ಪ್ರಚಲಿತ

ಜನರ ಜೇಬಿಗೆಯೇ ಕತ್ತರಿ ಹಾಕಲಿವೆಯೇ ಕಾಂಗ್ರೆಸ್‌ನ ಉಚಿತ ಭರವಸೆಗಳು

ಕೊನೆಗೂ ಕಾಂಗ್ರೆಸ್ ಪಕ್ಷದ ಚುನಾವಣಾ ಪೂರ್ವ ‘ಉಚಿತ ಘೋಷಣೆ’ಗಳ ಅಸಲಿಯತ್ತು ಬಯಲಾಗಿದೆ. ಜನರಿಗೆ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳ ಈಡೇರಿಕೆಗೆ ಆರ್ಥಿಕ ಅಗತ್ಯ ಪೂರೈಸಲು ಜನರ ಜೇಬಿಗೆಯೇ ಕತ್ತರಿ ಹಾಕುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.

ಇನ್ನೂರು ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದ ಕಾಂಗಿಗಳು, ಇದೀಗ ಯೂನಿಟ್‌ಗೆ 1.30 ರೂ. ಸೇರಿಸಲು ಮುಂದಾಗಿದೆ. ಈ ಬಗ್ಗೆ ಈಗಾಗಲೇ ವಿದ್ಯುತ್ ಪ್ರಸರಣ ನಿಗಮವೂ ಆದೇಶ ಹೊರಡಿಸಿವೆ ಎಂದು ಹೇಳಲಾಗುತ್ತಿದೆ. ಹಾಗೆಯೇ 200 ಯೂನಿಟ್‌ಗಿಂತ‌ ಹೆಚ್ಚು ವಿದ್ಯುತ್ ಬಳಸಿದಲ್ಲಿ, ಬಳಕೆಯಾದ ವಿದ್ಯುತ್‌ನ ಸಂಪೂರ್ಣ ದರವನ್ನು ಭರಿಸುವಂತೆಯೂ ಈಗಾಗಲೇ ಕಾಂಗ್ರೆಸ್ ಸರ್ಕಾರ ತಿಳಿಸಿದ್ದು, ಆ ಮೂಲಕ ಜನರ ಜೇಬಿಗೆ ನಯವಾಗಿ ಕತ್ತರಿ ಹಾಕುವುದಕ್ಕೆ ಮುಂದಾಗಿದೆ.

ಹಾಗೆಯೇ ಪೊಲೀಸ್ ಇಲಾಖೆಗೂ ಕಾಂಗ್ರೆಸ್ ಸರ್ಕಾರ ಒಂದು ಠಾಣೆಗೆ ಮುನ್ನೂರು ಪ್ರಕರಣಗಳನ್ನಾದರೂ ದಾಖಲು ಮಾಡುವಂತೆ ಸೂಚಿಸಿದ್ದು, ಆ ಮೂಲಕ ಪೊಲೀಸರಿಗೂ ಒತ್ತಡದ ನಡುವೆ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಎದುರಾಗುವಂತೆ ಮಾಡಿರುವುದರಲ್ಲಿ ಎರಡು ಮಾತಿಲ್ಲ.

ಅಷ್ಟೇ ಅಲ್ಲದೆ ಗೆಲುವು ಸಾಧಿಸಲು ನೀಡಿದ ಭರವಸೆ ಈಡೇರಿಕೆಗೆ ಸರಿಯಾದ ಸಂಪನ್ಮೂಲ ವ್ಯವಸ್ಥೆ ಇಲ್ಲದೆ, ಇದೀಗ ಸರ್ಕಾರವೇ ಸಿರಿವಂತರು ಬಡ ಜನರಿಗೆ ಈ ಉಚಿತ ಸೌಲಭ್ಯಗಳು ದೊರೆಯುವಂತೆ ಮನಸ್ಸು ಮಾಡುವಂತೆಯೂ ತಿಳಿಸಿದ್ದು, ಆ ಮೂಲಕ ನಮ್ಮ ಭರವಸೆಗಳ ನಿಷ್ಪಕ್ಷಪಾತ ವಿತರಣೆಗೆ ನಮಗೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಂತಾಗಿದೆ.

ಈ ಹಿಂದಿನ ಬಿಜೆಪಿ ಸರ್ಕಾರ ಭಾರತದಲ್ಲಿ ಪೂಜನೀಯ ಸ್ಥಾನ ಪಡೆದಿರುವ ಗೋವುಗಳ ಹತ್ಯೆ ತಡೆಯಲು ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆದರೆ ಸದ್ಯ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯುವ ಅಥವಾ ಬದಲಾವಣೆ ಮಾಡುವ ಸೂಚನೆಯನ್ನು ನೀಡಿದೆ. ಆ ಮೂಲಕ ಗೋವನ್ನು ತಾಯಿಯಂತೆ ಪೂಜಿಸುವ ಧರ್ಮಕ್ಕೆ ನೋವು ನೀಡಿ, ಒಂದು ನಿರ್ಧಿಷ್ಟ ಧರ್ಮದ ಓಲೈಕೆಗೆ ಮುಂದಾಗಿದೆ ಎನ್ನುವುದು ನಿಜಕ್ಕೂ ದುರಂತ.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ತನ್ನ ಜನ ವಿರೋಧಿ ನೀತಿಯ ಮೂಲಕವೇ ಸಾರ್ವಜನಿರಕ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಜೊತೆಗೆ ಈ ಕಾಂಗ್ರೆಸ್‌ನ ಭರವಸೆಗಳನ್ನು ನಂಬಿ ಆ ಪಕ್ಷಕ್ಕೆ ಮತ ಹಾಕಿದ್ದರ ಪರಿಣಾಮ, ಇಂದು ನಮ್ಮ ಜೇಬಿಗೆಯೇ ಕತ್ತರಿ ಬೀಳುವಂತಾಗಿದೆ. ಸಾ ಕಪ್ಪಾ ಸಾಕು ಈ ಗೋಳು ಎಂಬಂತೆ ತಲೆಗೆ ಕೈ ಹೊತ್ತು ಕೂರುವ ಸ್ಥಿತಿ ಕರ್ನಾಟಕದ ಜನರದ್ದಾಗಿದೆ.

Tags

Related Articles

Close