ಪ್ರಚಲಿತ

ಇಸ್ಲಾಂ ಅನ್ನು ಚೀನೀಕರಣ ಮಾಡಿದ ಡ್ರಾಗನ್!! ಎಲ್ಲಾ ಮಸೀದಿಗಳಲ್ಲಿ ಚೀನಾ ರಾಷ್ಟ್ರ ಧ್ವಜ ಹಾರಿಸಲು ಮತ್ತು ಸಾಂಪ್ರದಾಯಿಕ ಚೀನೀ ಸಂಸ್ಕೃತಿಯನ್ನು ಕಲಿಸಲು ತಾಕೀತು!!

ಭಾರತದ ಗಳಸ್ಯ- ಕಂಠಸ್ಯ ಕಮೂನಿಷ್ಟ್ ಮತ್ತು ಮುಸಲ್ಮಾನ ಗೆಳೆಯರಿಗೆ ಅಪಥ್ಯವಾಗುವಂತಹ ವಿಚಾರವಿದು. ಕಮೂನಿಷ್ಟ್ ಡ್ರಾಗನ್ ಚೀನಾ ತನ್ನ, ದೇಶದಲ್ಲಿ ಇಸ್ಲಾಮಿನ ಹಾತೆಗಳನ್ನು ಇಡಿಯಾಗಿ ನುಂಗುವ ಕೆಲಸ ಮಾಡುತ್ತಿದೆ ಎಂದರೆ ಸೆಕ್ಯೂಲರ್ ಬ್ರಿಗೇಡುಗಳಿಗೆ ಗಂಟಲಿನಲ್ಲಿ ಎಲುಬು ಸಿಕ್ಕಿ ಹಾಕಿಕೊಂಡ ಅನುಭವವಾಗುತ್ತದೆ. ಉಗಿಯುವಂತಿಲ್ಲ ನುಂಗುವಂತಿಲ್ಲ ಪಾಪ!! ಗ್ಲೋಬಲ್ ಟೈಮ್ಸ್ ವರದಿ ಮಾಡಿರುವ ಪ್ರಕಾರ “ಇಸ್ಲಾಮನ್ನು ಚೀನೀಕರಣ” ಮಾಡುವ ಕೆಲಸದ ಅಂಗವಾಗಿ ಚೀನಾದಲ್ಲಿರುವ ಮಸೀದಿಗಳ ಮೇಲೆ ಚೀನೀ ರಾಷ್ಟ್ರ ಧ್ವಜವನ್ನು ಹಾರಿಸಬೇಕು, ಸಮಾಜವಾದಿ ಮೌಲ್ಯಗಳ ತಿರುಳನ್ನು ಕಲಿಸಬೇಕು ಮತ್ತು ಸಾಂಪ್ರದಾಯಿಕ ಚೀನೀ ಸಂಸ್ಕೃತಿಯನ್ನು ಬೋಧಿಸಬೇಕೆಂದು ಇಸ್ಲಾಮಿಕ್ ಸಂಘಟನೆ ತನ್ನ ದೇಶದ ಮುಸ್ಲಿಮರಿಗೆ ತಾಕೀತು ಮಾಡಿದೆ. ಇಸ್ಲಾಮನ್ನು ಚೀನೀಕರಣ ಮಾಡುವುದೆಂದರೆ ಇಸ್ಲಾಮನ್ನು ಕಮೂನಿಷ್ಟೀಕರಣ ಮಾಡುವುದು ಎಂತಲೂ ಹೇಳಬಹುದು.

ಚೀನಾ ಇಸ್ಲಾಮಿಕ್ ಅಸೋಸಿಯೇಷನ್ ​​ತನ್ನ ವೆಬ್ಸೈಟ್ನಲ್ಲಿ “ಎಲ್ಲಾ ಮಸೀದಿಗಳು ರಾಷ್ಟ್ರ ಧ್ವಜಗಳನ್ನು ಹಾರಿಸಬೇಕು ಮತ್ತು ‘ರಾಷ್ಟ್ರದ ಪರಿಕಲ್ಪನೆಯನ್ನು’ ಬಲಪಡಿಸಲು ಮತ್ತು ‘ದೇಶಭಕ್ತಿಯ ಊರ್ಜೆಯನ್ನು’ ಮುಂದುವರಿಸಲು ಸಮಾಜವಾದಿ ಮೌಲ್ಯಗಳ ತಿರುಳನ್ನು ಅಳವಡಿಸಿಕೊಳ್ಳಬೇಕು” ಎಂದು ಬರೆದುಕೊಂಡಿದೆ. ಗಮನಾರ್ಹ ವಿಚಾರವೆಂದರೆ ಈ ಸಂಘಟನೆಯು ದೇಶದ ಅಗ್ರ ಇಸ್ಲಾಮಿಕ್ ನಿಯಂತ್ರಕ ಸಂಸ್ಥೆಯಾಗಿದೆ. ಈಗಾಗಲೆ ದೇಶದಲ್ಲಿ ಮಸೀದಿಗಳು ನಿರ್ದೇಶನಗಳನ್ನು ಜಾರಿಗೆ ತಂದು ಶಾಸ್ತ್ರೀಯ ಚೀನೀ ಇತಿಹಾಸ ಮತ್ತು ಭೌಗೋಳಿಕತೆಯ ತರಗತಿಗಳನ್ನು ಕಲಿಸಲು ಪ್ರಾರಂಭಿಸಿವೆ!! ಇದು ಇಸ್ಲಾಂ ಅನ್ನು ಒಂದು ಸಮಾಜವಾದಿ ಸಮಾಜಕ್ಕೆ ಸಮರ್ಪಿಸುತ್ತದೆ ಮತ್ತು ಇದರಿಂದ ‘ಧಾರ್ಮಿಕ ಅಭಿವೃದ್ಧಿಯ ಪ್ರಗತಿ’ ಯಾಗುತ್ತದೆ ಎಂದು ಚೀನೀ ತಜ್ಞರು ಈ ನಿರ್ಧಾರವನ್ನು ಪ್ರಶಂಸಿಸಿದ್ದಾರೆ.

ಭಾರತ ಮಾತ್ರ ಕಟ್ಟರ್ ಇಸ್ಲಾಮಿನ ಭಯೋತ್ಪಾದನೆ ಗುರಿಯಾಗಿಲ್ಲ ಬದಲಾಗಿ ಚೀನಾ ಕೂಡಾ ತನ್ನ ನೆಲದಲ್ಲಿ ಭಯೋತ್ಪಾದಕತೆಯನ್ನೆದುರಿಸುತ್ತಿದೆ. ಚೀನಾ ತನ್ನ ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಉಗ್ರಗಾಮಿತ್ವವನ್ನು ಎದುರಿಸುತ್ತಲಿದೆ ಮತ್ತು ಉಗ್ರಗಾಮಿಗಳನ್ನು ನಿಯಂತ್ರಿಸಲು ಕ್ರೂರ ಆಚರಣೆಗಳನ್ನು ಅಳವಡಿಸಿಕೊಳ್ಳುತ್ತಿದೆ. ಮಸೀದಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದು ರಾಷ್ಟ್ರೀಯತೆಯನ್ನು ಪ್ರತಿನಿಧಿಸುತ್ತದೆ ಹೊರತು ರಾಜಕೀಯ ಪ್ರೇರಿತವಾಗಿಲ್ಲ ಮತ್ತು ಧ್ವಜವನ್ನು ಹಾರಿಸುವುದು ಧರ್ಮದ ಸ್ವಾತಂತ್ರ್ಯವನ್ನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಚೀನೀ ಅಧಿಕಾರಿಗಳು ಹೇಳಿಕೆ ನೀಡಿದ್ದರೂ ಇದು ಇಸ್ಲಾಮಿನ ಹೆಸರಲ್ಲಿ ಪ್ರತ್ಯೇಕತಾವಾದವನ್ನು ಭುಸುಗುಟ್ಟುತ್ತಿರುವ ಉಗ್ರರ ಹೆಡೆಯನ್ನು ಕಾಲಡಿ ಹೊಸಕಿ ಹಾಕುವ ಪ್ರಯತ್ನವೆಂದು ಯಾರು ಬೇಕಾದರೂ ಹೇಳಬಲ್ಲರು. ತನ್ನ ದೇಶದ ಅಸ್ಮಿತೆಯ ವಿಚಾರ ಬಂದಾಗ ಚೀನಾ ಇಸ್ಲಾಂ ಏಕೆ, ಸೌದಿ ರಾಜನನ್ನೂ ಎದುರು ಹಾಕಿಕೊಳ್ಳಬಲ್ಲದು. ಚೀನಾ ಯಾವ ಮಕ್ಕಾ-ಮದೀನಾಕ್ಕೂ ಕ್ಯಾರೆ ಎನ್ನುವುದಿಲ್ಲ. ಅದಕ್ಕೆ ತನ್ನ ವೋಟ್ ಬ್ಯಾಂಕ್ ರಾಜನೀತಿ ಹಾಳಾಗುವುದೆಂಬ ಅಂಜಿಕೆ ಇಲ್ಲ, ಅಲ್ಲಿ ದೇಶದ ರಕ್ಷಣೆಯೆ ಮುಖ್ಯ. ಉಗ್ರರನ್ನು ಪಾಪದ ಅಮಾಯಕರು ಎಂದು ಕರೆದು ಅವರ ಮುಂದೆ ಮಂಡಿಯೂರಿ ಕುಳಿತುಕೊಂಡಿರಲು ಅದು ಭಾರತದ ಕಾಂಗ್ರೆಸ್-ಕಮೂನಿಷ್ಟರಂತೆ ದೇಶದ್ರೋಹಿಯಲ್ಲ.

ಭಾರತದಲ್ಲಿ ಉಗ್ರಗಾಮಿಗಳನ್ನೂ ಪಾಪದವರೆಂದು ಬಿಂಬಿಸಿ, ಭಯೋತ್ಪಾದನೆಗೆ ಧರ್ಮವಿಲ್ಲ ಎಂದು ಲೊಟ್ಟೆ ಬಿಡುತ್ತಾ ಮುಸಲ್ಮಾನರ ಓಲೈಕೆ ಮಾಡುವ ಕಮ್ಯೂನಿಷ್ಟ್ ಜಾತ್ಯಾತೀತ ಬ್ರಿಗೇಡ್, ತಮ್ಮ ಚಿಗುವೆರ-ಲೆನಿನ್-ಮಾರ್ಕ್ಸ್-ಸ್ಟಾಲಿನ್ ನಾಡಿನಲ್ಲಿ ಇಸ್ಲಾಂ ಮತ್ತು ಮಸಲ್ಮಾನರನ್ನು ಯಾವ ರೀತಿ ಇಟ್ಟಿದ್ದಾರೆ ಎನ್ನುವುದನ್ನು ಕಣ್ಣು ಬಿಟ್ಟು ನೋಡುವುದು ಒಳಿತು. ಉಗ್ರಗಾಮಿಗಳಿಗೂ ಮಾನವಾಧಿಕಾರವಿದೆ ಎಂದು ಪ್ರತಿಪಾದಿಸುವ “ಕಾಕ”ಗಳ ರಕ್ತದಲ್ಲಿ ದೇಶದ್ರೋಹವೆ ಹರಿಯುವುದಾದ್ದರಿಂದ ಅವರಿಗೆ ಈ ತೆರನಾದ ವಿಷಯಗಳು ಹಿಡಿಸುವುದಿಲ್ಲ. ಇಂತಹವರಿಂದಾಗಿಯೆ ಇಂದು ಬೀದಿ ಬೀದಿಗಳಲ್ಲಿ “ತುಕುಡೆ-ತುಕುಡೆ” ಗ್ಯಾಂಗ್ ಹುಟ್ಟಿಕೊಳ್ಳುವಂತಾಗಿರುವುದು. ದೇಶಭಕ್ತಿಯನ್ನು ಪಾಠ ಪುಸ್ತಕದಲ್ಲಿ ಕಲಿಸಿಕೊಡಲಾಗುವುದಿಲ್ಲ, ಅದು ರಕ್ತದಲ್ಲೆ ಬರಬೇಕು. ಆದರೆ ಕಾಕಗಳ ರಕ್ತವೆ ಕಲಬೆರಕೆ ನಮ್ಮ ದೌರ್ಭಾಗ್ಯ ಏನು ಮಾಡೋದು…?

-ಶಾರ್ವರಿ

Tags

Related Articles

Close