ಪ್ರಚಲಿತ

ಜನರ ಜೇಬು ಕತ್ತರಿಸಲು ಹೊರಟ ‘ಕೈ’ ಪಡೆ

ಕಾಂಗ್ರೆಸ್‌ನ ಉಚಿತ ಭರವಸೆಗಳು ಕೇವಲ ಎಲೆಕ್ಷನ್ ಗಿಮಿಕ್ ಎಂಬುದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿದ ಕೇವಲ ಕೆಲವೇ ದಿನಗಳಲ್ಲಿ ಮತದಾರ ದೇವರುಗಳಿಗೆ ಮನವರಿಕೆಯಾಗಿದೆ. 

ಉಚಿತ ಗಳ ಸರಮಾಲೆಯ ಪ್ರಣಾಳಿಕೆಯನ್ನೇ ಜನರ ಮುಂದಿರಿಸಿ, ಮತ ಪಡೆದು ಸದ್ಯ ಅದೇ ಮತದಾರ ಪ್ರಭುಗಳ ಜೇಬಿಗೆ ‘ಕೈ’ ಹಾಕುವ ಮೂಲಕ ಜನರನ್ನು ಮತ್ತಷ್ಟು ಸಮಸ್ಯೆಗೆ ತಳ್ಳುವ ಕೆಲಸವನ್ನು ಈಗ ಕಾಂಗ್ರೆಸ್ ಮಾಡುತ್ತಿದೆ. ಆ ಮೂಲಕ ಜನರಿಗೆ ವಿಶ್ವಾಸ ವಂಚನೆಯನ್ನು ಬಹಳ ನಾಜೂಕಾಗಿ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಘೋಷಣೆ ಮಾಡಿರುವ ಫ್ರೀ ಆಫರ್‌ಗಳನ್ನು ಜನರಿಗೆ ನೀಡಲು, ಈಗ ಇನ್ನಿತರ ವಿಷಯಗಳಿಗೆ ಬೆಲೆ ಏರಿಕೆಗೆ ಮುಂದಾಗಿದೆ. ಹಾಗೆಯೇ, ಜನರ ಜೇಬಿಗೆ ಕತ್ತರಿ ಹಾಕುವ ಕೆಲಸಕ್ಕೂ ಕಾಂಗ್ರೆಸ್ ಮುಂದಾಗಿದೆ. 

ಸದ್ಯ ಕಾಂಗ್ರೆಸ್ ವಿದ್ಯುತ್‌ನ ಫಿಕ್ಸೆಡ್ ಬಿಲ್‌ನಲ್ಲಿ ಏರಿಕೆ, ಬೆಂಗಳೂರಿಗೆ ಸಂಬಂಧಿಸಿದಂತೆ ನೀರಿನ ಬಿಲ್ ಏರಿಸುವುದಾಗಿಯೂ ಯೋಜನೆ ಹಾಕಿಕೊಂಡಿದೆ. ಜೊತೆಗೆ ವಾಹನ ಸವಾರರ ಮೇಲೆಯೂ ಆರ್ಥಿಕ ಬರೆ ಹಾಕುವ ಕೆಲಸಕ್ಕೆ ಮುಂದಾಗಿರುವ ಕಾಂಗಿ ಸರ್ಕಾರ, ದಂಡಾಸ್ತ್ರ ಪ್ರಯೋಗಿಸಲು ಮುಂದಾಗಿರುವುದು ಆ ಮೂಲಕ ಜನರ ಜೇಬನ್ನು ಕತ್ತರಿಸುವ ಕೆಲಸ ಮಾಡಲು ಹೊರಟಿದೆ. ಜೊತೆಗೆ ಕಾಂಗ್ರೆಸ್ ಎಲ್ಲರಿಗೂ ನೀಡುವುದಾಗಿ ತಿಳಿಸಿದ್ದ ಭರವಸೆಗಳನ್ನು ಸಹ ಷರತ್ತುಗಳನ್ನು ಹಾಕಿ ನೀಡಲು ಹೊರಟಿದೆ. ಎಲ್ಲಾ ವರ್ಗದ ಜನರೂ ಕಾಂಗ್ರೆಸ್‌ನ ಉಚಿತ ಭರವಸೆಗಳನ್ನು ನಂಬಿ ಮತ ಹಾಗಿದ್ದರೂ, ಅವರೆಲ್ಲರಿಗೂ ಸಮಾನವಾಗಿ ಉಚಿತ ಭರವಸೆಗಳ ಹಂಚಿಕೆ ಮಾಡದೆ ಇದ್ದು, ಕೊಟ್ಟ ಮಾತಿಗೆ ತಪ್ಪಿ, ಜನರ ಕೆಂಗಣ್ಣಿಗೆ ಗುರಿಯಾಗಿದೆ ಎನ್ನುವುದರಲ್ಲಿ ಎರಡು ಮಾಡಿಲ್ಲ.

ಮದ್ಯ ಪ್ರಿಯರಂತೂ ಕಾಂಗ್ರೆಸ್ ಮೇಲೆ ಹಿಡಿ ಶಾಪ ಹಾಕುವ ಸ್ಥಿತಿ ಇದೆ. ಮದ್ಯದ ಮೇಲೆಯೂ ಬೆಲೆ ಏರಿಕೆಯ ಗಾಳಿ ಬೀಸಿದ್ದು, ಪ್ರತಿ ಬಾಟಲ್‌ಗೆ ಹತ್ತರಿಂದ ಇಪ್ಪತ್ತು ರೂ. ಗಳನ್ನು ಏರಿಕೆ ಮಾಡಿದೆ. ಇದು ಮದ್ಯ ಪ್ರಿಯರಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಒಟ್ಟಾರೆ ಉಚಿತ ನೀಡಿ ಬರಿದಾಗುವ ಸರ್ಕಾರದ ಬೊಕ್ಕಸ ತುಂಬಲು ಬೇರೆ ಬೇರೆ ರೀತಿಯಲ್ಲಿ ಜನರ ಹೊಟ್ಟೆ ಮೇಲೆ ಹೊಡೆಯುವ ಪದ ಕ್ಕೆ ಕಾಂಗ್ರೆಸ್ ಭರ್ಜರಿ ತಯಾರಿ ಮಾಡಿಕೊಂಡಿರುವುದಂತೂ ಸತ್ಯ.

ಒಟ್ಟಿನಲ್ಲಿ ಓಟು ಪಡೆದುಕೊಂಡು ಜನರನ್ನು ಮೂರ್ಖರನ್ನಾಗಿ ಮಾಡಿದ ಕಾಂಗ್ರೆಸ್, ಈಗ ಜನರಿಗೆ ಆರ್ಥಿಕ ಹೊಡೆತ ನೀಡುವ ಮೂಲಕ ಮತ್ತೊಂದು ಬರೆ ಎಳೆಯಲು ಸಿದ್ಧವಾಗಿದೆ. ಯಾತಕ್ಕಾದರೂ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಅಧಿಕಾರಕ್ಕೇರಿಸಿದೆವೋ ಎಂದು ಮತದಾರ ಪ್ರಭು ತಲೆ ಮೇಲೆ ಕೈ ಹೊತ್ತು ಕೂರುವ ಸ್ಥಿತಿ ಕರ್ನಾಟಕದ ಜನರದ್ದಾಗಿದೆ.

Tags

Related Articles

Close