ಪ್ರಚಲಿತ

ಬಿಗ್ ಬ್ರೇಕಿಂಗ್: ಕಾಂಗ್ರೆಸ್ ನಿಂದ ಸಿಎಂ ಕಿಕ್ ಔಟ್.! ಚುನಾವಣೆ ನಂತರ ಸಿದ್ದರಾಮಯ್ಯಗೆ ಕ್ಲೀನ್ ಚೀಟ್.?

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಇಡೀ ದೇಶದಲ್ಲೇ ಚರ್ಚೆಯಾಗುತ್ತದೆ. ಯಾಕೆಂದರೆ ಕರ್ನಾಟಕ ಎಲ್ಲಾ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದ್ದು ಗೆಲ್ಲಲೇಬೇಕಾದ ಅನಿವಾರ್ಯವೂ ಎದುರಾಗಿದೆ. ಒಂದೆಡೆ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಕರ್ನಾಟಕದಲ್ಲೂ ತಮ್ಮ ಅಧಿಪತ್ಯ ಸಾಧಿಸಲು ಸಜ್ಜಾಗಿದೆ. ಇತ್ತ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು ಕರ್ನಾಟಕದಲ್ಲಿ ತಮ್ಮ ನೆಲೆಕಂಡುಕೊಳ್ಳಲು ಪರದಾಡುತ್ತಿದೆ.!

ಕಾಂಗ್ರೆಸ್ ನಲ್ಲಿ ಈಗಾಗಲೇ ಅನೇಕ ನಾಯಕರುಗಳು ಪಕ್ಷ ತೊರೆದು ಬೇರೆ ಪಕ್ಷಗಳ ಕಡೆ ಮುಖ ಮಾಡಿದ್ದು, ಚುನಾವಣೆ ಎದುರಿಸಲೂ ಕಾಂಗ್ರೆಸ್ ಹಿಂದೇಟು ಹಾಕುವಂತೆ ಆಗಿದೆ. ಇತ್ತ ಸಿದ್ದರಾಮಯ್ಯನವರ ಸರ್ವಾಧಿಕಾರದ ಆಡಳಿತಕ್ಕೆ ಬೇಸತ್ತ ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರುತ್ತಿದ್ದು, ಚುನಾವಣೆ ಮುಗಿದ ಕೂಡಲೆ ಪಕ್ಷದಿಂದ ಹಿಂದೆ ಸರಿಸುವ ಯೋಜನೆ ರೂಪಿಸಿದ್ದಾರೆ.!

ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಸಿಎಂ ಗೆ ಸ್ಥಾನವಿಲ್ಲ..!

ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಇತ್ತ ಸಿದ್ದರಾಮಯ್ಯನವರು ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ನಿನ್ನೆ ಚಾಮುಂಡೇಶ್ವರಿಯಲ್ಲಿ ಪ್ರಚಾರದ ವೇಳೆ ಜೆಡಿಎಸ್ ಮುಖಂಡನಿಂದ ಬಹಿರಂಗವಾಗಿಯೇ ಅವಮಾನಕ್ಕೊಳಗಾದ ಸಿದ್ದರಾಮಯ್ಯನವರಿಗೆ ಇದೀಗ ಸ್ವತಃ ತಮ್ಮ ಪಕ್ಷದ ಮುಖಂಡನಿಂದಲೇ ಮತ್ತೆ ಮುಖಭಂಗ ಉಂಟಾಗಿದೆ.

ಚುನಾವಣೆ ಮುಗಿದ ಕೂಡಲೇ ಸಿಎಂ ಸ್ಥಾನದಿಂದ ಸಿದ್ದರಾಮಯ್ಯನವರು ಕೆಳಗಿಳಿಯಬೇಕು.‌ ಮುಖ್ಯಮಂತ್ರಿಯಾಗಿ ದಲಿತ ನಾಯಕ, ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮುಂದಿನ ಸಿಎಂ ಆಗಿ ನೇಮಕ ಮಾಡಬೇಕು ಎಂದು ಯಾದಗಿರಿ ಜಿಲ್ಲೆಯ ಕಾಂಗ್ರೆಸ್ ಶಾಸಕ ಡಾ.ಎ.ಬಿ. ಮಾಲಕರೆಡ್ಡಿ ಇಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಆಗಿದ್ದೇ ಆದಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿ ಹೆಬ್ಬಾಗಿಲು ತೆರೆದಂತೆ ಎಂದು ಹೇಳಿಕೊಂಡ ಮಾಲಕರೆಡ್ಡಿ , ಸಿದ್ದರಾಮಯ್ಯನವರು ತುಷ್ಟೀಕರಣದ ನೀತಿ ಅನುಸರಿಸಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಇವೆಲ್ಲದಕ್ಕೂ ಮುಕ್ತಿ ಸಿಗಲೇಬೇಕೆಂದರೆ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯನವರನ್ನು ಮತ್ತೆ ಮುಖ್ಯಮಂತ್ರಿ ಆಗಿ ನೇಮಿಸಬಾರದು ಎಂದು ಹೇಳಿದ್ದಾರೆ.!

ಒಂದೆಡೆ ಸಿದ್ದರಾಮಯ್ಯನವರು ಹೋದಲ್ಲೆಲ್ಲಾ ತಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗುತ್ತಿದ್ದು, ಇದಕ್ಕೆ ಸ್ವತಃ ಕಾಂಗ್ರೆಸ್ ನಲ್ಲೇ ವಿರೋಧ ವ್ಯಕ್ತವಾಗಿದೆ. ಆದ್ದರಿಂದ ಚುನಾವಣಾ ಹೊಸ್ತಿಲಲ್ಲೇ ಕಾಂಗ್ರೆಸ್ ನಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದ್ದು , ಪಕ್ಷದ ನಾಯಕರುಗಳೇ ಕಿಚ್ಚಾಡಿಕೊಳ್ಳುವಂತಾಗಿದೆ.!

–ಅರ್ಜುನ್

Tags

Related Articles

Close