ಪ್ರಚಲಿತ

ಬಡವರಿಗೆ ಸೂರು ಒದಗಿಸಲು ಸಿ ಎಂ ಯೋಗೀಜಿ ಮಾಡಿದ್ದೇನು ಗೊತ್ತೇ?

ಉತ್ತರ ಪ್ರದೇಶದ ಆಡಳಿತ ಚುಕ್ಕಾಣಿ ಬಿಜೆಪಿಯ ಬೆಂಕಿ ಚೆಂಡು ಸಿಎಂ ಯೋಗಿ ಆದಿತ್ಯನಾಥ್ ಅವರ ಕೈಗೆ ಬಂದ ಮೇಲೆ ಅಲ್ಲಿ ಅದೆಷ್ಟೋ ರೀತಿಯ ಅಭಿವೃದ್ಧಿಯ ಕಾರ್ಯಗಳು ನಡೆದಿವೆ.

ಯೋಗಿ ಆದಿತ್ಯನಾಥ್ ಅವರು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಸಹ ದೇಶದ ಇತರೆಲ್ಲಾ ರಾಜ್ಯಗಳಿಗೆ ಮಾದರಿಯಾಗಿಯೇ ಇರುತ್ತದೆ. ಇದಕ್ಕೆ ಸಾಕ್ಷಿ ನಮ್ಮ ಮುಂದೆ ಹಲವಿದೆ. ಇದೀಗ ಮತ್ತೊಂದು ಮಹತ್ವದ ನಿರ್ಣಯದ ಮೂಲಕ ಮುಖ್ಯಮಂತ್ರಿ ಯೋಗೀಜಿ ಅವರ ಉತ್ತರ ಪ್ರದೇಶದ ಸರ್ಕಾರ ಮತ್ತೊಮ್ಮೆ ಮಾದರಿ ಮತ್ತು ಅನುಕರಣೀಯ ಹೆಜ್ಜೆಯನ್ನಿರಿಸುವ ಮೂಲಕ ಸುದ್ದಿ ಮಾಡಿದೆ.

ಇತ್ತೀಚೆಗಷ್ಟೇ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್‌ನನ್ನು ಮತ್ತು ಆತನ ಸಹೋದರ ನನ್ನು ಉತ್ತರ ಪ್ರದೇಶದಲ್ಲಿ ಎನ್‌ಕೌಂಟರ್ ಮೂಲಕ ಯಮಪುರಿಗೆ ಕಳುಹಿಸಲಾದ ವಿಷಯ ಸಾಕಷ್ಟು ಸುದ್ದಿ ಮಾಡಿತ್ತು. ಪ್ರಯಾಗ್‌ರಾಜ್‌ನಲ್ಲಿ ಈ ಪುಂಡರನ್ನು ಹತ್ಯೆ ಮಾಡಲಾಗಿತ್ತು. ಇದೀಗ ಯುಪಿ ಸರ್ಕಾರ ಅತೀಕ್ ಅಹ್ಮದ್ ‌ನಿಂದ ವಶಕ್ಕೆ ಪಡೆಯಲಾದ ಭೂಮಿಯಲ್ಲಿ ಬಡ ಜನರಿಗೆ ವಸತಿ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಮನೆಗಳ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಎಪ್ಪತ್ತಾರು ಫ್ಲ್ಯಾಟ್‌ಗಳ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ಇನ್ನೇನು ಕೆಲವೇ ಸಮಯದಲ್ಲಿ ಇವುಗಳು ಬಡವರಿಗೆ ಹಂಚಿಕೆಯಾಗಲಿವೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಈ ಯೋಜನೆಯನ್ನು ಸಂ ಪೂರ್ಣಗೊಳಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಎರಡು ಬ್ಲಾಕ್‌ಗಳಲ್ಲಿ ಎಪ್ಪತ್ತಾರು ಫ್ಲ್ಯಾಟ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿವೆ.

ಎಲ್ಲಾ ರಾಜ್ಯಗಳ ಸರ್ಕಾರಗಳು ಸಹ ಅಪರಾಧಿಗಳಿಂದ ವಶಕ್ಕೆ ಪಡೆದ ಜಮೀನನ್ನು ಬಳಸಿ ತಮ್ಮ ರಾಜ್ಯದ ಬಡವರಿಗೆ ಸೂರು ನಿರ್ಮಿಸುವ ಕೆಲಸಕ್ಕೆ ಮುಂದಾದಲ್ಲಿ, ಆ ರಾಜ್ಯದಲ್ಲಿ ನಿವೇಷನ ಹೊಂದದ ಬಡವರಿಗೆ ಅನುಕೂಲವಾಗಬಹುದು. ಉತ್ತರ ಪ್ರದೇಶದ ನಿ ವೇ ವನ ರಹಿತರನ್ನು ಗಮನದಲ್ಲಿರಿಸಿಕೊಂಡು ಸಿ ಎಂ ಯೋಗಿ ಅವರು ತೆಗೆದುಕೊಂಡ ಈ ನಿರ್ಣಯ ಮತ್ತಷ್ಟು ರಾಜ್ಯಗಳಲ್ಲಿ ಜಾರಿಯಾಗುವಂತಾಗಲಿ‌‌. ಆ ಮೂಲಕ ಬಡವರಿಗೆ ಸೂರು ದೊರೆಯಲಿ ಎನ್ನುವುದೇ ನಮ್ಮ ಆಶಯ.

Tags

Related Articles

Close