ಇತಿಹಾಸ

ಔರಂಗಜೇಬನೆಂಬ ಮತಾಂಧನು ಛತ್ರಪತಿಯ ಮಗ ಸಂಭಾಜಿಯ ನಾಲಗೆ ಸೀಳಿ ಕಣ್ಣು ಕಿತ್ತರೂ ಆತ ಇಸ್ಲಾಮನ್ನು ಒಪ್ಪಿಕೊಳ್ಳಲಿಲ್ಲ!! ಆ ಹಿಂದೂ ಮರಿ ಸಿಂಹದ ಜಯಂತಿಯಂದು ಹೃತ್ಪೂರ್ವಕ ನಮನ…

ಸಿಂಹದ ಹೊಟ್ಟೆಯಲ್ಲಿ ಮರಿ ಸಿಂಹವೆ ಹುಟ್ಟುತ್ತದೆ ಹೊರತು ನರಿ ಹುಟ್ಟುವುದಿಲ್ಲ. ಭಾರತಕ್ಕೊಬ್ಬರೆ ಛತ್ರಪತಿ, ಅವರೆ ಶಿವಾಜಿ. ಧರ್ಮ ರಕ್ಷಣೆಗಾಗಿ ಪ್ರಾಣ ಪಣಕ್ಕಿಟ್ಟು ಹೋರಾಡಿದ ಹಿಂದೂ ಸಿಂಹದ ಮಗನೂ ತಂದೆಯಂತೆಯೆ ಧರ್ಮ ಭೀರು. ಛತ್ರಪತಿ ಸಂಭಾಜಿ ಮಹಾರಾಜ ಶಿವಾಜಿಯ ಮೊದಲ ಪುತ್ರ. 14 ಮೇ 1657 ರಂದು ಪುರಂದರ ಕೋಟೆಯಲ್ಲಿ ಜನನ. ಬಾಲ್ಯದಿಂದಲೂ ಅಸೀಮ ಪರಾಕ್ರಮಿ, ಮುಗಲ ದ್ವೇಶಿ, ಕೆಚ್ಚೆದೆಯ ವೀರ ತಂದೆಯ ಆಜ್ಞೆಯನ್ನೂ ಲೆಕ್ಕಿಸುತ್ತಿರಲಿಲ್ಲ. ಚಿಕ್ಕಂದಿನಲ್ಲೆ ತಾಯಿಯನ್ನು ಕಳೆದುಕೊಂಡು ಅಜ್ಜಿ ಆರೈಕೆಯಲ್ಲಿ ಹಠಮಾರಿಯಾಗಿ ಬೆಳೆದ ಈತನನ್ನು ಹದ್ದು ಬಸ್ತಿನಲ್ಲಿಡಲು ತಂದೆ ಶಿವಾಜಿ, ಮಗ ಸಂಭಾಜಿಯನ್ನು ಪನ್ಹಾಲಾ ಕೋಟೆಯಲ್ಲಿ ಗೃಹ ಬಂಧನದಲ್ಲಿರಿಸುತ್ತಾರೆ. ಆದರೆ ಸಿಂಹಕ್ಕೆ ಬಂಧನದ ಹಂಗಿದೆಯೆ? ಸಂಭಾಜಿಯು ಬಂಧನದಿಂದ ತಪ್ಪಿಸಿಕೊಳ್ಳುತ್ತಾರೆ.

ಸಂಭಾಜಿಯ ಪರಾಕ್ರಮ ಎಂಥದ್ದೆಂದರೆ ಮುಗಲ ಸಾಮ್ರಾಜ್ಯದ ದೊರೆ ಔರಂಗಜೇಬನಿಗೆ ಆತ ತಲೆನೋವಾಗಿದ್ದ. ಆತನನ್ನು ಕೊಲ್ಲುವ ಕೊನೆ ಘಳಿಗೆಯಲ್ಲಿ “ನನ್ನ ನಾಲ್ಕು ಮಕ್ಕಳಲ್ಲಿ ಒಬ್ಬೇ ಒಬ್ಬ ಮಗ ನಿನ್ನಂಥ ಪರಾಕ್ರಮಿಯಾಗಿದ್ದಿದ್ದರೆ ಇಡಿಯ ಹಿಂದೂಸ್ತಾನವೆ ಇವತ್ತು ಮುಗಲ ಸಾಮ್ರಾಜ್ಯದಡಿ ಇರುತ್ತಿತ್ತು” ಎಂದು ಔರಂಗಜೇಬ ಬಾಯಿ ತುಂಬಾ ಕೊಂಡಾಡಿದ್ದನೆಂದರೆ ಪರಾಕ್ರಮದ ಪರಿ ಹೇಗಿತ್ತು ನೀವೆ ಯೋಚಿಸಿ. ಅಂದ ಹಾಗೆ ಔರಂಗಜೇಬ, ಸಂಭಾಜಿಯನ್ನು ಕೊಲ್ಲುವಾಗ ಆತನ ವಯಸ್ಸೆಷ್ಟು ಗೊತ್ತೆ? ಕೇವಲ 32 ವರ್ಷಗಳು!!

32 ವರ್ಷಗಳ ಅಲ್ಪಾಯುವಿನಲ್ಲಿ ಮುಗಲ ಮತಾಂಧರನ್ನು ಯಮನಂತೆ ಕಾಡಿದ್ದನು ಸಂಭಾಜಿ. ತನ್ನ ತಂದೆ ಶಿವಾಜಿಯ ಮರಣಾನಂತರ ಸಾಮ್ರಾಜ್ಯದ ರಕ್ಷಣೆಯ ಭಾರವನ್ನು ತನ್ನ ಬಲಿಷ್ಟ ಹೆಗಲ ಮೇಲೆ ಹೊತ್ತುಕೊಳ್ಳುತ್ತಾನೆ ಸಂಭಾಜಿ. ಗದ್ದುಗೆ ಏರಿದ ಮರುಕ್ಷಣದಿಂದಲೆ ಮುಗಲರಿಗೆ ಬಹಿರಂಗ ಸವಾಲೊಡ್ದುತ್ತಾ, ಅವರ ಸಾಮ್ರಾಜ್ಯವನ್ನು ಧ್ವಂಸಗೊಳಿಸಲು ಶುರುವಿಟ್ಟುಕೊಳ್ಳುತ್ತಾನೆ. ಮುಗಲರ ಬರಹಾನ್ ಪುರ ಎಂಬ ನಗರದ ಮೇಲೆ ದಾಳಿ ಮಾಡಿ ಇಡಿಯ ನಗರವನ್ನೆ ಸುಟ್ಟು ಬೂದಿಯಾಗಿಸುತ್ತನೆ. ತನ್ನ ಈ ಮುಗಲ ದ್ವೇಶದಿಂದಾಗಿ ಮುಗಲ ದೊರೆ ಔರಂಗಜೇಬ ಇವನನ್ನು ನಖಶಿಖಾಂತ ದ್ವೇಶಿಸತೊಡಗುತ್ತಾನೆ.

1687 ರಲ್ಲಿ ಮರಾಠಾ ಸೈನ್ಯ ಮತ್ತು ಮುಗಲ ಸೈನ್ಯದ ಮಧ್ಯೆ ಭಯಂಕರ ಯುದ್ದ ನಡೆಯುತ್ತದೆ. ಈ ಯುದ್ದದಲ್ಲಿ ಸಂಭಾಜಿಯ ವಿಶ್ವಾಸ ಪಾತ್ರ ಹಂಬೀರರಾವ್ ಮೋಹಿತೆ ಹುತಾತ್ಮರಾದರೂ ಮರಾಠ ಸೈನ್ಯ ವಿಜಯಿಯಾಗುತ್ತದೆ. ಆದರೆ ಉಂಡ ಮನೆಗೆ ಕನ್ನವಿಕ್ಕುವ ಜನರ ದ್ರೋಹದಿಂದಾಗಿ ಸಂಭಾಜಿ ಮತ್ತು ಕವಿಕಲಶನನ್ನು ಮೋಸದಿಂದ ಬಂಧಿಸಲಾಗುತ್ತದೆ. ಸಂಭಾಜಿಯ ಸಂಬಂಧಿಗಳಾದ ಶಿರ್ಕೆ ಪರಿವಾರದವರು ಈ ಕುತಂತ್ರದಲ್ಲಿ ಭಾಗಿಯಾಗಿದ್ದರೆಂದು ಹೇಳಲಾಗುತ್ತದೆ.

ಬಂಧನದ ಬಳಿಕ ಸಂಭಾಜಿಯ ಮೇಲೆ ಔರಂಗಜೇಬ ನಡೆಸಿದ ಅತ್ಯಾಚಾರಗಳನ್ನು ಕೇಳಿದರೆ ನಿಮ್ಮ ಹೃದಯ ಕುದಿದು ಹೋಗುವುದು

ಸಂಭಾಜಿ ಮತ್ತು ಕವಿ ಕಲಶರನ್ನು ಬಂಧಿಸಿ ಬಹಾದುರ್ ಗಢಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಸಂಭಾಜಿಗೆ ತನ್ನೆಲ್ಲಾ ಕೋಟೆಗಳನ್ನು ಔರಂಗಜೇಬನಿಗೆ ಸಮರ್ಪಿಸಬೇಕು ಮತ್ತು ಇಸ್ಲಾಂಗೆ ಮತಾಂತರ ಹೊಂದಬೇಕೆಂದು ಪ್ರಸ್ತಾವನೆ ಇಡಲಾಯಿತು. ಆದರೆ ಸಂಭಾಜಿ ಇದಕ್ಕೊಪ್ಪಲಿಲ್ಲ. ಮುಂದೆ ನಡೆದದ್ದು ಅಮಾನುಷ ವ್ಯವಹಾರ.

  • ಮೊದಲು ಸಂಭಾಜಿ ಮತ್ತು ಕವಿಕಲಶರಿಗೆ ಜೋಕರ್ ನಂತೆ ವಸ್ತ್ರ ತೊಡಿಸಿ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿಸಲಾಯಿತು.
  • ಆತನ ಮೇಲೆ ಕಲ್ಲು ಎಸೆಯುವಂತೆ ಜನರಿಗೆ ಆಜ್ಞೆ ಕೊಡಲಾಯಿತು. ಭರ್ಜಿ, ಈಟಿಗಳಿಂದ ಚುಚ್ಚಿಸಲಾಯಿತು.
  • ಮೈ ಮೇಲೆ ಬಾಸುಂಡೆ ಬರುವಂತೆ ಬಾರಿಸಲಾಯಿತು.
  • ಇಂತಹ ಯಮ ಯಾತನೆಗೂ ಒಪ್ಪದಿದ್ದಾಗ ಅವರ ನಾಲಗೆಯನ್ನೆ ಸೀಳಲಾಯಿತು.
  • ಆಗಲೂ ಹಿಂದೂ ಸಿಂಹ ಬೆದರಲಿಲ್ಲ ಆಗ ಆತನ ಕಣ್ಣುಗಳನ್ನೆ ಕೀಳಲಾಯಿತು.
  • ಯಾವುದಕ್ಕೂ ಜಗ್ಗದಿದ್ದಾಗ ಕೊನೆಗೆ 11 ಮಾರ್ಚ್ 1689ರಂದು ಸಂಭಾಜಿ ಮತ್ತು ಕವಿಕಲಶರನ್ನು ಕೊಂದು ದೇಹಗಳನ್ನು  ಕತ್ತರಿಸಿ ನದಿಗೆ ಎಸೆಯಲಾಯಿತು. ತದನಂತರ ಜನರು ದೇಹದ ಭಾಗಗಳನ್ನು ಒಟ್ಟುಗೂಡಿಸಿ ಹೊಲಿದು ಅಂತ್ಯ ಸಂಸ್ಕಾರ ನಡೆಸಿದರೆಂದು ಹೇಳಲಾಗುತ್ತದೆ.

ಎಂಥಹ ಯಮ ಯಾತನೆ ಕೊಟ್ಟ ಔರಂಗಜೇಬ 32 ರ ಹರೆಯದ ಸಂಭಾಜಿಗೆ. ಆದರೂ ಸಂಭಾಜಿ ಧರ್ಮ ಭ್ರಷ್ಟನಾಗಲಿಲ್ಲ. ಯೂರೋಪಿಯನ್ ಇತಿಹಾಸಕಾರ ಡೆನಿಸ್ ಕೇನಿಕೇಡ್ ಸಂಭಾಜಿಯ ಬಗ್ಗೆ ಬರೆಯುತ್ತಾ, ಔರಂಗಜೇಬನು ಪದೆ ಪದೇ ಇಸ್ಲಾಂಗೆ ಮತಾಂತರಗೊಳ್ಳುವಂತೆ ಆಜ್ಞೆ ಇತ್ತರೂ ಸಂಭಾಜಿ ಮತಾಂತರಗೊಳ್ಳಲು ಒಪ್ಪಲಿಲ್ಲ. ಆತನಿಗೆ ಯಮಯಾತನೆ ನೀಡಿ ಆತನ ನಾಲಗೆ ಸೀಳಿದಾಗ ಸಂಭಾಜಿ ಬರೆಯುವ ಸಾಮಾಗ್ರಿ ಕೇಳುತ್ತಾನೆ. ಅದರಲ್ಲಿ “ಬಾದಶಹ ತನ್ನ ಮಗಳನ್ನೇ ಕೊಟ್ಟರೂ ನಾನು ಮತಾಂತರ ಹೊಂದುವುದಿಲ್ಲ” ಎಂದು ಬರೆದಿದ್ದನು ಎಂದು ದಾಖಲಿಸಿದ್ದಾನೆ.

ಎಂಥಾ ಶೌರ್ಯ!! ಎಂಥಾ ಪರಾಕ್ರಮ!! ಎಂಥಾ ಧರ್ಮ ಪ್ರೇಮ!! ಭಾರತದ ಮಣ್ಣಿನಲ್ಲಿ ಎಂಥೆತಹ ಮಹಾನಾಯಕರು ಜನ್ಮ ತಳೆದಿದ್ದಾರೆ! ಇವರೆಲ್ಲ ಮನಸ್ಸು ಮಾಡಿದ್ದರೆ ಮುಗಲರ ಅಣತಿಯಂತೆ ಮತಾಂತರ ಮಾಡಿಕೊಂಡು ಸುಖ ಭಾಗ್ಯ ಭೋಗಿಸಿಕೊಂಡು ಹಲವಾರು ವರ್ಷಗಳ ಕಾಲ ಬದುಕಬಹುದಾಗಿತ್ತು. ಆದರೆ ಸನಾತನ ಧರ್ಮವೆ ನಮ್ಮ ತಾಯಿ, ಆಕೆಯನ್ನು ಬಿಟ್ಟುಕೊಡುವುದಿಲ್ಲ ಎನ್ನುವ ಅಚಲ ನಿರ್ಣಯದಿಂದಾಗಿ ಬರ್ಬರ ಮೃತ್ಯುವನ್ನೆದುರಿಸಬೇಕಾಯಿತು. ಧರ್ಮ ರಕ್ಷಣೆಗಾಗಿ ಪ್ರಾಣ ತೆತ್ತ ಛತ್ರಪತಿ ಸಂಭಾಜಿ ಮಹಾರಾಜರ ಚರಣಗಳಿಗೆ ವಂದನೆ… ನಿಮ್ಮ ಬಲಿದಾನ ಸದಾ ನಮಗೆ ಪ್ರೇರಣೆ…. ಇಂಥಹ ಮರಿ ಸಿಂಹವನ್ನು ಹೆತ್ತ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಸಾಯಿ ಭೋಸಲೆ ದಂಪತಿಗಳಿಗೂ ನಮನ….

ಜೈ ಶಿವಾಜಿ…..ಜೈ ಭವಾನಿ…..

-ಶಾರ್ವರಿ

Tags

Related Articles

Close