ಪ್ರಚಲಿತ

ಸಂವಿಧಾನದ ಜೊತೆಗೆ ಮೊದಲು ಆಟವಾಡಿದ್ದೇ ಕಾಂಗ್ರೆಸ್: ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ಪಕ್ಷ ಸೇರಿದಂತೆ ಇನ್ನಿತರ ವಿಪಕ್ಷಗಳು ಬೇಕಾಬಿಟ್ಟಿ ಹೇಳಿಕೆಗಳ ಮೂಲಕ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿವೆ. ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು, ಜನರ ತೆರಿಗೆ ಹಣವನ್ನು ನುಂಗಿ ನೀರ್ಕುಡಿದ ಪಕ್ಷಗಳು ಇಂದು ಭ್ರಷ್ಟಾಚಾರ ವಿರೋಧಿ ನಿಲುವುಗಳ ಮೂಲಕ ದೇಶದ ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತಿರುವ ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ದುರಂತ.

ಸಂವಿಧಾನದ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುವ ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಮತ್ತು ನಕಲಿ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಕಾಂಗ್ರೆಸ್ ಕುಟುಂಬದ ನಾಲ್ಕು ತಲೆಮಾರುಗಳು ಕಾಲ ಕಾಲಕ್ಕೆ ಭಾರತದ ಸಂವಿಧಾನವನ್ನು ಅವಮಾನ ಮಾಡುತ್ತಲೇ ಬಂದಿವೆ ಎಂದು ಹೇಳಿದ್ದಾರೆ. 

ಮಾಜಿ ಪ್ರಧಾನಿ ಜವಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬಕ್ಕೆ ಸೇರಿದವರು ಸಂವಿಧಾನದ ಜೊತೆ ಆಟವಾಡಿದ್ದಾರೆ. ತಮ್ಮ ಸ್ವಂತ ರಾಜಕೀಯ ಗುರಿಗಳನ್ನು ಪೂರೈಸಲು ಸಂವಿಧಾನದ ಜೊತೆಗೆ ಚೆಲ್ಲಾಟವಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನೆಹರೂ ಕುಟುಂಬ ದೇಶದಲ್ಲಿ ಸಂವಿಧಾನದ ಜೊತೆಗೆ ಮೊದಲು ಆಟವಾಡಿದ್ದು. ಜವಹರಲಾಲ್ ನೆಹರು ಇದನ್ನು ಮೊದಲಿಗೆ ಆರಂಭ ಮಾಡಿದರು. ವಾಕ್ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಸಲುವಾಗಿ ಮೊದಲು ತಿದ್ದುಪಡಿ ತಂದರು. ಅದಾದ ಬಳಿಕ ಅವರ ಪುತ್ರಿ ಇಂದಿರಾ ಗಾಂಧಿ ನಂತರ ತಿದ್ದುಪಡಿ ತರುವ ಮೂಲಕ ನ್ಯಾಯಾಲಯದ ತೀರ್ಪನ್ನು ರದ್ದು ಮಾಡಿದರು. ತಮ್ಮ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕೇಂದ್ರ ಸಚಿವ ಸಂಪುಟವು 2013 ರಲ್ಲಿ ಅಂಗೀಕಾರ ಮಾಡಿದ ಸುಗ್ರೀವಾಜ್ಞೆಯ ಪ್ರತಿಯನ್ನು ಹರಿದು ಹಾಕಿದ್ದ ರಾಹುಲ್ ಗಾಂಧಿ ಅವರನ್ನೂ ಈ ಸಂದರ್ಭದಲ್ಲಿ ಅವರು ಟೀಕಿಸಿದ್ದಾರೆ. ಆ ಬಳಿಕ ಮನಮೋಹನ್ ಸಿಂಗ್ ಸರ್ಕಾರ ಆ ಸುಗ್ರೀವಾಜ್ಞೆ ಹಿಂದಕ್ಕೆ ಪಡೆಯಿತು ಎಂದು ಅವರು ಹೇಳಿದ್ದು, ಆ ಮೂಲಕ ಕಾಂಗ್ರೆಸ್ ಅನುಸರಿಸಿದ ಸಂವಿಧಾನ ವಿರೋಧಿ ನೀತಿಗಳ ಬಗ್ಗೆ ಕಿಡಿ ಕಾರಿದ್ದಾರೆ.

Tags

Related Articles

Close