ಅಂಕಣ

ಗುಜರಾತಿನ ಮುಖ್ಯ ಮಂತ್ರಿಯಾಗಿದ್ದ ಕಾಲದಿಂದಲೇ ಮೋದಿ ವಿರುದ್ದ ದ್ವೇಷ ಕಾರುತ್ತಿರುವ ಮಿಷನರಿಗಳು ದೇಶದಿಂದ ಆರ್.ಎಸ್.ಎಸ್ ಮತ್ತು ಮೋದಿಯವರನ್ನು ಕಿತ್ತೊಗೆಯುವ ಕಾರ್ಯದಲ್ಲಿ ನಿರತವಾಗಿವೆ!!

 

ರಾಷ್ಟ್ರ ರಕ್ಷಣೆಯೆ ಪರಮ ಗುರಿ ಎನ್ನುವ ಧ್ಯೇಯೋದ್ದೇಶ ಹೊಂದಿರುವ ಸಂಘವನ್ನು ಕಂಡರೆ ಮಿಶನರಿಗಳು ವಿಷ ಕಕ್ಕುತ್ತವೆ. ಸಂಘ ಪರಿವಾರದವರು ಭಾರತವನ್ನು “ಹಿಂದೂ ರಾಷ್ಟ್ರ” ಮಾಡಿಬಿಡುತ್ತಾರೆ ಎಂದು ಹುಯಿಲೆಬ್ಬಿಸುತ್ತಿವೆ. ಹಿಂದೂ ರಾಷ್ಟವಾದವೆಂದರೆ ಆಮಿಷ ಒಡ್ಡಿಯೋ, ಬಂದೂಕು ತೋರಿಸಿಯೋ ಅನ್ಯ ಮತೀಯರನ್ನು ಸನಾತನ ಧರ್ಮಕ್ಕೆ ಮತಾಂತರ ಮಾಡುವುದಲ್ಲ. ಅಥವಾ ಭಾರತದಲ್ಲಿ ಕೇವಲ ಹಿಂದೂಗಳೆ ಇರಬೇಕು ಎನ್ನುತ್ತಾ ಅನ್ಯಮತೀಯರ ಮಾರಣ ಹೋಮ ಮಾಡುವುದಲ್ಲ. ಹಿಂದೂ ರಾಷ್ಟ್ರವಾದವೆಂದರೆ ಸನಾತನ ಪರಂಪರೆಯನ್ನು ಅಳವಡಿಸಿಕೊಳ್ಳುವುದು. ಭವ್ಯ ಭಾರತದ ಇತಿಹಾಸವನ್ನು, ಗತ ವೈಭವವನ್ನು ಮರುಕಳುಸುವಂತೆ ಮಾಡುವುದು. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ತತ್ವವನ್ನು ಪಾಲಿಸುತ್ತಾ ಎಲ್ಲರ ಅಭಿವೃದ್ದಿಗಾಗಿ ಶ್ರಮಿಸುವುದು. ಸಮ ಪಾಲು ಸಮ ಬಾಳು ಎನ್ನುವ ತತ್ವದ ಮೇಲೆ ನಂಬಿಕೆ ಇಡುವ ಸನಾತನಿಗಳನ್ನು ರೂಪಿಸಿ ಮತ್ತೆ ಭಾರತ ವಿಶ್ವಗುರುವಾಗುವಂತೆ ಮಾಡುವುದು.

ಮಿಷನರಿಗಳು ಬಿಜೆಪಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ನಿರ್ದಿಷ್ಟವಾಗಿ ನರೇಂದ್ರ ಮೋದಿ ವಿರುದ್ದ ದ್ವೇಷ ಕಾರುವುದು ಅವರು ಭಾರತದಲ್ಲಿ ಚರ್ಚ್ ಗಳನ್ನು ಒಡೆಯುತ್ತಾರೆ, ಕ್ರೈಸ್ತರನ್ನು ಕೊಲ್ಲುತ್ತಾರೆ ಅಥವಾ ಶಾಲೆಗಳನ್ನು ಮುಚ್ಚಲು ಬಯಸುತ್ತಾರೆ ಎಂದಲ್ಲ. ಬದಲಾಗಿ ಆರ್.ಎಸ್.ಎಸ್ ತನ್ನ ತತ್ವ ಸಿದ್ದಾಂತಗಳಿಗೆ ವಿರುದ್ದವಾಗಿ ನಡೆದುಕೊಳ್ಳುವುದಿಲ್ಲ ಹಾಗೂ ಕಾಂಗ್ರೆಸ್ ಮತ್ತು ಕಮೂನಿಷ್ಟರಂತೆ ಭಾರತದಲ್ಲಿ ಮತಾಂತರದ ಬೆಳೆ ಬೆಳೆಯಲು ಸಹಾಯ ಮಾಡುವುದಿಲ್ಲ ಎನ್ನುವ ಕಾರಣಕ್ಕಾಗಿ. ಕ್ರೈಸ್ತ ಸಂಘಟನೆಗಳ ಸಮಂಜಸವಾದ ಬೇಡಿಕೆಗಳನ್ನು ನೀಡುವಲ್ಲಿ ಮೋದಿ ಬಹಳ ಉದಾರತೆ ತೋರಿ ಅವರನ್ನು ಚೆನ್ನಾಗೇ ನೋಡಿಕೊಂಡಿದ್ದರೂ ಕ್ರೈಸ್ತರು ಅವರ ಮೇಲೆ ವಿಷ ಕಾರುತ್ತಾರೆ. ಇದಕ್ಕೆ ಬಲವಾದ ಕಾರಣವಿದೆ.

ಗುಜರಾತಿನ ಮುಖ್ಯಮಂತ್ರಿ ಆಗಿ ಪದಗ್ರಹಣ ಮಾಡಿದ ಮೊದಲನೆ ವರ್ಷವೆ ಮೋದಿ ಸರ್ಕಾರ ‘ಗುಜರಾತ್ ಫ್ರೀಡಮ್ ಆಫ್ ರಿಲಿಜನ್ ಆಕ್ಟ್, 2003’ ಎಂಬ ಕಾನೂನನ್ನು ಜಾರಿಗೆ ತಂದಿತು. ಈ ಕಾನೂನಿನ ಪ್ರಕಾರ, ತನ್ನ ಧರ್ಮವನ್ನು ಬದಲಿಸ ಬಯಸುವ ವ್ಯಕ್ತಿ ಮೊತ್ತ ಮೊದಲು ಜಿಲ್ಲೆಯ ಉಪ ಕಮೀಷನರ್ ಅವರಿಗೆ ವರದಿ ಮಾಡಕೊಳ್ಳಬೇಕಾಗಿತ್ತು. ಜನರನ್ನು ವಂಚಿಸಿ ಮತ ಪರಿವರ್ತನೆ ಮಾಡುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ಕಾನೂನು ಜಾರಿಗೆ ಬಂತು. ಭಾರತದಲ್ಲಿ ಏಳು ರಾಜ್ಯಗಳಲ್ಲಿ ಈ ಕಾನೂನು ಇದ್ದರೂ, ಮೊತ್ತ ಮೊದಲಬಾರಿಗೆ ಅದನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದವರು ಮೋದಿ. ಅಲ್ಲಿವರೆಗೆ ಕಾಂಗ್ರೆಸ್ ಮತ್ತು ಕಮೂನಿಷ್ಟರು ಮಿಶನರಿಗಳ ಮೇಲೆ ತಮ್ಮ ಅಭಯ “ಹಸ್ತ” ವನ್ನಿಟ್ಟು ಅವರ ಮತಾಂತರದ ಧಂದೆಗೆ ಕುಮ್ಮಕ್ಕು ನೀಡುತ್ತಿದ್ದರು ಮಾತ್ರವಲ್ಲದೆ, ಸಾವಿರಾರು ಎಕರೆ ಸರಕಾರಿ ಜಾಗಗಳನ್ನು ಚರ್ಚುಗಳಿಗೆ ದಾನವಾಗಿ ಕೊಡುತ್ತಿದ್ದರು.

ದೇಶದಲ್ಲಿ ಅತಿ ಹೆಚ್ಚು ಭೂಮಿ ಹೊಂದಿರುವ ಚರ್ಚುಗಳು ರಿಯಲ್ ಎಸ್ಟೇಟ್ ದಂಧೆಯ ಅಗ್ರಗಣ್ಯ ನಾಯಕರು ಎಂದರೆ ತಪ್ಪಲ್ಲ. ವೆಟಿಕನ್ ನ ಏಜೆಂಟ್ ಸೋನಿಯಾ ಗಾಂಧಿಯ ಸರ್ವಾಧಿಕಾರಾದ ಯೂಪಿಎ ಅಧಿಕಾರದ ಅವಧಿಯಲ್ಲಿ ಎಲ್ಲೆಂದರರಲ್ಲಿ ನಾಯಿ ಕೊಡೆಗಳಂತೆ ಚರ್ಚುಗಳು ತಲೆ ಎತ್ತಿದವು. ಯುಪಿಎ ಅವಧಿಯ ಹತ್ತು ವರ್ಷಗಳಲ್ಲಿ ಕ್ರೈಸ್ತರ ಸಂಖ್ಯೆ ಗಣನೀಯವಗಿ ಹೆಚ್ಚಿ2.5% ರಿಂದ ಸೀದಾ 5.8% ಏರಿತ್ತು! ಯೂಪಿಎ ಅಧಿಕಾರದ ಅವಧಿಯಲ್ಲಿ ಚರ್ಚು-ಮಿಷನರಿಗಳು ಆಡಿದ್ದೇ ಆಟ. ಈ ಹತ್ತು ವರ್ಷಗಳಲ್ಲಿ ಮಿಷನರಿಗಳು ಕೊಬ್ಬಿದ ಕುರಿಯಂತಾದವು. ‘ಕ್ರಿಶ್ಚಿಯನ್ ಟುಡೆ’ ಪ್ರಕಾರ, ಭಾರತದ ಅತಿ ದೊಡ್ಡ ಮಿಷನರಿ ಗುಂಪುಗಳಲ್ಲಿ ಒಂದಾದ ‘ಆಪರೇಶನ್ ಮೊಬಿಲೈಸೇಷನ್’ ಭಾರತದಲ್ಲಿ ಒಂದು ದಶಕಕ್ಕಿಂತಲೂ ಕಡಿಮೆ ಅವಧಿಯಲ್ಲಿ 3,000 ಪಂಗಡಗಳನ್ನು ಕ್ರೈಸ್ತ ಮತಕ್ಕೆ ಸೇರ್ಪಡೆಗೊಳಿಸಲು ಯಶಸ್ವಿಯಾಗಿದ್ದರಿಂದ ಕ್ರೈಸ್ತರ ಜನಸಂಖ್ಯೆಯಲ್ಲಿ ದಾಖಲೆಯ ಏರಿಕೆ ಕಂಡಿತ್ತು.

ಐದು ದಶಕಗಳ ಹಿಂದೆ ಕೈ ಬೆರಳೆಣಿಕೆಯಲ್ಲಿ ನಡೆಯುತ್ತಿದ್ದ ಬಾಪ್ಟಿಸಮ್ ,ಕಳೆದ ಹತ್ತು ವರ್ಷಗಳಲ್ಲಿ 8,000 ಕ್ಕೇರಿತ್ತು!! ವಿದೇಶದಿಂದ ಹರಿದು ಬರುತ್ತಿದ್ದ ಹಣ ಮಾತ್ರವಲ್ಲದೆ, ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಸಾಮಾಜಿಕ ಕಾರ್ಯಗಳಿಗಾಗಿ ನೀಡಲಾಗುತ್ತಿದ್ದ ಅನುದಾನಗಳನ್ನು ತಮ್ಮ ಮತಾಂತರದ ಧಂಧೆಗೆ ಉಪಯೋಗಿಸುವುದರಲ್ಲಿ ನಿರತವಾಗಿದ್ದವು ಚರ್ಚುಗಳು. ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲಾಡಳಿತಕ್ಕೆ ರಾಜ್ಯದಲ್ಲಿ ನಡೆಯುವ ಮತಾಂತರಗಳ ಮೇಲೆ ಹದ್ದಿನ ಕಣ್ಣಿಡಲು ಸೂಚಿಸಿದ್ದರು. ಮೋದಿ ಕ್ರೈಸ್ತ ವಿರೋಧಿ ಎಂದು ಇದರ ಅರ್ಥವಲ್ಲ, ಬದಲಾಗಿ ಈ ಮತಾಂತರದ ದಂಧೆಯಿಂದಾಗಿ ಹಲವಾರು ಬಾರಿ ಬುಡಕಟ್ಟು ಜನರಿಗೂ ಕ್ರೈಸ್ತರಿಗೂ ಜಗಳಗಳಾಗುತ್ತಿದ್ದವು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮೋದಿ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದರು. ಆದರೆ ಮಿಷನರಿಗಳು ಇದನ್ನೇ ಕಾರಣವಾಗಿಟ್ಟುಕೊಂಡು ಮೋದಿ ಕ್ರೈಸ್ತ ವಿರೋಧಿ ಎಂದು ಊಳಿಡಲು ಶುರು ಮಾಡಿದವು.

ಮಿಷನರಿಗಳ ಮತಾಂತರದ ಧಂಧೆಗೆ ಬಲವಾದ ಹೊಡೆತ ಬಿದ್ದಿದ್ದು ಮೋದಿಯವರು ಹಳ್ಳಿ ಹಳ್ಳಿಗಳಲ್ಲೂ ಕೈಗೊಂಡ ಅಭಿವೃದ್ದಿ ಕಾರ್ಯಗಳಿಂದ. ಎಲ್ಲಿವರೆಗೆ ಜನರು ಬಡವ ಮತ್ತು ಅಶಿಕ್ಷಿತರಾಗಿ, ಮುಖ್ಯಧಾರೆಯಿಂದ ದೂರ ಉಳಿದಿದ್ದರೋ ಅಲ್ಲಿವರೆಗೆ ಜನರಿಗೆ ಆಮಿಷ ಒಡ್ಡಿ ಅವರನ್ನು ಮತಾಂತರ ಮಾಡುವ ಕೆಲಸ ಮಿಷನರಿಗಳಿಗೆ ಸುಲಭವಾಗಿತ್ತು. ಆದರೆ ಯಾವಾಗ ಮೋದಿ ಹಳ್ಳಿಗಳಿಗೆ ರಸ್ತೆ, ಕುಡಿಯುವ ನೀರು, ಆಸ್ಪತ್ರೆ ಇಂಟರ್ನೆಟ್, ವಿದ್ಯುತ್, ಶಾಲೆ ಮುಂತಾದ ಮೂಲಭೂತ ಸೌಕರ್ಯ ತಂದರೋ ಆವಾಗ ನರಿಗಳಿಗೆ ಬಿತ್ತು ಹೊಡೆತ. ಗುಜರಾತಿನ ಮೋದಿ ರಾಜ್ಯದಲ್ಲಿ ಹಿಂದೂ ಸಂಘಟನೆಗಳೂ ಬಲಗೊಂಡವು ಮತ್ತು ಎಗ್ಗಿಲ್ಲದೆ ನಡೆಯುತ್ತಿದ್ದ ಮತಾಂತರದ ಧಂಧೆಗೆ ಕಡಿವಾಣ ಹಾಕಲು ಜಿಲ್ಲಾಡಳಿತಕ್ಕೆ ಸಹಾಯ ಮಾಡತೊಡಗಿದವು.

 

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಕೃಪಾಕಟಾಕ್ಷದಿಂದ ಹಿಂದೂ ಸಂಘಟನೆಗಳನ್ನು ದೆವ್ವದಂತೆ ಬಿಂಬಿಸಿ ಜಗತ್ತಿನ ಮುಂದಿಡುವಲ್ಲಿ ಮಿಷನರಿಗಳು ಸಫಲರಾದರು. ಗುಜರಾತಿನಲ್ಲಿ ಮಿಷನರಿಗಳಿಗೆ ಎರಡು ಶತ್ರುಗಳಿದ್ದರು ಒಂದು ಮೋದಿ ಮತ್ತೊಂದು ಸ್ವಾಮೀ ಅಸೀಮಾನಂದರು. ಈ ಎರಡು ಹಿಂದೂ ಸಿಂಹಗಳನ್ನು ಕಂಡರೆ ಗುಳ್ಳೆನರಿಗಳಿಗೆ ಮೈಯೆಲ್ಲಾ ಕೆರೆತ. ಅದಕ್ಕೆ ಯೂಪಿಎ ಎನ್ನುವ ಹಿಂದೂ ರಕ್ತ ಪಿಪಾಸು “ಭಗವಾ ಆತಂಕವಾದದ” ಬುರುಡೆ ಬಿಟ್ಟು ಅಸೀಮಾನಂದರನ್ನು ಬಂಧಿಸಿದ್ದು ಮತ್ತು ಮೋದಿಯವರನ್ನು ಮುಗಿಸಲು ಇಶ್ರತ್ ಜಹಾಂಳತವಳನ್ನು ದತ್ತು ಪಡೆದದ್ದು. ಕಾಂಗ್ರೆಸಿನ ಎಲ್ಲಾ ಕಚಡಾ ಕೆಲಸಗಳಲ್ಲಿ ಅದಕ್ಕೆ ಬೆನ್ನುಲುಬಾಗಿ ನಿಲ್ಲುವುದು ಕಮೂನಿಷ್ಟರು.

ಇದೆ ಮಾವೋವಾದಿಗಳ ಜೊತೆಗೂಡಿ ಫಾ.ಫ್ರೆಡ್ರಿಕ್ ಪ್ರಕಾಶ್, ಜಾನ್ ದಯಾಲ್, ಮೇಧಾ ಪಾಟ್ಕರ್ ನಂತಹವರು ಹಲವಾರು NGOಗಳನ್ನು ಸ್ಥಾಪಿಸಿ ಹಿಂದೂ ವಿರೋಧಿ ನೀತಿಯನ್ನನುಸರಿಸಿ ಮಿಷನರಿಗಳಿಗೆ ಬೆಂಬಲವಾಗಿ ನಿಂತರು. ಅಲ್ಲಿವರೆಗೆ ಗುಜರಾತಿಗಷ್ಟೆ ಸೀಮಿತವಾಗಿದ್ದ ಮೋದಿ, ಯಾವಾಗ ರಾಷ್ಟ್ರನಾಯಕರಾಗಿ ಮುನ್ನಲೆಗೆ ಬಂದರೋ ಮಿಷನರಿಗಳು ಮಾತ್ರವಲ್ಲ ವೆಟಿಕನ್ ಕೂಡಾ ಹೌಹಾರಿತ್ತು. ಮೋದಿ ಪ್ರಧಾನ ಮಂತ್ರಿ ಆಗುವುದೆಂದರೆ ವೆಟಿಕನ್ ಗೆ ಭಾರತದ ಬಾಗಿಲು ಸದಾ ಕಾಲಕ್ಕೂ ಮುಚ್ಚಿದಂತೆಯೆ ಎನ್ನುವ ಸತ್ಯ ನರಿಗಳಿಗೆ ಮೊದಲೆ ಗೊತ್ತಿತ್ತು.

ತಮಗಿನ್ನು ಭಾರತದಲ್ಲಿ ಉಳಿಗಾಲವಿಲ್ಲ ಎಂದು ನರಿಗಳಿಗೆ ಹೆದರಿಕೆ ಶುರುವಾಗಿತ್ತು. ಕಡೆಗೂ ಅವರ ಅನಿಸಿಕೆಯಂತೆಯೆ ಆಗಿದೆ. ಮೋದಿ ಪ್ರಧಾನ ಮಂತ್ರಿಯಾದ ಬಳಿಕ ಮತಾಂತರದ ದಂಧೆಗೆ ಕೊಡಲಿ ಏಟು ಬೀಸಿದ್ದಾರಲ್ಲದೆ ದೇಶದಲ್ಲಿ ಹಿಂದೂ ರಾಷ್ಟ್ರವಾದವನ್ನು ಬಡಿದೆಬ್ಬಿಸಿದ್ದಾರೆ. ಯಾವುದರ ಭಯ ವೆಟಿಕನ್ ಅನ್ನು ಕಾಡುತ್ತಿತ್ತೋ ಅದು ನಿಜವಾಗಿ ಬಿಟ್ಟಿದೆ. ದೇಶದಲ್ಲಿ ಹಿಂದೂ ರಾಷ್ಟ್ರವಾದದ ಶಂಖನಾದ ಮೊಳಗಿದೆ. ಇದುವರೆಗೂ ನರಸತ್ತ ನರಪೇತಲನಂತಿದ್ದ ಹಿಂದೂಗಳು ತಮ್ಮ ಕ್ಷಾತ್ರ ತೇಜವನ್ನು ಮರಳಿ ಪಡೆದು ಬಾಹುಬಲಿಯಂತಾಗುತ್ತಿದ್ದಾರೆ. ತಮ್ಮ ಅಧಿಕಾರಕ್ಕಾಗಿ ಸೊಲ್ಲೆತ್ತಲೂ ಹೆದರುತ್ತಿದ್ದ ಸನಾತನಿಗಳು ಇಂದು ಧರ್ಮ ರಕ್ಷಣೆಗಾಗಿ ಶಸ್ತ್ರ ಎತ್ತಲೂ ತಯಾರಾಗಿದ್ದಾರೆ!

ಎಲ್ಲಿಯವರೆಗೆ ಭಾರತದಲ್ಲಿ ಸಂಘವಿರುತ್ತದೋ, ಎಲ್ಲಿವರೆಗೆ ಭಾರತದ ಪ್ರಧಾನ ಮಂತ್ರಿ ಗಾದಿಯಲ್ಲಿ ಮೋದಿ ಕುಳಿತಿರುತ್ತಾರೋ ಅಲ್ಲಿವರೆಗೆ ಭಾರತ ಸುರಕ್ಷಿತ. ದೇಶದಲ್ಲಿ ಆರ್.ಎಸ್.ಎಸ್, ವಿ.ಎಚ್.ಪಿ ಮತ್ತು ಭಜರಂಗದಳಗಳಿರುವವರೆಗೆ ನರಿಗಳು ನಿಜದಲ್ಲಿ ಬಿಡಿ, ಸಂಪೂರ್ಣ ಭಾರತವನ್ನು ಮತಾಂತರ ಮಾಡಲು ಕನಸಿನಲ್ಲೂ ಸಾಧ್ಯವಿಲ್ಲ. ಅದಕ್ಕೆ ಮೋದಿ-ಆರ್.ಎಸ್.ಎಸ್ ಮತ್ತು ಹಿಂದೂ ಸಂಘಟನೆಗಳನ್ನೆ ಮುಗಿಸಿ ಬಿಟ್ಟರೆ, ತಮ್ಮ ಹಾದಿ ಸುಗಮ ಎನ್ನುವುದು ವೆಟಿಕನ್ ಗೆ ಗೊತ್ತು. ವೆಟಿಕನ್ ಮೂಳೆಗೆ ಮನಸೋತ ಪಿಡ್ಡಿ ನಾಯಿಗಳು ಮೋದಿ-ಮತ್ತು ಆರ್.ಎಸ್.ಎಸ್. ವಿರುದ್ದ ಬೊಗಳುತ್ತಿರುವುದು ಇದೆ ಕಾರಣಕ್ಕಾಗಿ. ಚರ್ಚು ಪಾದ್ರಿಗಳೆಲ್ಲ ಮೋದಿ ಸೊಲಿಸಿ ಎಂದು ಕರೆ ಕೊಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮೋದಿ ಸೋಲಬಾರದು. ಹಿಂದೂಗಳು ಮತ್ತು ಭಾರತ ಸುರಕ್ಷಿತವಾಗಿರಬೇಕಾದರೆ ಶತಾಯಗತಾಯ ಮೋದಿ ಗೆಲ್ಲಲೇಬೇಕು ಮತ್ತು ಹಿಂದೂಗಳು ಅವರನ್ನು ಗೆಲ್ಲಿಸಲೆ ಬೇಕು.

-ಶಾರ್ವರಿ

Tags

Related Articles

Close