ಪ್ರಚಲಿತ

60 ವರ್ಷ ಕಾಣದ ಭಾಗ್ಯ ಈಗ ಹೇಗೆ ಕಾಣಲು ಸಾಧ್ಯ?: ಪೊಳ್ಳು ಭರವಸೆಯೊಂದಿಗೆ ಬೀದಿಗೆ ಬಂದ ಕಾಂಗ್ರೆಸ್‌!

ನಾ ನಾಯಕಿ ಎಂದು ಹೇಳಿಕೊಂಡು ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಕರ್ನಾಟಕಕ್ಕೆ ಬಂದಿದ್ದಾರೆ. ಕರ್ನಾಟಕದಲ್ಲಿ ಈ ಬಾರಿ ನಡೆಯಲಿರುವ ವಿಧಾನಸಭಾ ಚುನಾವಣಿಯನ್ನು ಗಮನದಲ್ಲಿರಿಸಿಕೊಂಡು ಕಾಂಗ್ರೆಸ್ ‘ನಾ ನಾಯಕಿ’ ಕಾರ್ಯಕ್ರಮ ನಡೆಸುತ್ತಿದ್ದು, ರಾಜ್ಯದ ನಾಯಕರ ಜೊತೆಗೆ ಕರ್ನಾಟಕದ ಜನರ ಕಿವಿಗೆ ಹೂವನ್ನಿರಿಸಿ ಮೋಸಗೊಳಿಸಲು ನಕಲಿ ಗಾಂಧಿ ಪ್ರಿಯಾಂಕ ರಾಜ್ಯಕ್ಕೆ ಆಗಮಿಸಿದ್ದಾರೆ.

ಕರ್ನಾಟಕ ಬಿಡಿ. ಭಾರತದ ಯಾವುದೇ ರಾಜ್ಯದ ಜನರು ಪ್ರಿಯಾಂಕ ಗಾಂಧಿಯನ್ನು ನಾಯಕಿ ಎಂಬುದಾಗಿ ಒಪ್ಪಿಕೊಂಡಿಲ್ಲ.. ಯಾರೋ ಕೆಲವು ಕಾಂಗ್ರೆಸ್ ‌ನವರಿಗಷ್ಟೇ ಆಕೆ ನಾಯಕಿಯಾಗಿದ್ದಾರೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ನಾ ನಾಯಕಿ ಕಾರ್ಯಕ್ರಮ ನಡೆಸುತ್ತಿದ್ದು, ಇದರಲ್ಲಿ ತನ್ನನ್ನು ತಾನೆ ನಾಯಕಿ ಎಂಬುದಾಗಿ ಪ್ರಿಯಾಂಕಾ ಗಾಂಧಿ ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಮತ್ತು ಮೂರ್ಖತನದ ಪರಮಾವಧಿ ಸಹ ಹೌದು.

ಅಂದ ಹಾಗೆ ಇದೇ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಂದು ಭರವಸೆಯನ್ನು ಜನರಿಗೆ ನೀಡಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಮನೆಯ ಯಜಮಾನ್ಯ ನಡೆಸುತ್ತಿರುವ ಮಹಿಳಾ ಸದಸ್ಯರ ಖಾತೆಗೆ ಮಾಸಿಕ ೨೦೦೦ ರೂ. ಗಳನ್ನು ನೀಡಲಿರುವುದಾಗಿ ತಿಳಿಸಿದೆ. ಗೃಹ ಲಕ್ಷ್ಮಿ ಎಂಬ ಹೆಸರಿನಲ್ಲಿ ಈ ಯೋಜನೆಯನ್ನು ಜಾರಿಗೆ ತರುವುದಾಗಿ ಹೇಳಿರುವ ಕಾಂಗ್ರೆಸ್ ಆ ಮೂಲಕ ಮಹಿಳೆಯರನ್ನು ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನ ನಡೆಸಿದೆ. ಈಗಾಗಲೇ ೨೦೦ ಯೂನಿಟ್ ಉಚಿತ ವಿದ್ಯುತ್, ಉಚಿತ ಅಕ್ಕಿ ನೀಡುತ್ತವೆ ಎಂದೆಲ್ಲಾ ಹೇಳಿ ಜನರನ್ನು ಮಂಗ್ಯಾ ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷ, ಈ ರಾಜ್ಯವನ್ನು ದಿವಾಳಿ ಮಾಡುವುದಕ್ಕೆ ಸ್ಕೆಚ್ ಹಾಕಿದೆಯೇನೋ ಎಂಬ ಸಂದೇಹ ಜನರಿಗೆ ಮೂಡದಿರದು.

ಕೆಲ ಸಮಯದ ಹಿಂದೆ ಶ್ರೀಲಂಕಾಕ್ಕೆ ಬಂದೊದಗಿದೆ ಸ್ಥಿತಿ, ಸದ್ಯ ಪಾಕಿಸ್ತಾನದಲ್ಲಿ ತಲೆದೋರಿರುವ ಆರ್ಥಿಕ, ಆಹಾರ ಕ್ಷಾಮದ ಪರಿಸ್ಥಿತಿಯನ್ನು ರಾಜ್ಯದಲ್ಲಿಯೂ ತರಲು ಕಾಂಗ್ರೆಸ್ ಪಕ್ಷ ಹೊರಟಿರುವಂತಿದೆ. ಇಲ್ಲಿ ಜನರ ರಟ್ಟೆ ಗಟ್ಟಿಯಾಗಿದೆ. ದುಡಿದು ತಿನ್ನುವ ಶಕ್ತಿಯೂ ಇದೆ. ಯಾರು ಅಶಕ್ತರಿದ್ದಾರೋ ಅವರನ್ನು ಗುರುತಿಸಿ, ಅವರ ಬದುಕು ಕಟ್ಟಿಕೊಳ್ಳುವುದಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸುವುದು, ಅಂತಹ ಯೋಜನೆಗಳ ಬಗ್ಗೆ ಚಿಂತಿಸುವುದರಲ್ಲಿ ಅರ್ಥವಿದೆ. ಆದರೆ, ದೇಶವನ್ನು ದಿವಾಳಿ ಮಾಡುವಂತಹ ಯೋಜನೆಗಳಿಂದ ಜನಸಾಮಾನ್ಯರಿಗೆ ಕ್ಷಣಿಕ ಸುಖ ದೊರೆತರೂ, ಆ ಬಳಿಕ ಭವಿಷ್ಯದಲ್ಲಿ ಇಂದು ಉಚಿತವಾಗಿ ಪಡೆದುಕೊಂಡದ್ದರ ಬೆಲೆಯನ್ನು ನಾವೇ ತೆರಿಗೆಯ ರೂಪದಲ್ಲಿ ತೆರಬೇಕಾದಾಗ ‘ಈ ಉಚಿತ’ಗಳು ಬೇಕಿತ್ತಾ ಎಂದೆಣಿಸದಿರದು.

ಉತ್ತಮ ಶಿಕ್ಷಣ ಮತ್ತು ಆರೋಗ್ಯ ನಮ್ಮ ಇಂದಿನ ಅಗತ್ಯತೆಯಾಗಿದೆ. ನಿಜವಾಗಿಯೂ ನಮಗೆ ಬೇಕಾಗಿರುವುದು ಉಚಿತವಾಗಿ ಶಿಕ್ಷಣ ದೊರೆಯುವುದು ಮತ್ತು ಉತ್ತಮ ಆರೋಗ್ಯದ ದೃಷ್ಟಿಯಿಂದ ಕೆಲ ವಾದ ರೂ ವೈದ್ಯಕೀಯ ವ್ಯವಸ್ಥೆಯನ್ನು ಉಚಿತವಾಗಿ ದೊರೆಯುವಂತೆ ಮಾಡಬೇಕಾಗಿರುವುದು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಕಾಂಗ್ರೆಸ್ ಉಚಿತ ನೀಡುವ ಮೂಲಕ ಜಡ ಸಮಾಜ ನಿರ್ಮಾಣದ ಭರವಸೆಗಳನ್ನು ಜನರಿಗೆ ನೀಡುತ್ತಿರುವುದು ಬೇಸರದ ಸಂಗತಿ. ಅಪಾಯದ ಸಂಕೇತ.

ಭಾರತಕ್ಕೂ ಪ್ರಸ್ತುತ ಪಾಕಿಸ್ತಾನ ಎದುರಿಸುತ್ತಿರುವ ಕ್ಷಾಮ ತಲೆದೋರಬಾರದು ಎಂದಾದಲ್ಲಿ ನಾ ನಾಯಕಿ ಎಂಬ ಸ್ವಯಂಘೋಷಿತರ ಇಂತಹ ಭರವಸೆಗಳನ್ನು ನಂಬದೆ, ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸುವ ಕೆಲಸ ನಮ್ಮೆಲ್ಲರಿಂದಾಗಬೇಕಿದೆ.

Tags

Related Articles

Close