ಪ್ರಚಲಿತ

ಮೋದಿ ಸರಕಾರದಿಂದ ಮತ್ತೊಂದು ಮಾಸ್ಟರ್ ಸ್ಟ್ರೋಕ್!! ಮಹಿಳಾ ಕಲ್ಲು ತೂರಾಟಗಾರರ ನಿಯಂತ್ರಣಕ್ಕೆ ಕೇಂದ್ರ ಬೀಸಿದೆ ಹೊಸ ಅಸ್ತ್ರ!!

ಪ್ರಧಾನಿ ನರೇಂದ್ರ ಮೋದಿ ಅಧಿಕಾರವಹಿಸಿದಾಗಿನಿಂದ ಅವರ ಮೊದಲ ಉದ್ಧೇಶವೇ ಉಗ್ರರನ್ನು ಮಟ್ಟ ಹಾಕಬೇಕೆಂದು!! ಈ ಮೊದಲು ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ಉಗ್ರರಿಗೆ ಭಾರತಕ್ಕೆ ಪ್ರವೇಶ ಮಾಡಲು ತುಂಬಾ ಸುಲಭವಾಗಿತ್ತು!! ಆದರೆ ಮೋದೀಜೀ ಅಧಿಕಾರದ ಬಳಿಕ ಉಗ್ರರಿಗೆ ಭಾರತ ಪ್ರವೇಶಿಸಲು ಪರದಾಡುವಂತಾಗಿದೆ!! ಮೋದೀಜೀ ಅಧಿಕಾರವಹಿಸುವ ಮುನ್ನ ದಿನಬೆಳಗಾದರೆ ಸಾಕು ನಮ್ಮ ಸೈನಿಕರು ಹುತಾತ್ಮರಾದರು ಎನ್ನುವ ಸುದ್ಧಿ ಕೇಳಿ ಬರುತ್ತಿತ್ತು!! ಆದರೆ ಇದೀಗ ಸೇನೆಯ ಚಹರೆಯೇ ಬದಲಾಗಿತ್ತಿದೆ!! ಅದಲ್ಲದೆ ಇದೀಗ ಮೋದಿ ಸರಕಾರ ಮತ್ತೊಂದು ಹೊಸ ಕಾರ್ಯಕ್ಕೆ ಕೈ ಹಾಕಿದೆ!!  ಈಗಾಗಲೆ ಮಹಿಳೆಯರನ್ನೂ ಪುರುಷರಂತೆ ಸಮಾನ ರೀತಿಯಲ್ಲಿ ನೋಡಿಕೊಳ್ಳಲಾಗುತ್ತದೆ!! ಇದೀಗ ಜಮ್ಮ ಕಾಶ್ಮೀರಲ್ಲಿ ಮಹಿಳಾ ಕಲ್ಲು ತೂರಾಟಗರರನ್ನು ನಿಯಂತ್ರಣ ಮಾಡಲು ಲೇಡಿ ಕಮಾಂಡರ್‍ಗಳು ಆಯ್ಕೆ ಮಾಡಿದ್ದಾರೆ!!

ಜಮ್ಮು ಮತ್ತು ಕಾಶ್ಮೀರದಲ್ಲಿ ಪದೇ ಪದೇ ಗಲಭೆಗಳು ನಡೆಯುತ್ತಲೇ ಇದ್ದು, ಯಾವ ಸರ್ಕಾರ ಬಂದರೂ ಪ್ರತ್ಯೇಕವಾದಿಗಳ ಅಟ್ಟಹಾಸವನ್ನು ನಿಲ್ಲಿಸಲು ಮಾತ್ರ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಪಾಕ್ ಉಗ್ರರ ಮತ್ತು ಕಾಶ್ಮೀರದ ಪ್ರತ್ಯೇಕವಾದಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಯಾವುದೇ ಕಾರಣಕ್ಕೂ ದೇಶದಲ್ಲಿ ಉಗ್ರ ಚಟುವಟಿಕೆಗಳು ನಡೆಯದಂತೆ ಸೈನಿಕರಿಗೆ ಸೂಚನೆ ನೀಡಿದ್ದ ಪ್ರಧಾನಿ ಮೋದಿ, ಸೈನಿಕರಿಗೆ ಬೇಕಾದ ಸೌಕರ್ಯಗಳನ್ನು ಕೂಡ ಒದಗಿಸಿದ್ದರು. ಆದ್ದರಿಂದಲೇ ಯಾವೊಬ್ಬ ಉಗ್ರನೂ ಜಮ್ಮು ಕಾಶ್ಮೀರದಿಂದ ಈಚೆಗೆ ಬರಲಾಗುತ್ತಿಲ್ಲ.

CRPF's lady commandos ready to deal with women stone pelters in J&K

ಆದ್ದರಿಂದ ಪ್ರತ್ಯೇಕವಾದಿಗಳ ಅಟ್ಟಹಾಸ ಹೆಚ್ಚಾಗುತ್ತಿತ್ತು. ಸೈನಿಕರ ಮೇಲೆಯೇ ಹಿಂಸೆ ಮಾಡಿ ತಮ್ಮ ಕ್ರೌರ್ಯ ಮೆರೆಯುತ್ತಿದ್ದರು. ಆದರೆ ಇದಕ್ಕೂ ಮೋದಿ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತಲೇ ಬಂದಿದೆ. ಆದರೆ ಜಮ್ಮು ಕಾಶ್ಮೀರದ ಪಿಡಿಪಿ ಸರಕಾರ ಈ ಬಗ್ಗೆ ಮೃದು ಧೋರಣೆ ತೋರುತ್ತಿದ್ದರಿಂದ ಸೈನಿಕರಿಗೆ ಕೈಕಟ್ಟಿದ ರೀತಿಯಲ್ಲಿ ಇರಬೇಕಾಗಿತ್ತು. ಆದರೆ ಇದೀಗ ಪಿಡಿಪಿಯ ಜೊತೆ ಮಾಡಿಕೊಂಡಿದ್ದ ಮೈತ್ರಿಯನ್ನು ಭಾರತೀಯ ಜನತಾ ಪಕ್ಷ ಹಿಂಪಡೆಡು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾಗಿರುವುದು ತಿಳಿದೇ ಇದೆ!! ಆದ್ದರಿಂದ ಇನ್ನು ಮುಂದೆ ಸೈನಿಕರು ಸ್ವಾತಂತ್ರ್ಯಗೊಂಡಿದ್ದು, ಯಾವುದೇ ಭಯೋತ್ಪಾದಕರಾಗಲಿ, ಪ್ರತ್ಯೇಕವಾದಿಗಳಾಗಲಿ ಬಾಲ ಬಿಚ್ಚುವುದಕ್ಕೆ ಅವಕಾಶವಿಲ್ಲ..!! ಅದಲ್ಲದೆ ಮತ್ತೊಂದು ಸಂತಸದ ವಿಚಾರವೆಂದರೆ ಜಮ್ಮು ಕಾಶ್ಮೀರದಲ್ಲಿ ಮಹಿಳಾ ಮಹಿಳಾ ಕಲ್ಲು ತೂರಾಟಗಾರರ ಸೊಕ್ಕು ಮುರಿಯಲು ಲೇಡಿ ಕಮಾಂಡರ್‍ಗಳು ಸಿದ್ಧವಾಗಿದ್ದಾರೆ!!

Image result for Female stone pelters in Jammu

ಜಮ್ಮು ಕಾಶ್ಮೀರದಲ್ಲಿ ದಿನದಿಂದ ದಿನಕ್ಕೆ ಹಿಂಸಾಚಾರ ಹೆಚ್ಚುತ್ತಿದ್ದು ಕೇಂದ್ರ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿತ್ತು ಇದನ್ನು ಮಟ್ಟಹಾಕಲು ಸೇನೆ ಹಾಗೂ ಕೆಂದ್ರ ಸರಕಾರ ತಂತ್ರವೊಂದನ್ನು ರೂಪಿಸಿತ್ತು ಅದು ಈಗ ಕಾರ್ಯರೂಪಕ್ಕೆ ಬಂದಿದೆ . ಕಾಶ್ಮೀರದಲ್ಲಿ ಸೇನಾ ಸಿಬ್ಬಂದಿ ಮೇಲೆ ಕಲ್ಲು ಎಸೆಯಲು ಇತ್ತೀಚೆಗೆ ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತಿದ್ದು, ಇವರನ್ನು ನಿಯಂತ್ರಿಸಲು ವಿಶೇಷ ಮಹಿಳಾ ಕಮಾಂಡೊ ಪಡೆಯನ್ನು ಸಜ್ಜುಗೊಳಿಸಲಾಗುತ್ತಿದೆ. ನಿರಂತರ ಉಗ್ರರ ದಾಳಿ, ಆಂತರಿಕ ಕಲಹಗಳಿಂದ ಬೆಂದು ಹೋಗಿರುವ ಕಾಶ್ಮಿರಕ್ಕೆ ಭಾರತೀಯ ಸೇನೆ ಹೊಸ ಹುರುಪು ನೀಡಿದ್ದು ದುಷ್ರ್ಕಮಿಗಳಿಂದ ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಕಾಶ್ಮೀರಿ ಕಣಿವೆಯ ರಜೌರಿ ಜಿಲ್ಲೆಯ ಗ್ರಾಮಿಣ ಪ್ರದೇಶದ ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣಾ ತರಬೇತಿ ನೀಡುತ್ತಿದ್ದಾರೆ . ಈಗಾಗಲೇ ಮೊದಲ ಹತ್ತು ಮಂದಿಯ ತಂಡ ಈ ತರಬೇತಿಯನ್ನು ಪೂರ್ಣಗೊಳಿಸಿದ್ದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

Image result for Female stone pelters in Jammu

ಈ ರಕ್ಷಣಾ ಪಡೆ ತಮ್ಮ ವೈಯಕ್ತಿಕ ರಕ್ಷಣೆ ಅಲ್ಲದೆ ಅಗತ್ಯ ಬಿದ್ದರೆ ಬೇರೆಯವರ ರಕ್ಷಣೆಗೂ ನಿಲ್ಲುವಂತೆ ಮಾಡಿದ್ದು ಇದನ್ನು ಎಲ್ಲಾ ಜಿಲ್ಲೆಯಲ್ಲಿ ವಿಸ್ತರಿಸಲು ಮುಂದಾಗಿದ್ದಾರೆ!!  ಸಿಆರ್‍ಪಿಎಫ್‍ನ ಹಿರಿಯ ಅಧಿಕಾರಿಗಳು 500 ಮಹಿಳಾ ಕಮಾಂಡೊಗಳಿಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ. ಭಯೋತ್ಪಾದಕರ ವಿರುದ್ಧ ಸೇನಾ ಕಾರ್ಯಾಚರಣೆ ತಡೆಯಲು ಮಹಿಳೆಯರನ್ನು ಗುರಾಣಿಯಂತೆ ಬಳಸಿಕೊಳ್ಳಲಾಗುತ್ತಿತ್ತು. ಸೈನಿಕರು ಮಹಿಳೆಯರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ ಎನ್ನುವ ನಂಬಿಕೆ ಮೇಲೆ ಉಗ್ರರು ಈ ತಂತ್ರ ಅನುಸರಿಸುತ್ತಿದ್ದಾರೆ.

Image result for Female stone pelters in Jammu

ಈ ಚಟುವಟಿಕೆಗೆ ವಿಶೇಷವಾಗಿ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಕಲ್ಲೆಸೆಯುವ ಮಹಿಳೆಯರನ್ನು ಮಹಿಳಾ ಕಮಾಂಡೊ ಮೂಲಕ ನಿಯಂತ್ರಿಸಲು ಸೇನೆ ಮುಂದಾಗಿದೆ. ಸಶಸ್ತ್ರಧಾರಿ ಪ್ರತಿಭಟನಾಕಾರರನ್ನು ತಡೆಯುವುದು ಹಾಗೂ ಅನಿವಾರ್ಯ ಸಂದರ್ಭದಲ್ಲಿ ಉಗ್ರರನ್ನು ನಿಯಂತ್ರಿಸುವ ಬಗ್ಗೆ ಕಠಿಣ ತರಬೇತಿ ನೀಡಲಾಗುತ್ತಿದೆ. ಸಿಆರ್‍ಪಿಎಫ್‍ನ ವಿಶೇಷ ಪಡೆ ಶೀಘ್ರವೇ ಕಾಶ್ಮೀರಕ್ಕೆ ತೆರಳಲಿದ್ದು, ಸೇನೆಯ ಭಯೋತ್ಪಾದನೆ ನಿಗ್ರಹ ಚಟುವಟಿಕೆಗೆ ಸಹಾಯ ಮಾಡಲಿದೆ!!

source : vijayavani

  • ಪವಿತ್ರ
Tags

Related Articles

Close