ಪ್ರಚಲಿತ

ಪ್ರಕಾಶ್‍ರಾಜ್ ಮತ್ತು ಜಿಗ್ನೇಶ್ ಮೇವಾನಿಗೆ ಸಂಕಷ್ಟ!! ಪ್ರಧಾನಿ ನರೇಂದ್ರ ಮೋದಿಯನ್ನು ನಿಂದಿಸಿದವರಿಗೆ ಬಿಗ್ ಶಾಕ್!!

ಇನ್ನೇನು ಚುನಾವಣೆಗೆ ಕೆಲವೇ ದಿನಗಳಷ್ಟೇ ಬಾಕಿ ಇದೆ!! ಪಕ್ಷ ಪಕ್ಷಗಳ ನಡುವಣ ಓಟಿಗಾಗಿ ಪೈಟ್ ನಡೆಯುತ್ತಿದೆ!! ಈಗಾಗಲೇ 22 ರಾಜ್ಯಗಳಲ್ಲಿ ಗೆದ್ದಿರುವ ಬಿಜೆಪಿಯನ್ನು ಹೇಗಾಗದರೂ ಈ ಬಾರಿ ಸೋಲಿಸಲೇ ಬೇಕು ಎಂದು ಕಾಂಗ್ರೆಸ್ ಪಣತೊಟ್ಟು ನಿಂತಿದೆ!! ಆದರೆ ಬಿಜೆಪಿಯ ಪ್ರತೀಯೊಂದು ನಾಯಕರುಗಳೂ ಗೆಲುವಿನ ಹುಮ್ಮಸ್ಸಿನಲ್ಲಿದ್ದಾರೆ!! ಅದಲ್ಲದೆ ಕೆಲ ಜನರಿಗೆ ಮೋದಿಯನ್ನು ನಿಂದಿಸದೆ ಪ್ರಚಾರ ಗಿಟ್ಟಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬಂತಾಗಿದೆ!! ಆ ರೀತಿ ಪ್ರಚಾರಗಿಟ್ಟಿಸಿಕೊಂಡು ಬಿಜಿಪಿಯವರನ್ನು ನಿಂದಿಸಿದ್ದಕ್ಕಾಗಿ ಈಗ ತಕ್ಕ ಶಾಸ್ತಿಯೇ ಆಗಿದೆ!!

ಪ್ರಧಾನಿ ಮೋದಿ, ಯಡಿಯೂರಪ್ಪ ವಿರುದ್ಧ ನಿಂದನೀಯ ಪದ ಬಳಕೆ: ಆಯೋಗಕ್ಕೆ ಬಿಜೆಪಿ ದೂರು!!

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಭ್ಯರ್ಥಿ ಬಿ.ಎಸ್ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ನಟ ಪ್ರಕಾಶ್ ರಾಜ್ ಹಾಗೂ ಗುಜರಾತ್ ಶಾಸಕ, ದಲಿತ ಮುಖಂಡ ಜಿಗ್ನೇಶ್ ಮೇವಾನಿ ಬಹಿರಂಗ ಸಭೆಗಳಲ್ಲಿ ನಿಂದನೀಯ ಪದ ಬಳಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ!!

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಮಾರಂಭಗಳಲ್ಲಿ ಮಾತನಾಡುತ್ತಿರುವ ಜಿಗ್ನೇಶ್ ಮೇವಾನಿ ಹಾಗೂ ಪ್ರಕಾಶ್ ರಾಜ್ ಮಾನನಷ್ಟ ಮತ್ತು ನಿಂದನೀಯ ಪದಗಳನ್ನು ಬಳಸುತ್ತಿದ್ದಾರೆ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ಹಿಂದೆ ಜಿಗ್ನೇಶ್ ಮೇವಾನಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದರೆ ಅವರನ್ನು ಹಿಂದಕ್ಕೆ ಹೋಗಿ ಎಂದು ಹೇಳಿ ಎಂದು ಹೇಳಿದ್ದರು. ಇನ್ನು ರಾಜ್ಯದಲ್ಲಿ ಪ್ರಕಾಶ್ ರಾಜ್ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.

ರಾಜ್ಯದ ಚುನಾವಣಾ ರಣಕಣದಲ್ಲಿ ಗುಜರಾತ್ ಮೇಡಗಾಂವನ ಪಕ್ಷೇತರ ಶಾಸಕ, ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ರಾಜ್ಯದ ವಿವಿಧೆಡೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಸುಳ್ಳು ಸುದ್ಧಿಯನ್ನು ಹಬ್ಬಿಸುವ ಮೂಲಕ ಕಿಡಿ ಕಾರುತ್ತಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಪ್ರಗತಿಪರರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮೇವಾನಿ `ಪ್ರಧಾನಿ ಮೋದಿ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದರೆ ಗದ್ದಲವೆಬ್ಬಿಸಿ . ಸಭೆಗಳಲ್ಲಿ ಕುರ್ಚಿಗಳನ್ನು ತೂರಾಡಿ’ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು!!

ದೇಶದ್ರೋಹಿಯೊಬ್ಬ ದಲಿತನ ಮುಖವಾಡ ಹೊತ್ತು ಯುವಜನರಿಗೆ ಕರೆ ಕೊಡುತ್ತಿದ್ದಾನೆ. ಈ ರಾಜ್ಯದಲ್ಲಿ ಮುಂದಿನ ಒಂದು ತಿಂಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಹಿತಕರ ಘಟನೆಗಳಾಗುವಂತೆ ನೋಡಿಕೊಂಡು ರಾಜ್ಯವನ್ನು ಸಂಪೂರ್ಣ ಅರಾಜಕ ಸ್ಥಿತಿಗೆ ತಳ್ಳಲು ಎಲ್ಲ ದೇಶವಿದ್ರೋಹಿ ಶಕ್ತಿಗಳೂ ಒಟ್ಟಾಗಿ ಎಂಬಂತೆ ರಾಜಾರೋಷವಾಗಿ ಹೇಳಿಕೊಂಡಿದ್ದಾರೆ ಜಿಗ್ನೇಶ್ ಮೇವಾನಿ!! ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುವ ಚುನಾವಣಾ ಪ್ರಚಾರ ಕಾರ್ಯಕ್ಕೆ ರಾಜ್ಯದ ಎಲ್ಲ ಪ್ರಗತಿಪರರು, ದಲಿತರು ಮತ್ತು ಹಿಂದುಳಿದವರು ಒಗ್ಗೂಡಿ ವಿರೋಧಿಸಬೇಕು. 2 ಕೋಟಿ ಉದ್ಯೋಗ ಮತ್ತು ಬಡವರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವಂತೆ ಮೋದಿಗೆ ಸವಾಲು ಹಾಕಬೇಕು ಎಂದು ಜನತೆಗೆ ಕರೆ ನೀಡಿದ್ದರು!! ಅದಲ್ಲದೆ ಮೋದಿಗೆ ವಯಸ್ಸಾಗಿಗೆ ಹಿಮಾಲಯಕ್ಕೆ ಹೋಗಿ ಎಂದು ಕೂಡಾ ನಿಂದಿಸಿದ್ದರು!! ಇಂತಹ ಮಾತುಗಳು ಜಿಗ್ನೇಶ್ ಮೇವಾನಿಗೆ ಏನೂ ಹೊಸದಲ್ಲ!! ಬಿಜೆಪಿಯ ಪ್ರಮುಖರನ್ನು ನಿಂದಿಸಿ ತಾನೂ ಶೈನ್ ಆಗಬೇಕು ಎಂಬ ಆಸೆಯನ್ನು ಹೊತ್ತಿರುವ ಜಿಗನೇಶ ಇದೀಗ ಫಚೀತಿಗೆ ಸಿಕ್ಕಿಕೊಂಡಿದ್ದಾರೆ!!

ಅದಲ್ಲದೆ ಹಿಂದೂ ಧರ್ಮದಲ್ಲಿ ಹುಟ್ಟಿ ಹಿಂದೂಗಳ ವಿರುದ್ಧವಾಗಿ ಬಾಯಿ ಬಡಿದುಕೊಳ್ಳುವುದು ಎಂದರೆ ಕೆಲವರಿಗೆ ಅದೆನೋ ಒಂದು ರೀತಿಯ ಛಪಲ. ತಮ್ಮ ಪ್ರಚಾರ ಗಿಟ್ಟಿಸಿಕೊಳ್ಳಲೆಂದೇ ಹಿಂದೂ ಧರ್ಮದ ವಿರುದ್ಧ ಮಾತನಾಡುತ್ತಾ ಸದ್ಯ ಪ್ರಚಾರದಲ್ಲಿರುವ ಬುಹುಭಾಷಾ ಖಳನಾಯಕ, ಸಿದ್ದರಾಮಯ್ಯನವರ ಸೈಟ್ ಭಾಗ್ಯಕ್ಕಾಗಿ ಜೊಲ್ಲು ಸುರಿಸಿಕೊಂಡು ಕಾಯುತ್ತಿರುವ ಪ್ರಕಾಶ್ ರಾಜ್ ಸದ್ಯ ಒಂದಲ್ಲ ಒಂದು ಹೇಳಿಕೆ ನೀಡಿ ತನ್ನ ಹೆಸರು ಚಾಲ್ತಿಯಲ್ಲಿರುವಂತೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಸದ್ಯ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಬಿಸಿಬಿಸಿ ಚರ್ಚೆಯಾಗುತ್ತಿದ್ದರೆ, ಇತ್ತ ಪ್ರಕಾಶ್ ರಾಜ್ ಮಾತ್ರ ಈ ವಿಚಾರದಲ್ಲೂ ಕಡ್ಡಿ ಅಲ್ಲಾಡಿಸಲು ಬಂದು ತನಗೆ ಇದ್ದ ತೆರೆಮರೆಯ ಮರ್ಯಾದೆಯನ್ನೂ ಹರಾಜಿಗೆ ಇಟ್ಟು ರಾಜ್ಯದ ಜನತೆಯ ಮುಂದೆ ಬೆತ್ತಲಾದ ಘಟನೆ ಆಗಾಗ ನಡೆಯುತ್ತನೇ ಇರುತ್ತದೆ!! ಪ್ರಕಾಶ್ ರಾಜ್ ಜಿಗ್ನೇಶ್ ಮೇವಾನಿಯಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತು ಬಿಜೆಪಿಯ ಇನ್ನಿತರ ವ್ಯಕ್ತಿಗಳನ್ನು ನಿಂದಿಸವುದು ಇವರಿಗೆ ಮೈಗಂಟಿದ ರೋಗದಂತಾಗಿದೆ!! ಇದೀಗ ಅವರ ಮೈಗಂಟಿದ ರೋಗವನ್ನು ಬಿಡಿಸಲೆಂದೇ ಬಿಜೆಪಿಯವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ!!

ಪವಿತ್ರ

Tags

Related Articles

Close