವರ ಚಿಕ್ಕಪ್ಪನ ಮಗ ಒಂದು ಸಣ್ಣ ಅಂಗಡಿ ಇಟ್ಟುಕೊಂಡು ಅದರಿಂದ ತಮ್ಮ ಜೀವನವನ್ನು ನಡೆಸುತ್ತಿದ್ದರೆ ಮೋದಿಯವರ ಚಿಕ್ಕಪ್ಪನ ಮಗಳು ಬಸ್ ನಿರ್ವಾಹಕನ ಪತ್ನಿ. ಆದರೆ ಇವರಿಗ್ಯಾರಿಗೂ ತಿಂಗಳಿಗೆ 10-15 ಸಾವಿರಕ್ಕಿಂತ ಹೆಚ್ಚು ವರಮಾನವಿಲ್ಲ. ಇವರೆಲ್ಲಾ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ.

ಇವರ್ಯಾರು ಯಾವತ್ತೂ ಮೋದಿಯವರಿಂದ ಸಹಾಯ ಕೇಳಿಲ್ಲ. ಮೋದಿಯವರಂತೆಯೇ ಇವರೆಲ್ಲ ದೇಶಪ್ರೇಮಿಗಳು, ಸ್ವಾಭಿಮಾನಿಗಳು. ಯಾವತ್ತೂ ಮೋದಿಯವರ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳಬೇಕೆಂದು ಇವರು ಯೋಚನೆ ಮಾಡಿದವರಲ್ಲ. ಇನ್ನೊಂದು ವಿಷಯ ಮೋದಿಯವರ ಕುಟುಂಬದವರು ಯಾರೂ ಕೂಡಾ ಇಂದಿನವರೆಗೂ ದೆಹಲಿಯಲ್ಲಿರುವ ಪ್ರಧಾನಮಂತ್ರಿ ನಿವಾಸದೊಳಗೆ ಹೆಜ್ಜೆಯೂ ಇಟ್ಟಿಲ್ಲ.

ಸುಮಾರು 14 ವರ್ಷಗಳ ಕಾಲ ಗುಜರಾತ್ ನ್ನು ಮೋದಿಯವರು ಆಳಿದ್ದರು. ಮನಸ್ಸು ಮಾಡಿದ್ದರೆ ಬೇಕಾದಷ್ಟು ಹಣ ಮಾಡಿಕೊಳ್ಳಬಹುದಾಗಿತ್ತು. ತಮ್ಮ ಕುಟುಂಬದವರಿಗೆ ಬೇಕಾದ ಹುದ್ದೆಯ ಕೆಲಸ ಕೊಡಿಸಬಹುದಿತ್ತು. ಆದರೆ ಮೋದಿಯವರು ಯಾವತ್ತೂ ಅಧಿಕಾರದ ದುರುಪಯೋಗ ಮಾಡಲಿಲ್ಲವಲ್ಲದೇ ಕುಟುಂಬದವರಿಗೂ ಸಹ ಅದಕ್ಕೆ ಅವಕಾಶವನ್ನೂ ಕೊಟ್ಟಿಲ್ಲ.

ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಒಂದು ದಿನ ರಜೆ ಇಲ್ಲದೇ ದುಡಿಯುತ್ತಿದ್ದಾರೆ. ತಾಯಿ ಮತ್ತೆ ತಮ್ಮ ಬಂಧು-ಬಳಗವನ್ನು ಬಂಗಲೆಯಲ್ಲಿ ಕೂರಿಸಿಲ್ಲ. ವರ್ಷಕ್ಕೊಮ್ಮೆ ತಾಯಿಯ ಆಶಿರ್ವಾದಕ್ಕಾಗಿ ಮುಖ ಮಾಡ್ತಾರೆ ಅಷ್ಟೇ, ಆ ತಾಯಿ ಅನಾಥ ಆಶ್ರಮದಲ್ಲಿಲ್ಲ. ತನ್ನದೇ ಮಕ್ಕಳ ಜೊತೆ ಸಂತಸದಲ್ಲಿದ್ದಾಳೆ.

ತನ್ನ ಮಗ ದೇಶದ ಪ್ರಧಾನಿ ಅನ್ನುವ ಸಂತಸಕ್ಕಿಂತ ಮತ್ತೇನು ಬೇಕು ಆ ತಾಯಿಗೆ.? ಇದರಿಂದ ಹೆಚ್ಚು ಒಬ್ಬ ಮಗ ತಾಯಿಗೇ ಏನು ಕೊಡಲು ಸಾಧ್ಯ? ಆಕೆ ಕೊಟ್ಟ ಹತ್ತು ರೂಪಾಯಿಯೇ ಮೋದಿಗೆ ಶಕ್ತಿ. ಮೋದಿಯ ಪತ್ನಿಗೇ ತನ್ನ ಪತಿ ತೊರೆದ ಬಗ್ಗೆ ದುಃಖವಿಲ್ಲ. ಆಕೆ ಸತ್ತಿದ್ದಾಳೆ ಅಂತ ಮೋದಿ ಸುಳ್ಳು ಹೇಳಲಿಲ್ಲ. ಪತ್ನಿ ಇದ್ದಾಳೆ ಅನ್ನುವುದನ್ನ ಚುನಾವಣೆ ಸಂದರ್ಭ ತಿಳಿಸಿಯೇ ಮುಂದುವರಿದಿದ್ದು. ಮೋದಿ ಪತ್ನಿಯೇ ಮೋದಿ ಕುರಿತು ಹಾಡಿ ಹೊಗಳುತ್ತಾರೆ, ಮತ್ತೆ ಇತರರಿಗೆ ಏನು ಅಲ್ಲವೇ.? ಮೋದಿ ಹೆಣ್ಣು ಹುಚ್ಚನಲ್ಲ, ಭ್ರಷ್ಟನಲ್ಲ.

ಮೋದಿಜೀಯ ಪ್ರಾಮಾಣಿಕತೆಯನ್ನು ಪ್ರಶ್ನಿಸುವವರೇ,

* ಸೋನಿಯಾ ತನ್ನಳಿಯನಿಗೆ ತಿನ್ನೋಕೆ ನೀಡಿದ್ದ ಸಾವಿರಾರು ಕೋಟಿಯಂತೆ ಮೋದಿ ತಮ್ಮ ಸಂಬಂಧಿಕರಿಗೆ ನೀಡಿದ್ದಾರಾ?

* ತಮ್ಮ ಸಂಬಂಧಿಕರು, ಸಂಬಂಧಿಕರ ಯಾಕೆ ಸ್ವತಃ ತನ್ನ ತಾಯಿಯನ್ನ ಸೋನಿಯಾಳಂತೆ ಅಮೇರಿಕಾದಲ್ಲಿ ಚಿಕಿತ್ಸೆ ಕೊಡಿಸಿದ್ದಾರಾ?

* ಸ್ವಿಸ್ ಬ್ಯಾಂಕ್ ನಲ್ಲಿ ಭ್ರಷ್ಟ ರಾಜಕಾರಣಿಗಳಂತೆ ಅಕೌಂಟ್ ಓಪನ್ ಮಾಡಿಸಿದ್ದಾರಾ?

* ದಿಗ್ವಿಜಯ್ ಸಿಂಗ್, ಅಹಮದ್ ಪಟೇಲ್, ಗುಲಾಂ ನಬಿಯಂತಹ ದೇಶದ್ರೋಹಿಗಳನ್ನ ತಮ್ಮ ಸುತ್ತ ಇಟ್ಟುಕೊಂಡಿದ್ದಾರಾ? ಅದೂ ಇಲ್ಲ

* ಇಲ್ಲಿವರೆಗೂ ಒಂದು ರೂಪಾಯಿಯ ಹಗರಣ ಮೋದಿ ಸರ್ಕಾರದಲ್ಲಿ ಕೇಳಿ ಬಂದಿಲ್ಲ.

ಸರಳ, ಸಜ್ಜನ, ಪ್ರಾಮಾಣಿಕ ದೇಶಭಕ್ತ ಲಾಲ್ ಬಹದ್ದೂರ್ ಶಾಸ್ತ್ರೀಯವರ ನಂತರ, ಕವಿ ಹೃದಯಿ, ದೇಶಭಕ್ತ ಅಟಲ್ ಬಿಹಾರಿ ವಾಜಪೇಯಿರನ್ನ ಹೊರತು ಪಡಿಸಿ ಈ ದೇಶ ಅಷ್ಟೊಂದು ಪ್ರಾಮಾಣಿಕ ನಾಯಕನನ್ನು ನೋಡಿದೆಯಾ? ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ನಂತರ ನಮಗೊಬ್ಬ ಪ್ರಾಮಾಣಿಕ ದೇಶಭಕ್ತ ನಾಯಕ ಸಿಕ್ಕಿದ್ದಾರೆ ಎಂದರೆ ಅದು ನರೇಂದ್ರ ಮೋದಿ. ರಾಜಕಾರಣಿಗಳೆಂದರೆ ಭ್ರಷ್ಠರು ಎನ್ನುವ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಮೋದಿಯವರನ್ನು ನೋಡಿದ ಮೇಲೆ ರಾಜಕೀಯದಲ್ಲಿ ಈ ತರಹದ ವ್ಯಕ್ತಿಯೂ ಇರ್ತಾರಾ ಅಂತ ಅನಿಸಿದೆ.

ಒಂದಂತು ನೆನಪಿನಲ್ಲಿಟ್ಟುಕೊಳ್ಳಿ. ಮೋದಿಯವರಿಗೆ ಇದರಿಂದ ಯಾವುದೇ ಉಪಯೋಗವಿಲ್ಲ. ಅವರು ದೇಶಭಕ್ತರಾಗಿರೋದರಿಂದ ಅವರ ನರನಾಡಿಗಳು ದೇಶಪ್ರೇಮದಿಂದ ಕೂಡಿವೆ. ಅವರಲ್ಲಿ ದೇಶವನ್ನು ಕಟ್ಟುವ ಉದ್ದೇಶ ಬಿಟ್ಟು ಬೇರೇನೂ ಇಲ್ಲ. ಓ?!! ಭಾರತೀಯರೇ ಈಗಲೂ ದೇಶಕ್ಕೆ ಮೋಸ ಮಾಡುವ ಉದ್ದೇಶವಿದ್ದರೆ ಮೋದಿಯಂತಹ ಪ್ರಾಮಾಣಿಕ ದೇಶಭಕ್ತನನ್ನು ಸೋಲಿಸಿ, ದೇಶಕ್ಕೆ ಮೋಸ ಮಾಡಿ.

– ಪ್ರಿಯಾ (ಪ್ರತಿಷ್ಠಿತ ಸಾಫ್ಟವೇರ್ ಕಂಪೆನಿ ಉದ್ಯೋಗಿ)

ಕನ್ನಡಕ್ಕೆ ಅನುವಾದ – ಅಲೋಖಾ

Tags

Related Articles

Close