ಪ್ರಚಲಿತ

‘ಖಾನ್‌ಗ್ರೇಸ್’ ಪಕ್ಷದ ನಾಯಕರೇ.. ನಿಮಗೆ ಜಾತ್ಯಾತೀತ ಪದದ ಅರ್ಥ ಗೊತ್ತೇ?

ರಾಜ್ಯ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಮೇಲಿನ ಪ್ರೀತಿ ಮತ್ತೊಮ್ಮೆ ಸಾಬೀತಾಗಿದೆ. ಸಿ ಎಂ ಸಿದ್ದರಾಮಯ್ಯ ಅವರು ‘ಅಲ್ಪಸಂಖ್ಯಾತರ ರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಭಯ ಪಡುವ ಅಗತ್ಯ ಇಲ್ಲ’ ಎನ್ನುವ ಮೂಲಕ ಕಾಂಗ್ರೆಸ್‌ಗೆ ಕೇವಲ ಅಲ್ಪಸಂಖ್ಯಾತರ ಹಿತರಕ್ಷಣೆಯಷ್ಟೇ ಮುಖ್ಯ ಎಂಬುದನ್ನು ಮತ್ತೊಮ್ಮೆ ತೋರಿಸಿದೆ.

ಸಮಾಜದ ಶಾಂತಿ ಕೊಡುವ ಕೋಮುವಾದಿ ಶಕ್ತಿಗಳನ್ನು ಮಟ್ಟ ಹಾಕುತ್ತವೆ. ಯಾವುದೇ ರೀತಿಯಲ್ಲಿ ರಾಜ್ಯದಲ್ಲಿ ಅಲ್ಪಸಂಖ್ಯಾತ ವರ್ಗದ ಜನರ ಹಕ್ಕುಗಳಿಗೆ ಸಮಸ್ಯೆಯಾಗಲು ಬಿಡುವುದಿಲ್ಲ. ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ನಾವು ಬದ್ಧ. ಯಾರಿಗೂ ಕಾನೂನು ಕ್ರಮ ಕೈಗೆ ತೆಗೆದುಕೊಳ್ಳಲು ಬಿಡಲಾರೆವು. ಈ ಸಂಬಂಧ ರಾಜ್ಯದ ಪೊಲೀಸ್ ಇಲಾಖೆಗೂ ಈಗಾಗಲೇ ಸೂಚನೆ ನೀಡಲಾಗಿದ್ದು, ಕೋಮುವಾದಿ ಶಕ್ತಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿರುವುದಾಗಿ ಹೇಳಿದ್ದಾರೆ.

ಸದಾ ಕಾಲ ಅಲ್ಪಸಂಖ್ಯಾತರ ಧ್ಯಾನದಲ್ಲೇ ಇರುವ ಸಿದ್ದರಾಮಯ್ಯ ಸರ್ಕಾರಕ್ಕೆ, ಬಹುಸಂಖ್ಯಾತ ಹಿಂದೂಗಳ ಮೇಲೆ ಅಲ್ಪಸಂಖ್ಯಾತ ಸಮುದಾಯದಿಂದಾಗುತ್ತಿರುವ ಅನ್ಯಾಯ, ಸಮಸ್ಯೆ ಬಗ್ಗೆ ಕಾಳಜಿ ಇಲ್ಲದಿರುವುದು ನಿಜಕ್ಕೂ ದುರಂತ. ಅಲ್ಪಸಂಖ್ಯಾತ ವರ್ಗದ ಏಳಿಗೆಗಾಗಿಯೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ, ಅದಕ್ಕಾಗಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿರುವ ಸಿದ್ದರಾಮಯ್ಯ ಅವರಿಗೆ, ಈ ರಾಜ್ಯದ ಬಹುಸಂಖ್ಯಾತ ಹಿಂದೂಗಳ ರೋಧನೆ, ಸಮಸ್ಯೆ ಕಣ್ಣಿಗೆ ಕಾಣದಿರುವುದು ವಿಪರ್ಯಾಸವೇ ಸರಿ.

ಭಾರತ ದೇಶ ಕೋಮುವಾದಿಗಳ ಕಪಿಮುಷ್ಟಿಯಲ್ಲಿ ಸಿಲುಕಿದೆ ಎನ್ನುವ ಸಿದ್ದರಾಮಯ್ಯ ಅವರೇ, ಅಲ್ಪಸಂಖ್ಯಾತ ಭಯೋತ್ಪಾದಕರಿಂದ ನಮ್ಮ ದೇಶಕ್ಕೆ ಆಗುತ್ತಿರುವ ಅಪಾಯ, ನಷ್ಟ ಇನ್ನೂ ನಿಮ್ಮ ಗಮನಕ್ಕೆ ಬಾರದಿರುವುದು ದುರಂತ. ದೇಶದಲ್ಲಿ ಜನಿಸುವವರೆಲ್ಲರೂ ಜಾತ್ಯಾತೀತರಾಗಬೇಕು ಎಂದು ಭಾಷಣ ಬಿಗಿಯುವ ನೀವು ಕೇವಲ ಒಂದು ಮತದ ಜನರ ಅಭ್ಯುದಯಕ್ಕಾಗಿ ಶ್ರಮಿಸಿ, ಅವರಷ್ಟೇ ಮನುಷ್ಯರು, ಉಳಿದವರೆಲ್ಲರೂ ರಾಕ್ಷಸರು ಎಂಬಂತೆ ಬಿಂಬಿಸುತ್ತಿದ್ದೀರಲ್ಲ, ನಿಮ್ಮ ಈ ನಿಲುವು ನಿಮಗೆಯೇ ಹಾಸ್ಯಾಸ್ಪದ ಎನಿಸುತ್ತಿಲ್ಲವೇ? ನಿಮ್ಮ ಮನಸ್ಸಿನಲ್ಲಿಯೇ ಇರದ ಜಾತ್ಯಾತೀತತೆಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ನಿಮ್ಮ ನೈತಿಕತೆಯನ್ನು ಒಮ್ಮೆ ನೀವೇ ಪ್ರಶ್ನೆ ಮಾಡಿ. ಆಗ ನಿಮ್ಮ ಓಟ್ ಬ್ಯಾಂಕ್ ರಾಜಕೀಯ, ಸೋಗಲಾಡಿತನ ಏನು ಎಂಬುದು ನಿಮಗೆ ಅರಿವಾಗಬಹುದು. ವಿದ್ಯಾವಂತರಾಗಿರುವ ನಿಮಗೆ ಜಾತ್ಯಾತೀತತೆಯ ಪಾಠವನ್ನು ಕಲಿಸುವ ಅಗತ್ಯ ಬಾರದೇನೋ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಇದು ಸಿದ್ದರಾಮಯ್ಯ ಅವರ ಕಥೆಯಾದರೆ, ಡಿ ಸಿ ಎಂ ಡಿಕೆ ಶಿವಕುಮಾರ್ ಅಲ್ಪಸಂಖ್ಯಾತರ ಓಲೈಕೆಯ ವಿಷಯದಲ್ಲಿ ತಾವೇನೂ ಕಮ್ಮಿ ಇಲ್ಲ. ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತ ವರ್ಗದ ಸರ್ಕಾರ ಎಂಬಂತೆ ಹೇಳಿಕೆ ನೀಡಿದ್ದಾರೆ. ಕೆಲ ವರ್ಷದ ಹಿಂದೆ ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ ವಿಷಯ ನಿಮ್ಮೆಲ್ಲರಿಗೂ ತಿಳಿದಿರಬಹುದು. ಕಾಂಗ್ರೆಸ್ ಪಕ್ಷದ ನಾಯಕ ಅಖಂಡ ಶ್ರೀನಿವಾಸ ಅವರ ಮನೆಗೆ ಬೆಂಕಿ ಹಚ್ಚಿದ ಅಲ್ಪಸಂಖ್ಯಾತ ಪುಂಡರ ವಿರುದ್ಧ, ಪೊಲೀಸ್ ಠಾಣೆ ಯನ್ನು ಸುಟ್ಟ ಅಲ್ಪಸಂಖ್ಯಾತ ದುರುಳರ ವಿರುದ್ಧ ಕೇಸು ದಾಖಲಾಗಿದೆ. ಈ ಆರೋಪಿ ಪುಂಡರನ್ನು ಅಮಾಯಕರು ಎನ್ನುವ ಮೂಲಕ, ತನ್ನದೇ ಪಕ್ಷದ ನಾಯಕನಿಗೆ ಅನ್ಯಾಯ ಎಸಗಲು ಡಿ ಕೆ ಶಿವಕುಮಾರ್ ಮುಂದಾಗಿದ್ದಾರೆ. ಈ ಗಲಭೆಯ ರೌಡಿಗಳನ್ನು ಅಮಾಯಕರು ಎಂದಿರುವ ಅವರು, ಅವರ ವಿರುದ್ಧ ದಾಖಲಾದ ಕೇಸುಗಳನ್ನು ವಾಪಸ್ಸು ಪಡೆದು, ಅವರನ್ನು ರಕ್ಷಣೆ ಮಾಡುವ ಭರವಸೆಯನ್ನು ಅಲ್ಪಸಂಖ್ಯಾತರಿಗೆ ನೀಡಿದ್ದಾರೆ. ಆ ಮೂಲಕ ಕಾಂಗ್ರೆಸ್ ಪಕ್ಷ ‘ಖಾನ್‌ಗ್ರೇಸ್’ ಪಕ್ಷ ಎಂಬುದನ್ನು ಸಾಕ್ಷಿ ಸಮೇತ ಜಗಜ್ಜಾಹೀರು ಮಾಡಿದ್ದಾರೆ.

ಎಲ್ಲಾ ಜಾತಿ, ಧರ್ಮಗಳನ್ನು ಸಮನಾಗಿ ನೋಡುತ್ತೇವೆ, ನಮ್ಮದು ಜಾತ್ಯಾತೀತ ಪಕ್ಷ ಎಂದೆಲ್ಲಾ ಬಡಾಯಿ ಬಿಡುವ ಕಾಂಗ್ರೆಸ್ ನಾಯಕರೇ, ನಿಮಗೆ ಜಾತ್ಯಾತೀತತೆಯ ಅರ್ಥ ಏನು ಎಂಬುದರ ಅರಿವಾದರೂ ಇದೆಯಾ?.. ಹೀಗೆ ನಕಲಿ ಜಾತ್ಯಾತೀತತೆಯ ಮೂಲಕ ಯಾರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ನಿಮ್ಮದು?.. ಮುಂದಿನ ಬಾಗಿಲಲ್ಲಿ ಹಿಂದೂ – ಮುಸ್ಲಿಂ ಬಾಯಿ ಬಾಯಿ ಎನ್ನುವ ನೀವು, ಹಿಂದಿನ ಬಾಗಿಲಿನ ಮೂಲಕ ಅಲ್ಪಸಂಖ್ಯಾತರನ್ನು ಮಾತ್ರ ಅಭಿವೃದ್ಧಿ ಮಾಡಿ, ಹಿಂದೂಗಳ ಮೇಲೆ ಕತ್ತಿ ಮಸೆಯುತ್ತೀರಲ್ಲಾ.. ನಿಮಗೆ ನಾಚಿಗೆ, ಮಾನ – ಮರ್ಯಾದೆಯ ಅರ್ಥ ಗೊತ್ತೇ?

ಮೊದಲು ನಿಮ್ಮ ಬೂಟಾಟಿಕೆಯ ಜಾತ್ಯಾತೀತ ಮನಸ್ಥಿತಿ ಬಿಟ್ಟು ಮನುಷ್ಯರಾಗಿ. ಇಲ್ಲವಾದಲ್ಲಿ ಇಂದು ನೀವು ತಲೆ ಮೇಲೆ ಹೊತ್ತು ಮೆರೆವ ಅಲ್ಪಸಂಖ್ಯಾತರಿಂದಲೇ ನಾಳೆ ನಿಮ್ಮ ಪಕ್ಷದ ಅಂತ್ಯ ಸಂಸ್ಕಾರ ನಡೆಯಬಹುದು. ಎಚ್ಚರ.

Tags

Related Articles

Close