ಪ್ರಚಲಿತ

ಕಾಂಗ್ರೆಸ್‌ಗೆ ಕುವೆಂಪು ಜಾತ್ಯಾತೀತರಂತೆ ಕಾಣುತ್ತಿಲ್ಲವೇ?: ಪ್ರಲ್ಹಾದ ಜೋಶಿ

ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವಾಗ್ದಾಳಿ ‌ನಡೆಸಿದ್ದಾರೆ.

ಕೈ ಸರ್ಕಾರ ಶಾಲೆಗಳಲ್ಲಿ ಬರೆದಿರುವ ಕವಿ ಕುವೆಂಪು ವಾಣಿ ‘ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ’ ಎನ್ನುವ ಘೋಷವಾಕ್ಯವನ್ನು ತಿದ್ದಲು ಮುಂದಾಗಿದ್ದು, ಇದು ಕವಿ ಕುವೆಂಪು ಅವರಿಗೆ ಸಿದ್ದು ಸರ್ಕಾರ ಮಾಡುತ್ತಿರುವ ಅವಮಾನ ಎಂದು ಜೋಶಿ ಕಿಡಿ ಕಾರಿದ್ದಾರೆ.

ಕೈ ಮುಗಿದು ಒಳಗೆ ಬಾ ಎಂಬುದನ್ನು ಅಳಿಸಿ, ಧೈರ್ಯವಾಗಿ ‌ಪ್ರಶ್ನಿಸಿ ಎಂಬುದನ್ನು ಸೇರ್ಪಡೆ ಮಾಡಲು ಕೈ ಸರ್ಕಾರ ಮುಂದಾಗಿದೆ. ಸರ್ಕಾರದ ಈ ನಡೆಯ ವಿರುದ್ಧ ಪ್ರಲ್ಹಾದ ಜೋಶಿ ಅವರು ಕೆಂಡಾಮಂಡಲವಾಗಿರುವುದಾಗಿದೆ. ಶಾಲೆ, ಹಾಸ್ಟೆಲ್‌ಗಳಲ್ಲಿ ಬರೆಯಲಾದ ಘೋಷ ವಾಕ್ಯಗಳಲ್ಲಿ ಈ ರೀತಿಯ ಬದಲಾವಣೆಗಳನ್ನು ಮಾಡುವ ಕಾಂಗ್ರೆಸ್ ತನ್ನ ಮುಠ್ಠಾಳತನವನ್ನು ಪ್ರದರ್ಶನ ಮಾಡಿದೆ. ಇದು ರಾಷ್ಟ್ರಕವಿ ಕುವೆಂಪು ಅವರ ವಾಣಿಯಾಗಿದ್ದು, ಅದನ್ನು ಬದಲಾವಣೆ ಮಾಡುವ ಮೂಲಕ ತನ್ನ ತುಷ್ಟೀಕರಣ ನೀತಿಯನ್ನು ಸಾಬೀತು ಮಾಡಿದೆ ಎಂದು ತಿಳಿಸಿದ್ದಾರೆ.

ಕೈ ಸರ್ಕಾರ ರಾಜ್ಯದಲ್ಲಿ ತುಷ್ಟೀಕರಣದ ಪರಮಾವಧಿಯನ್ನು ಪ್ರದರ್ಶನ ಮಾಡುತ್ತಿದೆ. ಜೊತೆಗೆ ಸದ್ಯ ಕುವೆಂಪು ಅವರಿಗೂ ಅವಮಾನವನ್ನು ‌ಮಾಡಿದೆ. ಕುವೆಂಪು ವಾಣಿಯನ್ನೇ ಸರ್ಕಾರ ಬದಲಾಯಿಸಿದೆ. ಏಕೆ, ಕುವೆಂಪು ಅವರು ಕಾಂಗ್ರೆಸ್ ಕಣ್ಣಿಗೆ ಜಾತ್ಯಾತೀತರಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ ಎನ್ನುವುದನ್ನು ತಿದ್ದುವ ಮೂಲಕ ಹಿಂದೂ ವಿರೋಧಿ ನಡೆಯನ್ನು ಕೈ ಸರ್ಕಾರ ಮತ್ತೆ ಪ್ರದರ್ಶಿಸಿದೆ. ಇದರಿಂದ ಅವರ ತುಷ್ಟೀಕರಣ ನೀತಿ, ಹಿಂದೂ ವಿರೋಧಿ ಮನಸ್ಥಿತಿ ಎಷ್ಟರ ಮಟ್ಟಿಗಿದೆ ಎನ್ನುವುದು ಜಗಜ್ಜಾಹೀರು ಆಗಿದೆ. ಈ ಬಗ್ಗೆ ನಾವು ವಿಧಾನ ಸಭೆ ಮತ್ತು ವಿಧಾನ ಪರಿಷತ್ ಗಳಲ್ಲಿ ಚರ್ಚೆ ಮಾಡುತ್ತೇವೆ ಎಂದು ಜೋಶಿ ಮಾಹಿತಿ ನೀಡಿದ್ದಾರೆ.

Tags

Related Articles

Close