ಅಂಕಣ

ಮೋದಿಗೆ ಮತ ನೀಡಬೇಡಿ ಎನ್ನುವ ಮಿಶನರಿ ಮತ್ತು ಚರ್ಚುಗಳು ಮೋದಿ ಇರಾಕ್, ಅಫಘಾನಿಸ್ತಾನ ಮತ್ತು ಯೆಮೆನಿನಲ್ಲಿ ಉಗ್ರರ ಕೈಯಲ್ಲಿ ಸಿಲುಕಿದ್ದ ನೂರಾರು ಕ್ರೈಸ್ತರನ್ನು ರಕ್ಷಿಸಿದ್ದನ್ನು ಮರೆತವೆ??

ನೀವು ಯಾವ ಧರ್ಮಕ್ಕೆ ಸಂಬಂಧ ಪಟ್ಟವರೊ ಗೊತ್ತಿಲ್ಲ, ನೀವು ಭಾರತದ ಯಾವ ರಾಜ್ಯದವರೊ ಗೊತ್ತಿಲ್ಲ, ನಿಮ್ಮ ಭಾಷೆ ಗೊತ್ತಿಲ್ಲ. ನೀವು ಪ್ರಪಂಚದ ಯಾವುದೆ ದೇಶದಲ್ಲಿರಿ ನೀವು ಭಾರತೀಯರೆನ್ನುವುದಷ್ಟೆ ನಿಮ್ಮ ಗುರುತು. ಹೊರದೇಶದ ಯಾವುದೆ ಮೂಲೆಯಲ್ಲಿ ಕಷ್ಟಕ್ಕೆ ಸಿಲುಕಿರಲಿ, ಉಗ್ರರಿಂದ ನಿಮ್ಮ ಅಪಹರಣೆವೆ ನಡೆದಿರಲಿ, ನಿಮ್ಮ ಜಾತಿ-ಮತ-ಭಾಷೆ ನೋಡದೆ ನಿಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ, ನಿಮ್ಮ ಮನೆಯಂಗಳಕ್ಕೆ ತಲುಪಿಸುತ್ತದೆ ಮೋದಿ ಸರಕಾರ. ಎಂಥಹ ವಿಷಮ ಪರಿಸ್ಥಿತಿಯಲ್ಲಿಯೂ ಎದೆ ಗುಂದದೆ ನಿಮ್ಮನ್ನು ಅಥವಾ ನಿಮ್ಮ ಪರಿವಾರದ ಜನರನ್ನು ರಕ್ಷಿಸುವ ಏಕೈಕ ವ್ಯಕ್ತಿ ಪ್ರಧಾನ ಸೇವಕ ಮೋದಿ!!

ಹೊಟ್ಟೆ ಪಾಡಿಗಾಗಿ ಹೊರದೇಶಕ್ಕೆ ಹೋಗಿ ದುಡಿಯುವವರಲ್ಲಿ ಕ್ರೈಸ್ತರದ್ದು ಮತ್ತು ಮುಸಲ್ಮಾನರದ್ದೆ ಮೇಲುಗೈ. ಕ್ರೈಸ್ತ ಸಮುದಾಯದ ಜನರು ಉಗ್ರ ಪೀಡಿತ ಇರಾಕ್, ಯೆಮೆನ್, ಸಿರಿಯಾ ಮತ್ತು ಅಫಘಾನಿಸ್ತಾನಗಳಲ್ಲೂ ಕೆಲಸ ಮಾಡುತ್ತಾರೆ. ಇಂತಹ ಸಂಧರ್ಭದಲ್ಲಿ ಉಗ್ರರಿಂದ ಅಪಹರಣಕ್ಕೂ ಒಳಗಾಗುತ್ತಾರೆ. ಹಿಂದೆಲ್ಲ ಸತ್ತರೆ ಸಾಯಲಿ ಬಿಡಿ ಎಂದು ಸರಕಾರಗಳು ಸುಮ್ಮನಿರುತ್ತಿದ್ದವು. ಆದರೆ ಈಗ ಹಾಗಲ್ಲ, ಯಾವುದೆ ಬೆಲೆ ತೆತ್ತಾದರೂ ವಾಪಾಸು ಕರೆ ತರುತ್ತದೆ ಮೋದಿ ಸರಕಾರ. ಕಳೆದ ನಾಲ್ಕು ವರ್ಷಗಳಲ್ಲಿ ವಿದೇಶಗಳಲ್ಲಿ ಸಿಲುಕಿದ ನೂರಾರು ಜನರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತಂದಿದ್ದಾರೆ ಸುಶ್ಮಾ ಸ್ವರಾಜ್ ಮತ್ತು ಜನರಲ್ ವಿ.ಕೆ.ಸಿಂಗ್. ಅದೂ ಕ್ರೈಸ್ತ-ಮುಸಲ್ಮಾನ-ಹಿಂದೂ ಎನ್ನುವ ಭೇದವಿಲ್ಲದೆ!!

ಹೀಗೆಯೆ ಹೊಟ್ಟೆ ಪಾಡಿಗಾಗಿ ಭಾರತದಿಂದ 46 ನರ್ಸ್ ಗಳು ಇರಾಕಿಗೆ ಹೋಗಿದ್ದರು. ಅವರ ದುರ್ದೈವ ಅಲ್ಲಿ ಐಸಿಸ್ ಉಗ್ರಗಾಮಿಗಳು ಅವರನ್ನು ಅಪಹರಿಸಿ ಬಂಧಿಸಿ ಬಿಟ್ಟಿದ್ದರು. 23 ದಿನಗಳವರೆಗೆ ಅನ್ನ-ನೀರಿಲ್ಲದೆ ಐಸಿಸ್ ಉಗ್ರರ ಕೈಯಲ್ಲಿ ನರಳುತ್ತಿದ್ದ ನರ್ಸ್ ಗಳನ್ನು ಶತಾಯಗತಾಯ ಭಾರತಕ್ಕೆ ಕರೆತರಲು ಪಣ ತೊಟ್ಟರು ಮೋದಿ. ಸುಲಭದ ಕೆಲಸವೆ ಇದು? ಆದರೆ ಮೋದಿಗೆ ಅಸಾಧ್ಯ ಯಾವುದು? ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿ ಮುಸ್ಲಿಂ ಮಿತ್ರ ರಾಷ್ಟ್ರಗಳ ಬೆನ್ನು ಬಿದ್ದು, ಇರಾಕಿನ ಸರಕಾರದೊಂದಿಗೆ ಮಾತುಕತೆ ನಡೆಸಿ ಐಸಿಸ್ ಅನ್ನು ಮಣಿಸಿ 46 ನರ್ಸ್ ಗಳ ಕೂದಲೂ ಕೊಂಕದಂತೆ ಕರೆತಂದರಲ್ಲ ಮೋದಿ ಅದನ್ನು ಮರೆತವೆ ಮಿಶನರಿ ಮತ್ತು ಚರ್ಚುಗಳು? ಮಾತುಕತೆಯ ಪ್ರಯತ್ನ ವಿಫಲವಾದರೆ ಅವರ ನೆಲದಲ್ಲಿಯೆ ಐಸಿಸ್ ಮೇಲೆ ಆಕ್ರಮಣ ಮಾಡಿ ನರ್ಸ್ ಗಳನ್ನು ಭಾರತಕ್ಕೆ ಕರೆತರುವ ಯೋಜನೆ ರೂಪಿಸಿದ್ದರೆನ್ನುವುದು ಗೊತ್ತೆ ನಿಮಗೆ ನರಿಗಳೆ?

ಪ.ಬಂಗಾಳದ ಜುಡಿತ್ ಡಿಸೋಜಾ ಎಂಬ ಹೆಣ್ಣು ಮಗಳು ಆಘಾಖಾನ್ ಫೌಂಡೇಶನ್ನ ಪರವಾಗಿ ಅಫಘಾನಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದಾಗ, ಭಯೋತ್ಪಾದಕರು ಕಾಬುಲಿನಿಂದ ಅವಳನ್ನು ಅಪಹರಿಸಿಕೊಂಡು ಹೋದರು. ಕೂಡಲೆ ಅಫಘಾನಿಸ್ತಾನದ ಪ್ರಧಾನಿ ಅಶ್ರಫ್ ಘನಿಯವರೊಡನೆ ಸಂಪರ್ಕ ಸಾಧಿಸಿ ಭಯೋತ್ಪಾದಕರ ಬಾಯಿಂದ ಕೇವಲ ಆರು ವಾರಗಳೊಳಗಾಗಿ ಕರೆತಂದರಲ್ಲ ಮೋದಿ ಇದನ್ನು ಮರೆತರಾ ಕ್ರೈಸ್ತರು? ಒಂದು ವೇಳೆ ಮೋದಿಜಿಯೇನಾದರೂ ಅಸಡ್ಡೆ ತೋರಿದ್ದರೆ ಆಕೆಯ ಗತಿಯೇನಾಗುತ್ತಿತ್ತು ಊಹಿಸಿ. ಮಾಡಿದ ಉಪಕಾರವನ್ನು ಮರೆಯುವುದನ್ನು ಯಾರು ಕಲಿಸಿಕೊಟ್ಟರು? “ನಿಮಗೆ ಕೇಡು ಬಗೆದವರನ್ನೂ ಪ್ರೀತಿಸಿ” ಎಂದು ಯೇಸು ಕಲಿಸಿದ್ದನ್ನು ಮರೆತು ನಿಮಗೆ ಉಪಕಾರ ಮಾಡಿದವರಿಗೆ ಕೇಡು ಬಗೆಯುವುದು ತರವೆ?

ಇದೆ ರೀತಿ ಅಫಘಾನಿಸ್ತಾನದ ಹೇರತ್ ನಿಂದ ಅಪಹರಣಕ್ಕೊಳಗಾದ ಫಾದರ್ ಅಲೆಕ್ಸಿಸ್ ಪ್ರೇಮಕುಮಾರ್, ಅಪಹರಣಕಾರರಿಂದ ಮಾನಸಿಕ ಚಿತ್ರಹಿಂಸೆಗೊಳಗಾಗುತ್ತಿದ್ದ ಸಂಧರ್ಭದಲ್ಲಿ 8 ತಿಂಗಳು ಹರಸಾಹಸ ಪಟ್ಟು ವಾಪಾಸು ಕರೆತಂದರು ಮೋದಿ. ಅವರ ತಂಗಿಗೆ ಖುದ್ದು ಪ್ರಧಾನಿ ಮೋದಿಯವರೆ ಫೋನಾಯಿಸಿ ಸಹೋದರನ ಸುರಕ್ಷತೆಯ ಬಗ್ಗೆ ಹೇಳಿದಾಗ ತಮ್ಮ ಕಿವಿಗಳನ್ನೆ ನಂಬಿರಲಿಲ್ಲ ಪ್ರೇಮ್ ಅವರ ಸಹೋದರಿ!

ಇವರಂತೆಯೆ ಯಮನ್ನಿನಿಂದ ಅಪಹೃತರಾದ ಫಾದರ್ ಟಾಮ್ ನನ್ನು ಓಮಾನಿನ ಸುಲ್ತಾನನ ಮೂಲಕ ಮಧ್ಯಸ್ಥಿಕೆ ಮಾಡಿಸಿ 18 ತಿಂಗಳು ಸತತ ಪ್ರಯತ್ನ ಮಾಡಿ ತಾಯ್ನಾಡಿಗೆ ಮರಳಿ ತಂದರು ಮೋದಿ. ತೀರ ಹದಗೆಟ್ಟಿದ್ದ ಅವರ ಆರೋಗ್ಯ ಚೇತರಿಸಿಕೊಳ್ಳಲು ಚಿಕಿತ್ಸೆಯನ್ನೂ ಕೊಡಿಸಿದ್ದರು. “ಮಿಶನರಿ” ಕೆಲಸಕ್ಕಾಗಿಗೆ ಯೆಮನಿಗೆ ತೆರಳಿದ್ದ ಸಿಸ್ಟರ್ ಸ್ಯಾಲಿ ಅವರನ್ನು ಅಪಹರಿಸಿದ್ದಾಗಲೂ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದದ್ದು ವೆಟಿಕನ್ ಅಲ್ಲ, ಬದಲಾಗಿ ಮೋದಿ! ವಿದೇಶದ ಯಾವ ಊರಿನಲ್ಲಿ ಯಾರೆ ಸಿಲುಕಿದ್ದರೂ ಮೋದಿ ವಿಶ್ವ ನಾಯಕರ ಬೆನ್ನು ಬಿದ್ದು ತಮ್ಮ ನಾಗರಿಕರನ್ನು ರಕ್ಷಿಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಯಾವುದೆ ಸಂದೇಹವಿಲ್ಲ.

ವಿದೇಶದಲ್ಲಿ ಸಿಲುಕಿಸುವವರನ್ನು ಸಿನೀಮೀಯ ರೀತಿಯಲ್ಲಿ ರಕ್ಷಿಸುವುದು ಸುಲಭದ ಮಾತೆಂದು ನಿಮಗೆ ಅನ್ನಿಸುತ್ತದೆಯೆ? ಉಗ್ರರ ಕೈಯಲ್ಲಿ ಸಿಲುಕಿದ ನಾಗರಿಕರನ್ನು ಬಿಡಿಸುವುದು ಕಳ್ಳೆಕಾಯಿ ಸಿಪ್ಪೆ ಸುಲಿದು ತಿನ್ನುವಂತಹ ವಿಚಾರವೆ? ಇದಕ್ಕಾಗಿ ಮೋದಿ, ವಿದೇಶಾಂಗ ಸಚಿವಾಲಯದ ಮಂತ್ರಿಗಳು ಮತ್ತು ಅಧಿಕಾರಿಗಳು ಎಷ್ಟು ಶ್ರಮ ಪಟ್ಟಿರುತ್ತಾರೆ ಎನ್ನುವ ಪರಿಜ್ಞಾನವೂ ಈ ಮಿಶನರಿ-ಚರ್ಚು-ಪಾದ್ರಿಗಳಿಗಿಲ್ಲವೆ? ಮೋದಿಯವರು ತಮ್ಮ ಸಮುದಾಯಕ್ಕೆ ಮಾಡಿದ ಉಪಕಾರವನ್ನು ಮರೆತು ಮೋದಿಗೆ ಮತ ನೀಡಬೇಡಿ, ಬಿ.ಜೆ.ಪಿಯನ್ನು ಸೋಲಿಸಿ ಎಂದು ಬಹಿರಂಗವಾಗೆ ಕ್ರೈಸರಿಗೆ ಕರೆ ಕೊಡುತ್ತಾರಲ್ಲ, ಇವರಿನ್ನೆಂತಹ ಅವಕಾಶವಾದಿ ನರಿಗಳಿರಬೇಕು?

ನಿನ್ನೆ ಇರಲಿ, ಇವತ್ತಿರಲಿ ಅಥವಾ ನಾಳೆ ಇರಲಿ, ದೇಶದ ಒಳಗಿರಲಿ ಇಲ್ಲ ವಿದೇಶದಲ್ಲೆ ಇರಲಿ ನಿಮ್ಮ ಒಂದೆ ಒಂದು ಕರೆಗೆ ಓಗೊಟ್ಟು ತಕ್ಷಣ ನಿಮ್ಮನ್ನು ಸಂಕಷ್ಟದಿಂದ ಪಾರು ಮಾಡುವವರು ಮೋದಿ ಮಾತ್ರ. ವೆಟಿಕನ್-ಮೆಕ್ಕಾಗಳು ಮತಾಂತರ ಮಾಡಿಸುತ್ತವೆಯೆ ಹೊರತು ನಿಮ್ಮ ಕಷ್ಟ ಕಾಲದಲ್ಲಿ ನಿಮಗೆ ಸಹಾಯ ಮಾಡುವುದಿಲ್ಲ. ಎಂಥಹಃ ಸಂಧರ್ಭದಲ್ಲೂ ನಿಮ್ಮ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತ ಮೋದಿ ನಿಮ್ಮ ಕೈ ಬಿಡುವುದಿಲ್ಲ. ನೀವು ಅವರಿಗೆ ಬಾಯಿಗೆ ಬಂದಂತೆ ಬೈದರೂ ಅವರು ಸದಾ ನಿಮ್ಮ ಸೇವೆಗೆ ಕಟಿಬದ್ದರಾಗಿರುತ್ತಾರೆ! ಕಷ್ಟ ಕಾಲ ಬಂದಾಗ ಪ್ರಮಾಣಿಸಿ ನೋಡಿ. ಸತ್ಯ ನಿಮಗೇ ತಿಳಿಯುವುದು.

-ಶಾರ್ವರಿ

Tags

Related Articles

Close