ಪ್ರಚಲಿತ

ಬಿಜೆಪಿ ಬೆಂಬಲಕ್ಕೆ ನಿಂತ ಸಂತ..! ಕಾಂಗ್ರೆಸ್ ಗೆ ಸೋಲು ಖಚಿತ.!

ಚುನಾವಣೆಯ ಬಿಸಿ ಹೆಚ್ಚುತ್ತಿದ್ದಂತೆ ರಾಜಕೀಯ ಪಕ್ಷಗಳ ತಯಾರಿಯೂ ಭರ್ಜರಿಯಾಗಿ ನಡೆಯುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಕರ್ನಾಟಕದಲ್ಲಿ ನೇರವಾಗಿ ಪೈಪೋಟಿಗೆ ಇಳಿದಿದೆ. ಪರಸ್ಪರ ವಾಕ್ಸಮರವೂ ಭಾರೀ ಜೋರಾಗಿಯೇ ಕೇಳಿಬರುತ್ತಿದೆ. ಒಂದೆಡೆ ಟಿಕೆಟ್ ವಿಚಾರವಾಗಿ ಅಸಮಧಾನಗೊಂಡು ಪಕ್ಷ ತೊರೆದು ಪಕ್ಷೇತರರಾಗಿ ನಿಲ್ಲುವ ಕಾರ್ಯವೂ ನಡೆಯುತ್ತಿದ್ದು, ಎಲ್ಲಾ ಪಕ್ಷಗಳಿಗೂ ಭಾರೀ ತಲೆನೋವಾಗಿತ್ತು. ಆದರೆ ಇದೀಗ ಬಿಜೆಪಿಗೆ ಈ ವಿಚಾರವಾಗಿ ವಿರಮಿಸುವಂತಾಗಿದೆ. ಯಾಕೆಂದರೆ ಬಿಜೆಪಿಯಿಂದ ಟಿಕೆಟ್ ದೊರಕಲಿಲ್ಲ ಎಂಬ ಕಾರಣಕ್ಕೆ ಅಸಮಧಾನಗೊಂಡು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಸಂತರೊಬ್ಬರು ಇದೀಗ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದು , ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.!

ಸ್ಪರ್ಧೆಯಿಂದ ಹಿಂದೆ ಸರಿದ ಶ್ರೀ..!

ಇತ್ತೀಚೆಗೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಉಡುಪಿ ಶಿರೂರು ಮಠದ ಶ್ರೀಗಳು ಟಿಕೆಟ್ ಸಿಗದೇ ಇದ್ದಾಗ ಪಕ್ಷೇತರ ಸ್ಪರ್ಧಿಸುವುದಾಗಿ ಹೇಳಿ , ಬಿಜೆಪಿಯಿಂದ ಹಿಂದೆ ಸರಿದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಕೂಡಾ ಸಲ್ಲಿಸಿದ್ದರು. ಇದರಿಂದ ಬಿಜೆಪಿಗೆ ಸ್ವಲ್ಪ ಮಟ್ಟಿಗೆ ತಲೆನೋವಾಗಿತ್ತು. ಯಾಕೆಂದರೆ ಉಡುಪಿಯಲ್ಲಿ ಬಿಜೆಪಿ ಈ ಬಾರಿ ಗೆಲ್ಲುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು ಶ್ರೀಗಳು ಪಕ್ಷೇತರರಾಗಿ ನಿಂತರೆ ಬಿಜೆಪಿಯ ಮತಗಳೇ ಬೇರ್ಪಡೆಯಾಗುತ್ತಿದ್ದವು. ಅಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಯಾವುದೇ ಅಡೆತಡೆ ಇಲ್ಲದೇ ಗೆಲ್ಲಬಹುದಾಗಿತ್ತು. ಆದರೆ ಕಾಂಗ್ರೆಸ್ ಅಂದುಕೊಂಡಂತೆ ಆಗಲಿಲ್ಲ. ಯಾಕೆಂದರೆ ಶ್ರೀಗಳು ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿ ಇದೀಗ ತಾವು ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ..!

Related image

ಮೋದಿ ಬೆಂಬಲಕ್ಕೆ ನಿಂತ ಶಿರೂರು ಶ್ರೀ..!

ಶಿರೂರು ಲಕ್ಷ್ಮೀವರ ತೀರ್ಥ ಶ್ರೀಗಳು ಪ್ರಧಾನಿ ಮೋದಿಯವರ ಅಭಿಮಾನಿಯಾಗಿದ್ದು, ಬಿಜೆಪಿಯನ್ನೇ ಈ ಹಿಂದಿನಿಂದಲೂ ಬೆಂಬಲಿಸಿಕೊಂಡು ಬಂದಿದ್ದಾರೆ. ಆದರೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಪಕ್ಷದ ಮೇಲೆ ಅಸಮಧಾನಗೊಂಡು ಪಕ್ಷೇತರ ನಿಲ್ಲುವುದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ನಾಮಪತ್ರ ಹಿಂಪಡೆದ ಶ್ರೀಗಳು ,’ ತಾನು ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿ , ನಾನು ಬಿಜೆಪಿಯ ತತ್ವಗಳನ್ನು ಪಾಲಿಸುವವನು. ಇಂತಹ ಸಂದರ್ಭದಲ್ಲಿ ನಾನು ಪಕ್ಷೇತರರಾಗಿ ಸ್ಪರ್ಧಿಸಿದರೆ ಬಿಜೆಪಿಗೆ ವಿರುದ್ಧವಾಗಿ ನಿಂತಂತೆ ಆಗುತ್ತದೆ. ಆದ್ದರಿಂದ ನಾನು ಚುನಾವಣೆಯಿಂದ ಹಿಂದೆ ಸರಿದಿದ್ದೇನೆ’ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ರಾಜ್ಯದ ಜನತೆ ಜನವಿರೋಧಿ ಮತ್ತು ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರದಿಂದ ಮುಕ್ತಿ ಪಡೆಯಲು ಬಯಸಿದ್ದು, ಜಗತ್ತೇ ಒಪ್ಪಿಕೊಂಡ ಧೀಮಂತ ನಾಯಕ ಪ್ರಧಾನಿ ಮೋದಿ ನೇತ್ರತ್ವದ ಬಿಜೆಪಿಯ ಕಡೆ ಒಲವು ತೋರುತ್ತಿದ್ದು , ಕಾಂಗ್ರೆಸ್ ನ್ನು ಮಣಿಸಲು ಕಾಯುತ್ತಿದ್ದಾರೆ..!

–ಅರ್ಜುನ್

 

Tags

Related Articles

Close