ಪ್ರಚಲಿತ

ಬ್ರೇಕಿಂಗ್!ಮತ್ತೆ ಪಪ್ಪುವಾದ ರಾಹುಲ್ ಗಾಂಧಿ! ರಾಗಾ ಕಲ್ಪನಾ ಲೋಕದಲ್ಲಿ ಕೋಕೋ ಕೋಲಾ ಮಾಲೀಕರು ಏನಾಗಿದ್ದರು ಗೊತ್ತೇ..?

ರಾಹುಲ್ ಗಾಂಧಿ ಎಂದ್ರೇನೇ ಪಕ್ಕನೆ ನೆನಪಾಗವುದು ಅವರ ಬುದ್ಧಿಹೀನ ಮಾತುಗಳು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯನ್ನು ರಾಷ್ಟ್ರದಲ್ಲಿ “ಪಪ್ಪು” ಕರೆಯುತ್ತಾರೆ. ಇಂತಹ ನಾಮ ರಾಹುಲ್ ಗಾಂಧಿಗೆ ಬೇಡವೆಂದರೂ ಅವರು ಮತ್ತೆ ಮತ್ತೆ ತಾನು ಪಪ್ಪು ಎಂಬುವುದನ್ನು ಸಾಭೀತುಪಡಿಸುತ್ತಲೇ ಬಂದಿರುತ್ತಾರೆ. ಎಲ್ಲಾ ಬಿಡಿ, ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕೂಡಾ ತನ್ನ ಪೆದ್ದು ಪೆದ್ದು ಮಾತುಗಳನ್ನು ಆಡಿ ತನ್ನ ಅವಿದ್ಯೆತೆಯನ್ನು ಪ್ರದರ್ಶಿಸಿದ್ದರು. ಅದೆಷ್ಟೋ ಸಂವಾದದಲ್ಲಿ ರಾಹುಲ್ ಗಾಂಧಿಯವರು ಭಾರೀ ಮುಜುಗರಕ್ಕೂ ಒಳಗಾಗಿದ್ದರು. ಇದೀಗ ಮತ್ತೆ ಇಂತಹ ಪ್ರಕರಣ ಮರುಕಳಿಸಿದೆ.

ಮತ್ತೆ ಪೆದ್ದು ಮಾತನಾಡಿದ ರಾಗಾ..!

ಇಂದು ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ಮತ್ತೆ ತನ್ನ ಪೆದ್ದು ಮಾತಿನಿಂದ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ವಿದೇಶ ಪ್ರವಾಸದಲ್ಲಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶದಿಂದ ಭಾರತಕ್ಕೆ ಬಂದ ನಂತರ ಮೊದಲ ಬಹಿರಂಗ ಸಭೆಯನ್ನು ಉದ್ಧೇಶಿಸಿ ಮಾತನಾಡಿದ್ದಾರೆ. ಈ ಭೆಯಲ್ಲಿ ಕೋಕೋ ಕೋಲಾ ಕಂಪನಿಯ ಸ್ಥಾಪಕರ ಬಗ್ಗೆ ಪುರಾವೆ ಇಲ್ಲದ ಕಲ್ಪನಾ ಕಥೆಗಳನ್ನು ಕಟ್ಟುವ ಮೂಲಕ ರಾಷ್ಟ್ರವ್ಯಾಪಿ ಸುದ್ಧಿಯಾಗಿದ್ದಾರೆ.

ದೆಹಲಿಯಲ್ಲಿ ಒಬಿಸಿ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ತೆಗಳುವ ಭರದಲ್ಲಿ ಪೇಚಿಗೆ ಸಿಲುಕಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ದೇಶದ ರೈತರನ್ನು ಸಂಪೂರ್ಣವಾಗಿ ಮರೆತಿದ್ದರೆ. ಮೋದಿಯವರ ಕಛೇರಿಯಲ್ಲಿ ಒಬ್ಬನೇ ಒಬ್ಬ ರೈತನಿಲ್ಲ” ಎಂದು ಹೇಳಿ ಒಮ್ಮೆ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. “ರೈತರು ಮೋದಿಯವರ ಕಛೇರಿಯಲ್ಲಿ ಏನು ಕೆಲಸ” ಎಂದು ಲೇವಡಿ ಮಾಡುತ್ತಿದ್ದಾರೆ.

“ಕೋಕೋ ಕಂಪನಿಯ ಮಾಲೀಕ ಈ ಹಿಂದೆ ಲೆಮನ್ ಜ್ಯೂಸ್ (ನಿಂಬೆ ರಸ) ಮಾರುತ್ತಿದ್ದರು” ಎಂದು ಹೇಳಿದ್ದಾರೆ. ಅಸಲಿಗೆ ಕೋಕೋ ಕಂಪನಿಯ ಮಾಲೀಕ ಜಾನ್ ಸ್ಟಿತ್ ಪೆಂಬರ್ಸನ್ ಮತ್ತು ಆಸ್ ಗ್ರಿಕ್ಸ್ ಕ್ಯಾಂಡಲ್ಸ್ ಆಗಿದ್ದಾರೆ. ಇದರಲ್ಲಿ ಜಾನ್ ಸ್ಟಿತ್ ಈ ಕಂಪನಿಯನ್ನು ಆರಂಭಿಸಿದವರು. ಇವರು ಅಮೇರಿಕಾದ ಸೈನ್ಯಾದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದರು. ನಂತರ ಫಾರ್ಮಾಸಿಸ್ಟ್ ಆಗಿಯೂ ಕೆಲಸವನ್ನು ಮಾಡಿದ್ದರು. ಆದರೆ ರಾಹುಲ್ ಗಾಂಧಿಯವರ ಕಲ್ಪನೆಯಲ್ಲಿ ಕೋಕೋ ಕೋಲಾ ಕಂಪನಿಯ ಮಾಲೀಕರು ಈ ಹಿಂದೆ ಲೆಮನ್ ಜ್ಯೂಸ್ ಮಾರುತ್ತಿದ್ದರು. ಯಾವ ಆಧಾರದಲ್ಲಿ ರಾಗಾ ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂಬುವುದು ಇನ್ನೂ ನಿಗೂಢ.

ಇನ್ನೂ ಮಾತು ಮುಂದುವರೆಸಿದ್ದ ರಾಹುಲ್ ಗಾಂಧಿ “ಮೆಕ್ ಡೊನಾಲ್ಸ್ ಸಂಸ್ಥೆಯ ಮಾಲೀಕ ರಸ್ತೆ ಬದಿಯಲ್ಲಿ ನಿಂತುಕೊಂಡು ಡಾಬಾ ನಡೆಸುತ್ತಿದ್ದರು” ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯವರ ಇಂತಹಾ ಆಧಾರವಿಲ್ಲದ ಮಾತುಗಳನ್ನು ಕೇಳಿದ ಅಲ್ಲಿನ ಜನತೆಯೇ ಒಮ್ಮೆ ನಿಬ್ಬೆರಗಾಗುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.

ಕಾಂಗ್ರೆಸ್ ಅಧ್ಯಕ್ಷರ ಈ ಮಾತು ಇದೀಗ ಸಾಮಾಜಿಕ ಜಾಲತಾಣ, ಅದರಲ್ಲೂ ಪ್ರಮುಖವಾಗಿ ಟ್ವಿಟ್ಟರ್‍ನಲ್ಲಿ ಟ್ರೆಂಡ್ ಆಗುತ್ತಿದೆ. ದೇಶದ ಜನತೆ ರಾಹುಲ್ ಗಾಂಧಿಯವರ ಇಂತಹ ಮಾತುಗಳನ್ನು ಟೀಕೆ ಮಾಡುತ್ತಿದ್ದಾರೆ. “ವಿದೇಶದಲ್ಲಿ ಇಂತಹ ಕಥೆಗಳು ನಿಮಗೆ ಯಾರು ಹೇಳಿಕೊಟ್ಟಿದ್ದಾರೆ” ಎಂದು ಲೇವಡಿ ಮಾಡುತ್ತಿದ್ದಾರೆ.

ಪದೇ ಪದೇ ದೇಶವಾಸಿಗಳ ಟೀಕೆಗೆ ಗುರಿಯಾಗುತ್ತಿದ್ದ ರಾಹುಲ್ ಗಾಂಧಿ ಇದೀಗ ಅಂತರಾಷ್ಟ್ರೀಯ ಹೇಳಿಕೆಯೊಂದನ್ನು ನೀಡಿ ಟೀಕೆಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಅಕ್ಷರ ಉಚ್ಚಾರವನ್ನು ತಪ್ಪು ತಪ್ಪಾಗಿ ಹೇಳಿ ಟೀಕೆಗೆ ಗುರಿಯಾಗಿದ್ದರು. ಬಸವಣ್ಣನವರ ವಚನ, ಸರ್.ಎಂ.ವಿಶ್ವೇಶ್ವರಯ್ಯನವರ ಹೆಸರು ಸಹಿತ ಅನೇಕ ಪ್ರಮುಖ ಹೆಸರುಗಳನ್ನೇ ತಪ್ಪಾಗಿ ಉಚ್ಚರಿಸಿ ಟೀಕೆಗೆ ಗುರಿಯಾಗಿದ್ದರು. ಇದೀಗ ಮತ್ತೆ ಇಂತಹಾ ಪೆದ್ದು ಹೇಳಿಕೆಗಳನ್ನು ನೀಡಿ ಟೀಕೆಗೆ ಗುರಿಯಾಗಿದ್ದಾರೆ.

  • ಸುನಿಲ್ ಪಣಪಿಲ
Tags

Related Articles

Close