ಪ್ರಚಲಿತ

ಅಧ್ಯಾಯ 18: ಸಂಘದ ವಿರೋಧಿಗಳ ಪಡೆ ಬಹು ದೊಡ್ಡದು! ಕಾಂಗ್ರೆಸ್, ಕಮ್ಯೂನಿಸ್ಟ್, ಮಿಷನರಿ, ಇಸ್ಲಾಂ ವಾದಿಗಳು ಎಲ್ಲರಿಂದ ಸಂಘ ದಾಳಿಗೊಳಗಾದ ಉದಾಹರಣೆಗಳಿವೆ, ಹಿಂದುತ್ವ ಅದಕ್ಕೆ ಕಾರಣ ಎಂದು ನೀವು ಭಾವಿಸಿದ್ದಲ್ಲಿ, ಇಲ್ಲಿದೆ ಸರಿಯಾದ ಮಾಹಿತಿ!

ಅಧ್ಯಾಯ 18: ಸಾಮಾಜಿಕ ಕ್ರಾಂತಿ ತರಲು ಸಂಘದ ಸ್ವಯಂಸೇವಕರು ಜೀವವನ್ನೇ ತೇಯ್ದರು

ಗೌಹಾಟಿಯಲ್ಲಿ ಸಂಘದ ಉನ್ನತ ಸ್ತರದ ಸಭೆಯೊಂದು ನಿಶ್ಚಯವಾಗಿತ್ತು. ಅಂದಿನ ಆರೆಸ್ಸೆಸ್ ಸಹಕಾರ್ಯವಾಹರಾಗಿದ್ದ, ಬಹುಭಾಷಾ ಸಾಹಿತಿ ಹೊ.ವೆ ಶೇಷಾದ್ರಿಗಳು ಅಂದಿನ ಬೈಠಕ್ ತೆಗೆದುಕೊಳ್ಳುವವರಿದ್ದರು. ಪದ್ಧತಿಯಂತೆ ಸಭೆಯ ಆರಂಭಕ್ಕೂ ಮುನ್ನ ವೈಯಕ್ತಿಕ ಗೀತೆಯನ್ನು ಹಾಡಲು ಯುವಕನೊಬ್ಬ ಮುಂದೆ ಬಂದ. ಆತ ಕೂಡಾ ಒಬ್ಬ ಪ್ರಚಾರಕ. ಯುವಕ ತನ್ಮಯತೆಯಿಂದ “ಧನೋ ಧನ್ಯೋ ಪುಷ್ಪೇ ಬಾರಾ… ’ ಎಂದು ಬಂಗಾಳಿ ಕವಿ ದ್ವಿಜೇಂದ್ರಲಾಲ್ ರಾಯ್ ಅವರ ಖ್ಯಾತ ಗೀತೆಯನ್ನು ಹಾಡತೊಡಗಿದ. ಇಡೀ ಬೈಠಕ್ ಸಮ್ಮೋಹನಕ್ಕೊಳಪಟ್ಟಂತೆ ಆಲಿಸಹತ್ತಿತು. ಸಹಜವಾಗಿ ಬಂಗಾಳಿ ಹಾಡುಗಳೆಲ್ಲವೂ ವಿಪರೀತ ಧೀರ್ಘವಾದವುಗಳು. ನೆರೆದಿದ್ದವರೆಲ್ಲರೂ ಹಾಡಿಗೆ ಮೈಮರೆತಿದ್ದಾಗ, ಸಮಯಪಾಲನೆ ಮತ್ತು ಶಿಸ್ತಿಗೆ ಹೆಸರಾಗಿದ್ದ ಶೇಷಾದ್ರಿಯವರು ಚಡಪಡಿಸಲಾರಂಭಿಸಿದರು. ನೋಡುವಷ್ಟೂ ನೋಡಿದರು. ಆದರೆ ಹಾಡು ಮುಗಿಯುತ್ತಲೇ ಇಲ್ಲ. ಕೊನೆಗೆ ಇನ್ನು ಸಾಧ್ಯವಿಲ್ಲ ಎಂಬಂತೆ ‘ಹೇ, ಸಾಕು ನಿಲ್ಲಿಸಪ್ಪಾ’ ಎಂದೇಬಿಟ್ಟರು. ಎಲ್ಲರಿಗೂ ಒಮ್ಮೆ ಅಮಲು ಬಿಟ್ಟಂತಾಯಿತು. ರಸಭಂಗವಾದರೂ ಬೈಠಕ್ ಗುಂಗಲ್ಲಿದ್ದವರು ಬೆನ್ನು ನೇರಮಾಡಿ ಕುಳಿತುಕೊಂಡರು. ಆದರೆ ಆ ಹುಡುಗ ಕಣ್ಣಲ್ಲಿ ನೀರು ತುಂಬಿಕೊಂಡ. ವಸುಂಧರಾ ಸ್ತುತಿಯನ್ನು ಆವಾಹಿಸಿಕೊಂಡ ಆತನಿಗೆ ಶೇಷಾದ್ರಿಯವರ ಆಜ್ಞೆಯಿಂದ ಬೇಸರವಾಯಿತು. ಆ ರಾತ್ರಿ ಆತ ನಿದ್ರೆ ಮಾಡಲಿಲ್ಲ.

ಮರುದಿನ ಬೆಳಿಗ್ಗೆ ಶೇಷಾದ್ರಿಗಳು ಆತನನ್ನು ಕರೆಯಿರಿ ಈಗ ಪೂರ್ತಿ ಹಾಡು ಕೇಳಬೇಕು’ ಎಂದರು. ಹುಡುಗ ಓಡೋಡಿ ಬಂದ. ಬೆಳಗ್ಗಿನ ತಿಂಡಿಗೆಂದು ಹೋಗುತ್ತಿದ್ದ ಹುಡುಗನ ಕೈಯಲ್ಲಿ ಖಾಲಿ ತಟ್ಟೆಯಿತ್ತು. ತಟ್ಟೆಯನ್ನು ಹಿಡಿದೇ ಧನೋ ಧನ್ಯೋ ಪುಷ್ಪೇ ಬಾರಾ…ಆಮಾದೇರ್ ಇ ಬಸುಂಧರಾ…’ ಎಂದು ರಾಗವಾಗಿ ಹಾಡತೊಡಗಿದ. ತಿಂಡಿಯ ಸಾಲಲ್ಲಿದ್ದವರು, ತಮ್ಮ ಕೆಲಸದಲ್ಲಿ ಮುಳುಗಿದ್ದವರು ಸುತ್ತ ನೆರೆದರು. ಶೇಷಾದ್ರಿಗಳು ತಿಂಡಿಯನ್ನು ಮರೆತು ಹುಡುಗನನ್ನು ನೋಡತೊಡಗಿದರು. ಆತ ಕಣ್ಣುಗಳನ್ನು ಮುಚ್ಚಿ ವಸುಂಧರೆಯನ್ನು ಸ್ತುತಿಸಿ ಮುಗಿಸಿದಾಗ ಶೇಷಾದ್ರಿಗಳು ಎರಡೂ ಕೈಗಳಿಂದ ಆತನ ಭುಜಕ್ಕೆ ಹಿಡಿದು ನಿನ್ನೆಯ ಘಟನೆಗೆ ನೊಂದುಕೊಳ್ಳಬೇಡ, ಸ್ವಯಂಸೇವಕನಿಗೆ ಸಮಯಪಾಲನೆ ಮುಖ್ಯ ಎಂದು ತಿಳಿಸಿದರು. ಈ ಘಟನೆಯಾಗಿ ಐದೇ ಐದು ವರ್ಷಗಳಾಗಿತ್ತು. ಅದೇ ಶೇಷಾದ್ರಿಯವರು ಅದೇ ಹುಡುಗನ ಶ್ರದ್ಧಾಂಜಲಿ ಲೇಖನವನ್ನು ಪಾಂಚಜನ್ಯ ಪತ್ರಿಕೆಯಲ್ಲಿ ಬರೆಯಬೇಕಾದ ಪ್ರಸಂಗ ಬಂತು.

ಆ ಹುಡುಗ ತ್ರಿಪುರಾ ಜಿಲ್ಲಾ ಪ್ರಚಾರಕ ಶುಭಂಕರ ಚಕ್ರವರ್ತಿ. ಆತನಷ್ಟೇ ಅಲ್ಲ, ಅಂದು ಶೇಷಾದ್ರಿಯವರು ಪೂರ್ವಾಂಚಲದ ಕ್ಷೇತ್ರೀಯ ಕಾರ್ಯವಾಹ ೬೭ ವರ್ಷದ ಶ್ಯಾಮ ಕಾಂತಿ ಸೇನ್ ಗುಪ್ತಾ,ದಕ್ಷಿಣ ಅಸ್ಸಾಂ ಪ್ರಾಂತದ ಶಾರೀರಿಕ್ ಪ್ರಮುಖ್ 51 ವರ್ಷದ ದೀನೇಂದ್ರ ನಾಥ ಡೇ, ಅಗರ್ತಲಾ ವಿಭಾಗ ಪ್ರಚಾರಕ 51ವರ್ಷದ ಸುಧಾಮಯ ದತ್ ಅವರ ಬಗ್ಗೆ ಕೂಡಾ ಶ್ರದ್ಧಾಂಜಲಿ ಲೇಖನವನ್ನು ಭಾವಪೂರ್ಣವಾಗಿ ಬರೆದರು. 1999ರ ಆಗಸ್ಟ್ 6, ಈ ನಾಲ್ವರು ಕಾರ್ಯಕರ್ತರು ತ್ರಿಪುರಾದ ಕಾಂಚನ್‌ಛೇಡಾ ವನವಾಸಿ ಕ್ಷೇತ್ರಕ್ಕೆ ಪ್ರವಾಸ ಹೊರಟಿದ್ದರು. ಕಾಂಚನ್‌ಛೇಡಾದಲ್ಲಿ ಆರೆಸ್ಸೆಸ್ಸಿನ ಕನಸ್ಸಿನ ಪ್ರಕಲ್ಪವೊಂದು ಆರಂಭವಾಗಿತ್ತು. ವನವಾಸಿ ಮಕ್ಕಳ ಶಿಕ್ಷಣ, ಆರೋಗ್ಯಕ್ಕಾಗಿ ಹಲವು ಯೋಜನೆಗಳು ಕಾರ್ಯನಿರ್ವಹಿಸುತ್ತಿದ್ದವು. ಇದರಿಂದ ಕಾಂಚನ್‌ಛೇಡಾದಲ್ಲಿ ಕ್ರೈಸ್ತ ಮಿಷನರಿಗಳ ಪ್ರಭಾವ ಕಡಿಮೆಯಾಗಿತ್ತು. ಹಾಗಾಗಿ ಕಾರ್ಯಕರ್ತರು ಕಾಂಚನ್‌ಛೇಡಾಕ್ಕೆ ಪದೇ ಪದೇ ಹೋಗಬೇಕಾಗುತ್ತಿತ್ತು. ಹೀಗೆ ಅಂದು ಅಗರ್ತಲಾದಿಂದ ಹೊರಟಿದ್ದ ಅವರು ಅತ್ತ ವನವಾಸಿ ಕ್ಷೇತ್ರಕ್ಕೂ ಮುಟ್ಟದೆ, ಇತ್ತ ಮರಳಿಯೂ ಬಾರದೆ ದಿನ ನಾಲ್ಕು ಕಳೆಯಿತು. ಐದನೇ ದಿನ ಅಂದರೆ ಆಗಸ್ಟ್ ೧೧ರಂದು ತ್ರಿಪುರಾದ ಭಯಾನಕ ಭಯೋತ್ಪಾದಕ ಸಂಘಟನೆ ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರಾ ನಾಲ್ಕು ಜನ ಆರೆಸ್ಸೆಸ್ ಕಾರ್ಯಕರ್ತರನ್ನು ತಾನು ಅಪಹರಣ ಮಾಡಿರುವುದಾಗಿ ಘೋಷಣೆ ಮಾಡಿತು. ಭಾರತ-ಬಾಂಗ್ಲಾ ಗಡಿಯ ಚಿತ್ತಗಾಂಗ್‌ನ ಬೆಟ್ಟಗಳನ್ನು ತನ್ನ ನೆಲೆಮಾಡಿಕೊಂಡಿದ್ದ ಈ NLFTಪ್ರತ್ಯೇಕ ತ್ರಿಪುರಾ ರಾಷ್ಟ್ರಕ್ಕಾಗಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿತ್ತು. ಅವರ ಬೇಡಿಕೆಗೆ ಬಾಂಗ್ಲಾ ಮೂಲದ ಭಯೋತ್ಪಾದಕ ಸಂಘಟನೆಗಳೂ, ಕ್ರಿಶ್ಚಿಯನ್ ಮಿಷನರಿಗಳೂ ಬೆಂಬಲ ನೀಡಿತ್ತು.
NLFT ಒತ್ತೆಯಾಳುಗಳ ಬಿಡುಗಡೆಗೆ ಈಗಿಂದೀಗಲೇ ತ್ರಿಪುರಾ ರೈಫಲ್ಸ್ ಅನ್ನು ವಿಸರ್ಜಿಸಬೇಕು ಎಂಬ ಗಂಭೀರ ಬೇಡಿಕೆಯನ್ನಿಟ್ಟಿತು. ಕೇಂದ್ರದಲ್ಲಿ ಆಗ ವಾಜಪೇಯಿ ಸರ್ಕಾರವಿತ್ತು. ಜನರು ಆರಾಧಿಸುತ್ತಿದ್ದ ಮಂತ್ರಿಮಂಡಲವಿತ್ತು. ತ್ರಿಪುರಾದಲ್ಲಿ ಆಗಲೂ ಸರಳ ಮುಖ್ಯಮಂತ್ರಿ ಎಂಬ ಬಿರುದಾಂಕಿತ ಮಾಣಿಕ್ ಸರ್ಕಾರ್ ಅವರ ಕಮ್ಯುನಿಸ್ಟ್ ಸರ್ಕಾರವಿತ್ತು.

ಸರ್ಕಾರಕ್ಕೆ ಅಪಹೃತರು ಸಂಸಾರ ಬಿಟ್ಟುಬಂದ ಆರೆಸ್ಸೆಸ್ಸಿಗರೆಂಬ ಉದಾಸೀನವಿತ್ತೋ ಗೊತ್ತಿಲ್ಲ. ಏನೂ ನಡೆದಿಲ್ಲವೆಂಬಂತೆ ತೆಪ್ಪಗಿದ್ದುಬಿಟ್ಟಿತು. ದೇಶಾದ್ಯಂತ ಆರೆಸ್ಸೆಸ್ ಕಾರ್ಯಕರ್ತರು ಪ್ರತಿಭಟಿಸಿ ಒತ್ತೆಯಾಳುಗಳ ಬಿಡುಗಡೆಗೆ ಒತ್ತಾಯಿಸಿದರು. ಕಮ್ಯುನಿಸ್ಟರಂತೂ ಅಪಹರಣದಿಂದ ಒಳ್ಳೆಯದೇ ಆಯಿತೆಂದುಕೊಂಡರು. ಹೀಗೆ ಪ್ರತಿಭಟನೆಯಲ್ಲೇ ಒಂದು ವರ್ಷ ಕಳೆದುಹೋಯಿತು. ಸರಿಯಾಗಿ 2000 ನೇ ಇಸವಿಯ ಆಗಸ್ಟ್ 6ರಂದು ಬಾಫ್ಟಿಸ್ಟ್ ಚರ್ಚಿನ ಬೆಂಬಲವಿದ್ದ ಅಪಹರಣಕಾರರು ಒತ್ತೆಯಾಳುಗಳ ಬಿಡುಗಡೆಗೆ ಆರೆಸ್ಸೆಸ್ 2 ಕೋಟಿ ರೂಗಳನ್ನು ನೀಡಬೇಕೆಂದು ಬೇಡಿಕೆ ಇಟ್ಟಿತು. ಹೊ.ವೆ ಶೇಷಾದ್ರಿಗಳು ಸ್ವತಃ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ದೆಹಲಿಯ ಜಂತರ್ ಮಂಥರ್ ನಲ್ಲಿ ಧರಣಿ ಕುಳಿತರು. ದೇಶಾದ್ಯಂತ ಸಾವಿರಾರು ಜನರು ತಾವು ಎರಡು ಕೋಟಿ ರೂಗಳನ್ನು ನೀಡುವೆವೆಂದು ಮುಂದೆ ಬಂದರು. ಆದರೆ ಅಂದಿನ ಸರಸಂಘಚಾಲಕರಾಗಿದ್ದ ಕು.ಸಿ ಸುದರ್ಶನರು ‘ದುಷ್ಟರಿಗೆ ಹಣ ನೀಡುವ ಕೆಟ್ಟ ಪರಂಪರೆಯನ್ನು ನಾವು ಬೆಂಬಲಿಸಲಾರೆವು ’ ಎಂದು ಘೋಷಿಸಿದರು. ಅಲ್ಲಿಗೆ ಅಪಹರಣಕಾರರಿಗೆ ಆರೆಸ್ಸೆಸ್ಸಿಗರು ಎಂಥವರೆಂಬುದು ತಿಳಿದುಹೋಗಿತ್ತು. ಅಂತಿಮವಾಗಿ ದೇಶಾದ್ಯಂತ ಕಾರ್ಯಕರ್ತರರು ಗಟ್ಟಿ ಮನಸ್ಸು ಮಾಡಿಕೊಂಡರು. ಕೊನೆಗೂ ಅವರು ನಿರೀಕ್ಷಿಸಿದ್ದ ಸಮಾಚಾರ 2001ರ ಜುಲೈ 2ರಂದು ತಲುಪಿತು. ನಾಲ್ವರು ಕಾರ್ಯಕರ್ತರ ಕೊಳೆತ ದೇಹ ಕಾಡಿನಲ್ಲಿ ಪತ್ತೆಯಾಯಿತು. ವೈದ್ಯಕೀಯ ಪರೀಕ್ಷೆಗಳಲ್ಲಿ ಇವರನ್ನು ಆರು ತಿಂಗಳ ಹಿಂದೆಯೇ ಅಂದರೆ 2000ನೇ ಇಸವಿಯ ಡಿಸೆಂಬರಿನಲ್ಲೇ ಹತ್ಯೆ ಮಾಡಲಾಗಿದೆ ಎಂದು ತಿಳಿಸಿದವು. ಅಂದರೆ ಶೇಷಾದ್ರಿಗಳು ಜಂತರ್ ಮಂಥರಿನ ಬಿಸಿಲಿನಲ್ಲಿ ಒಣಗುತ್ತಿದ್ದಾಗಲೇ ಶುಭಂಕರ ಭೀಕರವಾಗಿ ಹತ್ಯೆಯಾಗಿದ್ದ.
ಅದೇ ತ್ರಿಪುರಾದಲ್ಲೀಗ ರಾಷ್ಟ್ರೀಯವಾದಿಗಳು ಸರ್ಕಾರ ರಚಿಸಿದ್ದಾರೆ. ಆ ವಿಜಯಕ್ಕೆ ನಾನಾ ಅರ್ಥ, ನಾನಾ ಕೋನ, ನಾನಾ ರಣತಂಣತ್ರಗಳಿರಬಹುದು. ಆದರೆ ಆವೆಲ್ಲಕ್ಕಿಂತಲೂ ಹೆಚ್ಚಿನದು ಈ ನಾಲ್ವರು ಸ್ವಯಂಸೇವಕರ ಬಲಿದಾನ. ಈ ಬಲಿದಾನಗಳಿಲ್ಲದಿದ್ದರೆ ಸುನಿಲ್ ದೇವಧರ್ ಅಗಲೀ, ಬಿಬ್ಲವ್ ಕುಮಾರ್ ದೇಬ್ ಆಗಲೀ ತ್ರಿಪುರಾಕ್ಕೆ ಹೋಗುವ ಸಂದರ್ಭವೇ ಬರುತ್ತಿರಲಿಲ್ಲ. ತ್ರಿಪುರಾ ಆ ಬಲಿದಾನವನ್ನು ಮರೆತುಬಿಟ್ಟಿದ್ದರೆ ಇಂದು ಲೆನಿನ್ ಪ್ರತಿಮೆ ಉರುಳುತ್ತಿರಲಿಲ್ಲ. ಏಕೆಂದರೆ ಲೆನಿನ್ ಪ್ರತಿಮೆ ಉರುಳಿದ್ದೇ ಆ ನಾಲ್ಕು ಬಲಿದಾನಕ್ಕೆ ಇಂದು ನ್ಯಾಯ ಸಿಕ್ಕಿದೆ ಎನ್ನುವುದರ ಸಂಕೇತ.

ರಾಜಕೀಯ ಹಿಂಸಾಚಾರಕ್ಕೆ ಯಥೇಚ್ಛ ಉದಾಹರಣೆಗಳನ್ನು ನೀಡಿರುವ ರಾಜ್ಯವೆಂದರೆ ನೆರೆಯ ಕೇರಳ. ದೇವರ ಸ್ವಂತ ನಾಡು (God’s Own Country) ಎಂಬ ಹೆಗ್ಗಳಿಕೆಯಿದ್ದರೂ ಅತಿಕ್ಷುಲ್ಲಕ ವಿಚಾರಗಳಿಗೂ ನೆತ್ತರು ಹರಿಸುವಷ್ಟು ಸಲೀಸಾಗಿ ರಾಜಕೀಯ ಹಿಂಸಾಚಾರಕ್ಕೆ ಹೆಸರುವಾಸಿಯಾಗಿರುವುದು ಕೇರಳ ಜನತೆಯ ವಿಪರ್ಯಾಸ. ಕಳೆದ 50 ವರ್ಷಗಳಲ್ಲಿ 300ಕ್ಕೂ ಹೆಚ್ಚು ಯುವಕರು ಈ ರಾಜಕೀಯ ಹಿಂಸಾಚಾರಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಕ್ಕೂ ಅಧಿಕಮಂದಿ ಬೆರಳು-ಕೈ-ಕಾಲು ಕಳೆದುಕೊಂಡು ಜೀವನಪರ್ಯಂತ ಯಾತನೆ ಅನುಭವಿಸುತ್ತಿದ್ದಾರೆ. ಅಪಾರಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ. ಮನೆ-ಮಠ ಕಳೆದುಕೊಂಡವರ ಪಾಡು ಹೇಳತೀರದು.2016 ಅಕ್ಟೋಬರ್ 12ರಂದು ಕಣ್ಣೂರು ಜಿಲ್ಲೆಯ ಪಿಣರಾಯಿ ಎಂಬಲ್ಲಿ ಆರೆಸ್ಸೆಸ್ ಸ್ವಯಂಸೇವಕ ರಮಿತ್ ಎಂಬ ಯುವಕನನ್ನು ಕಮ್ಯುನಿಸ್ಟ್ ಕಾರ್ಯಕರ್ತರು ಹಾಡುಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಹಾಕಿದರು. ಕೇರಳ ಮುಖ್ಯಮಂತ್ರಿಯ ಸ್ವಗ್ರಾಮದಲ್ಲಿ ನಡೆದ ಈ ಭೀಕರ ಹತ್ಯೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಯಿತು. ಇದಕ್ಕೂ ಮುನ್ನ 2002 ರ ಮೇ 22ರಂದು ರಮಿತ್ ನ ತಂದೆ ಹಾಗೂ ಆರೆಸ್ಸೆಸ್ ಸ್ವಯಂಸೇವಕರಾಗಿದ್ದ ಉತ್ತಮನ್ ರನ್ನು ಕೊಲೆಗೈಯಲಾಗಿತ್ತು. ಇತ್ತೀಚಿಗೆ ಮೇ ತಿಂಗಳಲ್ಲಿ ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದ ಸಂಭ್ರಮದಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತರು ರಮಿತ್ ನ ಮನೆಗೆ ದಾಳಿ ನಡೆಸಿದ್ದರು. ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಕಿ ಖುಷಿ ಆಚರಿಸಿದ್ದರು. ತಡೆಯಲು ಬಂದ ತಾಯಿ ನಾರಾಯಣಿ ಮೇಲೆ ಹಲ್ಲೆ ನಡೆಸಿದ್ದರ ಪರಿಣಾಮವಾಗಿ ಆಕೆ ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಇದೀಗ ರಮಿತ್ ನ ತಾಯಿ ನಾರಾಯಣಿ ಗಂಡನನ್ನೂ, ಮಗನನ್ನೂ ಕಮ್ಯುನಿಸ್ಟ್ ಹಿಂಸಾಚಾರಕ್ಕೆ ಕಳೆದುಕೊಂಡಿದ್ದಾರೆ.

ಇಷ್ಟಕ್ಕೂ, ಈ ಎಲ್ಲ ಹಿಂಸಾಚಾರದ ಕೃತ್ಯಗಳಲ್ಲಿ ಹತ್ಯೆಗೊಳಗಾದದ್ದು, ಹಲ್ಲೆಗೊಳಗಾಗುತ್ತಿರುವವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು. ಕೊಲೆ ಹಿಂಸೆ ಮಾಡಿದವರಲ್ಲಿ ಬಹುಪಾಲು ಕಮ್ಯೂನಿಸ್ಟ್ ಅಥವಾ ಮಾರ್ಕಿಸ್ಟರದ್ದೇ. ಕೆಲವು ಇಸ್ಲಾಮಿಕ್ ಸಂಘಟನೆಗಳು, ಮಿಷನರಿಗಳೂ ಕೆಲವು ಬಾರಿ ಹಿಂಸೆಗಿಳಿದ ಉದಾಹರಣೆಗಳೂ ಇವೆ. ಒಟ್ಟಿನಲ್ಲಿ 230ಕ್ಕೂ ಅಧಿಕ ಮಂದಿ ಆರೆಸ್ಸೆಸ್ ಸ್ವಯಂಸೇವಕರು ಹತ್ಯೆಯಾಗಿದ್ದಾರೆ ಎನ್ನುತ್ತದೆ ಒಂದು ಲೆಕ್ಕಾಚಾರ! ರಾಷ್ಟ್ರೀಯವಾದಿ ಸಾಮಾಜಿಕ ಕಾರ್ಯಕರ್ತರ ಹತ್ಯೆಗೆ ವಿರೋಧಿಗಳೆಲ್ಲ ಒಟ್ಟಾದ ಉದಾಹರಣೆಗಳು ಹೇರಳವಾಗಿವೆ. ಇಷ್ಟೊಂದು ಅಗಾಧ ಪ್ರಮಾಣದ ರಾಜಕೀಯಹತ್ಯೆಗಳು ಭಾರತದ ಯಾವ ರಾಜ್ಯದಲ್ಲೂ ವರದಿಯಾಗಿಲ್ಲ. ಕೇರಳದಲ್ಲಿನ ಈ ಕಮ್ಯೂನಿಸ್ಟ್ ರಕ್ತಪಾತದ ಕತ್ತಲೆಯ ಪುಟಗಳು ಇದೀಗ ರಾಷ್ಟ್ರಮಟ್ಟದಲ್ಲಿ ಅನಾವರಣಗೊಳ್ಳುತ್ತಿದೆ. ಮುಖವಾಡ ಬಯಲಾಗುತ್ತಿದೆ.1925ರಲ್ಲಿ ಪ್ರಾರಂಭಗೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳೂ ಕೇರಳ ತಲುಪಿದ್ದು; ಕಮ್ಯೂನಿಸ್ಟ್ ವಿಚಾರಧಾರೆ ತಲಪಿದ ವೇಳೆಯಲ್ಲೇ. ಅದರೆ ಸದ್ದಿಲ್ಲದೆ, ಸಾರ್ವಜನಿಕವಾಗಿ ಮೌನಿಯಾಗಿಯೇ ಸಂಘದ ಚಟುವಟಿಕೆಗಳು ಕೇರಳದುದ್ದಕ್ಕೂ ವ್ಯಾಪಿಸಿತು. ಸಾವಿರಾರು ಯುವಕರು ಸಂಘ ಪ್ರತಿಪಾದಿಸುತ್ತಿದ್ದ ರಾಷ್ಟ್ರೀಯ ವಿಚಾರಗಳತ್ತ ಆಕರ್ಷಿತರಾದರು. ನಿಸ್ವಾರ್ಥ ಸಮಾಜಸೇವೆಗೆ ಮುಂದಾದರು. ಪರಿಣಾಮವಾಗಿ ಇಡೀ ಭಾರತದಲ್ಲೇ ಅತಿ ಹೆಚ್ಚು ಆರೆಸ್ಸೆಸ್ ಶಾಖೆ-ಚಟುವಟಿಕೆಗಳುಳ್ಳ ರಾಜ್ಯ ಎಂಬ ಮನ್ನಣೆಗೂ ಕೇರಳ ಪಾತ್ರವಾಯಿತು. ಆರೆಸ್ಸೆಸ್ ವಿಚಾರಧಾರೆ ಅಥವಾ ರಾಷ್ಟ್ರೀಯ ವಿಚಾರದ ದೃಷ್ಟಿಕೋನಗಳು ಕೇರಳದ ಶಿಕ್ಷಣ-ಸಾಮಾಜಿಕ- ಸಾಹಿತ್ಯ ಹಾಗೂ ಸಿನಿಮಾರಂಗದ ಮೇಲೂ ಪ್ರಭಾವ ಬೀರಿತು.

ಅಷ್ಟೇ ಅಲ್ಲ, ಅದಾಗಲೇ ಯುವಜನತೆಯನ್ನು ಆಕರ್ಷಿಸುವಲ್ಲಿ ಕಮ್ಯೂನಿಸ್ಟ್ ವಿಚಾರಧಾರೆ ವಿಫಲವಾಗುತ್ತಾ ಸಾಗಿತು. ಯೌವನದಲ್ಲಿ ಕಮ್ಯೂನಿಸ್ಟ್ ಕಾರ್ಯಕರ್ತರಾಗಿದ್ದ ಅನೇಕರು ಮದುವೆಯಾಗಿ ಮಕ್ಕಳಾದ ಮೇಲೆ, ಮಕ್ಕಳನ್ನು ಆರೆಸ್ಸೆಸ್ ಶಾಖೆಗಳಿಗೆ ಕಳುಹಿಸಿದ ಉದಾಹರಣೆಗಳೂ ನೂರಾರು.
ತಮ್ಮ ಜೊತೆಯಿದ್ದ ಯುವಕರು ರಾಷ್ಟ್ರೀಯ ವಿಚಾರಧಾರೆಯತ್ತ ಒಲವು ತೋರಿಸಿ, ವಲಸೆ ಹೋಗುವುದನ್ನು ತಡೆಯಲು ಅವರು ಬಳಸಿದ್ದು ರಕ್ತಕ್ರೌರ್ಯದ ಮಾರ್ಗವನ್ನು. 1965ರ ಮಾರ್ಚ್ 18ರಂದು ಕೇರಳದ ಈ ರಕ್ತದೋಕುಳಿಗೆ ಮುನ್ನುಡಿ ಬರೆಯಲಾಯಿತು. ಮಲಪ್ಪುರಂ ಜಿಲ್ಲೆಯ ತಾಣೂರ್ ಎಂಬಲ್ಲಿ ಸುಬ್ರಮಣಿಯಮ್ ಎಂಬ 18 ವರ್ಷದ ತರುಣನ ಹತ್ಯೆಯೊಂದಿಗೆ ಕೇರಳದ ರಾಜಕೀಯ ಹಿಂಸಾಚಾರ ಪ್ರಾರಂಭವಾಯಿತು. ಮೊನ್ನೆ ಸೆಪ್ಟೆಂಬರ್ 3, 2016ರಂದು ಕಣ್ಣೂರಿನ ಇರಿಟ್ಟಿ ಬಳಿಯ ಬಿನೀಶ್ ಎಂಬ ಯುವಕನ ಹತ್ಯೆಯ ತನಕ, ಈವರೆಗೆ ಇನ್ನೂರಕ್ಕೂ ಹೆಚ್ಚು ಆರೆಸ್ಸೆಸ್ ಸ್ವಯಂಸೇವಕರು ರಕ್ತಪಾತಕ್ಕೆ ಬಲಿಯಾಗಿದ್ದಾರೆ. ಅನೇಕ ಕೋರ್ಟ್ ಕೇಸುಗಳಲ್ಲಿ ನಾಯಕರುಗಳ ಅಪರಾಧಗಳು ಸಾಬೀತಾಗಿವೆ. ನೂರಾರು ಕಮ್ಯೂನಿಸ್ಟ್ ಕಾರ್ಯಕರ್ತರು ತಾವು ಮಾಡಿದ ಕೊಲೆ ಹಲ್ಲೆ ಕೃತ್ಯಗಳಿಗಾಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಎಬಿವಿಪಿಯ ಯುವ ಮುಂದಾಳು ವಿಶಾಲ್ ಕುಮಾರ್ ಎಂಬ ಯುವಕನನ್ನು 2012 ಜುಲೈ 17ರಂದು ಭೀಕರವಾಗಿ ಹತ್ಯೆ ಮಾಡಲಾಯಿತು. ಬಿ.ಎಸ್ಸಿ. ಇಲೆಕ್ಟ್ರಾನಿಕ್ಸ್ ವಿದ್ಯಾರ್ಥಿಯಾಗಿದ್ದ ಈ ಪ್ರತಿಭಾವಂತ ಯುವಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಚೆಂಗನ್ನೂರು ತಾಲೂಕು ಅಧ್ಯಕ್ಷ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಗರ ಶಾರೀರಿಕ ಪ್ರಮುಖನಾಗಿ ಜವಾಬ್ದಾರಿ ಹೊಂದಿದ್ದ. ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದಂದು ಕಾಲೇಜಿನ ಪ್ರವೇಶ ದ್ವಾರದಲ್ಲಿ ಸರಸ್ವತಿಯ ಚಿತ್ರದೊಂದಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಎಂಬ ಕಾರಣಕ್ಕೆ ಆತನ ಹತ್ಯೆ ಮಾಡಲಾಯಿತು.ಕೆ.ಟಿ. ಜಯಕೃಷ್ಣನ್ ಮಾಸ್ತರ್ : ಕೇರಳದ ಇತಿಹಾಸದಲ್ಲೇ ಅತಿ ಭಯಾನಕ ಹತ್ಯೆ ಎಂದರೆ ಕೆ.ಟಿ. ಜಯಕೃಷ್ಣನ್ ಮಾಸ್ತರ್ ಅವರದ್ದು. 1999ರ ಡಿಸೆಂಬರ್ 1 ರಂದು ಕಣ್ಣೂರಿನ ಪನೂರ್ ಬಳಿಯ ಕೂತುಪರಂಬು ಎಂಬಲ್ಲಿನ ಮೊಕೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಅವರು, ಎಂದಿನಂತೆ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾಗಲೇ, ವಿದ್ಯಾರ್ಥಿಗಳ ಎದುರೇ ದಾರುಣವಾಗಿ ಹತ್ಯೆಗೀಡಾದವರು. ಆರೆಸ್ಸೆಸ್ ಸ್ವಯಂಸೇವಕರಾಗಿದ್ದ ಕೆ.ಟಿ.ಜಯಕೃಷ್ಣನ್ ಮಾಸ್ತರ್ ಭಾರತೀಯ ಜನತಾ ಯುವ ಮೋರ್ಚಾದ ಕೇರಳ ರಾಜ್ಯ ಉಪಾಧ್ಯಕ್ಷರಾಗಿ ಜವಾಬ್ದಾರಿ ಹೊಂದಿದ್ದರು.ಎಳಂತೋಟತ್ತಿಲ್ ಮನೋಜ್ : ಕಮ್ಯೂನಿಸ್ಟರ ನೆಲೆಬೀಡಾದ ಕಣ್ಣೂರಿನಲ್ಲಿ ಅನೇಕ ಕಮ್ಯೂನಿಸ್ಟ್ ಯುವಕರು ಆರೆಸ್ಸೆಸ್ಸಿನತ್ತ ಮುಖ ಮಾಡಿದ ಸಂದರ್ಭ. ಇದಕ್ಕೆ ಕಾರಣ ಮನೋಜ್‌ರ ಅಪ್ರತಿಮ ಸ್ನೇಹಶೀಲ ವ್ಯಕ್ತಿತ್ವ. ಆದರೆ ಕಮ್ಯೂನಿಸ್ಟರ ರಕ್ತಕ್ರೌರ್ಯಕ್ಕೆ ಬಲಿಯಾದ ಮನೋಜ್ 2014ರ ಸೆಪ್ಟೆಂಬರ್ 1 ರಂದು ಕಣ್ಣೂರಿನ ಕದಿರೂರು ಎಂಬಲ್ಲಿ ಹಾಡುಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಯಿತು.

ಸದಾನಂದನ್ ಮಾಸ್ತರ್ ರ ಹೋರಾಟಗಾಥೆ:

ಸದಾನಂದನ್ ಮಾಸ್ತರ್ ಎಂಬವರ ಹೋರಾಟಗಾಥೆ ನಿಜಕ್ಕೂ ಮೈನವಿರೇಳಿಸುವಂತದ್ದು. ಒಂದೊಮ್ಮೆ ಕಣ್ಣೂರಿನ ಕಮ್ಯೂನಿಸ್ಟ್ ಪಾರ್ಟಿಯಲ್ಲಿ ಸಕ್ರಿಯರಾಗಿದ್ದ ಸದಾನಂದನ್ ಮಾಸ್ತರ್‌ರಿಗೆ ಕ್ರಮೇಣ ಕಮ್ಯೂನಿಸ್ಟ್ ವಿಚಾರದ ಭಂಡತನದ ಅರಿವಾಯಿತು. ಆರೆಸ್ಸೆಸ್ಸಿನತ್ತ ಮುಖ ಮಾಡಿದ ಸದಾನಂದನ್ ಮಾಸ್ತರ್ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾದರು. ಆರೆಸ್ಸೆಸ್‌ನ ಕಣ್ಣೂರು ಜಿಲ್ಲಾ ಸಹ ಕಾರ‍್ಯವಾಹ ಜವಾಬ್ದಾರಿ ವಹಿಸಿದರು. ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಗಳೊಂದಿಗೆ ಸಾವಿರಾರು ಯುವಕರಿಗೆ ಪ್ರೇರಣೆಯಾಗಿದ್ದರು. ಇದನ್ನು ಸಹಿಸದ ಕಮ್ಯೂನಿಸ್ಟ್ ನಾಯಕರು ಸದಾನಂದನ್ ಮಾಸ್ತರ್‌ರ ಹತ್ಯೆಗೆ ಸಂಚು ರೂಪಿಸಿದರು. ಭೀಕರ ಆಕ್ರಮಣದಲ್ಲಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡರು. ಎರಡೂ ಕಾಲುಗಳು ಕತ್ತರಿಸಲ್ಪಟ್ಟಿದ್ದರೂ, ಈಗ 60ರ ಹರೆಯದ ಸದಾನಂದನ್ ಮಾಸ್ತರ್ ಕಮ್ಯೂನಿಸ್ಟರ ವಿರುದ್ಧ ಹೋರಾಡುತ್ತಿದ್ದಾರೆ.
ಈ ರೀತಿಯ ಘಟನೆಗಳು 300ಕ್ಕೂ ಹೆಚ್ಚು. ವಿವರ ಹೇಳುತ್ತಾ ಸಾಗಿದರೆ ಕಣ್ಣೀರು ಬತ್ತಿ ಹೋಗಿ ರಕ್ತವೇ ಬಂದೀತು. ಆದರೂ ಸಂಘದ ಸ್ವಯಂಸೇವಕರ ಶ್ರದ್ಧೆ ಕುಂದಿಲ್ಲ. ತೋಳ್ಬಲ ಕುಸಿದಿಲ್ಲ. ಕಮ್ಯುನಿಸ್ಟ್ ಹಿಂಸಾಚಾರಕ್ಕೆ ಶಾಂತವಾಗಿಯೇ ಇದ್ದಾರೆ. ಹಿಂಸೆಗೆ ಪ್ರತಿಹಿಂಸೆಯ ದಾರಿ ಹಿಡಿಯದೇ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಲೆ ಇದ್ದಾರೆ.

ಆಕರ: ರಾಜೇಶ್ ಪದ್ಮಾರ್ ಹಾಗೂ ಸಂತೋಷ್ ತಮ್ಮಯ್ಯ ಲೇಖನಗಳು

Chapter 1:

ರಾಷ್ಟ್ರೀಯ ಸ್ವಯಂಸೇವಕ ಸಂಘ – ಪ್ರಪಂಚದ ಅತೀ ದೊಡ್ಡ ಸ್ವಯಂಸೇವಕ ಸಂಸ್ಥೆಯ ಹುಟ್ಟು ಹಾಗೂ ಬೆಳೆದು ಬಂದ ಹಾದಿಯ ಒಳನೋಟ!

Chapter 2:

ಕೈಕಟ್ಟಿ ಕೂರಲಿಲ್ಲ, ಸಂಘರ್ಷದ ಹಾದಿಯಲ್ಲಿ ಪ್ರತಿಯೊಂದು ಸಾಲುಗಳನ್ನು ಮೆಟ್ಟಿಸುತ್ತಾ ಡಾಕ್ಟರ್ ಜೀ ಕಟ್ಟಿದ ಸಂಘಟನೆ ಇಂದು ಹೆಮ್ಮರವಾಗಿದೆ! ಅವರ ತ್ಯಾಗ, ನೀತಿಗಳ ಕಿರು ಪರಿಚಯ ಇಲ್ಲಿದೆ!

Chapter 3:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಎಂದರೆ ಏನು? ಕೆಲವು ಪೂರ್ವಾಗ್ರಹಗಳನ್ನು ಬಗೆಹರಿಸಿ, ಶಾಖೆಯ ಚಟುವಟಿಕೆಗಳ ಮಾಹಿತಿಯುಕ್ತ ಲೇಖನ ಇಲ್ಲಿದೆ!

Chapter 4:

ಅಧ್ಯಾಯ 4:ಆರೆಸ್ಸೆಸ್ ವಿರೋಧಿಗಳು ಹರಿಡಿದ ಅತೀ ದೊಡ್ಡ ಸುಳ್ಳು “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ಕೊಡುಗೆ ಶೂನ್ಯ”! ಮಿತ್ಯಾರೋಪಗಳಿಗೆ ತೆರೆ ಎಳೆಯುವ ಸಮಯ!

Chapter 5:

ಅಧ್ಯಾಯ 5: ಕಾಶ್ಮೀರವನ್ನು ಉಳಿಸಿಕೊಳ್ಳಲು ಪ್ರಾಣತೆತ್ತ ಸ್ವಯಂಸೇವಕರ ಕಥೆ ನಿಮಗೆ ತಿಳಿದಿದೆಯೇ? ಕೋಟ್ಲಿಯ ಬಲಿದಾನಿಗಳು ಯಾರು ಗೊತ್ತೇ? ಇಲ್ಲವಾದಲ್ಲಿ ಈ ಇತಿಹಾಸ ಪ್ರತಿಯೊಬ್ಬ ಭಾರತೀಯನೂ ತಿಳಿಯಲೇ ಬೇಕಾದದ್ದು!

chapter 6:

ಅಧ್ಯಾಯ 6: ಗಾಂಧಿ ಹತ್ಯೆ ಮತ್ತು ಆರೆಸ್ಸೆಸ್ ! ಒಂದೇ ಸುಳ್ಳನ್ನು ಕಾಂಗ್ರೆಸ್ ಪದೇ ಪದೇ ಹೇಳುತ್ತಿರುವುದು ಏತಕ್ಕಾಗಿ?? ಸುಳ್ಳಿನ ಪರದೆ ಸರಿಸುವ ಕೆಲವು ಸತ್ಯಾಂಶಗಳು ಇಲ್ಲಿವೆ!

Chapter 7:

ಅಧ್ಯಾಯ 7: ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಆರೆಸ್ಸೆಸ್! ಅಂಬೇಡ್ಕರ್ ಆರೆಸ್ಸೆಸ್ ಅನ್ನು ದ್ವೇಷಿಸುತ್ತಿದ್ದರೇ??? ಅಥವಾ ಆರೆಸ್ಸೆಸ್ ಅಂಬೇಡ್ಕರ್ ವಿರೋಧಿಯೇ? ಇಲ್ಲಿದೆ ಉತ್ತರ

Chapter 8:

ಅಧ್ಯಾಯ 8: ‘ಸ್ವಯಂಸೇವಕ’ ಎಂಬ ಸಂಘದ ಆಧಾರ ಸ್ಥಂಭ! ಐಕ್ಯತೆಯ ರೂವಾರಿಗಳು,ಶಿಸ್ತಿನ ಸಿಪಾಯಿಗಳು, ಸಮಾಜದಲ್ಲಿ ಸಭ್ಯತೆ, ಸಂಸ್ಕೃತಿಯ ಪ್ರತೀಕ ಇವರು!

Chapter 9:

ಅಧ್ಯಾಯ 9: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ ಬೈರಾಗಿಗಳು’ – ‘ ಪ್ರಚಾರಕರು’ ! ಪ್ರಚಾರಕರಾಗಿ ಕೆಲಸ‌ ಮಾಡುವುದು ಅಂದರೆ ಏನು? ಪ್ರಚಾರಕರಾಗಿ ಪ್ರಸಿದ್ಧಿ ಪಡೆದವರ ಬಗ್ಗೆ ನಿಮಗೆಷ್ಟು ಗೊತ್ತು?

Chapter 10:

ಅಧ್ಯಾಯ 10: ರಾಜಾಭಾವು ಮಹಾಂಕಲ್ ಅವರ ಬಲಿದಾನ ಮತ್ತು ಯುವ ಸಿಂಹ ಜಗನ್ನಾಥ ರಾವ್ ಜೋಶಿಯವರ ಪರಾಕ್ರಮ ಇದು ಗೋವಾ ವಿಮೋಚನೆಯ ಕಥೆ!!

Chapter 11:

ಅಧ್ಯಾಯ 11: ಸಂಘದ ಮಹತ್ವವೇನು ಎಂಬುದನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅರಿತಿದ್ದರು! ಹೇಗೆ? 1965 ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಸಂಘ ನಿರ್ವಹಿಸಿದ ಕಾರ್ಯವೇನು? ಇಲ್ಲಿದೆ ಮಾಹಿತಿ.

Chapter 12:

ಅಧ್ಯಾಯ 12: ಏಕನಾಥ್ ರಾನಡೆ! ಎಲ್ಲ ಸಮಸ್ಯೆಗಳ ಎದುರಿಸಿ, ಕಷ್ಟಗಳ ಅಲೆಗಳನ್ನು ಬಂಡೆಯಂತೆ ಎದುರಿಸಿ, ವಿವೇಕಾನಂದ ಶಿಲಾ ಸ್ಮಾರಕವನ್ನು ಭಾರತಕ್ಕೆ ಕೊಡುಗೆ ಇತ್ತ ಮಹನೀಯ! ಈ ಸ್ವಯಂಸೇವಕ ಅಸಾಧ್ಯವನ್ನು ಸಾಧ್ಯವಾಗಿಸಿದ ಕಥೆ ಇಲ್ಲಿದೆ!!

Chapter 13:

ಅಧ್ಯಾಯ 13: ತುರ್ತು ಪರಿಸ್ಥಿತಿ ಎಂಬ ಕರಾಳ ಅಧ್ಯಾಯ! ಭಾರತ ದೇಶದ ಪ್ರಜಾಪ್ರಭುತ್ವಕ್ಕೆ ಅಂಟಿದ ಕಳಂಕವನ್ನು ಸ್ವಯಂಸೇವಕರು ತಮ್ಮ ಬಲಿದಾನದಿಂದ ತೊಡೆದು ಹಾಡಿದರು.

Chapter 14:

ಅಧ್ಯಾಯ 14: ಆದರ್ಶ ಸ್ವಯಂಸೇವಕ, ನಿಸ್ವಾರ್ಥ ಪ್ರಚಾರಕ, ಗ್ರಾಮ ಅಭ್ಯುದಯಕ್ಕೆ ಜೀವ ಸವೆಸಿದ, ಅಪರೂಪದ ವ್ಯಕ್ತಿತ್ವ ಭಾರತ ರತ್ನ ನಾನಾಜಿ ದೇಶಮುಖ್!

Chapter 15:

ಅಧ್ಯಾಯ 15: ದೇವ ಭಾಷೆ ಸಂಸ್ಕೃತಕ್ಕೆ ಹೊಸತೊಂದು ಕಾಯಕಲ್ಪ ನೀಡಿದ ಆರೆಸ್ಸೆಸ್! ಸಂಸ್ಕೃತ ಭಾರತಿಯ ಸಾಧನೆಗಳ ಒಳ ನೋಟ ಇಲ್ಲಿದೆ!

Chapter 16:

ಅಧ್ಯಾಯ 16: 1984 ರ ಸಿಖ್ ಹತ್ಯಾಕಾಂಡದ ಸಮಯದಲ್ಲಿ ಆರೆಸ್ಸೆಸ್ ಸ್ವಯಂಸೇವಕರು, ತಮ್ಮ ಜೀವದ ಹಂಗು ತೊರೆದು ಸಿಖ್ ಸಹೋದರರನ್ನು ರಕ್ಷಿಸಿದರು. ಬದಲಾಗಿ ಸಿಕ್ಕಿದ್ದು ಮಾತ್ರ ಮೋಘಾ ಹತ್ಯಾಕಾಂಡ!

Chapter 17:

ಅಧ್ಯಾಯ 17: ಯಾವುದೇ ಸಂಘದ ಕೀರ್ತಿ ಮುಗಿಲೆತ್ತರಕ್ಕೆ ಬೆಳೆಯುವುದು, ತನ್ನ ವಿರೋಧಿಗಳ ಪ್ರಶಂಸೆ ಗಳಿಸಿದಾಗ! ಸೇವಾ ಭಾರತಿ ಗೆ ತನ್ನ ಪಿತ್ರಾರ್ಜಿತ ಆಸ್ತಿಯನ್ನು ಅಮರ್ ಸಿಂಗ್ ದಾನವಾಗಿ ಕೊಟ್ಟಾಗ ಈ ಮಾತಿಗೊಂದು ಸಾಕ್ಷಿ ದೊರೆತ ಹಾಗಾಯಿತು!

-Dr.Sindhu Prashanth

Tags

Related Articles

FOR DAILY ALERTS
Close