ದೇಶರಾಜ್ಯ

ಅಧಿವೇಶನದೊಳಗೂ ಸಾವರ್ಕರ್ ಹವಾ: ತಬ್ಬಿಬ್ಬಾದ ಕಾಂಗ್ರೆಸ್‌!

ಸುವರ್ಣ ಸೌಧದಲ್ಲೂ ಕಾಂಗ್ರೆಸ್‌ನಿಂದ ಸಾವರ್ಕರ್ ದ್ವೇಷ

ಬೆಳಗಾವಿ ಸುವರ್ಣ ಸೌಧ ಸಭಾಂಗಣದಲ್ಲಿ ಸಾವರ್ಕರ್ ಸೇರಿದಂತೆ 7 ಗಣ್ಯರ ಭಾವಚಿತ್ರ ಅಳವಡಿಸಲಾಗಿದ್ದು, ಇದರಲ್ಲಿನ ಸಾವರ್ಕರ್ ಭಾವಚಿತ್ರ‌ದ ಬಗ್ಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.

ಈ ಸಂಬಂಧ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮಾತನಾಗಿದ್ದು, ಗಾಂಧೀಜಿ ಹತ್ಯೆಯಲ್ಲಿ ಸಾವರ್ಕರ್ ಕೈವಾಡ ಇದೆ ಎನ್ನುವ ಆರೋಪ ಬಹಳ ಹಿಂದಿನಿಂದಲೂ ಕೇಳಿಕೊಂಡೇ ಬಂದಿದೆ. ಸಾವರ್ಕರ್ ಫೋಟೋ ಬಗ್ಗೆ ನಮಗೆ ಮಾಹಿತಿ ಇಲ್ಲ. ಯಾವುದೇ ಕಾರ್ಯಕ್ರಮ‌ಕ್ಕೂ ನಮ್ಮನ್ನು ಕರೆದಿಲ್ಲ. ಈ ನಿರ್ಧಾರ‌ವನ್ನು ಬಿಜೆಪಿ ಏಕಾಏಕಿ ತೆಗೆದುಕೊಂಡಿದೆ. ಸಾವರ್ಕರ್ ಫೋಟೋ ಹಾಕುವುದು ಅನಾವಶ್ಯಕ. ಇದು ಬಿಜೆಪಿ‌ಯ ಹಿಡನ್ ಅಜೆಂಡಾ ಎಂಬುದಾಗಿ ಆರೋಪಿಸುವ ಮೂಲಕ ‘ಕಾಂಗ್ರೆಸ್ ಸಾವರ್ಕರ್ ವಿರೋಧಿ’ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಈ ಆರೋಪದ ಬಗಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದ್ದು, ಸುವರ್ಣಸೌಧದಲ್ಲಿ ವೀರ ಸಾವರ್ಕರ್ ಭಾವಚಿತ್ರ ಅಳವಡಿಸುವುದಕ್ಕೆ ವಿಪಕ್ಷ‌ಗಳ ಆರೋಪ ನನಗೆ ತಿಳಿದಿಲ್ಲ. ಈ ಸಂಬಂಧ ಸ್ಪೀಕರ್ ಜೊತೆ ಮಾತನಾಡಲಾಗುವುದು. ಸಾವರ್ಕರ್ ಬಗ್ಗೆ ವಿಪಕ್ಷಗಳು ಯಾವುದೇ ಕಾರಣ ಇಲ್ಲದೆಯೇ ಆರೋಪ ಮಾಡುತ್ತಿವೆ. ಇಂದಿನಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿದ್ದು, ಇದರಲ್ಲಿ ಚರ್ಚೆಯಾಗಬೇಕಿರುವುದು ರಾಜ್ಯದ ಸಮಸ್ಯೆ‌ಗಳ ಕುರಿತು ಎಂದು ಹೇಳಿದ್ದಾರೆ.

ಒಟ್ಟು ಕಾಂಗ್ರೆಸ್ ಪಕ್ಷಕ್ಕೆ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರಲ್ಲಿ ಓರ್ವರಾದ ವೀರ ಸಾವರ್ಕರ್ ಅವರ ಮೇಲಿನ ದ್ವೇಷ ಮತ್ತೊಮ್ಮೆ ಸಾಬೀತಾದಂತಾಗಿದೆ. ಉಗ್ರರಿಗೆ ಬೆಂಬಲ ನೀಡುವ ಕಾಂಗ್ರೆಸ್ ಈ ದೇಶದ ವೀರರನ್ನು ಅಪಮಾನಿಸುತ್ತಿರುವುದು ಅವರ ಮನಸ್ಥಿತಿ‌ಗೆ ಹಿಡಿದ ಕೈಗನ್ನಡಿ ಅಷ್ಟೇ.

Tags

Related Articles

Close